HOME » NEWS » Lifestyle » FOLLOW THESE 8 EASY TRICKS THAT WILL MAKE YOUR HAIR SUPER SILKY STG AE

Silky Hair: ನಯವಾದ-ಮೃದುವಾದ ಕೂದಲಿಗೆ ಈ ಸರಳ ಉಪಾಯಗಳನ್ನು ಅನುಸರಿಸಿ..!

ದಟ್ಟವಾದ ಕೂದಲಿದ್ದರೂ ಕೆಲವೊಮ್ಮೆ ಅದು ತುಂಬಾ ಒರಟಾಗಿರುತ್ತದೆ. ಈ ಒರಟಾದ ಕೂದಲನ್ನು ಮೃದುವಾಗಿ ಹಾಗೂ ನಯವಾಗಿ ರೇಷ್ಮೆಯಂತೆ ಹೊಳೆಯುವಂತೆ ಮಾಡಲು ಈ ಎಂಟು ಸರಳ ಉಪಾಯಗಳನ್ನು ಅನುಸರಿಸಿ.

Anitha E | news18-kannada
Updated:June 23, 2021, 2:49 PM IST
Silky Hair: ನಯವಾದ-ಮೃದುವಾದ ಕೂದಲಿಗೆ ಈ ಸರಳ ಉಪಾಯಗಳನ್ನು ಅನುಸರಿಸಿ..!
ಸಾಂದರ್ಭಿಕ ಚಿತ್ರ
  • Share this:
ಆರೋಗ್ಯಕರ, ಫಳಫಳ ಹೊಳೆಯುವ ಮತ್ತು ಸಿಕ್ಕಿಲ್ಲದ ಕೂದಲನ್ನು ನೋಡಿದಾಗ , ನಮಗೂ  ಇಂತಹ ಕೂದಲಿದ್ದರೆ ಎಷ್ಟು ಚೆಂದ ಎಂದೆನಿಸುವುದು ಸಹಜ. ಕೇಶ ವಿನ್ಯಾಸಕ್ಕಾಗಿ, ಸದಾ ವಿವಿಧ ಬಗೆಯ ಟೂಲ್‍ಗಳನ್ನು ಮತ್ತು ಬಣ್ಣಗಳನ್ನು ಬಳಸುವವರಿಗಂತೂ ಅಂತಹ ಕೂದಲು ಕನಸಿನ ಮಾತು. ಆದರೆ, ಸೂಕ್ತ ಆರೈಕೆ ಮತ್ತು ನಿರ್ದಿಷ್ಟ ಉತ್ಪನ್ನಗಳ ಉಪಯೋಗದ ಮೂಲಕ ಕೂದಲನ್ನು ಮತ್ತೆ ಆರೋಗ್ಯವಂತಗೊಳಿಸಲು ಸಾಧ್ಯವಿದೆ. ದಟ್ಟವಾದ ಕೂದಲಿದ್ದರೂ ಕೆಲವೊಮ್ಮೆ ಅದು ತುಂಬಾ ಒರಟಾಗಿರುತ್ತದೆ. ಈ ಒರಟಾದ ಕೂದಲನ್ನು ಮೃದುವಾಗಿ ಹಾಗೂ ನಯವಾಗಿ ರೇಷ್ಮೆಯಂತೆ ಹೊಳೆಯುವಂತೆ ಮಾಡಲು ಈ ಕೆಳಗಿನ ಎಂಟು ಸರಳ ಉಪಾಯಗಳನ್ನು ಅನುಸರಿಸಿ.

1. ಶಾಂಪೂ ಬಳಸುವಾಗ ಗಮನವಿರಲಿ: ಶಾಂಪೂವನ್ನು ನೆತ್ತಿಯ ಮೇಲೆ ಹಾಕಿ, ಇಡೀ ಕೂದಲಿನ ಉದ್ದಕ್ಕೆ ಅನುಸಾರವಾಗಿ ತಿಕ್ಕಿ ತೊಳೆಯುವುದು ಸಾಮಾನ್ಯ ಪದ್ಧತಿ. ಆದರೆ ಅದರಿಂದ ಕೂದಲು ಸಿಕ್ಕಾಗುತ್ತದೆ ಮತ್ತು ಕೂದಲಿನ ತುದಿಗಳು ಒಣಗುತ್ತವೆ. ಗುಂಗುರು ಕೂದಲಿನವರಲ್ಲಿ ಈ ಸಮಸ್ಯೆ ಹೆಚ್ಚು. ಹಾಗಾಗಿ ಗುಂಗುರು ಕೂದಲಿನವರು ಪದೇ ಪದೇ ಶಾಂಪೂ ಸ್ನಾನ ಮಾಡುವ ಅಗತ್ಯ ಇಲ್ಲ. ಶಾಂಪೂ ಮಾಡಬೇಕಾಗಿ ಬಂದಾಗ,  ಕೂದಲಿನ ನೈಸರ್ಗಿಕ ಎಣ್ಣೆಗಳನ್ನು ಉಳಿಸಿಕೊಳ್ಳಲು, ಶಾಂಪೂ ಬದಲಿಗೆ ಕ್ಲೆನ್ಸಿಂಗ್ ಕಂಡೀಶನರ್ ಬಳಸುವುದು ಒಳ್ಳೆಯದು.

2. ಒದ್ದೆಯಿದ್ದಾಗ ಬಾಚಿ, ಒಣಗಿದ್ದಾಗ ಬ್ರಶ್ ಮಾಡಿ: ಕೂದಲ ಸಿಕ್ಕನ್ನು ಬಿಡಿಸುವ ಸುಲಭ ಮಾರ್ಗ ಯಾವುದು? ಒದ್ದೆಯಿದ್ದಾಗ ಬಾಚಣಿಕೆಯಿಂದ ಬಾಚಿ. ಕೂದಲು ಒಣಗಿದ್ದಾಗ ಬ್ರಶ್‍ನಿಂದ ಬಾಚಿರಿ. ಬಾಚುವಾಗ ಬುಡದಿಂದ ತುದಿಗೆ ಬಾಚಬೇಡಿ. ಬದಲಿಗೆ ಮೊದಲು ತುದಿಗಳಲ್ಲಿ ಇರುವ ಸಿಕ್ಕನ್ನು ಬಿಡಿ, ಆ ಬಳಿಕ ಮಧ್ಯ ಮತ್ತು ಬುಡವನ್ನು ಬಾಚಿಕೊಳ್ಳಿ. ಇಲ್ಲವಾದಲ್ಲಿ ಕೂದಲಿನ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾರನ್ನು ನೋಡಲು ಬಂದು ಪೊಲೀಸರ ಕೈಗೆ ಸಿಕ್ಕಿ ಪರದಾಡಿದ ಅಭಿಮಾನಿ

3. ಟವೆಲ್ ಬದಲು ಟೀಶರ್ಟ್‍ನಿಂದ ಕೂದಲು ಒಣಗಿಸಿ:  ಕೂದಲನ್ನು ಟವೆಲ್​ನಿಂದ ಜೋರಾಗಿ ಉಜ್ಜಿ ಒಣಗಿಸಬೇಡಿ, ಅದು ನಿಮ್ಮ ಕೂದಲಿಗೆ ಹಾನಿ ಮಾಡುತ್ತದೆ. ಟವೆಲ್ ಬದಲು ಮೃದುವಾದ ಹತ್ತಿಯ ಟೀಶರ್ಟ್ ಬಳಸಿ. ನಿಮ್ಮ ಕೂದಲನ್ನು ಉಜ್ಜುವ ಬದಲು, ಕೂದಲನ್ನು ಟೀಶರ್ಟ್ ನಿಂದ ಸುತ್ತಿ, ನೀರನ್ನು ಕೆಳಮುಖವಾಗಿ ಹಿಂಡಿ ತೆಗೆಯಿರಿ.

4. ಸಿಲ್ಕ್ ಹೊರ ಕವಚವುಳ್ಳ ದಿಂಬನ್ನುಬಳಸಿ:  ನೀವು ಈಗ ಹತ್ತಿಯ ದಿಂಬು ಅಥವಾ ಹತ್ತಿ ಬಟ್ಟೆಯ ಹೊದಿಕೆಯುಳ್ಳ ದಿಂಬನ್ನು ಬಳಸುತ್ತಿದ್ದರೆ, ಅದು ಕೂದಲ ಸಿಕ್ಕಿಗೆ ಕಾರಣವಾಗಬಹುದು.ಅದರ ಬದಲು ದಿಂಬಿಗೆ ರೇಷ್ಮೆಯ ಹೊದಿಕೆಯನ್ನು ಹಾಕಿ. ಹತ್ತಿ ನಿಮ್ಮ ಕೂದಲಿನ ತೇವಾಂಶವನ್ನು  ಹೀರಿಕೊಳ್ಳುತ್ತದೆ. ಆದರೆ ರೇಷ್ಮೆ ಅಥವಾ ಸ್ಯಾಟಿನ್ ಕೂದಲ ಪೋಷಣೆಗೆ ಅಗತ್ಯವಿರುವ ತೈಲಗಳನ್ನು, ಕೂದಲಲ್ಲೇ ಉಳಿಯುವಂತೆ ಮಾಡಲು ಸಹಕರಿಸುತ್ತದೆ.

5. ತಂಪು ಗಾಳಿಯ ಮೂಲಕ, ಬ್ಲೋಡ್ರೈಯಿಂಗ್ ಮುಗಿಸಿ: ಗೋಲ್ಡ್‌ವೆಲ್‍ನ ರಾಷ್ಟ್ರೀಯ ಕಲಾವಿದ, ಸ್ಟೀವನ್ ಪಿಶಿಯಾನೋ ಅವರು ಹೇಳುವ ಪ್ರಕಾರ, ತಂಪು ಗಾಳಿಯ ಮೂಲಕ, ಬ್ಲೋಡ್ರೈಯಿಂಗ್ ಮುಗಿಸುವುದು ಒಂದು ಹೆಚ್ಚುವರಿ ಹಂತದಂತೆ ಭಾಸವಾಗಬಹುದು. ಆದರೆ ಅದು ಕೂದಲಿನ ಪ್ರಮಾಣ, ಶೈಲಿಯ ದಿಕ್ಕು ಮತ್ತು ಚಲನೆಯನ್ನು ಲಾಕ್ ಮಾಡುತ್ತದೆ. ಮಾತ್ರವಲ್ಲ, ಕೂದಲಿನ ಹೊರ ಪದರವನ್ನು ಮುಚ್ಚಲು ಸಹಕರಿಸುತ್ತದೆ.6. ಆಹಾರಕ್ರಮದಲ್ಲಿ ಕೊಬ್ಬುಗಳ ಸಂಯೋಜನೆ: ನಿಮ್ಮ ಆಹಾರದ ಕ್ರಮದಲ್ಲಿ ಎಣ್ಣೆಯ ಅಂಶ ಇಲ್ಲದಿದ್ದರೆ, ಸುಂದರ, ಹೊಳಪುಳ್ಳ ಕೂದಲನ್ನು ಪಡೆಯುವುದು ಅಸಾಧ್ಯ. ಹಾಗಾಗಿ, ಒಣ ಬೀಜಗಳು, ಅವಕಾಡೋಗಳು ಮತ್ತು ಸಾಲೋಮನ್ ಮೀನು ಮುಂತಾದ ಆರೋಗ್ಯಕರ ಕೊಬ್ಬುಳ್ಳ ಆಹಾರಗಳ ಸೇವನೆ ಅತ್ಯಗತ್ಯ. ಒಮೆಗಾ -3 ಕೂಡ ತುಂಬಾ ಆವಶ್ಯಕ. ನಿಮ್ಮ ಚರ್ಮ ಒಣಗಿದ್ದರೆ ನಿಮ್ಮ ಕೂದಲು ಕೂಡ ಒಣಗಿರುತ್ತದೆ ಎನ್ನುವ ಪಿಶಿಯಾನೋ, ನಿತ್ಯವೂ ಹೇರಳವಾಗಿ ನೀರು ಕುಡಿಯಬೇಕೆಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಆನೆ-ಇರುವೆ ಸ್ನೇಹಕ್ಕೆ ಹುಳಿ ಹಿಂಡಿದ್ಯಾರು: ರಘು-ವೈಷ್ಣವಿ ಈ ರೀತಿಯ ಹೇಳಿಕೆ ಕೊಟ್ಟಿದ್ದೇಕೆ ಗೊತ್ತಾ..?

7. ಕ್ಲಾರಿಫೈಯಿಂಗ್  ಶಾಂಪೂವಿಗೆ ಬೇಕಿಂಗ್ ಸೋಡ ಹಾಕಿ: ಅಧಿಕ ಖನಿಜ ಮತ್ತು ಮಿನರಲ್ ಯುಕ್ತ  ನೀರು , ನಿಮ್ಮ ದುಬಾರಿ ಕೂದಲ ಬಣ್ಣವನ್ನು ಹಾಳು ಮಾಡುವುದಲ್ಲದೆ, ಕೂದಲನ್ನು ಒಣಗಿಸಿ, ಹೊಳಪಿಲ್ಲದಂತೆ ಮಾಡುತ್ತದೆ. ನೀವು ವಾಸಿಸುವ ಪ್ರದೇಶದಲ್ಲಿ ಕೂದಲು ಗಡುಸಾಗಿದ್ದರೆ, ನಿಮ್ಮ ಶಾಂಪೂವಿಗೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಬಳಸಬಹುದು. ನಿಮ್ಮ ಶವರ್​ಹೆಡ್​ಗೆ ಫಿಲ್ಟರ್ ಕೂಡ ಖರೀದಿಸಬಹುದು.

8. ಹೈಡ್ರೊಲೈಸ್ಡ್ ಕೆರೊಟಿನ್ ಇರುವ ಉತ್ಪನ್ನಗಳನ್ನು ಬಳಸಿ: ಕೂದಲ ಆರೈಕೆಗಾಗಿ ಉತ್ಪನ್ನಗಳನ್ನು ಕೊಳ್ಳುವಾಗ, ಹೈಡ್ರೊಲೈಸ್ಡ್ ಕೆರೊಟಿನ್ ಇರುವ ಲೇಬಲ್ ಉತ್ಪನ್ನದ ಮೇಲಿದೆಯೇ ಎಂಬುದನ್ನು ನೋಡಿ ಖರೀದಿಸಿ. ಅದು ಕೂದಲಿಗೆ ರೇಷ್ಮೆಯಂತ ಹೊಳಪು ನೀಡಲು ಅತ್ಯಂತ ಸಹಕಾರಿ ಎನ್ನುತ್ತಾರೆ ಪಿಶಿಯಾನೋ. ಕೆರೊಟಿನ್ ಹಾಳಾದ ಕೂದಲನ್ನು ಸರಿಪಡಿಸುತ್ತದೆ.
Published by: Anitha E
First published: June 23, 2021, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories