ಈ ಆಧುನಿಕ ಕಾಲದಲ್ಲಿ ಸಂಬಂಧಗಳು (Relationship) ತುಂಬಾನೇ ಸೂಕ್ಷ್ಮವಾಗಿರುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಗಿಂತ ಇಗೋ ಹೆಚ್ಚು ಪ್ರಬಲವಾಗಿರುತ್ತದೆ. ಆದರೆ ಈ ಸೋಷಿಯಲ್ ಮೀಡಿಯಾ (Social Media) ಯುಗದಲ್ಲಿ ಸಂಬಂಧಗಳಲ್ಲಿರುವ ಭಾವನೆಗಳು (Feelings) ಹಾಗೂ ಬದ್ಧತೆಗಳು ಕಡಿಮೆಯಾಗಿರುವುದಂತೂ ಸತ್ಯ. ಇದರಿಂದಲೇ ಇಂದು ಸಂಬಂಧಗಳ ಆಸಕ್ತಿಗಳು ಬಹುಬೇಗ ಕಡಿಮೆಯಾಗುತ್ತವೆ. ಅಲ್ಲದೇ ದೀರ್ಘಕಾಲದ ಸಂಬಂಧಗಳು ಇಂದು ವಿರಳವಾಗುತ್ತಿವೆ. ಸಂಬಂಧಗಳಿಗೆ ಬೆಲೆ ನೀಡುವ ಕಾಲವೂ ಸಹ ಇಲ್ಲದಾಗಿದೆ. ಎಲ್ಲರಿಗೂ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ (Personal And Profession Life) ಮೊದಲ ಆದ್ಯತೆ ನೀಡುವ ಕಾಲ ಇದಾಗಿದೆ.
ಏನಿದು ಬ್ರೆಡ್‌ಕ್ರಂಬಿಂಗ್ ?
ಬ್ರೆಡ್ ಕ್ರಂಬಿಂಗ್ ಎನ್ನುವುದು ಒಂದು ಸಂಬಂಧದ ವಿಧ. ಈ ಸಂಬಂಧ ಯಾವುದೇ ನೈಜ ಬದ್ಧತೆಯನ್ನು ಹೊಂದಿರುವುದಿಲ್ಲ. ಬದಲಾಗಿ ಯಾರನ್ನಾದರೂ ಆಕರ್ಷಿಸಲು ಬದ್ಧವಲ್ಲದ ಸಂದೇಶಗಳನ್ನು ಕಳುಹಿಸುವುದನ್ನು ಒಳಗೊಂಡಿರುತ್ತದೆ.
ನಿಜವಾಗಿಯೂ ಒಬ್ಬರ ಜೊತೆ ರಿಲೇಶನ್‌ಶಿಪ್‌ನಲ್ಲಿರಲು ಬಯಸದೇ ಅವರ ಗಮನವನ್ನು ಸೆಳೆಯುವ ಸಲುವಾಗಿ ಹಾಗೂ ಅವರನ್ನು ಆಕರ್ಷಿಸುವ ಸಲುವಾಗಿ ಫ್ಲರ್ಟ್ ರೀತಿಯಲ್ಲಿ ನಡೆದುಕೊಳ್ಳುವುದಾಗಿದೆ.
ಬೇರೆಯವರ ಮಾತು ಮತ್ತು ನಡವಳಿಕೆ ಮೇಲಿರಲಿ ಗಮನ
ನೀವು ಹೊಸ ರಿಲೇಶನ್‌ಶಿಪ್‌ನಲ್ಲಿದ್ದರೆ ಅಥವಾ ಯಾರೊಂದಿಗಾಗರೂ ಸ್ವಲ್ಪ ದಿನಗಳ ವರೆಗೆ ಸಂಬಂಧ ಹೊಂದಿದ್ದರೆ ಅದು ಆರೋಗ್ಯಕರ ಸಂಬಂಧವೇ ಅಥವಾ ಬರೀ ಟೈಂಪಾಸ್ ಅಥವಾ ಫ್ಲರ್ಟ್ ಮಾಡಲು ಹುಟ್ಟಿಕೊಂಡ ಸಂಬಂಧವಾ ಅನ್ನೋದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಇದಕ್ಕಾಗಿ ಕೆಲವೊಂದು ಬಾರ್ಡರ್‌ಗಳನ್ನು ನೀವೇ ಹಾಕಿಕೊಂಡು ಪಾರ್ಟ್‌ನರ್ ಜೊತೆಗೆ ಮುಕ್ತವಾಗಿ ಮಾತನಾಡಿ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ರಿಲೇಶನ್‌ಶಿಪ್ ಹಾಗೂ ಡೇಟಿಂಗ್ ತರಬೇತುದಾರರಾದ ಎರಿಕಾ ಟರ್ನರ್, ಅವರು ತಮ್ಮ ಇತ್ತೀಚಿಗಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸಂಬಂಧಗಳಲ್ಲಿ 'ಬ್ರೆಡ್‌ಕ್ರಂಬ್ಡ್' ಆಗುವುದನ್ನು ತಪ್ಪಿಸಲು ಎಂಟು ಸಲಹೆ/ಹಂತಗಳನ್ನು ಸೂಚಿಸಿದ್ದಾರೆ.
1.ನಿಮ್ಮ ಜೊತೆಗಿರುವವರ ಮಾತುಗಳಿಗೂ ಅವರ ಕೆಲಸಕ್ಕೂ ಹೊಂದಾಣಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಅನ್ನೋದನ್ನು ಗಮನವಿಟ್ಟು ನೋಡಿ.
ಮಾತಿಗೂ ಕೃತಿಗೂ ಹೊಂದಾಣಿಕೆಯಾಗಿಲ್ಲ ಎಂದಾದರೆ ಅದರ ಬಗ್ಗೆ ಸ್ಪಷ್ಟತೆ ಹೊಂದಿರಿ. ನಿಮ್ಮ ಸಂಗಾತಿಯನ್ನು ಈ ಬಗ್ಗೆ ಕೇಳಿ ಮಾತುಕತೆ ನಡೆಸಿ. ಅವರ ಪ್ರತಿಕ್ರಿಯೆಯೊಂದಿಗೆ ಈ ಸಂಬಂಧದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿ.
2.ಇಷ್ಟಪಡದ ನಡವಳಿಕೆಯನ್ನು ನೀವು ಸಹಿಸಿಕೊಳ್ಳುತ್ತಿದ್ದರೆ ಅಥವಾ ಅವರ ನಡವಳಿಕೆಯಿಂದ ನಿಮಗೆ ಅಸಮಾಧಾನ ಉಂಟಾಗುತ್ತಿದ್ದರೆ ಅದನ್ನು ಗಮನಿಸಿ. ನೀವು ನಿಮ್ಮ ಸಂಗಾತಿಯಿಂದ ಏನನ್ನು ಬಯಸುತ್ತೀರಿ ಮತ್ತು ಯಾವುದನ್ನು ಸಹಿಸುವುದಿಲ್ಲ ಎಂಬುದರ ಬಗ್ಗೆ ಅವರ ಜೊತೆ ಮಾತನಾಡಿ.
3.ನೀವು ಸಂಬಂಧದಲ್ಲಿ ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದನ್ನು ಗಮನಿಸಿ. ಈ ಸಂಬಂಧವನ್ನು ಉಳಿಸಿಕೊಳ್ಳಲು ನಿಮ್ಮ ಅಗತ್ಯಗಳನ್ನು ನೀವು ಮರೆಮಾಡುತ್ತಿದ್ದೀರಾ? ನಿಮ್ಮ ಭಾವನೆಗಳನ್ನು ತಡೆಹಿಡಿಯುತ್ತಿದ್ದೀರಾ? ಅಥವಾ ನಿಮ್ಮ ಮಿತಿಯನ್ನು ಮೀರುತ್ತಿದ್ದೀರಾ?
ನೀವು ಏನನ್ನು ನಿರೀಕ್ಷೆ ಮಾಡುತ್ತೀರೋ ಅದು ಆಗದೇ ಹೋದರೂ ನೀವು ಸುಮ್ಮನಿರುತ್ತಿದ್ದೀರಾ ಎಂಬುದನ್ನು ಗಮನಿಸಿ. ನಿಮ್ಮನ್ನು ಗೌರವಿಸಲು ಪ್ರಾರಂಭಿಸುವ ಸಮಯ ಇದು ಎಂದು ಅರ್ಥಮಾಡಿಕೊಳ್ಳಿ.
4.ನಿಮ್ಮ ಸಂಗಾತಿ ಈ ಕ್ಷಣದಲ್ಲಿ ನಿಮ್ಮ ಜೊತೆಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಿ. ಅದರ ಬದಲಿಗೆ ಭವಿಷ್ಯ ಅಥವಾ ಭರವಸೆಯ ಮೇಲೆ ನೀವು ಹೆಚ್ಚು ಗಮನಹರಿಸುತ್ತಿದ್ದರೆ ಅದನ್ನು ಗುರುತಿಸಿ. ನೀವು ಪ್ರಸ್ತುತದಲ್ಲಿ ನೋಡುತ್ತಿರುವ ನಡವಳಿಕೆಯ ಮೇಲೆ ನಿಮ್ಮ ಗಮನವಿರಲಿ.
5.ನಿಮ್ಮ ಸಂಗಾತಿಯಿಂದ ಏನನ್ನು ಬಯಸುತ್ತೀರಿ ಎಂಬುದನ್ನು ಕಂಡುಕೊಳ್ಳಿ. ಹತಾಶೆ, ಗೊಂದಲ ಅಥವಾ ಅವರ ನಡವಳಿಕೆಯಿಂದ ಅಸಮಾಧಾನಗೊಂಡಿದ್ದರೂ ಸಹ ಸಂಬಂಧದಲ್ಲಿ ಅವರಿಂದ ಏನನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ.
6.ನೀವು ಕೆಲವಷ್ಟು ನಂಬಿಕೆಗಳನ್ನು, ರೂಢಿಗಳನ್ನು ಹೊಂದಿರುತ್ತೀರಿ. ಸಂಬಂಧದಲ್ಲಿಯೂ ನೀವು ಕೆಲವಷ್ಟು ನಡವಳಿಕೆಗಳು ರೂಢಿಗತವಾಗಿ ಬಂದಿರುತ್ತವೆ. ಅವುಗಳನ್ನು ಗಮನಿಸಿ. ಉದಾಹರೆಣೆಗೆ "ಯಾರಾದರೂ ನನ್ನ ಅಗತ್ಯಗಳನ್ನು ಪೂರೈಸದಿದ್ದರೆ, ನಾನು ಕಷ್ಟಪಟ್ಟು ಪ್ರಯತ್ನಿಸುತ್ತೇನೆ" ಎಂಬಂಥದ್ದು.
ಇದನ್ನೂ ಓದಿ: Valentines Day 2023: ಈ ವ್ಯಾಲೆಂಟೈನ್ಸ್ ಡೇಯಲ್ಲಿ ನಿಮ್ಮ ಗರ್ಲ್ ಫ್ರೆಂಡ್ಗೆ ಈ ಗಿಫ್ಟ್ ನೀಡಿ ಪ್ರೀತಿ ವ್ಯಕ್ತಪಡಿಸಿ!
7.ಚಿಕ್ಕಂದಿನಿಂದಲೂ ನಿಮ್ಮಲ್ಲಿ ಅಪೂರ್ಣ ಆಸೆಗಳಿದ್ದರೆ ಅಥವಾ ಹಂಬಲಿಸಿಯೂ ಈಡೇರದ ಚಿಕ್ಕಪುಟ್ಟ ಕನಸುಗಳಿದ್ದರೆ ಅದಕ್ಕಾಗಿ ನೀವು ಬೇರೆಯವರನ್ನು ಹುಡುಕುತ್ತೀರಿ. ನಿಮ್ಮ ಅಗತ್ಯಗಳಿಗೆ ಬೇರೆಯವರ ಮೇಲೆ ಅವಲಂಬಿತರಾಗುತ್ತೀರಿ. ಈ ಬಗ್ಗೆ ಚಿಂತಿಸಿ.
8.ನಿಮ್ಮದೇ ಸ್ನೇಹಿತರು, ಕುಟುಂಬ, ಹಿತೈಷಿಗಳ ಮೂಲಕ ನಿಮ್ಮ ಸ್ವಂತ ಅಗತ್ಯಗಳನ್ನು ಹೇಗೆ ಪೂರೈಸುವುದು ಎಂಬುದನ್ನು ತಿಳಿಯಿರಿ. ನಿಮ್ಮ ಅಗತ್ಯಗಳನ್ನು ಯಾರು ಹೆಚ್ಚು ಪೂರೈಸುತ್ತಾರೆ ಎಂಬುದನ್ನು ಹುಡುಕಿ. ಇದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ