HOME » NEWS » Lifestyle » FOLLOW THESE PREGNANCY TIPS TO HAVE A NORMAL DELIVERY STG AE

Normal Delivery: ಸಹಜ ಹೆರಿಗೆಗೆ ಇಲ್ಲಿವೆ ಸರಳ ಸೂತ್ರಗಳು..!

ಪ್ರತಿ ಹೆಣ್ಣಿನ ದೇಹವು ಸಹಜ ಹೆರಿಗೆಗೆ ತಕ್ಕಂತೆ ರೂಪುಗೊಂಡಿರುತ್ತದೆ. ತುರ್ತು ಪರಿಸ್ಥಿಯನ್ನು ಹೊರತುಪಡಿಸಿದರೆ, ಸಹಜ ಹೆರಿಗೆಯೇ ಹೆಚ್ಚು ಒಳ್ಳೆಯದು. ಸಹಜ ಹೆರಿಗೆ ಆಗಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ ಇಲ್ಲಿವೆ ಒಂದಿಷ್ಟು ಸಲಹೆಗಳು.

Trending Desk
Updated:June 11, 2021, 3:26 PM IST
Normal Delivery: ಸಹಜ ಹೆರಿಗೆಗೆ ಇಲ್ಲಿವೆ ಸರಳ ಸೂತ್ರಗಳು..!
ಸಾಂದರ್ಭಿಕ ಚಿತ್ರಗಳು
  • Share this:
ಮನೆ ಹಾಗೂ ಆಸ್ಪತ್ರೆಗಳಲ್ಲಿ ಆಗುತ್ತಿದ್ದ ಸಹಜ ಹೆರಿಗೆಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಿಸೇರಿಯನ್ ಹೆರಿಗೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಕೆಲವರು ಬೇಕಂತಲೇ ವೈದ್ಯರಿಗೆ ಹೇಳಿ ಸಿಸೇರಿಯನ್ ಮಾಡಿಸಿಕೊಳ್ಳುತ್ತಾರೆ. ಆದರೆ ಹೆಚ್ವಿನ ಮಂದಿ ಈಗಲೂ ಸಜಹ ಹೆರಿಗೆಗೆ ಪ್ರಾಮುಖ್ಯತೆ ನೀಡುತ್ತಾರೆ. ಹೆರಿಗೆ ಯಾವ ರೀತಿ ಆಗಬೇಕೆಂದು ಗರ್ಭಿಣಿಯರ ಆರೋಗ್ಯ ಸ್ಥಿತಿಯ ಮೇಲೆ ಆಧರಿಸಿ ವೈದ್ಯರು ನಿರ್ಧರಿಸುತ್ತಾರೆ. ಪ್ರತಿ ಹೆಣ್ಣಿನ ದೇಹವು ಸಹಜ ಹೆರಿಗೆಗೆ ತಕ್ಕಂತೆ ರೂಪುಗೊಂಡಿರುತ್ತದೆ. ತುರ್ತು ಪರಿಸ್ಥಿಯನ್ನು ಹೊರತುಪಡಿಸಿದರೆ, ಸಹಜ ಹೆರಿಗೆಯೇ ಹೆಚ್ಚು ಒಳ್ಳೆಯದು. ಸಹಜ ಹೆರಿಗೆ ಆಗಬೇಕಾದರೆ ಏನು ಮಾಡಬೇಕೆಂಬುದರ ಬಗ್ಗೆ ಇಲ್ಲಿವೆ ಒಂದಿಷ್ಟು ಸಲಹೆಗಳು. 

ಮೊದಲ ಭಾರಿ ಗರ್ಭಿಣಿಯಾದಾಗ ಹೆಣ್ಣಿನಲ್ಲಿ ಸಂತೋಷ, ಆತಂಕ ಸೇರಿದಂತೆ ವಿಭಿನ್ನ ಭಾವನೆಗಳು ಮನೆ ಮಾಡುತ್ತವೆ. ಪ್ರತಿಯೊಬ್ಬ ಹೆಣ್ಣು ತನಗೆ ಸುಲಭ ಹೆರಿಗೆಯಾಗಲಿ ಎಂದು ಬಯಸುತ್ತಾಳೆ. ಆದರೆ ಎಲ್ಲರಿಗೂ ನಾರ್ಮಲ್ ಅಂದರೆ ಸಹಜ ಹೆರಿಗೆ  ಆಗಲು ಸಾಧ್ಯವಿಲ್ಲ, ಏಕೆಂದರೆ ಹೆರಿಗೆ ಕೋಣೆಯಲ್ಲಿ ಎದುರಾಗುವ ಪರಿಸ್ಥಿತಿಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಇನ್ನು ಕೆಲವರು ಮಹಿಳೆಯರು ಹಲವಾರು ಕಾರಣಗಳಿಂದಾಗಿ, ಸಿಸೇರಿಯನ್ ಹೆರಿಗೆಯನ್ನು ಬಯಸುತ್ತಾರೆ. ಆದರೆ ತುರ್ತು ಪರಿಸ್ಥಿತಿ ಹೊರತು ಪಡಿಸಿದರೆ ಉಳಿದಂತೆ ಸಹಜ ಹೆರಿಗೆಯೇ ಆಗುತ್ತದೆ.

Woman Tells How She Got Pregnant without Ever Having 'Sex' Due to Rare Vaginal Condition.
ಸಾಂದರ್ಭಿಕ ಚಿತ್ರ


ಸಹಜ ಹೆರಿಗೆಗೆ ಇಲ್ಲಿವೆ ಕೆಲವು ಸಲಹೆಗಳು 

1. ಪೋಷಕ ತರಗತಿಗಳಿಗೆ ಸೇರಿ
ಪೋಷಕ ತರಗತಿಗಳು ಎಂದರೆ, ಗರ್ಭಿಣಿ ಸ್ತ್ರೀಯರು ತಮ್ಮ ಗರ್ಭಾವಸ್ಥೆ, ಪ್ರಸವದ ದಿನಗಳಲ್ಲಿ ಹೇಗಿರಬೇಕು ಮತ್ತು ಮಗು ಹುಟ್ಟಿದ ಮೇಲೆ ಅದನ್ನು ಹೇಗೆ ನೋಡಿಕೊಳ್ಳಬೇಕು ಎಂದು ತರಬೇತಿ ನೀಡುವ ತರಗತಿಗಳು. ಅದರ ಜೊತೆ ಸುಖವಾದ ಹೆರಿಗೆಗೆ ಅನುಕೂಲವಾಗುವಂತ ಕೆಲವು ಸರಳ ವ್ಯಾಯಾಮಗಳನ್ನು ಕೂಡ ಹೇಳಿಕೊಡಲಾಗುತ್ತದೆ. ಹಾಗಾಗಿ ಪ್ರಸವ ಮತ್ತು ಅದರ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡು, ಶಾಂತ ಮನಸ್ಸಿನಿಂದ ಹೆರಿಗೆಗೆ ಸಿದ್ಧವಾಗಿ.

2. ನಿತ್ಯ ವ್ಯಾಯಾಮಪೋಷಕ ತರಗತಿಗಳಲ್ಲಿ ಹೇಳಿಕೊಟ್ಟ ಸರಳ ವ್ಯಾಯಾಮಗಳನ್ನು ನಿತ್ಯವೂ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಅದರಿಂದ ದೇಹದ ಸ್ನಾಯುಗಳಿಗೆ ಹೆರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೊರೆಯುತ್ತದೆ ಮಾತ್ರವಲ್ಲ ಇಂತಹ ವ್ಯಾಯಾಮಗಳು ಮುಖ್ಯವಾಗಿ ಪೆಲ್ವಿಕ್ ಸ್ನಾಯುಗಳಿಗೆ ಹೆಚ್ಚು ಸಾಮಥ್ರ್ಯ ನೀಡುತ್ತವೆ. ಯಾವುದೇ ವ್ಯಾಯಾವನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ಮಾಡಿ, ಇಲ್ಲವಾದಲ್ಲಿ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆ ಆಗಬಹುದು.

ಇದನ್ನೂ ಓದಿ: Yami Gautam: ಅಮ್ಮನ 33 ವರ್ಷದ ಹಳೇ ಸೀರೆಯುಟ್ಟು ಸಪ್ತಪದಿ ತುಳಿದ ನಟಿ ಯಾಮಿ ಗೌತಮ್​..!

3. ಆರೋಗ್ಯಕರ ಆಹಾರ ಕ್ರಮ ಅನುಸರಿಸಿ
ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರ ಕೇವಲ ತಾಯಿಗೆ ಮಾತ್ರವಲ್ಲ, ಹೊಟ್ಟೆಯಲ್ಲಿರುವ ಮಗುವಿನ ಸೂಕ್ತ ಬೆಳವಣಿಗೆಗೂ ಅತ್ಯಗತ್ಯ. ಆದಷ್ಟು ಹಣ್ಣು ತಕಾರಿಗಳನ್ನು ತಿನ್ನಿ. ಸಂಸ್ಕರಿತ ಮತ್ತು ಕೊಬ್ಬುಳ್ಳ ಆಹಾರಗಳಿಂದ ಸಾಧ್ಯವಾದಷ್ಟು ದೂರ ಇರಿ. ತೂಕದ ಬಗ್ಗೆ ಗಮನವಿರಲಿ, ತೂಕ ಅತಿಯಾದರೆ ಸಹಜ ಹೆರಿಗೆ ಕಷ್ಟವಾದೀತು.

4. ಒತ್ತಡದಿಂದ ದೂರವಿರಿ
ಗರ್ಭಿಣಿಯರು ತಮ್ಮ ಮನಸ್ಸನ್ನು ಒತ್ತಡದಿಂದ ದೂರ ಇಡಲು ಪ್ರಯತ್ನಿಸಬೇಕು. ಒಳ್ಳೆಯ ಪುಸ್ತಕಗಳನ್ನು ಓದಿ, ಪ್ರೀತಿಪಾತ್ರರ ಜೊತೆ ಒಡನಾಟವಿಟ್ಟುಕೊಳ್ಳಿ. ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರಿ. ನಿಮ್ಮ ಮಾನಸಿಕ ಆರೋಗ್ಯ ಮಗುವಿನ ಮೇಲೆ ಕೂಡ ಪ್ರಭಾವ ಬೀರುತ್ತದೆ.

5. ಒಳ್ಳೆಯ ನಿದ್ರೆ ಮಾಡಿ
ಯಾವುದೇ ಕಿರಿಕಿರಿ ಇಲ್ಲದೆ 8-10 ಗಂಟೆಗಳ ಕಾಲ ನಿದ್ರಿಸುವುದು ಗರ್ಭಿಣಿಗೆ ಅತ್ಯಗತ್ಯ. ಸುಖವಾದ ನಿದ್ರೆ ಮಗುವಿನ ಉತ್ತಮ ಬೆಳವಣಿಗೆಗೆ ಅತ್ಯಂತ ಅಗತ್ಯ. ನಿದ್ರೆಯಿಂದ ನಿಮ್ಮ ಮನಸ್ಸು ಕೂಡ ಶಾಂತವಾಗಿರುತ್ತದೆ. ಮಲಗುವ ಎರಡು ಗಂಟೆ ಮೊದಲೇ ಟೀ-ಕಾಫಿ ಸೇವನೆ ನಿಲ್ಲಿಸಿಬಿಡಿ.

6. ಸರಿಯಾದ ಉಸಿರಾಟದ ಕ್ರಮವನ್ನು ಅನುಸರಿಸಿ
ಹೆರಿಗೆಯ ಸಂದರ್ಭದಲ್ಲಿ ಹೆಣ್ಣು ತನ್ನ ಉಸಿರನ್ನು ಆಗಾಗ ಬಿಗಿ ಹಿಡಿದುಕೊಳ್ಳಬೇಕಾಗುತ್ತದೆ. ಮಗುವಿನ ಸರಿಯಾದ ಬೆಳವಣಿಗೆಗೆ ಆಮ್ಲಜನಕದ ಪೂರೈಕೆ ಅತ್ಯಗತ್ಯ. ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡಿ.

ಇದನ್ನೂ ಓದಿ: ಹಿರಿಯ ನಟ-ಪತ್ರಕರ್ತ ಸುರೇಶ್ ಚಂದ್ರ ಇನ್ನಿಲ್ಲ

7. ಯಥೇಚ್ಛವಾಗಿ ನೀರು ಕುಡಿಯಿರಿ
ಗರ್ಭಿಣಿಯರು ಯಥೇಚ್ಛವಾಗಿ ನೀರನ್ನು ಕುಡಿಯಬೇಕು. ದಿನಕ್ಕೆ ಕನಿಷ್ಟ 8-10 ಲೋಟ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಮೂತ್ರಕೋಶದ ಸೋಂಕನ್ನು ಅದು ತಡೆಯುತ್ತದೆ. ಡಿಹೈಡ್ರೇಶನ್ ಮತ್ತು ಊತದ ಸಮಸ್ಯೆಯಿಂದ ಕೂಡ ದೂರವಿಡುತ್ತದೆ.

ಸಹಜ ಹೆರಿಯ ನೋವಿನ ಬಗ್ಗೆ ಚಿಂತಿಸಬೇಡಿ. ಮುದ್ದಾದ, ಆರೋಗ್ಯವಂತ ಕಂದಮ್ಮನ ಮುಖ ನೋಡಿದ ಮೇಲೆ ನೋವನ್ನು ಮರೆಯುತ್ತೀರಿ. ಮಗುವಿನ ಬಗ್ಗೆ ಯೋಚಿಸಿ, ಗಟ್ಟಿಯಾಗಿರಿ.
Published by: Anitha E
First published: June 11, 2021, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories