• Home
 • »
 • News
 • »
 • lifestyle
 • »
 • Foods: ದೇಹದಿಂದ ಕಲುಷಿತ ಅಂಶ ಹೊರ ಹಾಕಲು ಈ ಆಹಾರ ಪದಾರ್ಥ ಸೇವಿಸಿ!

Foods: ದೇಹದಿಂದ ಕಲುಷಿತ ಅಂಶ ಹೊರ ಹಾಕಲು ಈ ಆಹಾರ ಪದಾರ್ಥ ಸೇವಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಆಹಾರ ಪದಾರ್ಥಗಳು ದೇಹದಿಂದ ಕಲುಷಿತ ವಸ್ತುಗಳನ್ನು ಹೊರ ಹಾಕಲು ಸಹಕಾರಿ ಆಗಿವೆ. ದೇಹದಿಂದ ವಾಯು ಮಾಲಿನ್ಯವನ್ನು ತೊಡೆದು ಹಾಕಲು ಏನು ಮಾಡಬೇಕೆಂದು ಪೌಷ್ಟಿಕ ತಜ್ಞೆ ಉತ್ತರ ನೀಡಿದ್ದಾರೆ. ವಾಯು ಮಾಲಿನ್ಯದ ಅಡ್ಡ ಪರಿಣಾಮ ತೊಡೆದು ಹಾಕಲು ನಾವು ಪ್ರತಿಯೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ದೇಶದ (Country) ಪ್ರಮುಖ ನಗರಗಲ್ಲಿ (Cities) ವಾಯು ಮಾಲಿನ್ಯ (Air Pollution) ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಹೀಗಾಗಿ ಗಾಳಿ ಕಲುಷಿತಗೊಳ್ಳುತ್ತಿದ್ದು, ಉಸಿರಾಟ ಕಷ್ಟವಾಗುತ್ತಿದೆ. ಕಲುಷಿತ ಗಾಳಿ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ (Disease) ಕಾರಣ ಆಗುತ್ತಿದೆ. ಕಲುಷಿತ ಗಾಳಿಯಿಂದ ಕೆಲವು ಕೆಟ್ಟ ಕ್ರಿಮಿಗಳು ದೇಹವನ್ನು (Body) ಪ್ರವೇಶಿಸುತ್ತಿವೆ. ಜೊತೆಗೆ ಶ್ವಾಸಕೋಶವನ್ನು ಹಾಳು ಮಾಡುತ್ತಿವೆ. ಹೀಗೆ ವಾಯು ಮಾಲಿನ್ಯದ ಮೂಲಕ ದೇಹ ಸೇರುವ ಅಪಾಯಕಾರಿ ವಸ್ತುಗಳನ್ನು ದೇಹದಿಂದ ತೆಗೆದು ಹಾಕಬಹುದೇ? ಎಂಬ ಪ್ರಶ್ನೆಗೆ ಹೌದು ಅಂತಾರೆ ಆರೋಗ್ಯ ತಜ್ಞರು. ಪ್ರಸಿದ್ಧ ಪೌಷ್ಟಿಕ ತಜ್ಞರಾಗಿರುವ ಪೂಜಾ ಮಖಿಜಾ ಅವರು, ಮಾಲಿನ್ಯ ವಿರೋಧಿ ಆಹಾರಗಳನ್ನು ತಿನ್ನಲು ಶಿಫಾರಸು ಮಾಡಿದ್ದಾರೆ.


  ದೇಹದಿಂದ ಕಲುಷಿತ ಗಾಳಿ ಹೊರ ಹಾಕಲು ಏನು ಮಾಡಬೇಕು?


  ಈ ಆಹಾರ ಪದಾರ್ಥಗಳು ದೇಹದಿಂದ ಕಲುಷಿತ ವಸ್ತುಗಳನ್ನು ಹೊರ ಹಾಕಲು ಸಹಕಾರಿ ಆಗಿವೆ. ದೇಹದಿಂದ ವಾಯು ಮಾಲಿನ್ಯವನ್ನು ತೊಡೆದು ಹಾಕಲು ಏನು ಮಾಡಬೇಕೆಂದು ಪೌಷ್ಟಿಕ ತಜ್ಞೆ ಉತ್ತರ ನೀಡಿದ್ದಾರೆ. ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಸೋನಂ ಕಪೂರ್ ಮುಂತಾದ ಅನೇಕ ಸೆಲೆಬ್ರಿಟಿಗಳಿಗೆ ಪೌಷ್ಟಿಕಾಂಶದ ಸಲಹೆ ನೀಡ್ತಾರೆ ಪೌಷ್ಟಿಕ ತಜ್ಞೆ ಪೂಜಾ ಮಖಿಜಾ.


  ಈಗ ಅವರು ವಾಯು ಮಾಲಿನ್ಯದ ಅಡ್ಡ ಪರಿಣಾಮ ತೊಡೆದು ಹಾಕಲು ನಾವು ಪ್ರತಿಯೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ವಾಯು ಮಾಲಿನ್ಯ ಮತ್ತು ಹೊಗೆಯು ಅನೇಕ ಅಪಾಯಕಾರಿ ಪದಾರ್ಥಗಳನ್ನು ಹೊಂದಿದೆ.


  ಇದನ್ನೂ ಓದಿ: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ!


  ಇದು ಶ್ವಾಸಕೋಶ, ಹೃದಯ ಮತ್ತು ದೇಹದ ಇತರ ಅಂಗಗಳ ಹಾನಿ ಉಂಟು ಮಾಡುತ್ತದೆ. ಈ ಜೈವಿಕ ಹಾನಿಯನ್ನು ತಪ್ಪಿಸಲು, ಪ್ರತಿದಿನ ಮಾಲಿನ್ಯ ವಿರೋಧಿ ಆಹಾರ ಸೇವಿಸಬೇಕು.


  ವಾಯು ಮಾಲಿನ್ಯದ ಕಾರಣಗಳು


  ಸಿಡಿಸಿ ಪ್ರಕಾರ, ಇಪಿಎ ಕೆಲವು ಅಪಾಯಕಾರಿ ವಸ್ತುಗಳನ್ನು ವಾಯು ಮಾಲಿನ್ಯದ ಮುಖ್ಯ ಕಾರಣವೆಂದು ಪಟ್ಟಿ ಮಾಡಿದೆ. ಈ ವಸ್ತುಗಳು ಪರಿಸರದಲ್ಲಿ ಬೆರೆತು, ಗಾಳಿಯನ್ನು ಕಲುಷಿತ ಮಾಡುತ್ತಿವೆ. ಮತ್ತು ದೈಹಿಕ ಅಂಗಗಳಿಗೆ ಹಾನಿ ಉಂಟು ಮಾಡುತ್ತಿವೆ. ಕಾರ್ಬನ್ ಮಾನಾಕ್ಸೈಡ್, ಸಾರಜನಕ ಆಕ್ಸೈಡ್, ಓಝೋನ್, ಸಲ್ಫರ್ ಡೈಆಕ್ಸೈಡ್, ಬೆಂಜೀನ್, ಪರ್ಟಿಕ್ಯುಲೇಟ್ ಮ್ಯಾಟರ್ ಕಾರಣವಾಗಿವೆ.


  ವಾಯು ಮಾಲಿನ್ಯ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಕ್ರೂಸಿಫೆರಸ್ ತರಕಾರಿ ಸೇವಿಸಿ


  ಕ್ರೂಸಿಫೆರಸ್ ತರಕಾರಿಗಳು ಇದು ಒಂದು ರೀತಿಯ ತರಕಾರಿ ಆಗಿದೆ. ಇದರಲ್ಲಿ ಹಸಿರು ಎಲೆ ಮತ್ತು ಬೇರು ತರಕಾರಿಗಳಾದ ಕೋಸುಗಡ್ಡೆ, ಹೂಕೋಸು, ಎಲೆಕೋಸು, ಕೇಲ್, ಪ್ಯಾಕ್ ಚಾಯ್ ಇತ್ಯಾದಿ ಸೇರಿವೆ. ಆರೋಗ್ಯ ತಜ್ಞೆ ಪೂಜಾ ಮಖಿಜಾ ಅವರ ಪ್ರಕಾರ, ಈ ಕ್ರೂಸಿಫೆರಸ್ ತರಕಾರಿಗಳಲ್ಲಿ ಸಲ್ಫೊರಾಫೇನ್ ಇದೆ.


  ಇದು ದೇಹದಿಂದ ಅಪಾಯಕಾರಿ ವಸ್ತು ಬೆಂಜೀನ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಕೂಡ ಈ ತರಕಾರಿಗಳಲ್ಲಿ ಹೇರಳವಾಗಿದೆ. ಹೀಗಾಗಿ ಇದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ದೇಹವು ರೋಗ ಮುಕ್ತವಾಗಿರುತ್ತದೆ.


  ಅಗಸೆ ಬೀಜಗಳು


  ವಾಯು ಮಾಲಿನ್ಯದ ಅಡ್ಡ ಪರಿಣಾಮ ತೊಡೆದು ಹಾಕಲು ಅಗಸೆ ಬೀಜಗಳನ್ನು ತಿನ್ನಬೇಕು ಎಂದು ಪೂಜಾ ಮಖಿಜಾ ಹೇಳುತ್ತಾರೆ. ಅಗಸೆ ಬೀಜಗಳು ಫೈಟೊಸ್ಟ್ರೊಜೆನ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಆಗಿವೆ. ಈ ಬೀಜಗಳ ಸೇವನೆ ಹೊಗೆಯಿಂದ ಆಸ್ತಮಾ ರೋಗಿಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆ ಕಡಿಮೆ ಮಾಡುತ್ತದೆ. ಅನೇಕ ಅಧ್ಯಯನಗಳಲ್ಲಿ ಇದನ್ನು ಹೇಳಲಾಗಿದೆ. ನೀವು ಪ್ರತಿದಿನ 2 ಚಮಚ ಅಗಸೆ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ತಿನ್ನಿರಿ.


  ಬೆಟ್ಟದ ನೆಲ್ಲಿಕಾಯಿ


  ಆಮ್ಲಾ ಉತ್ತಮವಾದ ಮಾಲಿನ್ಯ ವಿರೋಧಿ ಆಹಾರ ಆಗಿದೆ. ಇದು ವಿಟಮಿನ್-ಸಿ ಯಲ್ಲಿ ಸಮೃದ್ಧ ಆಗಿದೆ. ಇದು ಗಾಳಿಯಲ್ಲಿ ಇರುವ ಮಾರಣಾಂತಿಕ ವಸ್ತುಗಳಿಂದ ಉಂಟಾಗುವ ಸೆಲ್ಯುಲಾರ್ ಹಾನಿ ತಡೆಯುತ್ತದೆ. ಅದಕ್ಕಾಗಿ ನೀವು ವಾಯು ಮಾಲಿನ್ಯದ ನಡುವೆ ಪ್ರತಿದಿನ ಒಂದು ನೆಲ್ಲಿಕಾಯಿ ತರಕಾರಿ ರಸದ ಜೊತೆ ಬೆರೆಸಿ ಕುಡಿಯಿರಿ.


  ಇದನ್ನೂ ಓದಿ: ಕಪ್ಪು ತುಟಿಗೆ ನೈಸರ್ಗಿಕವಾಗಿ ಪಿಂಕ್ ಬಣ್ಣ ಬರಬೇಕಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ!


  ಅರಿಶಿನ


  ಅರಿಶಿನವು ಕರ್ಕ್ಯುಮಿನ್ ಹೊಂದಿದೆ. ಇದು ಉರಿಯೂತ ತಡೆಯುತ್ತದೆ. ವಾಯು ಮಾಲಿನ್ಯದ ಅಪಾಯಕಾರಿ ಪರಿಣಾಮ ತಡೆಯುತ್ತದೆ. ಆದರೆ ಕೇವಲ ಹಾಲು ಅಥವಾ ನೀರಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರ ಬದಲು ಪ್ರತಿದಿನ 500 ಮಿಗ್ರಾಂ ಕರ್ಕ್ಯುಮಿನ್ ಪೂರಕ ಸೇವಿಸಬೇಕು ಅಂತಾರೆ ತಜ್ಞರು.

  Published by:renukadariyannavar
  First published: