ಫ್ಲಾಟ್ ಫೂಟ್ ಅಂದ್ರೆ ಚಪ್ಪಟೆ ಪಾದಗಳ (Flat Foot) ಸಮಸ್ಯೆ (Problem) ಮಕ್ಕಳು ಮತ್ತು ವಯಸ್ಕರಲ್ಲಿ (Children’s And Adults) ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಪಾದದ ಅಡಿ ಭಾಗದಲ್ಲಿ ಸಾಕಷ್ಟು ಕಮಾನು ರಚನೆ ಆಗದೇ ಹೋದಾಗ ಚಪ್ಪಟೆ ಪಾದಗಳ ಸಮಸ್ಯೆ ಉಂಟಾಗುತ್ತದೆ. ಅಂದ ಹಾಗೇ ಜನನದ ವೇಳೆ ಎಲ್ಲರೂ ಚಪ್ಪಟೆ ಪಾದ ಹೊಂದಿರುತ್ತಾರೆ. ದಿನಗಳು ಕಳೆದಂತೆ ಮಗು ನಡೆಯಲು ಶುರು ಮಾಡಿದಾಗ ಪಾದಗಳ ಅಡಿ ಭಾಗದಲ್ಲಿ ಕಮಾನು ರಚನೆ ಆಗುತ್ತವೆ. ಇದು ಮಗು ಓಡಲು, ನಡೆಯುವಾಗ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಆದರೆ ಯಾರಲ್ಲಿ ಪಾದಗಳ ಅಡಿ ಭಾಗದಲ್ಲಿ ಕಮಾನು ರಚನೆಯಾಗುವುದಿಲ್ಲವೋ ಅವರು ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ.
ಚಪ್ಪಟೆ ಪಾದಗಳಿಂದ ಉಂಟಾಗುವ ಸಮಸ್ಯೆಗಳು
ಚಪ್ಪಟೆ ಪಾದಗಳ ಗಂಭೀರ ಪರಿಣಾಮ ಉಂಟು ಮಾಡುತ್ತವೆ. ಚಪ್ಪಟೆ ಪಾದಗಳ ಸಮಸ್ಯೆಯಿಂದ ಓಡುವುದು, ಜಿಗಿಯುವಾಗ ತೊಂದರೆ ಹಾಗೂ ಕೆಲವು ಚಟುವಟಿಕೆ ವೇಳೆ ತೊಂದರೆ ಉಂಟಾಗುತ್ತದೆ. ಇದರ ಹೊರತಾಗಿ ನೋವು ಅಥವಾ ನಡಿಗೆಯಲ್ಲಿ ಬದಲಾವಣೆ, ಸ್ನಾಯು ಸೆಳೆತ, ಹಿಮ್ಮಡಿ ನೋವು ಉಂಟಾಗುತ್ತದೆ.
ಚಪ್ಪಟೆ ಪಾದಗಳ ಸಮಸ್ಯೆ ತೊಡೆದು ಹಾಕಲು ವ್ಯಾಯಾಮ ಮಾಡಿ
ಪ್ರಮಾಣೀಕೃತ ಯೋಗ ತರಬೇತುದಾರರಾಗಿರುವ ಪವಿತ್ರಾ ದೇವಾಡಿಗ ಅವರು ಚಪ್ಪಟೆ ಪಾದ ಸಮಸ್ಯೆ ನಿವಾರಿಸಲು ಕೆಲವು ಸುಲಭ ಮತ್ತು ಪರಿಣಾಮಕಾರಿ ವ್ಯಾಯಾಮ ಮಾಡುವುದು ಹೇಗೆ ಅಂತಾ ತಿಳಿಸಿದ್ದಾರೆ.
ಈ ವ್ಯಾಯಾಮಗಳನ್ನು ಮಾಡುವ ಮೂಲಕ ನೀವು ಚಪ್ಪಟೆ ಪಾದಗಳ ರೋಗ ಲಕ್ಷಣ ಕಡಿಮೆ ಮಾಡಬಹುದು ಮತ್ತು ಕಮಾನು ಮರು ರಚನೆ ಮಾಡಲು ಇದು ಸಹಕಾರಿ.
ಕಾಲಿನ ಬೆರಳುಗಳಿಗೆ ವ್ಯಾಯಾಮ
ಹಾಸಿಗೆಯ ಮೇಲೆ ನೇರವಾಗಿ ಮುಂದಕ್ಕೆ ಕಾಲು ಚಾಚಿ ಕುಳಿತುಕೊಳ್ಳಿ. ಸ್ವಲ್ಪ ಬೆನ್ನನ್ನು ಹಿಂದಕ್ಕೆ ಬಾಗಿಸಿ, ಕೈಗಳನ್ನು ಹಿಂದಕ್ಕೆ ಇರಿಸಿ. ಈಗ ಎರಡೂ ಕಾಲುಗಳನ್ನು ಒಟ್ಟಿಗೆ ತನ್ನಿ. ನಿಧಾನವಾಗಿ ಉಸಿರಾಡುತ್ತಾ ಕಾಲಿನ ಬೆರಳುಗಳನ್ನು ಒಳಕ್ಕೆ ಬಾಗಿಸಿ.
ಹಾಗೆಯೇ ನಿಧಾನವಾಗಿ ಉಸಿರಾಡುತ್ತಾ ಕಾಲಿನ ಬೆರಳುಗಳನ್ನು ಹೊರಕ್ಕೆ ತಿರುಗಿಸಿ. ಈ ವ್ಯಾಯಾಮವನ್ನು ದಿನಕ್ಕೆ 2 ರಿಂದ 3 ಬಾರಿ 5 ರಿಂದ 10 ಸುತ್ತು ಮಾಡಿ.
ಹೆಬ್ಬೆರಳು ವ್ಯಾಯಾಮ
ಹಾಸಿಗೆಯ ಮೇಲೆ ನೇರವಾಗಿ ಮುಂದಕ್ಕೆ ಕಾಲು ಚಾಚಿ ಕುಳಿತುಕೊಳ್ಳಿ. ಎರಡೂ ಕಾಲುಗಳ ನಡುವೆ ಸ್ವಲ್ಪ ಅಂತರವಿರಲಿ. ನಿಧಾನವಾಗಿ ಉಸಿರಾಡುತ್ತಾ ಈಗ ಎರಡೂ ಕಾಲ್ಬೆರಳುಗಳನ್ನು ಮಧ್ಯದಲ್ಲಿ ತಂದು ಒಳಕ್ಕೆ ಎಳೆಯಲು ಯತ್ನಿಸಿ.
ನಿಧಾನವಾಗಿ ಉಸಿರಾಡುತ್ತಾ ಈಗ ಎರಡೂ ಕಣಕಾಲು ಅಲುಗಾಡಿಸದೇ ಹೊರಕ್ಕೆ ಬಾಗಿಸಿ. ಈ ವ್ಯಾಯಾಮ ಮಾಡುವಾಗ ಮೊಣಕಾಲು ಬಾಗಿಸಬೇಡಿ. ಪ್ರತಿದಿನ 5 ರಿಂದ 10 ಬಾರಿ ಮಾಡಿ.
ಪಾದಗಳನ್ನು ಮುಚ್ಚಿರಿ ಮತ್ತು ತೆರೆಯುವ ವ್ಯಾಯಾಮ
ಹಾಸಿಗೆಯ ಮೇಲೆ ನೇರವಾಗಿ ಮುಂದಕ್ಕೆ ಕಾಲು ಚಾಚಿ ಕುಳಿತುಕೊಳ್ಳಿ. ನಿಧಾನವಾಗಿ ಉಸಿರಾಡುತ್ತಾ ಎರಡೂ ಕಾಲುಗಳ ಬೆರಳುಗಳನ್ನು ಒಟ್ಟಿಗೆ ಇರಿಸಿ. ಈಗ ನಿಧಾನವಾಗಿ ಉಸಿರಾಡುತ್ತಾ ಎರಡೂ ಕಾಲ್ಬೆರಳುಗಳನ್ನು ಪುಸ್ತಕದಂತೆ ಮುಚ್ಚಿ. ನಂತರ ಎರಡೂ ಕಾಲಿನ ಬೆರಳು ತೆರೆಯಿರಿ. ಪ್ರತಿದಿನ ಐದು ಬಾರಿ ಮಾಡಿ.
ಸ್ಟ್ಯಾಂಡಿಂಗ್ ಫೂಟ್ ಸ್ಟ್ರೆಚಿಂಗ್
ಹಾಸಿಗೆಯ ಮೇಲೆ ನೇರವಾಗಿ ನಿಂತುಕೊಳ್ಳಿ. ಎರಡೂ ಕಾಲುಗಳನ್ನು ಅಗಲಿಸಿ ಸ್ವಲ್ಪ ಅಂತರವಿರುವಂತೆ ನೋಡಿಕೊಳ್ಳಿ. ನಿಧಾನವಾಗಿ ಉಸಿರಾಡುತ್ತಾ ಈಗ ಹಿಮ್ಮಡಿಯನ್ನು ಎತ್ತಿರಿ.
ಇದನ್ನೂ ಓದಿ: ಕ್ಯಾನ್ಸರ್ ಬರದಂತೆ ತಡೆಯಲು ಈ ಆಹಾರಗಳನ್ನು ಸೇವಿಸೋದು ಬೆಸ್ಟ್
ಕಾಲಿನ ತುದಿ ಕಾಲ್ಬೆರಳುಗಳ ಮೇಲೆ ಸಂಪೂರ್ಣ ಭಾರ ಹಾಕಿ ನಿಂತುಕೊಳ್ಳಿ. ಒಂದು ನಿಮಿಷ ಇದೇ ಭಂಗಿಯಲ್ಲಿರಲು ಪ್ರಯತ್ನಿಸಿ. ನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಕೆಳಗಿರಿಸಿ. ಇದನ್ನು ಐದು ಬಾರಿ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ