High Blood Pressure: ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಈ ಕ್ರಮಗಳನ್ನು ಫಾಲೋ ಮಾಡಿ!

ಅನೇಕ ಜನರು ಅಧಿಕ ರಕ್ತದೊತ್ತಡ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ತಜ್ಞರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಔಷಧಿ ಇಲ್ಲದೆಯೂ ಸರಿಪಡಿಸಬಹುದು ಎಂದು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಧಿಕ ರಕ್ತದೊತ್ತಡದ (High Blood Pressure) ಅಂದರೆ ಬಿಪಿ ಸಮಸ್ಯೆ (Problem) ದೇಹದ ಆರೋಗ್ಯ (Body Health) ಸಮಸ್ಯೆಗಳಲ್ಲಿ ಒಂದು. ಬಿಪಿ ಕಡಿಮೆ ಆಗುವುದು, ಮತ್ತು ಹೆಚ್ಚಾಗುವುದು ಎರಡೂ ರೋಗಿಯ ಜೀವಕ್ಕೆ ಕುತ್ತು ತರುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕವಾಗಬಹುದು. ಕೆಲ ಸನ್ನಿವೇಶಗಳಲ್ಲಿ ಇದು ಹೃದಯಾಘಾತ, ಪಾರ್ಶ್ವವಾಯು, ಬುದ್ಧಿಮಾಂದ್ಯತೆಯನ್ನು ಉಂಟು ಮಾಡುತ್ತದೆ. ಬಿಪಿ ಸಮಸ್ಯೆ ಇದ್ದವರು ತಮ್ಮ ಜೀವನಶೈಲಿ ಮತ್ತು ಆಹಾರ ಅಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೆಚ್ಚಿನ ರಕ್ತದೊತ್ತಡ ಹೊಂದಿರುವ ಜನರಿಗೆ ತಮ್ಮ ಜೀವನಶೈಲಿ ಸುಧಾರಿಸುವಂತೆ ವೈದ್ಯರು, ತಜ್ಞರು ಸಲಹೆ ನೀಡುತ್ತಾರೆ. ಸಾಮಾನ್ಯ ರಕ್ತದೊತ್ತಡವು 120/80 mmHg ವರೆಗೆ ಇರುತ್ತದೆ.

  120 ಮತ್ತು 140 ಸಿಸ್ಟೊಲಿಕ್ ಮತ್ತು 80 ರಿಂದ 90 ಡಯಾಸ್ಟೊಲಿಕ್ ನಡುವಿನ ರಕ್ತದೊತ್ತಡವನ್ನು ಪ್ರಿ-ಹೈಪರ್ಟೆನ್ಷನ್ ಎಂದು ಕರೆಯುತ್ತಾರೆ. ಮತ್ತು 140/90 ಕ್ಕಿಂತ ಹೆಚ್ಚಿನದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸುತ್ತಾರೆ.

  ಅಧಿಕ ರಕ್ತದೊತ್ತಡದ ವ್ಯಾಪ್ತಿಯು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ

  ಅನೇಕ ಜನರು ಅಧಿಕ ರಕ್ತದೊತ್ತಡ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ತಜ್ಞರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಔಷಧಿ ಇಲ್ಲದೆಯೂ ಸರಿಪಡಿಸಬಹುದು ಎಂದು ಹೇಳುತ್ತಾರೆ. ಇದಕ್ಕಾಗಿ ರೋಗಿಯು ಕೆಲವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದವರು ಔಷಧ ತೆಗೆದುಕೊಳ್ಳದೇ ಈ ಕೆಳಗಿನ ವಿಧಾನ ಅನುಸರಿಸಿ ಬಿಪಿ ಕಂಟ್ರೋಲ್ ಮಾಡಬಹುದು.

  ಇದನ್ನೂ ಓದಿ: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ

  ತೂಕ ಕಡಿಮೆ ಮಾಡುವುದು

  ತೂಕ ಹೆಚ್ಚಾದಂತೆ ನಿಮ್ಮ ರಕ್ತದೊತ್ತಡ ಹೆಚ್ಚುತ್ತದೆ. ಮತ್ತೊಂದೆಡೆ ಅಧಿಕ ತೂಕ ನಿದ್ದೆ ಮಾಡುವಾಗ ಉಸಿರಾಡಲು ಕಷ್ಟವನ್ನುಂಟು ಮಾಡುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ತೂಕ ಕಡಿಮೆ ಮಾಡುವದು.

  ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ ತೂಕ ಕಡಿಮೆ ಮಾಡಿ. ತೂಕದ ಜೊತೆಗೆ ಬೆಲ್ಲಿ ಫ್ಯಾಟ್ ಕೂಡ ಕಡಿಮೆ ಮಾಡಿ. ಸೊಂಟದ ಸುತ್ತಲಿನ ಕೊಬ್ಬು ರಕ್ತದೊತ್ತಡವನ್ನು ಹೆಚ್ಚಿಸುವ ಅಪಾಯವಿದೆ.

  ಪ್ರತಿದಿನ ವ್ಯಾಯಾಮ ಮಾಡಿ

  ದೈನಂದಿನ ವ್ಯಾಯಾಮವು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ. ತಜ್ಞರ ಪ್ರಕಾರ, ಪ್ರತಿ ವಾರ ಸುಮಾರು 150 ನಿಮಿಷಗಳ ಚಟುವಟಿಕೆ ಅಥವಾ ಪ್ರತಿದಿನ ಸುಮಾರು 30 ನಿಮಿಷಗಳ ಚಟುವಟಿಕೆ  ರಕ್ತದೊತ್ತಡದ ಸಮಸ್ಯೆ ಕಡಿಮೆ ಮಾಡುತ್ತದೆ.

  ಆರೋಗ್ಯಕರ ಆಹಾರ ಕ್ರಮ ಅನುಸರಿಸಿ

  ಧಾನ್ಯ, ಹಣ್ಣು, ತರಕಾರಿ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡುವುದು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರ ಸೇವನೆ ತಪ್ಪಿಸಿ.

  ಕಡಿಮೆ ಉಪ್ಪು ತಿನ್ನಿರಿ

  ಆಹಾರದಲ್ಲಿ ಕಡಿಮೆ ಉಪ್ಪು ಸೇವಿಸುವುದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಯಾರಾದರೂ ಆಹಾರದಲ್ಲಿ ಕಡಿಮೆ ಉಪ್ಪು ಸೇವಿಸಿದರೆ, ಅವರ ರಕ್ತದೊತ್ತಡವು ಸುಮಾರು 5 ರಿಂದ 6 mm Hg ವರೆಗೆ ಇಳಿಯಬಹುದು.

  ಆಲ್ಕೋಹಾಲ್ ಸೇವನೆ ತಪ್ಪಿಸಿ

  ಸಾಮಾನ್ಯವಾಗಿ ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಪುರುಷರು ತಮ್ಮ ಆಲ್ಕೋಹಾಲ್ ಸೇವನೆ ಸೀಮಿತಗೊಳಿಸಿದರೂ ಸಹ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನೀವು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ಅದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

  ಇದನ್ನೂ ಓದಿ: ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಗ್ಗದ ಜಂಪಿಂಗ್ ಪ್ರಯೋಜನಕಾರಿ

  ಕೆಫೀನ್ ಸೇವನೆ ಕಡಿಮೆ ಮಾಡಿ

  ಕೆಫೀನ್ ಇರುವ ಪಾನೀಯಗಳು ಅಥವಾ ಕಾಫಿ ಅಪರೂಪವಾಗಿ ಸೇವಿಸುವ ಜನರು, ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸಿದರೆ, ಅವರ ರಕ್ತದೊತ್ತಡವು 10 ಎಂಎಂ ಎಚ್ಜಿ ಹೆಚ್ಚಾಗುತ್ತದೆ. ಕಾಫಿಯನ್ನು ಜನರು ತಪ್ಪಿಸಬೇಕು.
  Published by:renukadariyannavar
  First published: