• Home
 • »
 • News
 • »
 • lifestyle
 • »
 • Flax Seeds: ಅಗಸೆ ಬೀಜಗಳ ಸೇವನೆ ಯಾರಿಗೆ ಔಷಧ? ಯಾರು ಇದರ ಸೇವನೆ ಮಾಡಬಾರದು?

Flax Seeds: ಅಗಸೆ ಬೀಜಗಳ ಸೇವನೆ ಯಾರಿಗೆ ಔಷಧ? ಯಾರು ಇದರ ಸೇವನೆ ಮಾಡಬಾರದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟಾರೆ ಆರೋಗ್ಯ ಕಾಪಾಡುವ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಅಗಸೆ ಬೀಜಗಳಲ್ಲಿ ಇವೆ ಎಂದು ಹೇಳಲಾಗಿದೆ. ಹೆಚ್ಚಿನ ಜನರು ತೂಕ ಇಳಿಸಲು ಅಗಸೆ ಬೀಜ ಸೇವಿಸುತ್ತಾರೆ. ಇದರ ಜೊತೆ ಈ ಬೀಜಗಳ ಇತರ ಪ್ರಯೋಜನಗಳೂ ಇವೆ.

 • Share this:

  ದೇಹದ (Body) ಆರೋಗ್ಯ (Health) ಕಾಪಾಡಲು ಹಲವು ಅಂಶಗಳು ಅತೀ ಅವಶ್ಯವಾಗಿ ಬೇಕು. ಎಲ್ಲಾ ರೀತಿಯ ಪೋಷಕಾಂಶಗಳು (Nutrients) ಸದೃಢ ಆರೋಗ್ಯಕ್ಕೆ ಅವಶ್ಯಕವಾಗಿದೆ. ವಿಜ್ಞಾನ ಮತ್ತು ಆಯುರ್ವೇದವು (Science And Ayurveda) ಅನೇಕ ರೀತಿಯ ಆಹಾರಗಳ ಸೇವನೆ ಮಾಡಲು ಶಿಫಾರಸು ಮಾಡುತ್ತದೆ. ಕೆಲವು ಆಹಾರ ಪದಾರ್ಥಗಳನ್ನು ಸೂಪರ್‌ ಫುಡ್‌ ಗಳು (Super Foods) ಎಂದು ಪರಿಗಣಿಸಲಾಗಿದೆ. ಅಂತಹ ಆಹಾರದಲ್ಲಿ ಒಟ್ಟಾರೆ ಆರೋಗ್ಯ ಕಾಪಾಡುವ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ ಎಂದು ಹೇಳಲಾಗಿದೆ. ಅಂತಹ ಒಂದು ಆಹಾರ ಪದಾರ್ಥ ಎಂದರೆ ಅದು ಅಗಸೆ ಬೀಜಗಳು. ಇದನ್ನು ಇಂಗ್ಲಿಷ್ ನಲ್ಲಿ ಫ್ಲಾಕ್ಸ್ ಸೀಡ್ಸ್ ಎಂದು ಕರೆಯುತ್ತಾರೆ.


  ಅಗಸೆ ಬೀಜಗಳ ಪ್ರಯೋಜನಗಳು


  ಹೆಚ್ಚಿನ ಜನರು ತೂಕ ಇಳಿಸಲು ಅಗಸೆ ಬೀಜ ಸೇವಿಸುತ್ತಾರೆ. ಇದರ ಜೊತೆ ಈ ಬೀಜಗಳ ಇತರ ಪ್ರಯೋಜನಗಳೂ ಇವೆ. ಬೀಜಗಳ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವೂ ಸಹ ಆಶ್ಚರ್ಯವಕಿತರಾಗ್ತೀರಿ. ಇದರಿಂದಾಗಿ ಜನರು ಯಾವುದೇ ತಜ್ಞರನ್ನು ಸಂಪರ್ಕಿಸದೆ ಅಗಸೆ ಬೀಜಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ.


  ಆದರೆ ಹಾಗೆ ಮಾಡುವುದು ಕೆಲವರಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ ಯಾವ ಜನರು ಅಗಸೆ ಬೀಜಗಳನ್ನು ಸೇವಿಸಬಾರದು ಎಂದು ನಾವು ಇಂದು ಇಲ್ಲಿ ತಿಳಿಯೋಣ.


  ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


  ಅಗಸೆ ಬೀಜದಲ್ಲಿರುವ ಔಷಧೀಯ ಗುಣಗಳು


  ಅಗಸೆ ಬೀಜದ ಸೇವನೆ ಬಗ್ಗೆ ಆಯುರ್ವೇದದಲ್ಲಿ ಅಗಸೆ ಬೀಜಗಳು ದೇಹದ ವಾತ ಅಂಶವನ್ನು ಸಮತೋಲನ ಮಾಡುತ್ತದೆ ಎಂದು ಹೇಳಲಾಗಿದೆ. ಅದೇ ವೇಳೆ ಎನ್ ಸಿಬಿಐ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಗಸೆ ಬೀಜಗಳು ಆಂಟಿಫಂಗಲ್, ಆಂಟಿ-ಆಕ್ಸಿಡೆಂಟ್, ಆಂಟಿ-ಹೈಪರ್ಟೆನ್ಸಿವ್, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಪರಿಣಾಮ ಹೊಂದಿವೆ.


  ಮಧುಮೇಹ-ವಿರೋಧಿ, ಆಂಟಿ-ಥ್ರಂಬಿಕ್, ಆಂಟಿ-ಏಜಿಂಗ್ ಮತ್ತು ಆಂಟಿ-ಟ್ಯೂಮರ್‌ನಂತಹ ಔಷಧೀಯ ಗುಣ ಹೊಂದಿವೆ ಅಗಸೆ ಬೀಜ. ಇದಲ್ಲದೆ ಈ ಬೀಜಗಳಲ್ಲಿ ಫೈಬರ್, ಪ್ರೋಟೀನ್, ಒಮೆಗಾ -3 ಮತ್ತು ಒಮೆಗಾ -6 ಸಮೃದ್ಧವಾಗಿದೆ. ಅಗಸೆ ಬೀಜಗಳ ಸೇವನೆ ತುಂಬಾ ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ.


  ಅಗಸೆ ಬೀಜದ ಆರೋಗ್ಯ ಪ್ರಯೋಜನಗಳು


  ರಕ್ತದೊತ್ತಡ ಕಡಿಮೆ ಮಾಡುತ್ತದೆ, ಕೀಲು ನೋವಿಗೆ ಪರಿಹಾರ ನೀಡುತ್ತದೆ, ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಹಕಾರಿ, ತೂಕ ಕಳೆದುಕೊಳ್ಳುತ್ತದೆ, ಮಧುಮೇಹ ನಿಯಂತ್ರಿಸುತ್ತದೆ, ರೋಗ ನಿರೋಧಕ ವ್ಯವಸ್ಥೆ ಹೆಚ್ಚಿಸುತ್ತದೆ, ಹೃದಯಕ್ಕೆ ಪ್ರಯೋಜನಕಾರಿ, ಹೊಟ್ಟೆಯಲ್ಲಿ ಊತ ಕಡಿಮೆ ಮಾಡುತ್ತದೆ, ಅಸ್ತಮಾದಲ್ಲಿ ಸಹಾಯಕ, ಗೌಟ್ನಲ್ಲಿ ಪರಿಹಾರ, ಮಲಬದ್ಧತೆ ಪರಿಣಾಮಕಾರಿ ಆಗಿದೆ.


  ಅಗಸೆ ಬೀಜವನ್ನು ಎಷ್ಟು ಸೇವಿಸಬೇಕು?


  ಅಗಸೆ ಬೀಜಗಳನ್ನು ಸೇವಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಏಕೆಂದರೆ ಅವುಗಳು ಸ್ವಭಾವತಃ ಬಿಸಿ.  ಅಂತಹ ಪರಿಸ್ಥಿತಿಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ದೇಹದ ಪಿತ್ತ ಮತ್ತು ಕಫ ಅಂಶಗಳಲ್ಲಿ ಅಸಮತೋಲನ ಉಂಟು ಮಾಡುತ್ತದೆ. ಅವುಗಳನ್ನು ಔಷಧವಾಗಿ ಮಿತವಾಗಿ ಸೇವಿಸಬೇಕು. NIH ಪ್ರಕಾರ ಸಾಮಾನ್ಯವಾಗಿ ದಿನಕ್ಕೆ 40 ಗ್ರಾಂ ಅಗಸೆ ಬೀಜ ಸೇವನೆ ಮಾಡಬಹುದು.


  ಅಗಸೆ ಬೀಜಗಳು ಯಾರಿಗೆ ಔಷಧವಾಗಿ ಕೆಲಸ ಮಾಡುತ್ತದೆ?


  ಅಪೌಷ್ಟಿಕತೆ, ಮೂಳೆ ಮತ್ತು ಕೀಲು ನೋವು, ದೌರ್ಬಲ್ಯ ಮತ್ತು ಋತುಚಕ್ರದ ಸಮಯದಲ್ಲಿ ಕಡಿಮೆ ಹರಿವಿನ ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿ. ಈ ಬೀಜಗಳು ಪ್ರಕೃತಿಯಲ್ಲಿ ಬಿಸಿ. ಹಾಗಾಗಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಅವು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲದೇ ಬೊಜ್ಜು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.


  ಈ 4 ವಿಧದ ಜನರು ಅಗಸೆ ಬೀಜ ಸೇವನೆ ತಪ್ಪಿಸಬೇಕು


  Webmd ಪ್ರಕಾರ, ಆಹಾರಕ್ಕೆ ಅಗಸೆ ಬೀಜ ಸೇರಿಸುವುದು ಪ್ರತಿದಿನ ಕರುಳಿನ ಚಲನೆಯ ಸಂಖ್ಯೆ ಹೆಚ್ಚಿಸಬಹುದು. ಇದು ಉಬ್ಬುವುದು, ಗ್ಯಾಸ್, ಕಿಬ್ಬೊಟ್ಟೆ ನೋವು ಮತ್ತು ವಾಕರಿಕೆ ಮುಂತಾದ ಅಡ್ಡ ಪರಿಣಾಮ ಉಂಟು ಮಾಡಬಹುದು.


  ಇದರ ಜೊತೆ ಅಗಸೆ ಬೀಜಗಳ ಅತಿಯಾದ ಸೇವನೆ ಹಾರ್ಮೋನುಗಳ ಸಮತೋಲನ ಉಂಟು ಮಾಡಬಹುದು. ಇದನ್ನು ಸೀಡ್ ಸೈಕ್ಲಿಂಗ್ ಎಂದು ಕರೆಯುತ್ತಾರೆ. ಹೀಗಾಗಿ ನೀವು ಭಾರೀ ಅವಧಿಗಳ ರಕ್ತಸ್ರಾವದಿಂದ ತೊಂದರೆಗೆ ಒಳಗಾಗಿದ್ದರೆ


  ಇದನ್ನೂ ಓದಿ: ಮುಖಕ್ಕೆ ಫೌಂಡೇಶನ್ ಬಳಸುವ ಮುನ್ನ ಈ ವಿಷಯಗಳು ನಿಮಗೆ ಗೊತ್ತಿರಬೇಕು


  ಹೆಚ್ಚಿನ ದೇಹದ ಉಷ್ಣತೆ ಹೊಂದಿದ್ದರೆ, ಗರ್ಭಿಣಿಯಾಗುವ ಪ್ರಯತ್ನದಲ್ಲಿದ್ದರೆ ಅಥವಾ ಕಡಿಮೆ ಕಾಮಾಸಕ್ತಿ ಸಮಸ್ಯೆ ಎದುರಿಸುತ್ತಿದ್ದರೆ ನೀವು ಈ ಬೀಜಗಳ ಸೇವನೆ ತಪ್ಪಿಸಬೇಕು ಅಥವಾ ಕಡಿಮೆ ಮಾಡಬೇಕು.

  Published by:renukadariyannavar
  First published: