• Home
 • »
 • News
 • »
 • lifestyle
 • »
 • ರಾತ್ರಿ ಉಳಿದ ಅನ್ನದಿಂದ ಫಟಾಫಟ್ ತಯಾರಾಗುತ್ತೆ 5 ರುಚಿಕರ ಖಾದ್ಯಗಳು

ರಾತ್ರಿ ಉಳಿದ ಅನ್ನದಿಂದ ಫಟಾಫಟ್ ತಯಾರಾಗುತ್ತೆ 5 ರುಚಿಕರ ಖಾದ್ಯಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮನೆಯಲ್ಲಿ ಉಳಿದಿರುವ ಅನ್ನದಿಂದ ರುಚಿ ರುಚಿಯಾದ ಉಪಾಹಾರ ಮತ್ತು ಸಂಜೆಯ ತಿನಿಸನ್ನು ಸಿದ್ಧ ಮಾಡುವ ಐಡಿಯಾವನ್ನು ನಾವು ನಿಮಗೆ ನೀಡುತ್ತೇವೆ.

 • Share this:

  ಪ್ರತಿದಿನ ಬ್ರೇಕ್​ಫಾಸ್ಟ್​ಗೆ ಏನ್​ ಮಾಡೋದು? ಸಂಜೆಯ ಸ್ನ್ಯಾಕ್ಸ್​​ಗೆ ಯಾವ ರೆಸಿಪಿ ತಯಾರಿಸೋದು? ಹೀಗೆ ಅನೇಕ ಪ್ರಶ್ನೆಗಳು ಮನೆಯ ಯಜಮಾನಿಯನ್ನು ಕಾಡುವುದು ಸರ್ವೇ ಸಾಮಾನ್ಯ. ಇನ್ನೂ ಕೆಲವು ಬಾರಿ ಮನೆಯಲ್ಲಿ ಅನ್ನ ಸ್ವಲ್ಪ ಹೆಚ್ಚಾಗಿಯೇ ಉಳಿದುಬಿಡುತ್ತದೆ. ಆ ಸಂದರ್ಭದಲ್ಲಿ ಏನು ಮಾಡುವುದು ತೋಚುವುದೇ ಇಲ್ಲ. ಇಂತಹ ಸಂದರ್ಭಗಳು ನಿಮಗೂ ಎದುರಾಗಿದ್ರೆ ಚಿಂತೆ ಬಿಡಿ. ಇನ್ನೂ ಮುಂದೆ ಉಳಿದುಕೊಂಡಿರುವ ಅನ್ನದಿಂದ ರುಚಿ ರುಚಿಯಾದ ಉಪಾಹಾರ ಮತ್ತು ಸಂಜೆಯ ತಿನಿಸನ್ನು ಸಿದ್ಧ ಮಾಡುವ ಐಡಿಯಾವನ್ನು ನಾವು ನಿಮಗೆ ನೀಡುತ್ತೇವೆ.


  ಬಹುತೇಕರಿಗೆ ವೈಯಕ್ತಿಕ ಮತ್ತು ವೃತ್ತಿ ಜೀವನದ ಹೊಂದಾಣಿಕೆಗೆ ಸಮಯದ ಕೊರತೆ ಬಹಳ ಮುಖ್ಯವಾಗಿ ಕಾಡುತ್ತದೆ. ಕೆಲಸ ಮುಗಿಸಿ ಮನೆಗೆ ಹೋಗಿ ಬಿಸಿ ಬಿಸಿಯಾದ ತಿನಿಸು ಸವಿಯುವ ಕನಸ್ಸು ಕಷ್ಟಸಾಧ್ಯವೇ ಸರಿ. ಹಾಗಂತ ಬೆಳಗ್ಗೆ ಉಳಿದುಕೊಂಡಿದ್ದನ್ನೇ ತಿನ್ನುವ ಬದಲಿಗೆ ಅದನ್ನೇ ರುಚಿಕರ ತಿನಿಸಾಗಿ ಬದಲಾಯಿಸಿಕೊಳ್ಳುವುದು ಉತ್ತಮ ಯೋಚನೆ ಅಲ್ಲವೇ? ಇನ್ನೂ ದಾಲ್ ಮತ್ತು ಅನ್ನಕ್ಕೆ ಅಂಟಿಕೊಳ್ಳುವ ಬದಲಿಗೆ ಹೊಸ ರುಚಿ ಆರಂಭಿಸಿ. ಉಳಿದುಕೊಂಡಿರುವ ಅನ್ನ ಮತ್ತು ಸ್ವಲ್ಪ ಮಸಾಲೆ ಸಾಮಗ್ರಿಗಳಿದ್ದರೇ ಜಾಫ್ರಾನಿ ಪುಲಾವ್​ನಿಂದ ರೆಸ್ಟೋರೆಂಟ್​ ಸ್ಟೈಲ್​ ಮೊಸರನ್ನದವರೆಗೂ ತಯಾರಿಸಬಹುದು.


  ಸಾಂದರ್ಭಿಕ ಚಿತ್ರ


  ರಾತ್ರಿ ಉಳಿದುಕೊಂಡ ಅನ್ನದಿಂದ ಈ 5 ತಿನಿಸುಗಳನ್ನು ತಯಾರಿಸಿ


  1.ವೆಜಿಟೇಬಲ್ ಫ್ರೈಡ್​ ರೈಸ್:  ಬಹಳ ಸರಳವಾದ ಅಡುಗೆ. ಒಂದಷ್ಟು ಕತ್ತರಿಸಿಟ್ಟುಕೊಂಡ ಕ್ಯಾರೆಟ್, ಬೀನ್ಸ್, ದಪ್ಪಮೆಣಸಿನಕಾಯಿ, ಈರುಳ್ಳಿ ಜೊತೆಗೆ ಉಳಿದುಕೊಂಡಿರುವ ಅನ್ನವಿದ್ದರೇ ಫ್ರೈಡ್​ ರೈಸ್ ಸಿದ್ಧ. ಈ ಎಲ್ಲವನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಸ್ವಲ್ಪ ಸೋಯಾ ಸಾಸ್​, ವಿನೆಗರ್​ ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ತಯಾರಿಸಬಹುದು. ಚಟ್ನಿ ಅಥವಾ ಸಾಸ್​ ಸೈಡ್​ ಕಾಂಬಿನೇಷನ್​ನಲ್ಲಿರಲಿ. ಕೇವಲ 20 ನಿಮಿಷದಲ್ಲಿ ನಿಮ್ಮ ಡಿನ್ನರ್ ರೆಡಿ.


  ಇದನ್ನೂ ಓದಿ: ಬ್ರಾ ಟಾಪ್​- ಹೈ ಸ್ಲಿಟ್​ ಸ್ಕರ್ಟ್​ ತೊಟ್ಟು ಹಾಟ್​ ಲುಕ್ಸ್​ನಿಂದ ಮತ್ತೇರಿಸುತ್ತಿರುವ ಸಾರಾ ಅಲಿ ಖಾನ್​..!


  2. ಮೊಸರನ್ನ: ದಕ್ಷಿಣ ಭಾರತದ ಅಮೃತ ಅಂದರೆ ಅದು ಮೊಸರನ್ನ. ಉಳಿದುಕೊಂಡ ಅನ್ನದಿಂದ ಸುಲಭದಲ್ಲಿ ತಯಾರಿಸಬಹುದು. ಹಿಂದಿನ ಕಾಲದಲ್ಲಿ ಬೇರೆ ಊರಿಗೆ ಹೋಗಬೇಕಾದರೇ ಮೊಸರನ್ನವನ್ನೇ ಬುತ್ತಿ ಕಟ್ಟುತ್ತಿದ್ದರು. ಇದು ಕೆಡದೇ ರುಚಿಕರವಾಗಿ ಇರುತ್ತಿತ್ತು ಎನ್ನುವುದು ಹಿರಿಯರ ಅನುಭವ. ಸಾಸಿವೆ, ಕರಿಬೇವು ಮತ್ತು ಉಳಿದು ಕೊಂಡಿರುವ ಅನ್ನವನ್ನು ಒಗ್ಗರಣೆ ಮಾಡಿಕೊಂಡರೆ ರುಚಿಕರ ತಿನಿಸು ರೆಡಿ. ಮೊಸರು ಮತ್ತು ಕರಿಬೇವು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಒಮ್ಮೆ ಪ್ರಯತ್ನಿಸಿ.


  3. ವಘೇರೇಲಾ ಚಾವಲ್: ಫಟಾಫಟ್​ ಅಂತ ತಯಾರಿಸಬಹುದಾದದ ಗುಜಾರಾತಿ ತಿನಿಸು ಇದು. ರಾಯತ ಇದಕ್ಕೆ ಬೆಸ್ಟ್​​ ಕಾಂಬಿನೇಷನ್​​. ಎಣ್ಣೆ ಬಿಸಿ ಮಾಡಿ, ಈರುಳ್ಳಿ ಫ್ರೈ ಮಾಡಿಕೊಳ್ಳಿ. ನಂತರ ಎಣ್ಣೆಯಿಂದ ಈರುಳ್ಳಿ ತೆಗೆದುಕೊಂಡು ಪಕ್ಕಕ್ಕಿಡಿ. ಈಗ ಎಣ್ಣೆಗೆ ಸಕ್ಕರೆ ಹಾಕಿ ಪಾಕ ತೆಗೆದುಕೊಳ್ಳಬೇಕು. ತುರಿದ ಈರುಳ್ಳಿ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಈ ಮಿಶ್ರಣವನ್ನು ಅನ್ನದೊಟ್ಟಿಗೆ ಬೆರೆಸಿಕೊಂಡರೆ  ಪಲಾವ್​ ರೆಡಿ. ಇದನ್ನು ಉಳಿದ ಅನ್ನದ ಜೊತೆಗೆ ಇಲ್ಲವೇ ಅಕ್ಕಿಯೊಟ್ಟಿಗೆ ಬೇಯಿಸಿಯೂ ತಯಾರಿಸಬಹುದು.


  4. ಬರ್ನ್ಟ್ ಗಾರ್ಲಿಕ್ ಮಶ್ರೂಮ್ ಫ್ರೈಡ್​ ರೈಸ್: ರೆಸ್ಟೋರೆಂಟ್​ನಲ್ಲಿ ಲಭ್ಯವಿರುವ ಈ ಖಾದ್ಯವನ್ನು ನಿಮ್ಮ ಮನೆಯಲ್ಲೇ ತಯಾರಿಸಬಹುದು. ಉಳಿದುಕೊಂಡ ಅನ್ನ , ಕೆಲವೇ ಸಾಮಗ್ರಿಯಿಂದ ರುಚಿಕರ ತಿನಿಸು ರೆಡಿಯಾಗುತ್ತದೆ. ಉಳಿದುಕೊಂಡ ಅನ್ನ, ಮಶ್ರೂಮ್, ಎಣ್ಣೆ, ಎಳ್ಳೆಣ್ಣೆ, ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್​​, ಫ್ರೆಂಚ್ ಬೀನ್ಸ್ , ಕ್ಯಾರೆಟ್, ಕ್ಯಾಪ್ಸಿಕಂ , ಕರಿಮೆಣಸು, ಸೋಯಾ ಸಾಸ್, ವಿನೆಗರ್. ಇಷ್ಟು ಸಾಮಾಗ್ರಿಗಳನ್ನು ಫ್ರೈ ಮಾಡಿಕೊಂಡರೆ ರೆಸಿಪಿ ರೆಡಿ.


  ಇದನ್ನೂ ಓದಿ: BBK8: ಬಿಗ್ ಬಾಸ್​ ಕೊಟ್ಟ ಕೆಲಸ ಮಾಡಿ ಯಾರಿಗೂ ಸಿಗದ ಉಡುಗೊರೆ ಪಡೆದ ಪ್ರಶಾಂತ್ ಸಂಬರಗಿ..!


  5. ಜಾಫ್ರಾನಿ ಪುಲಾವ್:  ಟಾಪ್​ 5 ನೇ ರೆಸಿಪಿ ಅಂತೂ ನಿಮಗೆ ಅದ್ಭುತ ಅನ್ನಿಸುತ್ತಿಲ್ಲವೇ? ಕ್ರೀಮ್​ಭರಿತ ಜಾಫ್ರಾನಿ ಪುಲಾವ್​​ ಅಂತೂ ನೋಡಲು ಮತ್ತು ತಿನ್ನಲು ಪ್ರಿಯವಾಗುತ್ತದೆ. ನಟ್ಸ್​, ಕೇಸರಿ ಮತ್ತು ಸಂಪೂರ್ಣ ಪರಿಮಳ ಭರಿತ ಈ ಸಿಹಿ ಪುಲಾವ್​ ತುತ್ತು ತುತ್ತಿಗೂ ನಿಮ್ಮ ಮನಸ್ಸನ್ನು ತಣಿಸುತ್ತದೆ.  ತುಪ್ಪ ಬಿಸಿ ಮಾಡಿಕೊಂಡು ಒಣ ಹಣ್ಣುಗಳನ್ನು ಕರಿದುಕೊಳ್ಳಿ. ಇದಕ್ಕೆ ಅನ್ನವನ್ನು ಸೇರಿಸಿಕೊಳ್ಳಬೇಕು. ಇದಕ್ಕೆ ಬೆಲ್ಲವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಬಳಿಕ ಬಿಸಿ ಮಾಡಿಕೊಂಡ ಕೇಸರಿ ಬೆರೆಸಿದ ಹಾಲನ್ನು ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಸಣ್ಣ ಕುದಿ ಬರಿಸಿಕೊಂಡು ತುಪ್ಪ ಅಥವಾ ಬೆಣ್ಣೆಯಯನ್ನು ಕಡೆಯಲ್ಲಿ ಹಾಕಿ ಸವಿಯಬಹುದು.

  Published by:Anitha E
  First published: