ಭೋಜನ ಪ್ರಿಯರಿಗೊಂದು ಸಿಹಿ ಸುದ್ದಿ: ಬೆಂಗಳೂರಿನಲ್ಲಿದೆ ತೇಲುವ ರೆಸ್ಟೋರೆಂಟ್

zahir | news18
Updated:October 18, 2018, 9:05 AM IST
ಭೋಜನ ಪ್ರಿಯರಿಗೊಂದು ಸಿಹಿ ಸುದ್ದಿ: ಬೆಂಗಳೂರಿನಲ್ಲಿದೆ ತೇಲುವ ರೆಸ್ಟೋರೆಂಟ್
@flydinig.com-curlytales.com
  • Advertorial
  • Last Updated: October 18, 2018, 9:05 AM IST
  • Share this:
-ನ್ಯೂಸ್ 18 ಕನ್ನಡ

ವಿಶ್ವದ ಅತ್ಯಂತ ಸಾಹಸಮಯ ಡಿನ್ನರ್‌ ಅನುಭವವನ್ನು ಪಡೆಯಲು ಇನ್ನು ಮುಂದೆ ದುಬೈಗೆ ಅಥವಾ ಸಿಂಗಪೂರ್​ಗೆ ಹೋಗಬೇಕಿಲ್ಲ. ಏಕೆಂದರೆ  ಫ್ಲೈ ಡೈನಿಂಗ್ ರೆಸ್ಟೋರೆಂಟ್ ಇದೀಗ ಬೆಂಗಳೂರಿನಲ್ಲಿ ಆರಂಭವಾಗಿದೆ. ಇಲ್ಲಿ ನೀವು ಆಕಾಶದಲ್ಲಿ ತೇಲುತ್ತಾ ಊಟ ಮಾಡಬಹುದು, ಮೋಜು ಮಸ್ತಿಯಲ್ಲಿ ಕಾಲ ಕಳೆಯಬಹುದು.

ಏನಿದು ಫ್ಲೈ ಡೈನಿಂಗ್?

ಫ್ಲೈ ಡೈನಿಂಗ್ ಎಂಬುದು ವಿಶೇಷ ರೀತಿಯ ಹೊಸ ರೆಸ್ಟೋರೆಂಟ್. ಇಲ್ಲಿ ನೀವು ನೆಲದಿಂದ 50 ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ ಮೋಡಗಳ ಎಡೆಯಲ್ಲಿ ರುಚಿಕರ ಭೋಜನವನ್ನು ಸವಿಯಬಹುದು. ಅಲ್ಲದೆ ಹೆಬ್ಬಾಳದ ನಾಗವಾರ ಕೆರೆಯ ಪಕ್ಕದಲ್ಲೇ ಇರುವುದರಿಂದ ಎತ್ತರದಿಂದಲೇ ಪ್ರಕೃತಿ ಸೌಂದರ್ಯದ ಅನುಭವನ್ನು ಪಡೆಯಬಹುದು. ಸಿಲಿಕಾನ್ ಸಿಟಿಯಲ್ಲಿ ಇದೇ ಮೊದಲ ಬಾರಿಗೆ ಭೋಜನ ಪ್ರಿಯರಿಗೆ ಹೊಸ ಅನುಭವ ಒದಗಿಸಲು ಇಂತಹದೊಂದು ರೆಸ್ಟೋರೆಂಟ್ ತೆರೆಯಲಾಗಿದೆ.

ಹೇಗಿದೆ ವ್ಯವಸ್ಥೆ?

ಈ ರೆಸ್ಟೋರೆಂಟ್​ನ್ನು ಕ್ರೇನ್ ಸಹಾಯದಿಂದ 50 ಅಡಿ ಮೇಲಕ್ಕೆ ಎತ್ತಲಾಗುತ್ತದೆ. 16 ಮೆಟಲ್ ಹಗ್ಗಗಳಿಂದ ಈ ರೆಸ್ಟೋರೆಂಟ್​ನ್ನು ಬಿಗಿಗೊಳಿಸಲಾಗಿದ್ದು, ಒಂದು ಬಾರಿ ಇಲ್ಲಿ ಮೂರು ರೆಸ್ಟೋರೆಂಟ್ ಸಿಬ್ಬಂದಿ ಸೇರಿ 22 ಮಂದಿ ಕುಳಿತುಕೊಳ್ಳಬಹುದು. ಇಲ್ಲಿನ ಟೇಬಲ್​ಗಳು 360 ಡಿಗ್ರಿಯಲ್ಲಿ ತಿರುಗಲಿದ್ದು, ಇದರಿಂದ ಎಲ್ಲ ಭಾಗಗಳ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಫ್ರೋರ್ಬ್ಸ್ ಪಟ್ಟಿಯಲ್ಲಿ ಸ್ಥಾನಪ್ರಪಂಚದ ವಿಶೇಷ ರೆಸ್ಟೋರೆಂಟ್​ಗಳಲ್ಲಿ ಇದು ಕೂಡ ಒಂದಾಗಿದೆ. ಫ್ರೋರ್ಬ್ಸ್ ನಿಯತಕಾಲಿಕೆಯ  ಪ್ರಪಂಚದ 10 ಅಸಾಧಾರಣ ರೆಸ್ಟೋರೆಂಟ್​ಗಳ ಪಟ್ಟಿಯಲ್ಲಿ ಫ್ಲೈ ಡೈನಿಂಗ್ ಕೂಡ ಸ್ಥಾನ ಪಡೆದುಕೊಂಡಿದೆ. ಡೇರ್​ಡೇವಿಲ್ ಅನುಭವದೊಂದಿಗೆ ರುಚಿಕರವಾದ ಆಹಾರ ಸವಿಯಬೇಕೆಂದು ಅಂದುಕೊಂಡರೆ ಈ ರೆಸ್ಟೋರೆಂಟ್​ಗೊಮ್ಮೆ ಭೇಟಿ ನೀಡಬಹುದು.

ಡೈನಿಂಗ್ ಆಯ್ಕೆಗಳು:
ಪ್ರಸ್ತುತ, 2 ಡೈನಿಂಗ್ ಆಯ್ಕೆಗಳಿವೆ:

1. ಅರ್ಧ ಗಂಟೆ ಮೊಕ್​ಟೈಲ್ ಸೆಷನ್: ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ (₹ 3999 ಒಬ್ಬರಿಗೆ)

2- ಒಂದು ಗಂಟೆ ಡೈನಿಂಗ್ ಸೆಷನ್: 7 ಗಂಟೆಗೆ ಪ್ರಾರಂಭವಾಗುತ್ತದೆ (₹ 6999 ಒಬ್ಬರಿಗೆ)

 

ಸುರಕ್ಷತೆ :
ಫ್ಲೈ ಡೈನಿಂಗ್​ನ್ನು ಜರ್ಮನಿಯ ಟಿಯುವಿ ಸ್ಟೀಲ್ ಕೇಬಲ್​ಗಳಿಂದ ನಿರ್ಮಿಸಲಾಗಿದೆ. ಈ ಕೇಬಲ್​ಗಳು 100 ಟನ್​ ಭಾರವನ್ನು ಎತ್ತುವ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಕೇವಲ 4 ಟನ್ ತೂಕದ ಕ್ಯಾಬ್ ಟೇಬಲ್ 50 ಮೀಟರ್ ಎತ್ತರಕ್ಕೆ ಎತ್ತಲ್ಪಟ್ಟಿದೆ. ಇದು ಜರ್ಮನಿಯ ಸುರಕ್ಷತಾ ಪೇಟೆಂಟ್​ನ್ನು ಹೊಂದಿರುವುದು ವಿಶೇಷ . ಅಲ್ಲದೆ ಸುರಕ್ಷತಾ ದೃಷ್ಟಿಯಿಂದ ಇಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.

ಗರ್ಭಿಣಿ ಮಹಿಳೆಯರು ಮತ್ತು 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿ ಪ್ರತಿ ವ್ಯಕ್ತಿ ಕನಿಷ್ಠ 4.5 ಅಡಿ ಎತ್ತರ ಹೊಂದಿರಬೇಕು. ಅದೇ ರೀತಿ ವ್ಯಕ್ತಿಯ ತೂಕವು ಗರಿಷ್ಠ 150.ಕೆ.ಜಿ ಒಳಗಿರಬೇಕಾಗುತ್ತದೆ. ಅದೇ ರೀತಿ ಯಾವುದೇ ಬ್ಯಾಗ್​ಗಳನ್ನು ಇಲ್ಲಿಗೆ ಕೊಂಡೊಯ್ಯುವಂತಿಲ್ಲ. ಆದರೆ ಮೊಬೈಲ್ ಬಳಸಲು ಅವಕಾಶ ನೀಡಲಾಗಿದೆ. ರೆಸ್ಟ್​ರೂಮ್​ಗಳಿಗೆ ಹೋಗುವ ಅನಿವಾರ್ಯತೆ ಬಂದರೆ ಫ್ಲೈ ಡೈನಿಂಗ್​ನ್ನು ಇಳಿಸಲಾಗುತ್ತದೆ.

ಮೋಜು ಮಸ್ತಿಗೆ ಅವಕಾಶ

ಫ್ಲೈ ಡೈನಿಂಗ್​ನಲ್ಲಿ ನೀವು ಫ್ರೆಂಡ್ಸ್‌ ಜೊತೆ, ಫ್ಯಾಮಿಲಿ ಜೊತೆ ಸಣ್ಣ ಔತಣಕೂಟವನ್ನು ಆಯೋಜಿಸಬಹುದು. ಹೊಸ ಉತ್ಪನ್ನಗಳ ಲಾಂಚ್​ಗೂ ಅವಕಾಶ ನೀಡಲಾಗುತ್ತದೆ. ಡಿಜೆ ಪಾರ್ಟಿ, ಸಂಗೀತ ಪದರ್ಶನ ಸೇರಿದಂತೆ ಎಲ್ಲವನ್ನು ಫ್ಲೈ ಡೈನಿಂಗ್​ನಲ್ಲಿ ಮಾಡಬಹುದಾಗಿದೆ. ಭೂಮಿಯಲ್ಲೇ ಕೂತು ಊಟ ಮಾಡಿದ್ದು ಸಾಕಾಗಿದ್ದರೆ, ಒಮ್ಮೆ ಫ್ಲೈ ಡೈನಿಂಗ್​ನತ್ತ ಭೇಟಿ ಕೊಡಬಹುದು. ಏಕೆಂದರೆ ಗಾಳಿಯಲ್ಲಿ ತೇಲುತ್ತಾ ಆಹಾರ ಸವಿಯುವ ಈ ಹೊಸ ಅನುಭವ ಖಂಡಿತ ಥ್ರಿಲ್​ ನೀಡಲಿದೆ.

Address: Fly Dining,
House of Life, Nagavara, Near Manyata Tech Park, Nagawara, Bangalore
Cost for two: ₹8,000
First published:October 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ