Weight Loss: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

ತೂಕ ನಷ್ಟಕ್ಕೆ ಮೊದಲು ನಿಮ್ಮ ಆಹಾರ ಕ್ರಮವನ್ನು ಬದಲಾವಣೆ ಮಾಡಿಕೊಳ್ಳಬೇಕು. ಮೊದಲು ತೂಕ ಇಳಿಸುವುದು ಯಾಕೆ ಮುಖ್ಯ ಎಂಬುದನ್ನು ತಿಳಿದುಕೊಳ್ಳಿ. ಸ್ಥೂಲಕಾಯ ಇದ್ದವರು ಸಾಧ್ಯವಾದಷ್ಟು ಬೇಗ ನಿಯಂತ್ರಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ (Now a Days) ತೂಕ ಹೆಚ್ಚಾಗುವುದು (Weight Gaining) ಮತ್ತು ಒಬೆಸಿಟಿ (Obesity) ಸಮಸ್ಯೆ (Problem) ಸಾಮಾನ್ಯವಾಗುತ್ತಾ ಹೋಗುತ್ತಿದೆ. ವೇಗವಾಗಿ ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ನೀವು ತೊಂದರೆಗೆ ಒಳಗಾಗಿದ್ದರೆ ನೀವು ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳೋದು ಅಂದ್ರೆ ಸುಲಭದ ಮಾತಲ್ಲ. ತೂಕ ನಷ್ಟವು ಒಂದು ಸವಾಲೇ ಸರಿ. ಇದು ನಮಗೆಲ್ಲರಿಗೂ ತಿಳಿದ ಸಂಗತಿ. ಒಮ್ಮೆ ದೇಹ ದಪ್ಪವಾದರೆ ಅದನ್ನು ಇಳಿಸುವುದು ತುಂಬಾ ಕಷ್ಟದ ಕೆಲಸ. ಇದಕ್ಕಾಗಿ ಹಲವರು ಜಿಮ್‌ನಲ್ಲಿ ಬೆವರು ಹರಿಸಿದರೆ, ಕೆಲವರು ಕಡಿಮೆ ಕ್ಯಾಲೋರಿ ಆಹಾರ, ಡಯಟ್ ಅನುಸರಿಸುತ್ತಾರೆ. ನೀವೂ ಸಹ ತೂಕ ಇಳಿಸೋಕೆ ನಿರ್ಧರಿಸಿದ್ದರೆ, ತೂಕ ಕಳೆದುಕೊಳ್ಳುವುದು ಕಷ್ಟದ ಕೆಲಸವಲ್ಲ.

  ತೂಕ ನಷ್ಟಕ್ಕೆ ಮೊದಲು ನಿಮ್ಮ ಆಹಾರ ಕ್ರಮವನ್ನು ಬದಲಾವಣೆ ಮಾಡಿಕೊಳ್ಳಬೇಕು. ಯಾಕೆಂದರೆ ತೂಕ ಕಡಿಮೆಯಾಗುವುದು ಮತ್ತು ಹೆಚ್ಚಾಗುವುದು ಆಹಾರ ಸೇವನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

  ತೂಕ ಕಳೆದುಕೊಳ್ಳುವುದು ಏಕೆ ಮುಖ್ಯ ಗೊತ್ತಾ?

  ಮೊದಲು ತೂಕ ಇಳಿಸುವುದು ಯಾಕೆ ಮುಖ್ಯ ಎಂಬುದನ್ನು ತಿಳಿದುಕೊಳ್ಳಿ. ಸ್ಥೂಲಕಾಯ ಇದ್ದವರು ಸಾಧ್ಯವಾದಷ್ಟು ಬೇಗ ನಿಯಂತ್ರಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಬೊಜ್ಜು ಹೃದ್ರೋಗ, ಅಧಿಕ ರಕ್ತದೊತ್ತಡ, ಹೆಚ್ಚಿದ ಯೂರಿಕ್ ಆಮ್ಲ ಮತ್ತು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

  ಇದನ್ನೂ ಓದಿ: ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ ಕಮಲ ಹೂವಿನ ಬೇರುಗಳು

  ಡಯಟ್ ತಜ್ಞೆ ಡಾ.ರಂಜನಾ ಸಿಂಗ್ ಹೇಳುವ ಪ್ರಕಾರ, ಕಡಿಮೆ ಕಾರ್ಬ್ ಮತ್ತು ಹಸಿರು ತರಕಾರಿಗಳು, ಮೊಟ್ಟೆಗಳು, ಮಾಂಸ ಮತ್ತು ಸಮುದ್ರಾಹಾರ ಸಂಪೂರ್ಣ ಆಹಾರದ ಆಹಾರಗಳು ತೂಕ ಇಳಿಕೆಗೆ ಪರಿಣಾಮಕಾರಿ ಮತ್ತು ಆರೋಗ್ಯಕರ ಎಂದು ಹೇಳುತ್ತಾರೆ.

  ತ್ವರಿತವಾಗಿ ತೂಕವನ್ನು ಹೇಗೆ ಕಳೆದುಕೊಳ್ಳುವುದು ಎಂದು ಅನೇಕರು ಪ್ರಶ್ನಿಸಿ, ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗಗಳು ಯಾವುವು? ಈ ಬಗ್ಗೆ ತೂಕವನ್ನು ಕಳೆದುಕೊಳ್ಳುವ ಕೆಲವು ವಿಧಾನಗಳನ್ನು ಇಲ್ಲಿ ಹೇಳಲಾಗಿದೆ.

  ತೂಕ ಇಳಿಸಿಕೊಳ್ಳಲು ಐದು ಸಲಹೆಗಳು

  ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಪದಾರ್ಥಗಳ ಸೇವನೆ ಕಡಿಮೆ ಮಾಡಿ

  ತ್ವರಿತ ತೂಕ ನಷ್ಟಕ್ಕೆ ಮೊದಲು ಆಹಾರದಿಂದ ಸಕ್ಕರೆ ಮತ್ತು ಪಿಷ್ಟ ಅಥವಾ ಕಾರ್ಬೋಹೈಡ್ರೇಟ್‌ಗಳ ಸೇವನೆ ಕಡಿಮೆ ಮಾಡಬೇಕು. ಇದು ನಿಮ್ಮ ಹಸಿವನ್ನು ಕಡಿಮೆ ಮಾಡುವ ಮೂಲಕ, ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ.

  ಪ್ರೋಟೀನ್, ಕೊಬ್ಬು ಮತ್ತು ತರಕಾರಿಗಳನ್ನು ಸೇವಿಸಿ

  ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಅವರ ಪ್ರಕಾರ, ತೂಕ ಇಳಿಸಲು ಪ್ರೋಟೀನ್, ಆರೋಗ್ಯಕರ ಕೊಬ್ಬು, ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಮತ್ತು ಎಲೆಗಳ ಹಸಿರು ತರಕಾರಿಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಬೇಕು. ದಿನವೂ ಊಟವು ಕಡಿಮೆ ಕ್ಯಾಲೋರಿ ಮತ್ತು ಸಾಕಷ್ಟು ಪೋಷಕಾಂಶ ಹೊಂದಿರಬೇಕು.

  ವ್ಯಾಯಾಮ ಮಾಡುವುದು ಅತ್ಯಗತ್ಯ

  ತೂಕ ನಷ್ಟಕ್ಕೆ ವ್ಯಾಯಾಮ ಮಾಡುವುದು ಅತ್ಯಗತ್ಯ. ಪ್ರತಿದಿನ 30 ನಿಮಿಷಗಳ ಕಾಲ ಕಾರ್ಡಿಯೋ ವ್ಯಾಯಾಮ ಮಾಡಿದರೆ ನಿಮ್ಮ ಚಯಾಪಚಯ ಕ್ರಿಯೆಯು ಸಕ್ರಿಯವಾಗುತ್ತದೆ. ನೀವು ಕಡಿಮೆ ಕ್ಯಾಲೋರಿ ಆಹಾರದಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಾಗದಿದ್ದರೆ, ನಂತರ ದೈನಂದಿನ ವ್ಯಾಯಾಮ ಮಾಡಿ.

  ಚೆನ್ನಾಗಿ ನಿದ್ರೆ ಮಾಡಿ

  ತೂಕ ನಷ್ಟಕ್ಕೆ, ನೀವು ಯಾವಾಗಲೂ 6-7 ಗಂಟೆಗಳ ನಿದ್ರೆ ಮಾಡಿ. ಆರೋಗ್ಯಕರ ಮತ್ತು ತಾಜಾ ಮನಸ್ಸಿಗೆ ನಿದ್ದೆ ಮಾಡುವುದು ಮುಖ್ಯ. ಒಂದು ಸಂಶೋಧನೆಯ ಪ್ರಕಾರ, ಕಳಪೆ ನಿದ್ರೆಯು ತೂಕ ಹೆಚ್ಚಾಗಲು ದೊಡ್ಡ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ.

  ಇದನ್ನೂ ಓದಿ: ಮಧುಮೇಹ ಮೂತ್ರಪಿಂಡ ಕಾಯಿಲೆ ಯಾರಲ್ಲಿ ಮತ್ತು ಯಾವಾಗ ಸಂಭವಿಸುತ್ತದೆ? ಇದರ ಲಕ್ಷಣಗಳು ಹೀಗಿವೆ

  ಊಟ ಮಾಡುವಾಗ ನಿಧಾನವಾಗಿ ತಿನ್ನಿ

  ವೇಗವಾಗಿ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ನಿಧಾನವಾಗಿ ತಿನ್ನುವುದು ನಿಮ್ಮ ದೇಹದಲ್ಲಿ ತೂಕ ನಷ್ಟದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
  Published by:renukadariyannavar
  First published: