• Home
  • »
  • News
  • »
  • lifestyle
  • »
  • ಊಟ ಮಾಡಿದ ನಂತರ ಈ ಕೆಲಸಗಳನ್ನು ಮಾಡಬೇಡಿ

ಊಟ ಮಾಡಿದ ನಂತರ ಈ ಕೆಲಸಗಳನ್ನು ಮಾಡಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರು ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ, ತಕ್ಷಣ ಸ್ನಾನಕ್ಕೆ ಹೋಗುತ್ತಾರೆ. ಹೀಗೆ ಮಾಡುವುದರಿಂದ ದೇಹದ ಉಷ್ಣತೆ ವೇಗವಾಗಿ ಇಳಿಯುತ್ತದೆ. ಊಟವಾದ ತಕ್ಷಣ ಎಂದಿಗೂ ಸ್ನಾನಕ್ಕೆ ಹೋಗಬೇಡಿ.

  • Share this:

    ಕೇವಲ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹ ಸರಿಯಾದ ಪೋಷಣೆ ಪಡೆಯುತ್ತದೆ ಎಂದು ನೀವು ಭಾವಿಸಿದ್ದೀರಾ.. ಆದ್ರೆ ಇದು ತಪ್ಪು, ಆಹಾರ ಸೇವಿಸುವುದು ಪೌಷ್ಠಿಕಾಂಶದ ಒಂದು ಸ್ಟೆಪ್ ಮಾತ್ರ.  ಆಹಾರ ಸೇವಿಸಿದ ನಂತರ ಈ ಕೆಲಸಗಳನ್ನು ಮಾಡಕೂಡದು ಎಂದು ಹೇಳಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದ ಈ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ.


    ಆಹಾರ ಸೇವಿಸಿದ ತಕ್ಷಣ ಧೂಮಪಾನ


    ಊಟವಾದ ಕೂಡಲೇ ಸಿಗರೇಟ್ ಸೇದಬಾರದು. ಕೆಲವರು ಊಟವಾದ ಮೇಲೆ ಧೂಮಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಸಿಗರೇಟು ಸೇದುವುದರಿಂದ ಕಾಯಿಲೆಗಳು ಸುಮಾರು 10 ಪಟ್ಟು ಹೆಚ್ಚುವ ಸಾಧ್ಯತೆ ಹೆಚ್ಚು. ಅಲ್ಲದೇ ಇದು ಶ್ವಾಸಕೋಶದ ಕಾಯಿಲೆಗೆ ಕಾರಣವಾಗಬಹುದು.


    ಸಿಗರೇಟ್ ಸೇದುವಾಗ ಅದರಿಂದ ಬಿಡುಗಡೆಯಾಗುವ ನಿಕೋಟಿನ್ ದೇಹದ ರಕ್ತದಲ್ಲಿ ಕಂಡು ಬರುತ್ತದೆ. ನಿಕೋಟಿನ್ ನಮ್ಮ ದೇಹದ ರಕ್ತದಿಂದ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕಾರಿ ಪ್ರಕ್ರಿಯೆ ಎಂದು ಹೇಳಬಹುದು. ಆದ್ದರಿಂದ ಧೂಮಪಾನವನ್ನು ಊಟವಾದ ನಂತರ ಅಂದರೆ 30 ನಿಮಿಷದ ಬಳಿಕ ಮಾಡಬೇಕು .


    ಆಹಾರ ಸೇವಿಸಿದ ತಕ್ಷಣ ಮಲಗಬಾರದು


    ಆಹಾರ ಸೇವಿಸಿದ ತಕ್ಷಣ ಕೆಲವರು ಕೂಡಲೇ ಮಲಗುವ ಅಭ್ಯಾಸ ಹೊಂದಿರುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಹದಲ್ಲಿ ಅಜೀರ್ಣ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಇದರಿಂದ ಕಿರಿಕಿರಿ, ಆ್ಯಸಿಡಿಟಿ ಮತ್ತು ಅಜೀರ್ಣ , ಹುಳಿ ಪಟ್ಟಿ ಗಳು, ಕರುಳಿನಲ್ಲಿರುವ ದೌರ್ಬಲ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಹೇಳಬಹುದು.


    ಊಟವಾದ ನಂತರ ವಾಕ್ ಮಾಡಬಾರದು


    ಆಹಾರ ಸೇವಿಸಿದ ಬಳಿಕ ನಡೆಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಕೆಲವು ಜನರು ಊಟವಾದ ಮೇಲೆ ವಾಕ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆಹಾರ ಜೀರ್ಣಿಸಿಕೊಳ್ಳಲು ಈ ರೀತಿ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ರಕ್ತದ ಹರಿವು ಜೀರ್ಣಾಂಗ ವ್ಯವಸ್ಥೆಯಲಿಲ್ಲ. ಆದರೆ ಕೈ ಹಾಗೂ ಕಾಲುಗಳಲಿರುತ್ತದೆ. ಇದರಿದಂ ಜೀರ್ಣಕ್ರಿಯೆ ಪ್ರಕ್ರಿಯೆ ವೇಗವಾಗುವ ಬದಲು ನಿಧಾನವಾಗುತ್ತದೆ. ಊಟವಾದ 30 ನಿಮಿಷದ ನಂತರ ವಾಕ್ ಮಾಡುವುದು ಉತ್ತಮ.


    ಊಟವಾದ ಮೇಲೆ ಕಾಫಿ, ಚಹಾ ಸೇವಿಸಬೇಡಿ


    ಚಹಾ ಹಾಗೂ ಕಾಫಿಯಲ್ಲಿ ಎರಡರಲ್ಲೂ ಹೆಚ್ಚಿನ ಕೆಫೀನ್ ಇರುತ್ತದೆ. ಊಟವಾದ ತಕ್ಷಣ ಕಾಫಿ, ಅಥವಾ ಟೀ ಸೇವಿಸುವುದರಿಂದ ಆ್ಯಸಿಡ್ ರಿಫ್ಲೆಕ್ಸ್ ಹೈಪರ್ ಆ್ಯಸಿಡಿಟಿ ಮತ್ತು ಚರ್ಮದ ಕಾಯಿಲೆಗಳು ಉಂಟಾಗಬಹುದು. ಆದ್ದರಿಂದ ಊಟವಾದ ಮೇಲೆ ಚಹಾ ಕುಡಿಯಬೇಡಿ.


    ಸ್ನಾನ ಮಾಡಲು ಹೋಗಬೇಡಿ


    ಕೆಲವರು ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ, ತಕ್ಷಣ ಸ್ನಾನಕ್ಕೆ ಹೋಗುತ್ತಾರೆ. ಹೀಗೆ ಮಾಡುವುದರಿಂದ ದೇಹದ ಉಷ್ಣತೆ ವೇಗವಾಗಿ ಇಳಿಯುತ್ತದೆ. ಊಟವಾದ ತಕ್ಷಣ ಎಂದಿಗೂ ಸ್ನಾನಕ್ಕೆ ಹೋಗಬೇಡಿ. ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತದ ಹರಿವು ದೇಹದ ಇತರ ಭಾಗಗಳ ವೇಗವಾಗಿ ಪ್ರಾರಂಭವಾಗುತ್ತದೆ. ಆದ್ದರಿಂದ ಆಹಾರ ಜೀರ್ಣಿಸಿಕೊಳ್ಳುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಹಾಗೇ ಇದು ಹೊಟ್ಟೆಯ ಕಿರಿಕಿರಿ ಎದುರಿಸುವ ಸಾಧ್ಯತೆ ಹೆಚ್ಚು.


    ಊಟವಾದ ಮೇಲೆ ನೀರನ್ನು ಕುಡಿಯಬೇಡಿ


    ಆಯುರ್ವೇದದಲ್ಲಿ ಆಹಾರವನ್ನು ಸೇವಿಸಿದ ಕೂಡಲೇ ನೀರನ್ನು ಕುಡಿಯುವುದನ್ನು ವಿಷವೆಂದು ಪರಿಗಣಿಸಲಾಗಿದೆ. ಹೀಗಾಗಿ ಆಹಾರವನ್ನು ಸೇವಿಸಿದ ಕೂಡಲೇ ನೀರು ಕುಡಿಯುವುದರಿಂದ ಆಹಾರದ ಜೀರ್ಣಕ್ರಿಯೆ ಪ್ರಕ್ರಿಯೆ ಸಂಪೂರ್ಣವಾಗಿ ನಿಲ್ಲುತ್ತದೆ. ಆಹಾರದಲ್ಲಿರುವ ಸಂಪೂರ್ಣ ಪೋಷಕಾಂಶಗಳು ನಮ್ಮಿಂದ ಪಡೆಯಲು ಸಾಧ್ಯವಾಗುವುದಿಲ್ಲ.


    ಇದನ್ನೂ ಓದಿ : ಕೊರೋನಾ ನಡುವೆ ಅದ್ದೂರಿ ಮದುವೆ : ಹೆಲಿಕಾಪ್ಟರ್​ನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವರ


    ನೀವು ಊಟವಾದ ಮೇಲೆ ನೀರು ಕುಡಿಯಲು ಬಯಸಿದರೆ, 1 ಲೋಟ ನೀರಿಗಿಂತ ಹೆಚ್ಚು ನೀರು ಕುಡಿಯಬಾರದು. ಇನ್ನು ಮುಖ್ಯವಾದ ವಿಷಯವೆಂದರೆ ಫ್ರೀಡ್ಜ್ ನಲ್ಲಿ ಇಟ್ಟಿರುವ ತಣ್ಣೀರನ್ನು ಎಂದಿಗೂ ಕುಡಿಯಬೇಡಿ.



    ಏಕೆಂದರೆ ಫ್ರೀಡ್ಜ್ ನಲ್ಲಿಟ್ಟ ತಣ್ಣೀರು ನಾರ್ಮಲ್ ನೀರಿಗಿಂತ 10 ಪಟ್ಟು ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.

    Published by:G Hareeshkumar
    First published: