Sonnalli Seygall: ವರ್ಕೌಟ್ ಮಾಡೋಕ್ಕೆ ಟೈಮ್ ಇಲ್ವಾ? ಹಾಗಿದ್ರೆ ಸೋನಾಲಿಯವರ ಈ ಸಲಹೆಗಳನ್ನು ಪಾಲಿಸಿ

‘ಸ್ವಲ್ಪನೂ ಟೈಮ್ ಸಿಗ್ತಾ ಇಲ್ಲ ವರ್ಕೌಟ್ ಮಾಡೋದಿಕ್ಕೆ’ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಹೀಗೆ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಲು ನಮಗೆ 24 ಗಂಟೆಗಳಲ್ಲಿ ಸ್ವಲ್ಪವೂ ಸಮಯ ಸಿಗುತ್ತಿಲ್ಲ ಅಂತಾದರೆ, ಇಲ್ಲಿದೆ ನೋಡಿ 10 ನಿಮಿಷದ ಫರ್ಫೆಕ್ಟ್ ವರ್ಕೌಟ್.

ಸೋನಾಲಿ ಸೆಹಗಲ್

ಸೋನಾಲಿ ಸೆಹಗಲ್

  • Share this:
ಆಗಾಗ್ಗೆ ನಾವು ಯಾರಾದರೂ ನಮ್ಮ ಸ್ನೇಹಿತರನ್ನು (Friends) ‘ಯಾಕಪ್ಪಾ ಇವತ್ತು ಬೆಳಿಗ್ಗೆ ವರ್ಕೌಟ್ (Workout) ಮಾಡಿಲ್ಲ’ ಅಂತ ಕೇಳಿದರೆ ಅವರಿಂದ ಸಿಗುವ ಉತ್ತರ ಒಂದೇ ಆಗಿರುತ್ತದೆ. ‘ಸ್ವಲ್ಪನೂ ಟೈಮ್ ಸಿಗ್ತಾ ಇಲ್ಲ ವರ್ಕೌಟ್ ಮಾಡೋದಿಕ್ಕೆ’ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಹೀಗೆ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಲು ನಮಗೆ 24 ಗಂಟೆಗಳಲ್ಲಿ ಸ್ವಲ್ಪವೂ ಸಮಯ (Time) ಸಿಗುತ್ತಿಲ್ಲ ಅಂತಾದರೆ, ಇಲ್ಲಿದೆ ನೋಡಿ 10 ನಿಮಿಷದ ಫರ್ಫೆಕ್ಟ್ ವರ್ಕೌಟ್. ಇದೇನಪ್ಪಾ ವರ್ಕೌಟ್ ಅಂದ ಮೇಲೆ ಅದು ಕನಿಷ್ಠ ಪಕ್ಷ 40 ರಿಂದ 45 ನಿಮಿಷವಾದರೂ ಇರಬೇಕಲ್ಲ ಅಂತ ನೀವು ಕೇಳಬಹುದು. ಆದರೆ ಈ 10 ನಿಮಿಷದ ವರ್ಕೌಟ್ ತುಂಬಾನೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ ಬಾಲಿವುಡ್ ನಟಿ ಸೋನಾಲಿ ಸೆಹಗಲ್ (Sonnalli Seygall).

10 ನಿಮಿಷಗಳ ವರ್ಕೌಟ್
ನೀವು ಇಡೀ ದಿನದಲ್ಲಿ ಕೆಲಸಗಳಿಂದ ಎಷ್ಟೇ ಬ್ಯುಸಿ ಆಗಿದ್ದರೂ ಸಹ ನಿಮ್ಮ ದಿನಚರಿಯಲ್ಲಿ ಆ 10 ನಿಮಿಷವನ್ನು ತೆಗೆದುಕೊಳ್ಳಲೇಬೇಕು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರತಿ ದಿನ 30 ನಿಮಿಷಗಳ ವ್ಯಾಯಾಮವನ್ನು ವಾರದಲ್ಲಿ ಐದು ದಿನಗಳ ಕಾಲ ಮಾಡಲು ಶಿಫಾರಸು ಮಾಡುತ್ತದೆ.

ನಿಮಗೆ ಇನ್ನೂ ಈ 10 ನಿಮಿಷಗಳ ವರ್ಕೌಟ್ ಬಗ್ಗೆ ಸಂಶಯಗಳು ಇದ್ದರೆ, ನಟಿ ಸೋನಾಲಿ ಸೆಹಗಲ್ ಅವರಿಂದ ಕೆಲವು ಹೆಚ್ಚು ಅಗತ್ಯವಿರುವ ಫಿಟ್ನೆಸ್ ಟಿಪ್ಸ್ ಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋವನ್ನು ಒಮ್ಮೆ ನೋಡುವುದರ ಮೂಲಕ ಪಡೆಯಬಹುದು ನೋಡಿ. ‘ಪ್ಯಾರ್ ಕಾ ಪಂಚನಾಮಾ’ ಚಿತ್ರದ ನಟಿ ಕೇವಲ 10 ನಿಮಿಷಗಳ ವರ್ಕೌಟ್ ದಿನಕ್ಕೆ ಸಾಕು ಅಂತಾರೆ ನೋಡಿ.
"10 ನಿಮಿಷಗಳ ತ್ವರಿತ ತಾಲೀಮು ದಿನಚರಿ ಇದು.. ಜನರು ಹೇಳುವ ಅತ್ಯಂತ ಸಾಮಾನ್ಯವಾದ ನೆಪ ಅಥವಾ ಸಮಸ್ಯೆಯೆಂದರೆ ಅವರಿಗೆ ವರ್ಕೌಟ್ ಮಾಡಲು ದಿನದಲ್ಲಿ ಸ್ವಲ್ಪವೂ ಸಮಯ ಸಿಗುತ್ತಿಲ್ಲ ಅಂತ. ಆದರೆ ಕೆಲವೊಮ್ಮೆ ಏನನ್ನೂ ಮಾಡದಿರುವುದಕ್ಕಿಂತ 10 ನಿಮಿಷಗಳ ವರ್ಕೌಟ್ ತುಂಬಾನೇ ಉತ್ತಮವಾಗಿರುತ್ತದೆ" ಎಂದು ಅವರು ಎರಡು ಕ್ರಿಯಾತ್ಮಕ ದೇಹದ ತೂಕದ ವ್ಯಾಯಾಮಗಳನ್ನು ತೋರಿಸುವಾಗ ಹೇಳಿದರು. ಅವರು ಏರ್ ಸ್ಕ್ವಾಟ್ ಗಳು ಮತ್ತು ಲಂಜ್ (ಅಂಗಗಳಿಗೆನ್ವಯವಾಗುವ ವ್ಯಾಯಾಮ) ಗಳನ್ನು ಮಾಡುವುದನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು.

10 ನಿಮಿಷದ ವರ್ಕೌಟ್ ಹೇಗೆ ಸಹಾಯ ಮಾಡುತ್ತದೆ?
"ಈ ವ್ಯಾಯಾಮವು ನಿಮ್ಮ ಕಾಲುಗಳನ್ನು ಬಲಪಡಿಸುತ್ತದೆ ಮತ್ತು ಟೋನ್ ಮಾಡುತ್ತದೆ ಮತ್ತು ನಿಮ್ಮ ಹೃದಯ ಬಡಿತವನ್ನು ಸಹ ಸುಧಾರಿಸುತ್ತದೆ! ಇದನೋಮ್ಮೆ ಪ್ರಯತ್ನಿಸಿ" ಎಂದು ಅವರು ಹೇಳಿದರು. ಸ್ಕ್ವಾಟ್ ಗಳು ಕ್ವಾಡ್ರೈಸೆಪ್ಸ್, ಗ್ಲುಟ್ಸ್ ಮತ್ತು ಹ್ಯಾಮ್ ಸ್ಟ್ರಿಂಗ್ಸ್ ಗಳನ್ನು ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತವೆ.

ಏರ್ ಸ್ಕ್ವಾಟ್ ಗಳನ್ನು ಮಾಡುವುದು ಹೇಗೆ?

  • ನಿಮ್ಮ ಪಾದಗಳನ್ನು ಭುಜದ ಅಗಲವನ್ನು ಅಗಲಿಸಿ, ಕಾಲ್ಬೆರಳುಗಳನ್ನು ಸ್ವಲ್ಪ ಹೊರ ಮುಖವಾಗಿ ಇರುವಂತೆ ನಿಂತುಕೊಳ್ಳಿ.

  • ನಿಮ್ಮ ಎದೆಯನ್ನು ಹೊರಗೆ ತಳ್ಳಲು ಕೋರ್ ಸ್ನಾಯುಗಳನ್ನು ತೊಡಗಿಸಿಕೊಳ್ಳಿ ಮತ್ತು ಭುಜದ ಬ್ಲೇಡ್ ಗಳನ್ನು ಸ್ವಲ್ಪ ಒಟ್ಟಿಗೆ ಎಳೆಯಿರಿ.

  • ನೀವು ಕುರ್ಚಿಯ ಮೇಲೆ ಕುಳಿತುಕೊಂಡಿದ್ದೀರಿ ಅಂತ ಭಾವಿಸಿ ಕುಳಿತುಕೊಳ್ಳಿ.

  • ನಿಮ್ಮ ಬೆನ್ನು ನೇರವಾಗಿರಲಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಿ.

  • ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಹಿಡಿದಿಟ್ಟುಕೊಳ್ಳಿ ಮತ್ತು ನಂತರ ನಿಮ್ಮ ಗ್ಲುಟ್ಸ್ ಅನ್ನು ಬಳಸಿಕೊಂಡು ನಿಂತಿರುವ ಸ್ಥಿತಿಗೆ ಏರಿ.


ಇದನ್ನೂ ಓದಿ:  Weight loss: ಹೀಗೆ ವಾಕಿಂಗ್ ಮಾಡಿ, ಕೊಬ್ಬು ಕರಗುತ್ತೆ ನೋಡಿ

ಲಂಜ್ ಮಾಡುವುದು ಹೇಗೆ?

  • ನಿಮ್ಮ ಪಾದಗಳು ಸೊಂಟದ ಅಗಲವನ್ನು ಅಗಲಿಸಿ ನಿಂತುಕೊಳ್ಳಿರಿ, ಒಂದು ಕಾಲು ನಿಮಗಿಂತ ಮುಂದಿದ್ದು, ಇನ್ನೊಂದು ಕಾಲನ್ನು ಹಿಂದೆ ಇರುವಂತೆ ಮುಂದಕ್ಕೆ ಹೆಜ್ಜೆ ಇಡಬೇಕು. ಪಾದವು ಚಪ್ಪಟೆಯಾಗಿ ಇಳಿಯಬೇಕು ಮತ್ತು ಅದು ನೆಲದ ಮೇಲಿರುವಾಗ ಹಾಗೆಯೇ ಇರಬೇಕು.

  • ಮೊಣಕಾಲನ್ನು ಸುಮಾರು 90 ಡಿಗ್ರಿಗಳಷ್ಟು ಬಾಗಿಸಿ.

  • ನಿಮ್ಮ ಮುಂಡವನ್ನು ನೇರವಾಗಿ ಮತ್ತು ತಿರುಳನ್ನು ತೊಡಗಿಸಿಕೊಳ್ಳಿ.

  •  ನಂತರ, ನಿಂತಿರುವ ಸ್ಥಿತಿಗೆ ಮರಳಲು ಮುಂಭಾಗದ ಕಾಲಿನಿಂದ ಬಲವಂತವಾಗಿ ತಳ್ಳಿ. ಇನ್ನೊಂದು ಬದಿಯಲ್ಲಿ ಪುನರಾವರ್ತಿಸಿ.


ಇದನ್ನೂ ಓದಿ: Weight Loss Tips: ಬಾಲಿವುಡ್​ನ ಈ ಬೆಡಗಿಯರಂತೆ ತೂಕ ಇಳಿಸಲು ಇಲ್ಲಿದೆ ಸೂಪರ್ ಟಿಪ್ಸ್

ಎಷ್ಟು ಮಾಡಬೇಕು?

ಐದು ಸೆಟ್ ಎಂದರೆ 20 ಏರ್ ಸ್ಕ್ವಾಟ್ ಗಳನ್ನು ಮಾಡಿರಿ ಮತ್ತು ಪ್ರತಿ ಲಂಜ್ ಆಸನವನ್ನೂ ಸಹ ಸಹ ಐದು ಸೆಟ್ ಗಳನ್ನು ಮಾಡಿರಿ.
Published by:Ashwini Prabhu
First published: