• Home
  • »
  • News
  • »
  • lifestyle
  • »
  • Cancer Treatment: ಮೂಳೆ ಕ್ಯಾನ್ಸರ್‌ಗೆ ಈ ಹೊಸ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಂತೆ, ಅಧ್ಯಯನದಲ್ಲಿ ಬಹಿರಂಗ

Cancer Treatment: ಮೂಳೆ ಕ್ಯಾನ್ಸರ್‌ಗೆ ಈ ಹೊಸ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಂತೆ, ಅಧ್ಯಯನದಲ್ಲಿ ಬಹಿರಂಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Flash Radiation Therapy: ಸಾಂಪ್ರದಾಯಿಕವಾಗಿ ನಡೆಸುವ ವಿಕಿರಣ ಚಿಕಿತ್ಸೆಗಳಿಗೆ ಹೋಲಿಸಿದಾಗ ಅದರಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಫ್ಲ್ಯಾಶ್ ರೇಡಿಯೋಥೆರಪಿಗಿದೆ

  • Share this:

ಸದ್ಯ ನಡೆಸಲಾಗಿರುವ ಅಧ್ಯಯನವೊಂದರ (Study) ಪ್ರಕಾರ, ಮೂಳೆ ಕ್ಯಾನ್ಸರ್ (Bone Cancer)  ಹೊಂದಿರುವ ರೋಗಿಗಳ ಮೇಲೆ ವಿಕಿರಣವನ್ನುಂಟು ಮಾಡುವ ಫ್ಲ್ಯಾಶ್ ವಿಕಿರಣ ಚಿಕಿತ್ಸೆಯು (Flash Radiation Therapy) ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ಸಮರ್ಥನೀಯ ಚಿಕಿತ್ಸೆ ಎಂದೆನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಯೋಗ ಒಂದನ್ನು ಮೊದಲು ಪ್ರಾಣಿಗಳ ಮೇಲೆ ನಡೆಸಲಾಗಿದ್ದು ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ಸಾಬೀತುಪಡಿಸಲಾಗಿದೆ. ಅಮೇರಿಕನ್ ಸೊಸೈಟಿ ಫಾರ್ ರೇಡಿಯೇಷನ್ ಆಂಕೊಲಾಜಿ (ASTRO) ನ ವಾರ್ಷಿಕ ಸಭೆಯಲ್ಲಿ, FAST-01 ಪ್ರಯೋಗದ (NCT04592887) ಫಲಿತಾಂಶಗಳನ್ನು ಚರ್ಚಿಸಲಾಗುತ್ತದೆ ಎಂದು ವರದಿ ತಿಳಿಸಿದೆ.


ನೋವು ಕಡಿಮೆ ಮಾಡುವ ಫ್ಲ್ಯಾಶ್ ರೇಡಿಯೋಥೆರಪಿ


ಪ್ರೋಟಾನ್‌ಗಳೊಂದಿಗಿನ ಫ್ಲ್ಯಾಶ್ ರೇಡಿಯೊಥೆರಪಿಯು ನೋವನ್ನು ಕಡಿಮೆ ಮಾಡಲು ಪ್ರಾಯೋಗಿಕ ವಿಧಾನವಾಗಿದೆ ಎಂದು ತೋರಿಸಿದೆ ಎಂಬುದಾಗಿ ಅಧ್ಯಯನದ ಪ್ರಮುಖ ಲೇಖಕ ಮತ್ತು ಸಿನ್ಸಿನಾಟಿ ಕ್ಯಾನ್ಸರ್ ಸೆಂಟರ್‌ನಲ್ಲಿ ಕ್ಲಿನಿಕಲ್ ವಿಕಿರಣ ಆಂಕೊಲಾಜಿಯ ಸಹಾಯಕ ಪ್ರಾಧ್ಯಾಪಕರಾದ ಎಮಿಲಿ ಸಿ ಡಾಗರ್ಟಿ ತಿಳಿಸಿದ್ದಾರೆ.


ಸಾಂಪ್ರದಾಯಿಕವಾಗಿ ನಡೆಸುವ ವಿಕಿರಣ ಚಿಕಿತ್ಸೆಗಳಿಗೆ ಹೋಲಿಸಿದಾಗ ಅದರಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಫ್ಲ್ಯಾಶ್ ರೇಡಿಯೋಥೆರಪಿಗಿದೆ ಎಂದು ಅವರು ತಿಳಿಸಿದ್ದಾರೆ.


ಚಿಕಿತ್ಸೆಯನ್ನು ಹೇಗೆ ಕೈಗೊಳ್ಳಲಾಗುತ್ತದೆ?


ಫ್ಲ್ಯಾಶ್ ರೇಡಿಯೋಥೆರಪಿಯು 300 ಪಟ್ಟು ಹೆಚ್ಚು ಡೋಸ್ ದರಗಳಲ್ಲಿ ವಿಕಿರಣವನ್ನು ಉಂಟುಮಾಡುತ್ತದೆ. ಇದನ್ನು ಫ್ಲ್ಯಾಶ್ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಗೆಡ್ಡೆ ಇರುವ ಸ್ಥಳದಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಸಮಯದಲ್ಲಿ ಗೆಡ್ಡೆಯ ಸುತ್ತಲಿನ ಆರೋಗ್ಯಕಾರಿ ಅಂಶಗಳ ಮೇಲೆ ಬೀರುವ ಹಾನಿಯನ್ನು ಕಡಿಮೆಮಾಡುತ್ತದೆ ಎಂಬುದು ಎಮಿಲಿಯವರ ಅಭಿಪ್ರಾಯವಾಗಿದೆ.


ಈ ಚಿಕಿತ್ಸೆಯನ್ನು ಅಲ್ಟ್ರಾ-ಹೈ ಡೋಸ್ ದರಗಳಲ್ಲಿ ನೀಡಲಾಗುವುದರಿಂದ ಇದು ಅಂಗಾಂಶ ಗಾಯವನ್ನು ಕಡಿಮೆ ಪ್ರಮಾಣದಲ್ಲಿ ಉಂಟುಮಾಡುತ್ತದೆ. ಇದರಿಂದ ಅಡ್ಡಪರಿಣಾಮಗಳಿಲ್ಲದೆಯೇ ರೋಗನಿರೋಧಕ ಗೆಡ್ಡೆಗಳನ್ನು ಹೊಂದಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕಾರಣವಾಗಬಹುದು ಎಂದು ಪ್ರಯೋಗದ ಪ್ರಮುಖ ತನಿಖಾಧಿಕಾರಿ ಜಾನ್ ಬ್ರೆನೆಮನ್ ತಿಳಿಸಿದ್ದಾರೆ.


ಇದನ್ನೂ ಓದಿ: ಮಾನವನ ಮೆದುಳಿನಲ್ಲಿರುವ ಈ ಒಂದು ಕೋಶ ಸಮಯದ ಹರಿವನ್ನು ಎನ್ಕೋಡ್ ಮಾಡುತ್ತಂತೆ


ಈ ಚಿಕಿತ್ಸೆಯಲ್ಲಿ ಎಲೆಕ್ಟ್ರಾನ್ ಕಿರಣಗಳು ಅಂಗಾಂಶವನ್ನು ತುಂಬಾ ಆಳವಾಗಿ ಪ್ರವೇಶಿಸುವುದಿಲ್ಲವಾದ್ದರಿಂದ ಇವುಗಳನ್ನು ರೋಗದ ಆರಂಭ ಹಂತದಲ್ಲಿ ಪ್ರಯೋಗಿಸಬಹುದಾಗಿದೆ ಎಂಬುದು ಜಾನ್ ಅವರ ಹೇಳಿಕೆಯಾಗಿದೆ.


ಅಧ್ಯಯನದ ಫಲಿತಾಂಶಗಳೇನು?


ಈ ಅಧ್ಯಯನದಲ್ಲಿ 27 ರಿಂದ 81 ವರ್ಷ ವಯಸ್ಸಿನ ನೋವಿನ ಮೂಳೆ ಮೆಟಾಸ್ಟೇಸ್‌ಗಳನ್ನು ಹೊಂದಿರುವ ಪ್ರಯೋಗಾರ್ಥಿಗಳು ಅಲ್ಟ್ರಾ ಹೈ ಡೋಸ್ ಇರುವ ವಿಕಿರಣ ಚಿಕಿತ್ಸೆಗೆ ಒಳಗಾದರು. ರೋಗಿಯ ತೋಳು ಹಾಗೂ ಕಾಲುಗಳಲ್ಲಿದ್ದ 12 ಮೆಟಾಸ್ಪೇಸ್ ಕಲೆಗಳಿಗೆ ಚಿಕಿತ್ಸೆಯನ್ನು ನೀಡಲಾಯಿತು.


ಚಿಕಿತ್ಸೆಯ ದಿನದಂದು 15 ದಿನಗಳ ನಂತರ ಹಾಗೂ ಒಂದೆರಡು ತಿಂಗಳುಗಳ ನಂತರ ನೋವು, ನೋವು ನಿವಾರಕ ಹಾಗೂ ಇನ್ನಿತರ ಅಂಶಗಳನ್ನು ದಾಖಲಿಸಲಾಗಿದೆ. 13 ತಿಂಗಳವರೆಗೆ ಸಂಶೋಧಕರು ಇದೇ ವಿಧಾನದಲ್ಲಿ ಅಧ್ಯಯನವನ್ನು ಮೇಲ್ವಿಚಾರಣೆ ಮಾಡಿದರು.


ಚಿಕಿತ್ಸೆಯು ರೋಗಿಗಳ ಮೇಲೆ ಉಂಟುಮಾಡಿದ ಪರಿಣಾಮಗಳೇನು?


ಫ್ಲ್ಯಾಶ್ ವಿಕಿರಣ ಚಿಕಿಯ್ಸೆಯೊಂದಿಗೆ ಅದೇ ಪ್ರಮಾಣದಲ್ಲಿ ವಿಕಿರಣ ಚಿಕಿತ್ಸೆಯನ್ನು ಪಡೆಯುವ ರೋಗಿಗಳನ್ನು ಕೂಡ ಪ್ರಯೋಗದ ಸಮಯದಲ್ಲಿ ಆಯ್ಕೆಮಾಡಿದ್ದಾರೆ. ಫ್ಲ್ಯಾಶ್ ಡೋಸ್ ವಿಕಿರಣ ದರದೊಂದಿಗೆ ಅದೇ ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ಪ್ರಯೋಗವನ್ನು ನಡೆಸಲಾಗಿದ್ದು, ರೋಗಿಗೆ ಈ ಅನುಭವವು ಇತರ ವಿಕಿರಣ ಚಿಕಿತ್ಸೆಯನ್ನು ಪಡೆಯುವಂತೆಯೇ ಇರುತ್ತದೆ ಆದರೆ ಇದು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದು ಡಾಗರ್ಟ್ ಅವರ ಅಭಿಪ್ರಾಯವಾಗಿದೆ.


ಚಿಕಿತ್ಸೆಯಿಂದ ಉಂಟಾಗುವ ಅಡ್ಡಪರಿಣಾಮಗಳು ತುಂಬಾ ಕಡಿಮೆ ಪ್ರಭಾವಕಾರಿಯಾಗಿದೆ ಎಂಬುದು ಡಾಗರ್ಟ್ ಅವರ ಅನಿಸಿಕೆಯಾಗಿದೆ. ಒಬ್ಬ ರೋಗಿಗೆ ವಿಕಿರಣ ಚಿಕಿತ್ಸೆಯ ನಂತರ ತ್ವಚೆಯ ಬಣ್ಣ ಕಪ್ಪಾಗಿದೆ, ಇನ್ನೊಬ್ಬರು ಲಘು ಊತದ ಅನುಭವವನ್ನು ಹೊಂದಿದ್ದಾರೆ. ಇನ್ನೊಬ್ಬರಿಗೆ ಚರ್ಮದಲ್ಲಿ ಸಣ್ಣ ತುರಿಕೆ ಕಂಡುಬಂದಿದ್ದು ಇನ್ನೊಬ್ಬರಿಗೆ ಚರ್ಮದ ಬಣ್ಣವು ಕೆಂಪಾಗಿ ಪರಿವರ್ತನೆಯಾಗಿದ್ದು ಒಬ್ಬರು ಮಾತ್ರವೇ ಸ್ವಲ್ಪ ನೋವು ಅನುಭವಿಸಿದ್ದರು ಎಂದು ಡಾಗರ್ಟ್ ತಿಳಿಸಿದ್ದಾರೆ.


ಇದನ್ನೂ ಓದಿ: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ


ಫ್ಲ್ಯಾಶ್ ಪರಿಣಾಮದ ಆಧಾರವಾಗಿರುವ ಜೈವಿಕ ತತ್ವಗಳನ್ನು ಗುರುತಿಸಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂಬುದು ಡಾಗರ್ಟಿ ಅಭಿಪ್ರಾಯವಾಗಿದ್ದು, ಸಾಂಪ್ರದಾಯಿಕ ವಿಕಿರಣಕ್ಕಿಂತ, ಫ್ಲ್ಯಾಶ್ ಆರ್‌ಟಿಯು ಕಡಿಮೆ ಪ್ರತಿಕೂಲ ಪರಿಣಾಮಗಳನ್ನು ಹೊಂದಿರುವ ಕ್ಯಾನ್ಸರ್‌ಗಳನ್ನು ಏಕೆ ನಿವಾರಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ.

Published by:Sandhya M
First published: