• Home
  • »
  • News
  • »
  • lifestyle
  • »
  • Parenting Tips: ಮಕ್ಕಳ ಜೊತೆ ಪೋಷಣೆಯ ದಿನಚರಿ ಹೀಗೆ ಸೆಟ್ ಮಾಡಿ, ನಂತರ ನಿಮ್ಮ ಮಕ್ಕಳ ಬೆಳವಣಿಗೆ ನೋಡಿ

Parenting Tips: ಮಕ್ಕಳ ಜೊತೆ ಪೋಷಣೆಯ ದಿನಚರಿ ಹೀಗೆ ಸೆಟ್ ಮಾಡಿ, ನಂತರ ನಿಮ್ಮ ಮಕ್ಕಳ ಬೆಳವಣಿಗೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪೋಷಕರ ಸಹಾಯದೊಂದಿಗೆ ಮಾತ್ರ ಮಕ್ಕಳು ಒಳ್ಳೆಯ ಜೀವನ ಹಾಗೂ ಯಶಸ್ಸನ್ನು ಗಳಿಸಲು ಸಾಧ್ಯ. ಮೆದುಳಿನ ಆರಂಭಿಕ ಬೆಳವಣಿಗೆಯನ್ನು ಅಧ್ಯಯನ ಮಾಡುವಂಥ ವೈದ್ಯರ ಪ್ರಕಾರ, ಮಕ್ಕಳಿಗೆ ಪೋಷಣೆ ದಿನಚರಿಗಳನ್ನು ರಚಿಸುವುದು ಬಹಳ ಮುಖ್ಯ. ಅಧ್ಯಯನಗಳ ಪ್ರಕಾರ, ಮಕ್ಕಳಿಗೆ ಗೊತ್ತಿರುವವಂಥ ಸರಿಯಾದ ಆಚರಣೆಗಳು ಮಕ್ಕಳಿಗೆ ಹೊಂದಿಕೊಳ್ಳಲು ಹಾಗೂ ಅದನ್ನು ನಿರ್ವಹಿಸಲು ಕಲಿಸುತ್ತವೆ.

ಮುಂದೆ ಓದಿ ...
  • Share this:

ಮಕ್ಕಳನ್ನು (Children) ಬೆಳೆಸಲು ಶ್ರಮ ತುಂಬಾನೇ ಬೇಕು. ಅದರಲ್ಲೂ ಒಳ್ಳೆಯದನ್ನು ಕಲಿಸಲು.. ಅವರಲ್ಲಿ ಆತ್ಮವಿಶ್ವಾಸ ತುಂಬಲು ಪೋಷಕರು (Parents) ಕಷ್ಟ ಪಡಲೇಬೇಕು. ಬಹಳಷ್ಟು ಮಕ್ಕಳು ಕೋಪ, ಖಿನ್ನತೆಯಿಂದ ಬಳಲುತ್ತಾರೆ. ಅವರಿಗೆ ಸವಾಲನ್ನು ಎದುರಿಸುವ ಸಾಮರ್ಥ್ಯ ಕಡಿಮೆ ಇರುತ್ತೆ. ಅಂಥವರನ್ನು ಮತ್ತೆ ಸರಿ ಮಾಡಲು ಪೋಷಕರು ಕಷ್ಟ ಪಡಲೇಬೇಕು. ಪೋಷಕರ ಸಹಾಯದೊಂದಿಗೆ ಮಾತ್ರ ಮಕ್ಕಳು ಒಳ್ಳೆಯ ಜೀವನ ಹಾಗೂ ಯಶಸ್ಸನ್ನು (Success) ಗಳಿಸಲು ಸಾಧ್ಯ. ಮೆದುಳಿನ ಆರಂಭಿಕ ಬೆಳವಣಿಗೆಯನ್ನು (Growth) ಅಧ್ಯಯನ ಮಾಡುವಂಥ ವೈದ್ಯರ ಪ್ರಕಾರ, ಮಕ್ಕಳಿಗೆ ಪೋಷಣೆ ದಿನಚರಿಗಳನ್ನು ರಚಿಸುವುದು ಬಹಳ ಮುಖ್ಯ. ಅಧ್ಯಯನಗಳ ಪ್ರಕಾರ, ಮಕ್ಕಳಿಗೆ ಗೊತ್ತಿರುವವಂಥ ಸರಿಯಾದ ಆಚರಣೆಗಳು ಮಕ್ಕಳಿಗೆ ಹೊಂದಿಕೊಳ್ಳಲು ಹಾಗೂ ಅದನ್ನು ನಿರ್ವಹಿಸಲು ಕಲಿಸುತ್ತವೆ.


ಪೋಷಣೆ ದಿನಚರಿಗಳು ಮಕ್ಕಳಿಗೆ ಹೇಗೆ ಸಹಾಯ ಮಾಡುತ್ತವೆ?
ಮಕ್ಕಳಿಗೆ ದಿನವೂ ಸವಾಲುಗಳು ಎದುರಾಗುತ್ತವೆ. ಕೆಲವೊಮ್ಮೆ ಹಿನ್ನಡೆಯೂ ಆಗಬಹುದು. ಅಂಥ ಸಮಯದಲ್ಲಿ ಮಗುವನ್ನು ಸಮಾಧಾನ ಪಡಿಸುವ ರೀತಿ ಬಹಳ ಮುಖ್ಯ. ಆ ಸಮಯದಲ್ಲಿ ಆರಾಮದಾಯಕವಾದ, ಪ್ರೀತಿಯ ವಾತಾವರಣ ಇರಬೇಕು. ಅಂದಹಾಗೆ ನಿಮ್ಮ ಮಗುವು ಆರೋಗ್ಯಕರ ನಡವಳಿಕೆಯನ್ನು ಉತ್ತೇಜಿಸುವ ಬೆಳಗಿನ ದಿನಚರಿಯನ್ನು ಹೊಂದಿರಬಹುದು.


ಅವರ ಹಲ್ಲುಜ್ಜುವ ಬಗ್ಗೆ, ದಿನದಲ್ಲಿ ತಾವು ಏನೇಲ್ಲ ಮಾಡುತ್ತೇವೆ ಎಂಬುದು ಅಥವಾ ಪೌಷ್ಟಿಕಾಂಶ ಹೊಂದಿರುವ ಮಧ್ಯಾಹ್ನದ ಊಟದ ಬಗ್ಗೆ ಅವರು ಮಾತನಾಡಬಹುದು. ಮಕ್ಕಳಿಗೆ ಒಂದು ಸರಿಯಾದ, ಶಿಸ್ತಿನ ಹಾಗೂ ದಿನವೂ ಒಂದೇ ರೀತಿಯ ದಿನಚರಿಯನ್ನು ಸೆಟ್‌ ಮಾಡುವುದು ಬಹಳ ಮುಖ್ಯ.


ಇದನ್ನೂ ಓದಿ: Baby Care: ನವಜಾತ ಶಿಶುಗಳ ಹೊಟ್ಟೆ ನೋವಿನ ಲಕ್ಷಣಗಳಿದು, ಅದಕ್ಕೆ ಪರಿಹಾರ ಇದಂತೆ


ಮಕ್ಕಳ ಬಗೆಗಿನ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನೀವು ಅಂದರೆ ಪೋಷಕರು ಅವರ ದಿನಚರಿಯನ್ನು ಗಮನಿಸುವುದನ್ನು ಕಡಿಮೆ ಮಾಡಿದಾಗ ಅವರಿಗೆ ಇನ್ನು ಸಂತೋಷವಾಗುತ್ತೆ. ಇದರಿಂದ ಅವರು ಸ್ವತಂತ್ರ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಪೋಷಣೆಯ ದಿನಚರಿ ರಚಿಸುವಾಗ ಈ ಅಂಶಗಳು ನೆನಪಿರಲಿ:


1. ದಿನಚರಿಯ ಸಮಯದಲ್ಲಿ ಸಂಭಾಷಣೆಯನ್ನು ಪ್ರೋತ್ಸಾಹಿಸಿ
ಮಕ್ಕಳ ಜೊತೆ ಪೋಷಕರು ಸರಿಯಾಗಿ ಮಾತನಾಡುವುದು ಬಹಳ ಮುಖ್ಯ. ಪೋಷಕರೊಂದಿಗಿನ ಸಂವಹನ ಶೈಲಿಯನ್ನು ತಮ್ಮದೇ ಆದ "ಖಾಸಗಿ ಮಾತು" ಎಂದು ಪರಿಗಣಿಸುತ್ತಾರೆ ಮಕ್ಕಳು. ಆದ್ದರಿಂದ ದಿನವಿಡೀ ಶಾಂತ, ಪ್ರೀತಿಯ ಮಾತು ಮತ್ತು ಪ್ರಶ್ನೆಗಳು ಮಕ್ಕಳಲ್ಲಿ ಕೌಶಲ್ಯವನ್ನು ಹೆಚ್ಚಿಸುತ್ತವೆ.


ಉದಾಹರಣೆಗೆ ಅವರ ರಾತ್ರಿಯ ದಿನಚರಿಯಾದ ಹಲ್ಲುಜ್ಜುವುದು ಹಾಗೂ ನೈಟ್‌ ಡ್ರೆಸ್‌ ಹಾಕಿಕೊಳ್ಳುವುದರ ಬಗ್ಗೆ ಮಾತನಾಡುವುದು. ಈ ಸಮಯದಲ್ಲಿ “ನೈಟ್‌ ಸ್ಯೂಟ್‌ ನಲ್ಲಿ ಬ್ರಶ್‌ ಮಾಡೋಕೆ ರೆಡಿ ಆಗಿದ್ದೀಯಾ.. ಸರಿ ನಾವೀಗ ಬ್ರಶ್‌ ಒದ್ದೆ ಮಾಡಿ ಆಯ್ತು.. ಮುಂದೇನು..”? ಅನ್ನೋದಾಗಿ ಕೇಳಿ.


2. ಮಕ್ಕಳಿಗೆ "ಏಕೆ" ಅನ್ನುವುದನ್ನು ವಿವರಿಸಿ
ಪ್ರತಿ ನಡೆ ನುಡಿಯ ಹಿಂದೆ ಏಕೆ ಎಂಬುದನ್ನು ವಿವರಿಸಿದಾಗ ಮಕ್ಕಳು ಅವರಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಅಲ್ಲದೇ ದಿನಚರಿಯನ್ನು ಪೂರ್ಣಗೊಳಿಸುವ ಬಗ್ಗೆ ಧನಾತ್ಮಕವಾಗಿ ಆಲೋಚಿಸುತ್ತಾರೆ.


ಉದಾಹರಣೆಗೆ, “ನಾವೀಗ ಬ್ಲಾಕ್ಸ್‌ ಜೋಡಿಸೋ ಮೂಲಕ ತುಂಬಾ ಆಟವಾಡಿದ್ದೇವೆ. ದೊಡ್ಡ ದೊಡ್ಡ ಬ್ಲಾಕ್ಸ್‌ ಗಳು ಬ್ಲೂ ಕಲರ್‌ ಬಕೆಟ್‌ ಗೆ ಹೋಗುತ್ವೆ. ಹಾಗಿದ್ರೆ ಚಿಕ್ಕ ಬ್ಲಾಕ್ಸ್‌ ಗಳು ಎಲ್ಲಿ ಹೋಗುತ್ವೆ..”? ಮಕ್ಕಳು ಇದಕ್ಕೆ ಉತ್ತರಿಸಿದಾಗ “ಅದು ಸರಿ. ಬೇಗ ಬೇಗ ಇದನ್ನು ಮುಗಿಸಿಬಿಡೋಣ. ನಂತರ ನಾವು ಸ್ನ್ಯಾಕ್ಸ್‌ ತಿನ್ನಬಹುದು. ನಾವು ಎನರ್ಜೆಟಿಕ್ ಇರಬೇಕಲ್ವಾ..”? ಹೀಗೆ ಉತ್ತೇಜಿಸುವ ಮಾತುಗಳನ್ನಾಡಿ.


ಇಂಥಹ ಸಂಭಾಷಣೆಗಳು.. ನಾವು ಯಾಕೆ ಇದನ್ನು ಮಾಡ್ತಾ ಇದೀವಿ ಅನ್ನೋದನ್ನು ವಿವರಿಸಿದರೆ ಮಕ್ಕಳಿಗೆ ಮಾತನಾಡುವ ಕೌಶಲ್ಯ ಜೊತೆಗೆ ನಾವೇನು ಮಾಡ್ತಾ ಇದೀವಿ ಅದರ ಹಿಂದಿರೋ ಮಹತ್ವದ ಬಗ್ಗೆ ಅರ್ಥ ಆಗುತ್ತೆ.


3. ತಾಳ್ಮೆಯಿಂದ ಕಲಿಸಿ
ಮಕ್ಕಳಲ್ಲಿ ಖಿನ್ನತೆಯಿಂದ ಹೊರಬರುವ ಗುಣ ರಾತ್ರಿ ಬೆಳಗಾಗುವುದರಲ್ಲಿ ಬೆಳೆಯುವುದಿಲ್ಲ ಎನ್ನುವುದನ್ನು ನೆನಪಿಡಿ. ನಾವು ಮಕ್ಕಳಿಗೆ ದಿನವೂ ನೆನಪಿಸಬೇಕಾಗುತ್ತದೆ. ಕೆಲವೊಮ್ಮೆ ಈ ದಿನಚರಿಗೆ ಹೊಂದಿಕೊಳ್ಳಲು ಅಥವಾ ಅದನ್ನೇ ಮುಂದುವರಿಸಲು ಮಕ್ಕಳಿಗೆ ಕಷ್ಟವಾಗಬಹುದು. ಮಕ್ಕಳ ಜೊತೆ ಯಾವಾಗಲೂ ಪ್ರೀತಿಯ ಹಾಗೂ ನಿಧಾನವಾಗಿ ತಿಳಿಸಿ ಹೇಳುವ ಅಗತ್ಯವಿದೆ. ಇದರಿಂದ ಕೆಲವೊಮ್ಮೆ ತಪ್ಪಿ ಹೋದ ದಿನಚರಿಯು ಸರಿಯಾಗಬಹುದು.


ಇದನ್ನೂ ಓದಿ:  Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ


ಉದಾಹರಣೆಗೆ ಒಂದು ದಿನ ಮಕ್ಕಳಿಗೆ ಮಲಗುವಾಗ ಕಥೆಯನ್ನು ಹೇಳಲಾಗಲಿಲ್ಲ ಎಂದಾಗ ನೀವು ಮಕ್ಕಳಿಗೆ ಭರವಸೆ ನೀಡಬೇಕು. “ನಾಳೆ ನಿನಗೆ ಖಂಡಿತಾ ಕಥೆ ಹೇಳುತ್ತೇನೆ. ಖಂಡಿತವಾಗಿಯೂ ಸಮಯ ನೀಡುತ್ತೇನೆ” ಎಂದು ಹೇಳಿ. ಅಲ್ಲದೇ ಕೆಲವೊಮ್ಮೆ ನಿಮ್ಮ ಮಗುವು ಯಾರದ್ದೂ ಸಹಾಯವಿಲ್ಲದೇ ದಿನದ ಅಭ್ಯಾಸಗಳನ್ನು ಮಾಡಿದಾಗ ಮಗುವನ್ನು ಹೊಗಳಿ. ಮಕ್ಕಳು ಅವರ ಬ್ಲಾಂಕೆಟ್‌ ಮಡಚಿಟ್ಟಾಗ, ಧನ್ಯವಾದ ಹೇಳಿ.


ಹೀಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು.

Published by:Ashwini Prabhu
First published: