ಬೇಸಿಗೆಯಲ್ಲಿ (Summer) ಹಲವರಿಗೆ ನಿದ್ದೆ (Sleep) ಮತ್ತು ಸುಸ್ತು (Tiredness) ಮುಂತಾದ ಸಮಸ್ಯೆಗಳು (Problem) ಕಾಡುತ್ತವೆ. ಎಷ್ಟೇ ಆ್ಯಕ್ಟಿವ್ (Active) ಆಗಿರಲು ಪ್ರಯತ್ನಿಸಿದರೂ ನಿಮ್ಮ ದೇಹವು (Body) ಸಹಕರಿಸುವುದಿಲ್ಲ. ಇನ್ನು ಮುಂದೆ ಕೆಲಸ ಮಾಡಲು ಆಗಲ್ಲ ಎಂಬ ಭಾವನೆ ಕಾಡುತ್ತದೆ. ನೀವು ಕಚೇರಿಗೆ ಹೋಗಲು ಪ್ರಾರಂಭಿಸಿದಾಗ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆಯಾಸ ತುಂಬಾ ನಿಮ್ಮನ್ನು ಮತ್ತು ದೇಹವನ್ನು ಕೆಟ್ಟದಾಗಿ ಕಾಡುತ್ತದೆ. ಅನೇಕ ಜನರು ಆಗಾಗ್ಗೆ ಆಯಾಸ ಮತ್ತು ಆಲಸ್ಯದ ಬಗ್ಗೆ ದೂರು ನೀಡುತ್ತಾರೆ. ಇದರಿಂದ ಯಾವುದೇ ಕೆಲಸ ಮಾಡಲು ಮನಸ್ಸಾಗಲ್ಲ. ಈ ಆಯಾಸದ ಹಿಂದೆ ನಿದ್ರೆಯ ಕೊರತೆ, ಶಕ್ತಿಯ ಕೊರತೆ, ಅಸಮರ್ಪಕ ಆಹಾರ ಪದ್ಧತಿ ಹೀಗೆ ಹಲವು ಕಾರಣಗಳಿರಬಹುದು.
ಸದಾ ಸುಸ್ತಾಗಿರುವುದು ದೇಹದಲ್ಲಿ ಯಾವುದೋ ಪ್ರಮುಖ ಅಂಶದ ಕೊರತೆಯನ್ನು ಸೂಚಿಸುತ್ತದೆ. ಅನೇಕ ಜನರು ಕೆಲಸವನ್ನು ಸಂಪೂರ್ಣವಾಗಿ ಮಾಡಲು ಸಾಧ್ಯ ಆಗುವುದಿಲ್ಲ.
ಬೇಸಿಗೆಯಲ್ಲಿ ಭುಜ ಬಾಗುವಿಕ, ಕಣ್ಣಿನ ಸಮಸ್ಯೆ, ಅತಿಯಾಗಿ ಬೆವರುವಿಕೆ, ಸುಸ್ತು ಇವೆಲ್ಲ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೆಲವು ಸಲಹೆ ಪಾಲಿಸುವ ಮೂಲಕ ನಿಮ್ಮ ಸುಸ್ತು ಮತ್ತು ಆಯಾಸವನ್ನು ಹೊಡೆದು ಓಡಿಸಿ.
ಬೇಸಿಗೆಯಲ್ಲಿ ನಿದ್ದೆ ಬರಲು ಕಾರಣ ಏನು?
ದೇಹವು ಬೇಸಿಗೆಯಲ್ಲಿ ತಂಪಾಗಿರಲು ಶ್ರಮ ಪಡುತ್ತದೆ. ದೇಹದಲ್ಲಿ ರಕ್ತನಾಳಗಳು ಸ್ವಲ್ಪ ಹಿಗ್ಗುವುದು, ಬೆವರುವ ಪ್ರಕ್ರಿಯೆ ಮತ್ತು ವಯೋಡಿಲೇಷನ್ ಎಂಬ ಪ್ರಕ್ರಿಯೆ ಅನೇಕ ಹೊಂದಾಣಿಕೆ ಸಂಭವಿಸುತ್ತವೆ. ಈ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ರಕ್ತವು ಹತ್ತಿರ ತಲುಪುತ್ತದೆ.
ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ
ಚರ್ಮ ವೋಡೈಲೇಷನ್ ಪ್ರಕ್ರಿಯೆಯಿಂದ ಜನರು ಬಿಸಿಲಿನಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತಾರೆ. ಅಂದರೆ ದೇಹ ಕೆಂಪಾಗುತ್ತದೆ. ಇದರಿಂದ ದೇಹದ ಶಕ್ತಿಯು ಕುಗ್ಗುತ್ತದೆ. ಹೃದಯದ ಬಡಿತ ಹೆಚ್ಚಾಗುತ್ತದೆ ಮತ್ತು ಇದರಿಂದ ನಮಗೆ ನಿದ್ರೆ ಬರುತ್ತದೆ.
ಬಿಸಿಲಿನಲ್ಲಿ ದೀರ್ಘ ಕಾಲ ಓಡಾಡಬೇಡಿ
ಸೂರ್ಯನ ಬೆಳಕಿಗೆ ದೀರ್ಘ ಕಾಲದವರೆಗೆ ಒಡ್ಡಿಕೊಳ್ಳುವುದು ಮೆಲಟೋನಿನ್ ಉತ್ಪಾದನೆಯನ್ನು ಕುಸಿಯುವಂತೆ ಮಾಡುತ್ತದೆ. ಮೆಲಟೋನಿನ್ ದೇಹದ ಮನಸ್ಥಿತಿ ನಿಯಂತ್ರಿಸುವ ಒಂದು ಪ್ರಮುಖ ಹಾರ್ಮೋನ್ ಆಗಿದೆ. ನೀವು ಸೂರ್ಯನ ಕಿರಣಗಳಿಗೆ ಹೆಚ್ಚು ಹೊತ್ತು ಮೈ ಒಡ್ಡಿದರೆ ಅದು ನಿಮಗೆ ಕೆಟ್ಟ ಭಾವನೆ ಉಂಟು ಮಾಡುತ್ತದೆ.
ನಿಮ್ಮ ದೇಹವು ತಣ್ಣಗಾಗಲು ಹೆಚ್ಚಿನ ಶಕ್ತಿ ಬಯಸುತ್ತದೆ. ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವವರಲ್ಲಿ ನೀವೂ ಒಬ್ಬರಾಗಿದ್ದರೆ ಅದೇ ರೀತಿ ಮಾಡಿ. ವಿಶೇಷವಾಗಿ ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ ಬಿಸಿಲಿನಲ್ಲಿ ಹೋಗಬೇಡಿ.
ಕೆಫೀನ್ ನಿಂದ ಆದಷ್ಟು ದೂರವಿರಿ
ಕೆಲವೊಮ್ಮೆ ಜನರು ಹೆಚ್ಚು ಕಾಫಿ ಸೇವನೆ ಮಾಡುತ್ತಾರೆ. ಹೆಚ್ಚು ಕಾಫಿ ಕುಡಿಯುವುದು ಅವರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ನೀವು ಹೆಚ್ಚು ಕಾಫಿ ಸೇವಿಸಿದರೆ ಅದು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಅದೇ ಸಮಯದಲ್ಲಿ, ಸಂಜೆ ಕಾಫಿ ಕುಡಿಯಬಾರದು. ಇದು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಈ ಕಾರಣದಿಂದ ದಿನದ ಆಯಾಸ ಹೋಗುವುದಿಲ್ಲ.
ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ
ನೀವು ಅತಿಯಾಗಿ ಮದ್ಯ ಸೇವಿಸಿದರೆ ಇಂದೇ ಬಿಟ್ಟು ಬಿಡಿ. ಆಲ್ಕೋಹಾಲ್ ಮತ್ತು ನಿಕೋಟಿನ್ ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ದೇಹದ ಆಯಾಸಕ್ಕೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸಿ ಮತ್ತು ಅದೇ ಸಮಯದಲ್ಲಿ ನಿಮ್ಮನ್ನು ಹೆಚ್ಚು ತೊಂದರೆಗೊಳಿಸುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು
ಭಾರವಾದ ಆಹಾರ ಸೇವನೆ ಬೇಡ
ಹೆಚ್ಚು ಆಹಾರ ಸೇವನೆ ದೇಹವು ಆಲಸ್ಯ ಅನುಭವಿಸಲು ಕಾರಣವಾಗುತ್ತೆ. ಇದರಿಂದಾಗಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ದೇಹವು ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ. ಬೇಸಿಗೆಯಲ್ಲಿ ಇಂತಹ ಆಹಾರವು ಅಸಿಡಿಟಿಗೆ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ