Caffeine Addiction: ಕಾಫಿ ಕುಡಿಯೋದು ಕಮ್ಮಿ ಮಾಡೋದು ಒಳ್ಳೆಯದು, ಹೀಗೆ ಮಾಡಿದ್ರೆ ಸುಲಭವಾಗಿ ಬಿಡಬಹುದು ಅಂತಾರೆ ವೈದ್ಯರು

How to Quit Coffee: ಕೆಫೀನ್ ಸೇವನೆಯನ್ನು ಒಮ್ಮೆಲೇ ನಿಲ್ಲಿಸುವುದು ಕಷ್ಟ. ತಜ್ಞರು ಹೇಳುವಂತೆ ದಿನಕ್ಕೆ 400 ಎಮ್‌ಜಿ ಕೆಫೀನ್ ಸೇವನೆ ಮಾಡಿದರೆ ಪರವಾಗಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಕೆಫೀನ್ ಸೇವನೆ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು, ಅದಕ್ಕಾಗಿ ಕೆಲವು ಸರಳ ಉಪಾಯಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Tips to get rid of Caffeine Addiction: ಕೆಫೀನ್ ಅಂಶವಿರುವ ಪಾನೀಯಗಳ (Drinks with Caffeine) ಸೇವನೆಯಿಂದ ನಾವು ಹೆಚ್ಚು ಚುರುಕಾಗಿ ಇನ್ನಷ್ಟು ಉತ್ಸಾಹಭರಿತರಾಗಿ ಕೆಲಸಮಾಡುತ್ತೇವೆ. ಆದರೆ ಇವುಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸುವುದರಿಂದ ಪ್ರಾಣಕ್ಕೆ ಅಪಾಯವಿದೆ ಎಂಬ ಅಂಶ ನಿಮಗೆ ಗೊತ್ತೇ..? ಕೆಲಸದ ಒತ್ತಡಕ್ಕೆ ಒಳಗಾಗಿ ಇಲ್ಲವೇ ಚಿಂತೆಯ ಕಾರಣದಿಂದ ನಾವು ಅಗತ್ಯಕ್ಕಿಂತ ಹೆಚ್ಚು ಬಾರಿ ಕೆಫೀನ್ ಮಿಶ್ರಿತ ಪಾನೀಯಗಳ ಸೇವನೆ ಮಾಡುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆಯೇ ನಾವು ಕೆಫೀನ್ ದಾಸರಾಗಿಬಿಡುತ್ತೇವೆ. ಲೆಕ್ಕವಿಲ್ಲದಷ್ಟು ಕಾಫಿ (Coffee)  ಸೇವನೆ ಮಾಡುತ್ತೇವೆ. ತಜ್ಞರು ಹೇಳುವಂತೆ ಅನಿಯಮಿತ ಕೆಫೀನ್ ಸೇವನೆಯಿಂದ ನಾವು ಬೇಗ ರೋಗ ರುಜಿನಗಳಿಗೆ (Various Diseases) ದಾಸರಾಗಿಬಿಡುತ್ತೇವೆ ಎಂದಾಗಿದೆ. ಹಾಗಾದರೆ ರೋಗ ರುಜಿನಗಳಿಗೆ ಒಳಗಾಗದೇ ಆರೋಗ್ಯವಂತರಾಗಿ (Health Benefits) ನಾವು ಇರಬೇಕು ಎಂದಾದಲ್ಲಿ ಕೆಫೀನ್ ಸೇವನೆಗೆ ಕಡಿವಾಣ ಹಾಕಲೇಬೇಕು.

ಕೆಫೀನ್ ಮುಕ್ತರಾಗಲು ಸಹಕಾರಿಯಾಗಿರುವ ಕೆಲವೊಂದು ಟಿಪ್ಸ್‌ಗಳನ್ನು ನೀಡುತ್ತಿದ್ದು ಈ ಚಟದಿಂದ ನೀವು ಆದಷ್ಟು ಬೇಗನೇ ಮುಕ್ತರಾಗಬಹುದು.

ಕೆಫೀನ್ ಸೇವನೆಗೆ ಮುಕ್ತಾಯ

ಕೆಫೀನ್ ಸೇವನೆಯನ್ನು ಒಮ್ಮೆಲೇ ನಿಲ್ಲಿಸುವುದು ಕಷ್ಟಕರವಾಗಿದೆ. ತಜ್ಞರು ಹೇಳುವಂತೆ ದಿನಕ್ಕೆ 400 ಎಮ್‌ಜಿ ಕೆಫೀನ್ ಸೇವನೆ ನಿಯಮಿತವಾದುದು. ಆದರೆ ಅದಕ್ಕಿಂತ ಹೆಚ್ಚಿನ ಕೆಫೀನ್ ಸೇವನೆ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು ಎಂದಾಗಿದೆ.

ಆರೋಗ್ಯ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳಿ

ದಿನಕ್ಕೆ 3ಕ್ಕಿಂತ ಹೆಚ್ಚು ಬಾರಿ ಕೆಫೀನ್ ಸೇವನೆ ನೀವು ಮಾಡುತ್ತಿದ್ದಲ್ಲಿ ನೀವು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆತಂಕ, ನಿದ್ರಾಹೀನತೆ, ಬಾಯಿ ಹುಣ್ಣು, ತಲೆನೋವು, ಕಿರಿಕಿರಿ, ತಲೆತಿರುಗುವಿಕೆ, ಸ್ನಾಯು ನಡುಕ, ದೌರ್ಬಲ್ಯ,ಆಯಾಸ ಇತ್ಯಾದಿ.

ಪರ್ಯಾಯ ಪಾನೀಯ ಆರಿಸಿ

ಕೆಫೀನ್ ಸೇವನೆ ನಿಮ್ಮ ದೈನಂದಿನ ಜೀವನದಲ್ಲಿಅಭ್ಯಾಸವಾಗಿಬಿಟ್ಟಿದ್ದರೆ ಅದು ಚಟವಾಗಿ ಮಾರ್ಪಡುವ ಸಾಧ್ಯತೆ ಇದೆ. ಇದಕ್ಕೆ ಬದಲಾಗಿ ಪರ್ಯಾಯ ಪಾನೀಯಗಳನ್ನು ಆರಿಸಿ ಅಂದರೆ ಸಾಕಷ್ಟು ನೀರು ಸೇವನೆ, ಗ್ರೀನ್ ಟೀ ಸೇವನೆ ಹೀಗೆ ಮೊದಲಾದ ಆರೋಗ್ಯಕರ ಪಾನೀಯಗಳಿಗೆ ಮಾರ್ಪಡಿಸಿಕೊಳ್ಳಿ.

ಇದನ್ನೂ ಓದಿ: ನಿಮ್ಮ ಬಿಪಿ, ಹೃದಯದ ಬಡಿತ ಕಾಫಿ ಮೇಲಿನ ಆಸೆಯನ್ನು ಪ್ರಚೋದಿಸುತ್ತದೆ; ಸಂಶೋಧನೆಯಿಂದ ಬಹಿರಂಗ

ನಿಧಾನವಾಗಿ ತ್ಯಜಿಸುವುದು

ಕೆಫೀನ್ ಸೇವನೆಯನ್ನು ನಿಧಾನವಾಗಿ ತ್ಯಜಿಸುವುದು ಒಳ್ಳೆಯ ಉಪಾಯವಾಗಿದೆ. ಮೊದಲ ವಾರದಲ್ಲಿ ಕೆಲವು ದಿನ ಕೆಫೀನ್ ಸೇವನೆ ಮಾಡದಿರಿ. ಹೀಗೆ ಎರಡನೆಯ ವಾರದಲ್ಲಿ ಪುನರಾವರ್ತಿಸಿ.

ಕೆಫೀನ್ ಪಾನೀಯಗಳ ಸೇವನೆಯ ಲಕ್ಷಣಗಳನ್ನು ದೂರಮಾಡುವುದು ಹೇಗೆ

ಕೆಫೀನ್ ಸೇವನೆಯನ್ನು ನಿಲ್ಲಿಸಿದಾಗ ನಿಮಗೆ ತಲೆನೋವು, ಆತಂಕ ಉಂಟಾಗುವುದು ಸಹಜವಾಗಿದೆ. ಈ ಸಮಯದಲ್ಲಿ ನಿಮ್ಮನ್ನು ನೀವು ಶಾಂತರಾಗಿಸಿಕೊಳ್ಳಿ.

ನೀರು ಸೇವನೆ ಮಾಡಿ

ಕೆಫೀನ್ ಸೇವನೆಯೊಂದಿಗೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ನಿರ್ಜಲೀಕರಣದ ಸಮಸ್ಯೆ ನಿಮ್ಮನ್ನು ಕಾಡಬಹುದು.

ಕೆಫೀನ್ ನಿಯಂತ್ರಣ ಮಾಡುವುದು ಹೇಗೆ

ವಾರದ ಆರಂಭದಲ್ಲಿ ನೀವು ಕೆಫೀನ್ ಪಾನೀಯ ಸೇವಿಸಿದರೆ ಮುಂದಿನ ವಾರದವರೆಗೆ ಸೇವಿಸದೇ ಇರಲು ಪ್ರಯತ್ನಿಸಿ. ಪರ್ಯಾಯ ಪಾನೀಯಗಳನ್ನು ಈ ಸಮಯದಲ್ಲಿ ಸೇವಿಸಿ.

ಜತೆಗಾರರನ್ನು ಹುಡುಕಿ

ಕೆಫೀನ್ ಸೇವನೆ ತ್ಯಜಿಸಬೇಕು ಎಂದು ನೀವು ನಿರ್ಧರಿಸಿದಲ್ಲಿ ನಿಮ್ಮ ಗೆಳೆಯರನ್ನು ಸೇರಿಸಿಕೊಳ್ಳಿ. ಇದರಿಂದ ಕೆಫೀನ್ ತ್ಯಜಿಸುವಿಕೆ ಕಷ್ಟ ಎಂದು ಅನ್ನಿಸುವುದೇ ಇಲ್ಲ.

ಕೆಫೀನ್ ಬಯಕೆಯಿಂದ ಹೊರಬರುವುದು ಹೇಗೆ

ನೀವು ಕೆಫೀನ್ ಸೇವನೆ ನಿಲ್ಲಿಸಿದಾಗ ಅದನ್ನು ಪುನಃ ಸೇವಿಸಬೇಕೆಂಬ ತುಡಿತ ನಿಮ್ಮಲ್ಲಿ ಉಂಟಾಗುತ್ತದೆ. ಆಯಾಸ, ನಿದ್ರಾಹೀನತೆ, ತಲೆನೋವು, ಕಿರಿಕಿರಿ, ವಾಕರಿಕೆ ಮೊದಲಾದ ಲಕ್ಷಣಗಳಿಗೆ ನೀವು ಒಳಗಾಗಬಹುದು.

ಸಾಕಷ್ಟು ನಿದ್ರೆ ಮಾಡಿ

ಕೆಫೀನ್ ಸೇವನೆ ನಿಲ್ಲಿಸಿದಾಗ ದೇಹವು ಹೊಸ ಮಾರ್ಪಾಡಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಿ.

ಮದ್ಯಪಾನ ಸೇವನೆ ಮಿತಿಯಲ್ಲಿರಲಿ

ಕೆಫೀನ್ ಸೇವನೆಯ ಮೇಲೆ ನಿಯಂತ್ರಣ ಹೇರಿದಾಗ ಮನಸ್ಸು ಬೇರೆ ಪಾನೀಯಗಳ ಸೇವನೆಯತ್ತ ವಾಲುತ್ತದೆ. ಮದ್ಯಪಾನ ಸೇವನೆ ನೀವು ಮಾಡುತ್ತಿದ್ದಲ್ಲಿ ಇದರ ಮೇಲೂ ನಿಯಂತ್ರಣವಿರಿಸುವುದು ಮುಖ್ಯವಾಗಿದೆ.

ಧನಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಿ

ಕೆಫೀನ್ ತ್ಯಜಿಸುವತ್ತ ನೀವು ಚಿತ್ತ ನೆಟ್ಟಲ್ಲಿ ನಿಮ್ಮ ಮನಸ್ಸು ಕೆಫೀನ್ ಕಡೆಗೆ ವಾಲುವುದು ಸಹಜವಾಗಿದೆ. ಈ ಸಮಯದಲ್ಲಿ ಬೇರೆ ಬೇರೆ ಚಟುವಟಿಕೆಗಳತ್ತ ಗಮನ ಹರಿಸಿ. ಪುಸ್ತಕ ಓದುವುದು, ದೈಹಿಕ ಚಟುವಟಿಕೆಗಳನ್ನು ನಡೆಸುವುದು, ಗೆಳೆಯರೊಂದಿಗೆ ಬೆರೆಯುವುದು ಚಲನಚಿತ್ರಗಳ ವೀಕ್ಷಣೆ ಇತ್ಯಾದಿ.

ನಿಮ್ಮ ಮೆಚ್ಚಿನ ಹಾಡುಗಳನ್ನು ಆಲಿಸಿ

ಕೆಫೀನ್ ತ್ಯಜಿಸುವತ್ತ ನೀವು ಮಗನ ಕೇಂದ್ರೀಕರಿಸಿದಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸಿ. ಕೆಫೀನ್ ಭರಿತ ಇತರ ಪಾನೀಯಗಳನ್ನು ಸೇವಿಸಬೇಕು ಎಂದು ಅನಿಸಿದಲ್ಲಿ ನಿಮ್ಮ ಮೆಚ್ಚಿನ ಹಾಡು ಹಾಗೂ ಚಲನಚಿತ್ರಗಳನ್ನು ವೀಕ್ಷಿಸಿ ಇದರಿಂದ ಮನಸ್ಸು ಬೇರೆ ಕಡೆಗೆ ವಾಲುತ್ತದೆ.

ಅತ್ತಿತ್ತ ಚಲಿಸುತ್ತಿರಿ

ನಿಮ್ಮ ಶಕ್ತಿ ಹೆಚ್ಚಿಸಿಕೊಳ್ಳುವುದರಿಂದಲೂ ನೀವು ಕಾಫಿ ಹಾಗೂ ಇತರ ಪಾನೀಯಗಳನ್ನು ಸೇವಿಸಬೇಕೆಂಬ ಚಪಲದಿಂದ ದೂರ ಉಳಿಯುತ್ತೀರಿ. 20 ನಿಮಿಷಗಳ ಬ್ರಿಸ್ಕ್ ವಾಕ್ ಮಾಡಿ. ಇಲ್ಲದಿದ್ದರೆ ಬೇರೆ ಬೇರೆ ದೈಹಿಕ ವ್ಯಾಯಾಮಗಳನ್ನು ಅನುಸರಿಸಿ

ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳಿ

ಆದಷ್ಟು ಹೊರಗಿನ ಬೆಳಕಿಗೆ ಅಡ್ಡಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ದೇಹಕ್ಕೆ ಆಯಾಸ ಅನಿಸುವುದಿಲ್ಲ. ಹಾಗೂ ಒಂದೇ ಕಡೆ ಕೂರದೇ ಅತ್ತಿತ್ತ ಚಲಿಸುತ್ತಿರಿ. ನಿಮ್ಮ ಮನಸ್ಸನ್ನು ಬೇರೆ ಕಡೆಗೆ ಹೊರಳಿಸುತ್ತಿರಿ.

ಮಲಗುವುದನ್ನು ನಿಲ್ಲಿಸಿ

ನಿಮ್ಮನ್ನು ಆವರಿಸಿರುವ ಸೋಮಾರಿತನವನ್ನು ಬಿಡಿಸಿಕೊಳ್ಳಿ. ಹೆಚ್ಚು ಚಟುವಟಿಕೆಯಿಂದಿರಿ. ಸ್ನೇಹಿತರೊಂದಿಗೆ ಬೆರೆಯಿರಿ. ಕಚೇರಿಯಲ್ಲಿ ಕೂಡ ಅತ್ತಿತ್ತ ಚಲಿಸುತ್ತಿರಿ.
Published by:Soumya KN
First published: