ಅನಿಯಮಿತ ಮುಟ್ಟಿನ ಸಮಸ್ಯೆ ಇದ್ದರೆ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಬೀಟ್​ರೂಟ್​ನಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲ ಕಂಡು ಬರುತ್ತವೆ. ದೇಹದಲ್ಲಿ ನಿಜರ್ಲೀಕರಣ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಋತುಸ್ರಾವದ ಸಮಯದಲ್ಲಿ ಅನೇಕ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ ಅಥವಾ ಕಡಿಮೆ ತೂಕ ಮತ್ತು ಜಡ ಜೀವನಶೈಲಿಯಿಂದ ಅನಿಯಮಿತ ಋತುಸ್ರಾವವಾಗುತ್ತದೆ. ಇದರಿಂದಾಗಿ ದೇಹ ತೂಕ ಹೆಚ್ಚಾಗಬಹುದು. ಈ ಸಮಸ್ಯೆಯಿಂದ ಪಾರಾಗಲು ಜೀವನಶೈಲಿಯನ್ನು ಸುಧಾರಿಸುವುದು, ತೂಕ ಇಳಿಸುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಅನಿಯಮಿತ ಪಿರೆಡ್ಸ್ ಎದುರಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಇದಲ್ಲದೆ, ಅನಿಯಮಿತ ಋತುಸ್ರಾವವನ್ನು ಸರಿಪಡಿಸಲು ಕೆಲವು ಸೂಪರ್ ಆಹಾರಗಳಿವೆ. ಆ ಸೂಪರ್‌ಫುಡ್‌ಗಳು ಯಾವುವು ಎಂದು ತಿಳಿಯೋಣ.

  ವಿಟಮಿನ್ ಸಿ ಹೊಂದಿರುವ ಆಹಾರಗಳು: ವಿಟಮಿನ್-ಸಿ ಸಮೃದ್ಧವಾಗಿರುವ ಆಹಾರವು ಋತುಸ್ರಾವವನ್ನು ಪ್ರಚೋದಿಸಲು ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ, ಪಪ್ಪಾಯಿ ಕ್ಯಾರೋಟಿನ್ ಹೊಂದಿರುವ ಹಣ್ಣು, ಇದು ಈಸ್ಟ್ರೊಜೆನ್ ಹಾರ್ಮೋನ್ ಅನ್ನು ಉತ್ತೇಜಿಸುತ್ತದೆ. ಅನಾನಸ್ ಅನ್ನು ವಿಟಮಿನ್ ಸಿ ಯ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಿಯಮಿತ ಪಿರೆಡ್ಸ್​ ಸಮಸ್ಯೆಗೆ ನಿಂಬೆಹಣ್ಣು, ಕಿವಿಸ್ ಮತ್ತು ಕಿತ್ತಳೆ ಸಹ ಒಳ್ಳೆಯದು.

  ಅರಿಶಿನ: ಅರಿಶಿನವು ಗರ್ಭಾಶಯದಲ್ಲಿನ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ದೇಹದ ಮೇಲೆ ಆಂಟಿಸ್ಪಾಸ್ಮೊಡಿಕ್ ಪರಿಣಾಮವಿದೆ. ಅದು ಗರ್ಭಾಶಯವನ್ನು ವಿಸ್ತರಿಸಲು ಮತ್ತು ಋತುಸ್ರಾವವನ್ನು ಪ್ರೇರೇಪಿಸುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲು ಅರಿಶಿನ ಹಾಲನ್ನು ಕುಡಿಯಬಹುದು.

  ಬೀಟ್​ರೂಟ್​: ಬೀಟ್​ರೂಟ್​ನಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲ ಕಂಡು ಬರುತ್ತವೆ. ದೇಹದಲ್ಲಿ ನಿಜರ್ಲೀಕರಣ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಈ ಸಾಮಾನ್ಯ ಸಮಸ್ಯೆ ಮುಟ್ಟಿನ ಅವಧಿಯಲ್ಲಿ ಕಂಡುಬರುತ್ತದೆ. ಈ ವೇಳೆ ಬೀಟ್​ರೂಟ್​ ಆಹಾರಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ಪರಿಹಾರ ಕಾಣಬಹುದು.

  ಶುಂಠಿ: ಆಹಾರದಲ್ಲಿ ಶುಂಠಿಯನ್ನು ಸೇರಿಸುವುದರಿಂದ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಏಕೆಂದರೆ ಋತುಸ್ರಾವವನ್ನು ಪ್ರಚೋದಿಸಲು ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬಹುದು
  Published by:zahir
  First published: