• Home
  • »
  • News
  • »
  • lifestyle
  • »
  • Folic Acid: ಗರ್ಭಾವಸ್ಥೆಯಲ್ಲುಂಟಾಗುವ ಫೋಲಿಕ್ ಆಮ್ಲದ ಕೊರತೆಯಿಂದ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ? ಯಾವ ಪದಾರ್ಥಗಳು ಇದನ್ನು ಪೂರೈಸುತ್ತವೆ?

Folic Acid: ಗರ್ಭಾವಸ್ಥೆಯಲ್ಲುಂಟಾಗುವ ಫೋಲಿಕ್ ಆಮ್ಲದ ಕೊರತೆಯಿಂದ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ? ಯಾವ ಪದಾರ್ಥಗಳು ಇದನ್ನು ಪೂರೈಸುತ್ತವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲ ಪೂರಕ ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದು ತುಂಬಾ ಮುಖ್ಯ. ಇದು ಒಟ್ಟಾರೆ ಆರೋಗ್ಯಕ್ಕೆ ಮುಖ್ಯ ಆಗಿದೆ. ಫೋಲಿಕ್ ಆಮ್ಲ ಪೂರಕ ಇದು ಯಾಕೆ ಅಗತ್ಯವಾಗಿದೆ ಮತ್ತು ಫೋಲಿಕ್ ಆಮ್ಲದ ಕೊರತೆಯಿಂದ ಯಾವ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿಯೋಣ.

ಮುಂದೆ ಓದಿ ...
  • Share this:

    ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ (Pregnancy) ಫೋಲಿಕ್ ಆಮ್ಲ (Folic Acid) ತೆಗೆದುಕೊಳ್ಳಲು ವೈದ್ಯರು (Doctors), ಗರ್ಭಿಣಿಯರಿಗೆ ಸಲಹೆ ನೀಡುತ್ತಾರೆ. ಇದು ಪೂರಕ ರೂಪದಲ್ಲಿ ಲಭ್ಯವಿದೆ. ಫೋಲಿಕ್ ಆಮ್ಲ ಪೂರಕವು ಇದು ಗರ್ಭಾವಸ್ಥೆಯಲ್ಲಿ ಅನೇಕ ದೈಹಿಕ ಸಮಸ್ಯೆಗಳಿಂದ (Physical Problem) ರಕ್ಷಿಸುತ್ತದೆ. ಇದು ಹುಟ್ಟಲಿರುವ ಮಗುವಿನ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಅದೇ ವೇಳೆ ಫೋಲಿಕ್ ಆಮ್ಲ ಪೂರಕವನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದು ತುಂಬಾ ಮುಖ್ಯ. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಮುಖ್ಯ ಆಗಿದೆ. ಫೋಲಿಕ್ ಆಮ್ಲ ಪೂರಕ ಇದು ಯಾಕೆ ಅಗತ್ಯವಾಗಿದೆ? ಮತ್ತು ಫೋಲಿಕ್ ಆಮ್ಲದ ಕೊರತೆಯಿಂದ ಯಾವ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಇಲ್ಲಿ ನಾವು ತಿಳಿಯೋಣ.


    ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲ ಸೇವನೆ ಮಾಡುವುದು ಯಾಕೆ ಅಗತ್ಯ ಎಂಬ ಬಗ್ಗೆ ಪೌಷ್ಟಿಕ ತಜ್ಞ ಮತ್ತು ಆಹಾರ ತಜ್ಞರಾದ ಡಾ. ನೀಲಂ ಅಲಿ ಏನು ಹೇಳಿದ್ದಾರೆ ನೋಡೋಣ.


    ಫೋಲಿಕ್ ಆಮ್ಲ ಏಕೆ ಮುಖ್ಯ?


    ಡಾ. ನೀಲಂ ಅಲಿ ಅವರು ಹೇಳುವ ಪ್ರಕಾರ, ಫೋಲೇಟ್ ಮತ್ತು ಫೋಲಿಕ್ ಆಮ್ಲವು ವಿಟಮಿನ್ ಬಿ9 ನ ರೂಪಗಳಾಗಿವೆ. ಇದು ದೇಹದ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ. ಇದು ಕೆಂಪು ರಕ್ತ ಕಣಗಳ ರಚನೆಗೆ ಸಹ ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಇದು ನಮ್ಮ ದೈನಂದಿನ ಆಹಾರ ಪೂರೈಸುತ್ತದೆ. ಫೋಲಿಕ್ ಆಮ್ಲದಲ್ಲಿ ಸಮೃದ್ಧ ಆಹಾರ ತೆಗೆದುಕೊಳ್ಳಲು ಸಾಧ್ಯ ಆಗದೇ ಹೋದಾಗ ಅದರ ಕೊರತೆ ಕಾಡಲು ಶುರುವಾಗುತ್ತದೆ. ಇದು ಬಂಜೆತನ ಮತ್ತು ಗರ್ಭಪಾತಕ್ಕೆ ಕಾರಣವಾಗುತ್ತದೆ. ಫೋಲಿಕ್ ಆಮ್ಲದ ಕೊರತೆ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.


    ಫೋಲಿಕ್ ಆಮ್ಲ ಮಗುವಿನ ರಕ್ಷಣೆಗೆ ಸಹಕಾರಿ


    ಹುಟ್ಟಲಿರುವ ಮಗುವಿನ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯಲ್ಲಿ ಫೋಲಿಕ್ ಆಮ್ಲವು ಪ್ರಮುಖ ಪಾತ್ರ ವಹಿಸುತ್ತದೆ. ಅದರ ಕೊರತೆ ಮಗುವಿನಲ್ಲಿ ದೈಹಿಕ ನ್ಯೂನತೆ ಉಂಟು ಮಾಡುವ ಸಾಧ್ಯತೆ ಹೆಚ್ಚು.


    ಅಲ್ಲದೆ ಫೋಲಿಕ್ ಆಮ್ಲದ ಕೊರತೆಯು ಅಕಾಲಿಕ ಹೆರಿಗೆ ಮತ್ತು ಮಗುವಿನ ಸಾವಿಗೆ ಕಾರಣವಾಗಬಹುದು. ಇದು ಗರ್ಭಧರಿಸಲು ಸಹ ಸಹಾಯ ಮಾಡುತ್ತದೆ. ಕೆಲವೊಮ್ಮೆ ನಿಮ್ಮ ಕೂದಲು ಹೆಚ್ಚು ಬೀಳಲು ಪ್ರಾರಂಭಿಸುತ್ತದೆ. ಇದು ಫೋಲಿಕ್ ಆಮ್ಲದ ಕೊರತೆಯಿಂದ ಆಗಿರಬಹುದು.


    ಫೋಲಿಕ್ ಆಮ್ಲದ ಕೊರತೆಯಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ?


    ಡಾ.ನೀಲಂ ಅಲಿ ಅವರ ಪ್ರಕಾರ ಸ್ವಲ್ಪ ಕೆಲಸ ಮಾಡಿದ ನಂತರವೂ ಸುಸ್ತಾಗಿದ್ದರೆ ಫೋಲಿಕ್ ಆಮ್ಲದ ಕೊರತೆ ಹೊಂದಿದ್ದೀರಿ ಎಂದರ್ಥ. ಇದು ಮಲಬದ್ಧತೆ, ಆತಂಕ, ಉಸಿರಾಟದ ತೊಂದರೆ, ತೂಕ ನಷ್ಟ, ಹಸಿವಿನ ಕೊರತೆ, ತಲೆನೋವು, ಹೊಟ್ಟೆ ನೋವು, ಅತಿಸಾರ, ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಫೋಲಿಕ್ ಆಮ್ಲದ ಕೊರತೆಯ ಲಕ್ಷಣ ಆಗಿವೆ. ನೆನಪಿನ ಶಕ್ತಿ ಕಡಿಮೆಯಾಗುತ್ತದೆ.


    ಮಹಿಳೆಯರಿಗೆ ಫೋಲಿಕ್ ಆಮ್ಲ ಎಷ್ಟು ಪ್ರಮಾಣದಲ್ಲಿ ಬೇಕು?


    ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮನ್ನು ಪರೀಕ್ಷಿಸುತ್ತಾರೆ ಮತ್ತು ಫೋಲಿಕ್ ಆಸಿಡ್ ಪೂರಕಗಳ ಸರಿಯಾದ ಡೋಸೇಜ್ ನ್ನು ತೆಗೆದುಕೊಳ್ಳುವ ಬಗ್ಗೆ ಸಲಹೆ ನೀಡುತ್ತಾರೆ. 14 ವರ್ಷಕ್ಕಿಂತ ಮೇಲ್ಪಟ್ಟವರಿಗೆ 400 ಮೈಕ್ರೋ ಗ್ರಾಂ ಫೋಲಿಕ್ ಆಮ್ಲದ ಅಗತ್ಯವಿದೆ.


    ಅದೇ ವೇಳೆ ಗರ್ಭಾವಸ್ಥೆಯಲ್ಲಿ 600 ಮೈಕ್ರೋ ಗ್ರಾಂ ಫೋಲಿಕ್ ಆಮ್ಲದ ಅಗತ್ಯ ಇರಬಹುದು. ವೈದ್ಯರನ್ನು ಸಂಪರ್ಕಿಸದೆ ನೀವು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲ ಪೂರಕ ತೆಗೆದುಕೊಂಡರೆ, ನಿಮಗೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗಬಹುದು.


    ನೀವು ಫೋಲಿಕ್ ಆಸಿಡ್ ಪೂರಕ ಸೇವಿಸುತ್ತಿದ್ದರೆ ಅದನ್ನು ತೆಗೆದುಕೊಂಡ ತಕ್ಷಣ ಬೇರೆ ಯಾವುದೇ ಔಷಧಿ ಸೇವಿಸಬಾರದು. ಫೋಲಿಕ್ ಆಸಿಡ್ ಪೂರಕ ತೆಗೆದುಕೊಂಡ ಕನಿಷ್ಠ ಎರಡು ಗಂಟೆಗಳ ನಂತರ ಯಾವುದೇ ಔಷಧ ಸೇವಿಸಬಹುದು.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ಫೋಲಿಕ್ ಆಮ್ಲದ ಆಹಾರದ ಮೂಲಗಳು


    ಫೋಲಿಕ್ ಆಮ್ಲದ ಪೂರೈಕೆಗೆ ಆಹಾರದಲ್ಲಿ ಹಸಿರು ಎಲೆಗಳ ತರಕಾರಿ, ಬೆಂಡೆಕಾಯಿ, ಅಣಬೆ, ಬಾಳೆಹಣ್ಣು, ಪಪ್ಪಾಯಿ, ಆವಕಾಡೊ, ಕಿತ್ತಳೆ, ಬೀಜಗಳು ಸೇರಿಸಿ. ಬೀನ್ಸ್, ಬಟಾಣಿ, ಕಾರ್ನ್ ಫ್ಲೋರ್, ಓಟ್ಸ್, ಮೊಟ್ಟೆ, ಸಮುದ್ರಾಹಾರ ಇತ್ಯಾದಿ ಸೇವಿಸಿ.

    Published by:renukadariyannavar
    First published: