• Home
  • »
  • News
  • »
  • lifestyle
  • »
  • Digestive Health: ಈ ರೀತಿ ಮಾಡಿದ್ರೆ ಜೀರ್ಣಕ್ರಿಯೆ ಸಮಸ್ಯೆ ಬರಲ್ವಂತೆ

Digestive Health: ಈ ರೀತಿ ಮಾಡಿದ್ರೆ ಜೀರ್ಣಕ್ರಿಯೆ ಸಮಸ್ಯೆ ಬರಲ್ವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

These Steps to Improve Digestion: ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ಅವರ ಪ್ರಕಾರ, ನೀವು ತಿನ್ನುವ ಆಹಾರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರಳ ಮಾರ್ಗವೆಂದರೆ ನೀವು ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದು.

  • Share this:

ನಮ್ಮ ದೇಹದ ಆರೋಗ್ಯವು (Health Care) ಹೆಚ್ಚಾಗಿ ನಮ್ಮ ಜೀರ್ಣಕ್ರಿಯೆಯ (Digestion)  ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಜೀರ್ಣಕ್ರಿಯೆಯ ಸಮಸ್ಯೆಯು ಹಲವಾರು ಕಾಯಿಲೆಗಳನ್ನು (Problem) ತಂದೊಡ್ಡಬಹುದು. ಆದ್ದರಿಂದ ನಿಮ್ಮ ಕರುಳಿನ ಆರೋಗ್ಯವು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ್ದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದಿದ್ದಾಗ ಹೊಟ್ಟೆ ಉಬ್ಬರ, ವಾಕರಿಕೆ, ಮನಸ್ಥಿತಿಯ ಏರಿಳಿತಗಳು ಮತ್ತು ರೋಗನಿರೋಧಕ ಶಕ್ತಿಯಲ್ಲಿ ಒಟ್ಟಾರೆ ಕುಸಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್ ನೊಂದಿಗೆ (Fitness) ರಾಜಿ ಮಾಡಿಕೊಳ್ಳುತ್ತದೆ. ಅದರಂತೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗಾಗಿ, ನೀವು ಕೆಲವು ಜೀವನಶೈಲಿ ಮತ್ತು ಆಹಾರಕ್ರಮವನ್ನು ಬದಲಾಯಿಸಿಕೊಳ್ಳುವುದು ತುಂಬಾನೇ ಅಗತ್ಯವಾಗುತ್ತದೆ.


ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ಅವರ ಪ್ರಕಾರ, ನೀವು ತಿನ್ನುವ ಆಹಾರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರಳ ಮಾರ್ಗವೆಂದರೆ ನೀವು ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದು. "ನೀವು ಏನು ತಿನ್ನುತ್ತೀರಿ ಎಂಬುದು ಮುಖ್ಯವಾಗಿದ್ದರೂ, ನೀವು ಏನು ತಿನ್ನುತ್ತೀರೋ ಅದನ್ನು ನೀವು ಹೇಗೆ ಜೀರ್ಣಿಸಿಕೊಳ್ಳುತ್ತೀರಿ ಎಂಬುದು ಅದಕ್ಕಿಂತಲೂ ಹೆಚ್ಚು ಮುಖ್ಯವಾಗುತ್ತದೆ" ಎಂದು ಹೇಳಿದರು.


"ನೀವು ಚೆನ್ನಾಗಿ ಜೀರ್ಣಿಸಿಕೊಳ್ಳುವ ಆಹಾರಗಳನ್ನು ಸೇವಿಸಿದಾಗ, ನಿಮ್ಮ ದೇಹವು ಅವುಗಳಿಂದ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ, ಇದು ನಿಮ್ಮ ಪ್ರಮುಖ ಅಂಗಗಳಿಗೆ ನೀರುಣಿಸಲು ಉತ್ತಮ ಗುಣಮಟ್ಟದ ರಕ್ತವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ಉತ್ತಮವಾದ ಆರೋಗ್ಯ ನಮ್ಮದಾಗುತ್ತದೆ" ಎಂದು ಹೇಳಿದರು.


ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಲು ಇಲ್ಲಿವೆ ನೋಡಿ ಕೆಲವು ಪ್ರಮುಖ ಅಂಶಗಳು


ಪ್ರತಿದಿನ ವ್ಯಾಯಾಮ ಮಾಡುವುದು


ಉತ್ತಮ ಜೀರ್ಣಕ್ರಿಯೆಗಾಗಿ, ತಜ್ಞರು ಪ್ರತಿದಿನ ವ್ಯಾಯಾಮ ಮಾಡಲು ಶಿಫಾರಸು ಮಾಡುತ್ತಾರೆ. "ನೀವು ಸ್ವಲ್ಪ ಬೆವರುವಂತೆ ಮಾಡುವ ವ್ಯಾಯಾಮಗಳು, ನಿಮ್ಮ ಹೃದಯವನ್ನು ಮತ್ತು ನಿಮ್ಮ ಶ್ವಾಸಕೋಶಗಳನ್ನು ಸಕ್ರಿಯವಾಗಿರಿಸುವಂತೆ ಮಾಡುವ ವ್ಯಾಯಾಮಗಳು ನಿಮ್ಮ ಜೀರ್ಣಕ್ರಿಯೆಯನ್ನು ನಿಜವಾಗಿಯೂ ಸುಧಾರಿಸುತ್ತವೆ" ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಸಮಸ್ಯೆಗಳು ಸಾಲಾಗಿ ಬರುತ್ತೆ




ಪ್ರತಿದಿನ ಯೋಗ ಮಾಡುವುದು


ದೇಹದಿಂದ ವಿಷಕಾರಿಯಾದ ಯೋಚನೆಗಳನ್ನು ತೆಗೆದುಹಾಕಲು, ಮಾನಸಿಕ ಮತ್ತು ದೈಹಿಕವಾಗಿ ಸದೃಡರಾಗಿರಲು ನಿಯಮಿತವಾಗಿ ಯೋಗವನ್ನು ಸೂಚಿಸಲಾಗುತ್ತದೆ. "ಇದು ಕಳಪೆ ಜೀರ್ಣಕ್ರಿಯೆಯನ್ನು ಸರಿಪಡಿಸಲು ಮತ್ತು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ" ಎಂದು ತಜ್ಞರು ಹೇಳುತ್ತಾರೆ.


ಹೆಚ್ಚಾಗಿ ಬೇಯಿಸಿದ ಆಹಾರವನ್ನು ಸೇವಿಸಿ


ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಲು ನೀವು ಹಸಿಗಿಂತ ಬೇಯಿಸಿದ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಬೇಯಿಸಿದ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದು ದೇಹಕ್ಕೆ ಸುಲಭವಾಗಿದೆ ಎಂದು ಅವರು ವಿವರಿಸಿದರು. "ನಿಮ್ಮ ಊಟದ ಶೇಕಡಾ 25 ಕ್ಕಿಂತ ಹೆಚ್ಚು ಕಚ್ಚಾ ಆಹಾರವಾಗಬಾರದು" ಎಂದು ಕೊಹ್ಲಿ ಅವರು ಹೇಳಿದರು.


ಆಹಾರದೊಂದಿಗೆ ಹಾಲನ್ನು ಕುಡಿಯಬೇಡಿ ಎಂದ ಆಯುರ್ವೇದ ತಜ್ಞರು ತರಕಾರಿಗಳು, ಮಾಂಸಗಳು, ಇತ್ಯಾದಿ ಮಿಶ್ರ ರುಚಿಗಳನ್ನು ಹೊಂದಿರುವ ಊಟದೊಂದಿಗೆ ಹಾಲನ್ನು ಸೇವಿಸದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.


ಸಂಜೆ ಹೊತ್ತಿನಲ್ಲಿ ಈ ಆಹಾರಗಳನ್ನು ಸೇವಿಸಬೇಡಿ


ತಜ್ಞರ ಪ್ರಕಾರ ಸಂಜೆ ಹೊತ್ತಿನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಅವುಗಳು ಮೊಸರು, ಚೀಸ್, ಕಾಟೇಜ್ ಚೀಸ್ ಮತ್ತು ಮಜ್ಜಿಗೆ ಆಗಿವೆ.


ಮಧ್ಯಾಹ್ನ ಚೆನ್ನಾಗಿ ಊಟ ಮಾಡಿ


ತಜ್ಞರು, ಮಧ್ಯಾಹ್ನ ಚೆನ್ನಾಗಿ ಊಟವನ್ನು ಮಾಡಿ ಅಂತ ಪದೇ ಪದೇ ಒತ್ತಿ ಹೇಳುತ್ತಾರೆ. ಮಧ್ಯಾಹ್ನ ಸುಡುವ ಬಿಸಿಲಿನಲ್ಲಿ ಹೊಟ್ಟೆ ತುಂಬಾ ಊಟ ಮಾಡುವುದರಿಂದ ಜೀರ್ಣಕ್ರಿಯೆಯು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಜ್ಞರು ವಿವರಿಸಿದರು.


ಇದನ್ನೂ ಓದಿ: ಚಳಿಗಾಲವೆಂದು ಸೋಮಾರಿಯಾದರೆ ತೂಕನೂ ಹೆಚ್ಚಾಗಬಹುದು ಹುಷಾರ್!


ನಿಮ್ಮ ಊಟ ಎಲ್ಲಾ ರೀತಿಯ ರುಚಿಗಳನ್ನು ಒಳಗೊಂಡಿರಬೇಕು


ನೀವು ಮಾಡುವ ಪ್ರತಿ ಊಟವು ಎಲ್ಲಾ ಆರು ರುಚಿಗಳನ್ನು ಒಳಗೊಂಡಿರಬೇಕು, ಎಂದರೆ ಸಿಹಿ, ಹುಳಿ, ಉಪ್ಪು, ಕಹಿ, ಕಟುವಾದದ್ದು ಎಲ್ಲವನ್ನೂ ಹೊಂದಿರಬೇಕು.

Published by:Sandhya M
First published: