ಬೇಸಿಗೆಯ (Summer) ರಣ ಬಿಸಿಲಿಗೆ (Heat) ಇಡೀ ಚರ್ಮವೇ (Skin) ಟ್ಯಾನ್ (Tan) ಆಗಿ ಕಪ್ಪಾಗಿ (Black) ಹೋಗುತ್ತದೆ. ಬಟ್ಟೆ ಮುಚ್ಚಿದ ಭಾಗ ಬಿಟ್ಟು, ಮುಖ (Face), ಕೈ ಕಾಲುಗಳು ಕಪ್ಪಾಗಿ ಟ್ಯಾನಿಂಗ್ ಗೆ ಒಳಗಾಗುತ್ತವೆ. ಸುಡು ಬಿಸಿಲು ಚರ್ಮವನ್ನು ಸುಟ್ಟು ಹಾಕುತ್ತದೆ. ಅದರಲ್ಲೂ ಮುಖದ ಬಣ್ಣ ಕಪ್ಪಾಗಿ ಕೆಟ್ಟದಾಗಿ ಕಾಣುತ್ತದೆ. ಅದರಲ್ಲೂ ಸೂಕ್ಷ್ಮ ಚರ್ಮ ಹೊಂದಿದವರು ವರ್ಷದ ಎಲ್ಲಾ ಋತುಮಾನಗಳಲ್ಲೂ ಚರ್ಮದ ಆರೈಕೆ ಮಾಡಬೇಕಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡುವುದು ತುಂಬಾ ಕಷ್ಟದ ಕೆಲಸ. ಕಠಿಣ ಬಿಸಿಲಿನಲ್ಲಿ ಚರ್ಮವು ಕಪ್ಪು ಹಾಗೂ ಕೆಂಪು ಬಣ್ಣಕ್ಕೆ ತಿರುಗಿ ಬಿಡುತ್ತದೆ.
ಸೂಕ್ಷ್ಮ ಚರ್ಮ ಹೊಂದಿದವರು ಸ್ಕಿನ್ ಕೇರ್ ಮಾಡುವುದು ಹೇಗೆ?
ಚರ್ಮವು ಹೆಚ್ಚು ಸೂಕ್ಷ್ಮವಾಗಿರುವ ಜನರು ಅತೀ ಬೇಗನೆ ಕೆಂಪು ಮತ್ತು ಕಪ್ಪು ಕೆರಳಿಕೆ ಸಮಸ್ಯೆ ಹೊಂದಿರುತ್ತಾರೆ. ವ್ಯಾಕ್ಸಿಂಗ್ ಮತ್ತು ವರ್ಕ್ ಔಟ್ ಮಾಡಿದ ನಂತರ ಅನೇಕ ಸಲ ಚರ್ಮ ಕೆಂಪಗೆ ಆಗಿ ಬಿಡುತ್ತದೆ. ಇದು ಸೂಕ್ಷ್ಮ ಚರ್ಮ ಹಾಗೂ ಕೆಲವೊಮ್ಮೆ ಅಲರ್ಜಿ ಸಮಸ್ಯೆಯಿಂದಲೂ ಉಂಟಾಗುತ್ತದೆ.
ಕೆಲವೊಮ್ಮೆ ಸೂಕ್ಷ್ಮ ಚರ್ಮ ಹೊಂದಿದವರಲ್ಲಿ ಅಲರ್ಜಿ ಹಾಗೂ ದದ್ದುಗಳ ಸಮಸ್ಯೆ ಹೆಚ್ಚಿರುತ್ತದೆ. ಕೆಲವರಿಗೆ ಕೆಲವು ಆಹಾರ ಸೇವನೆ ತುಂಬಾ ದದ್ದು, ಗುಳ್ಳೆ, ಮೊಡವೆ ಮತ್ತು ಅಲರ್ಜಿ ಉಂಟು ಮಾಡುತ್ತದೆ. ಇದು ಚರ್ಮದ ಬಣ್ಣ ಮತ್ತು ಚರ್ಮವನ್ನು ಹಾಳು ಮಾಡಿ ಬಿಡುತ್ತದೆ.
ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?
ಚರ್ಮದ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ
ಬೇಸಿಗೆಯಲ್ಲಿ ಸೂರ್ಯನ ಬೆಳಕಿನಿಂದ ನಿಮ್ಮ ಚರ್ಮವು ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಕೆಂಪು ಕಲೆ ಮತ್ತು ಕಪ್ಪು ಕಲೆಗಳು ಮುಖದ ಮೇಲೆ ಹಾಗೂ ಚರ್ಮದ ಮೇಲೆ ದೀರ್ಘ ಕಾಲದವರೆಗೆ ಇದ್ದರೆ ಚರ್ಮ ತಜ್ಞರನ್ನು ಸಂಪರ್ಕಿಸಿ.
ಮುಖದ ಮೇಲೆ ಸ್ವಲ್ಪ ಸಮಯದವರೆಗೆ ಕೆಂಪಾಗಿದ್ದರೆ ಇಲ್ಲಿ ಹೇಳಲಾಗಿರುವ ಕೆಲ ಮನೆಮದ್ದುಗಳ ಸಹಾಯದಿಂದ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು.
ಕೋಲ್ಡ್ ಕಂಪ್ರೆಸ್ ಬಳಕೆ ಮಾಡಿ
ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಕೆಂಪು ಮತ್ತು ದದ್ದು ಹೋಗಲಾಡಿಸಲ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಚರ್ಮದ ಬಣ್ಣ ಮತ್ತು ಚರ್ಮವನ್ನು ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೋಲ್ಡ್ ಕಂಪ್ರೆಸ್ ಸಹಾಯ ಪಡೆಯಿರಿ. ನೀವು ಕೆಂಪು ಬಣ್ಣ ಕಡಿಮೆ ಮಾಡಲು, ಹೆಪ್ಪುಗಟ್ಟಿದ ರಕ್ತವನ್ನು ಸರಿಪಡಿಸಲು ಮಂಜುಗಡ್ಡೆಯಿಂದ ಪ್ರದೇಶವನ್ನು ಚೆನ್ನಾಗಿ ಕಂಪ್ರೆಸ್ ಮಾಡಿ. ಇದು ನಿಮ್ಮ ಚರ್ಮವನ್ನು ಆರೈಕೆ ಮಾಡಿ ಕೆಂಪು ಸಮಸ್ಯೆ ತೆಗೆದು ಹಾಕುತ್ತದೆ.
ರೋಸ್ ವಾಟರ್ ಮಾಸ್ಕ್ ಹಾಕಿ
ಮುಖ ಕೆಂಪಾಗುತ್ತಿದ್ದರೆ ರೋಸ್ ವಾಟರ್ ತ್ವಚೆಯ ತಂಪಾಗಿಸಲು ಸಹಾಯ ಮಾಡುತ್ತದೆ. ರೋಸ್ ವಾಟರ್ ಪರಿಣಾಮ ಮುಖ ತಂಪಾಗುತ್ತದೆ. ಇದರಿಂದ ಮುಖದ ಕೆಂಪಾಗುವಿಕೆ ಕಡಿಮೆ ಆಗುತ್ತದೆ. ತ್ವರಿತ ಪರಿಣಾಮಕ್ಕಾಗಿ, ರೋಸ್ ವಾಟರ್ ಅಥವಾ ಸೌತೆಕಾಯಿಯಿಂದ ಮಾಡಿದ ಫೇಸ್ ಮಾಸ್ಕ್ ಹಾಕಿ.
ಆಪಲ್ ಸೈಡರ್ ವಿನೆಗರ್
ನಿಮ್ಮ ಚರ್ಮವು ಕೆಂಪಾಗಿದ್ದರೆ ಆಪಲ್ ಸೈಡರ್ ವಿನೆಗರ್ ಬಳಕೆ ಮಾಡಿ. ಇದು ಚರ್ಮಕ್ಕೆ ಬಹಳ ಪರಿಣಾಮಕಾರಿ ಪರಿಹಾರ ಆಗಿದೆ. ಆಪಲ್ ಸೈಡರ್ ವಿನೆಗರ್ ಅನ್ವಯಿಸುವಾಗ ಜಾಗ್ರತೆ ವಹಿಸಿ. ಅದು ತುಂಬಾ ಪ್ರಬಲವಾಗಿದೆ. ಯಾವಾಗಲೂ ನೀರಿನೊಂದಿಗೆ ಬೆರೆಸಿ ಬಳಸಿ. ಆಪಲ್ ಸೈಡರ್ ವಿನೆಗರ್ ಅನ್ನು ಹತ್ತಿಯೊಂದಿಗೆ ಚರ್ಮಕ್ಕೆ ಅನ್ವಯಿಸಿ.
ಬೇಸಿಗೆಯಲ್ಲಿ ಈ ವಿಷಯಗಳ ಬಗ್ಗೆ ಸೂಕ್ತ ಗಮನ ಹರಿಸಿ
- ಚರ್ಮವನ್ನು ತೇವಗೊಳಿಸುವುದು ಯಾವತ್ತೂ ಮರೆಯಬೇಡಿ
- ಬಿಸಿಲಿಗೆ ಹೋಗುವ ಮೊದಲು ಸನ್ಸ್ಕ್ರೀನ್ ಅನ್ನು ಅನ್ವಯಿಸಿ.
ಇದನ್ನೂ ಓದಿ: ನಿಮ್ಮ ನಿದ್ರಾಭಂಗಕ್ಕೆ ಈ ಲಯ ತಪ್ಪುವುದೇ ಕಾರಣ, ಇಂದೇ ನಿಮ್ಮ ಅಭ್ಯಾಸಗಳನ್ನು ಸರಿಪಡಿಸಿ!
- ಬಲವಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ. ಛತ್ರಿ ಅಥವಾ ಬಟ್ಟೆಯಿಂದ ನಿಮ್ಮನ್ನು ಕವರ್ ಮಾಡಿಕೊಳ್ಳಿ.
- ಸ್ನಾನಕ್ಕೆ ಶವರ್ ಜೆಲ್ ಬಳಸಿ
- ದೀರ್ಘಕಾಲ ಬಿಸಿನೀರಿನ ಸ್ನಾನ ಮಾಡಬೇಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ