ಮನೆಯಲ್ಲಿ ಯಾರಾದರೂ ಅತಿಥಿಗಳು (Guest) ಬರುವವರಿದ್ದರೆ ಅಥವಾ ಮನೆಯಲ್ಲಿ ಯಾವುದಾದರೂ ಪೂಜೆ, ಗೆಟ್-ಟು-ಗೆದರ್ ಅನ್ನು ಇಟ್ಟುಕೊಂಡಾಗ ನಾವೆಲ್ಲಾ ಎಷ್ಟು ಜೋಶ್ನಿಂದ ಬಗೆ ಬಗೆಯ ಅಡುಗೆಗಳನ್ನು (Cooking) ಮಾಡುತ್ತೇವೆ. ಆದರೆ ಕಷ್ಟದ ಕೆಲಸ ಶುರುವಾಗುವುದು ಆ ಅತಿಥಿಗಳೆಲ್ಲಾ ಮನೆಗೆ ಬಂದು ಊಟ ಮಾಡಿಕೊಂಡು ಹೋದ ಮೇಲೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆ ಅಂತ ನೀವು ಕೇಳಬಹುದು, ಏಕೆಂದರೆ, ಅಡುಗೆ ಮಾಡಿದ ಪಾತ್ರೆಗಳನ್ನೆಲ್ಲಾ (Utensils) ಸ್ವಚ್ಚವಾಗಿ ತೊಳೆದು ಇಡಬೇಕಲ್ಲ. ಪಾತ್ರೆಗಳಿಗೆ ಆಹಾರ ಪದಾರ್ಥಗಳ ಎಣ್ಣೆ ಮತ್ತು ಮಸಾಲೆ ಪದಾರ್ಥ ಅಷ್ಟಾಗಿ ಅಂಟಿಲ್ಲವೆಂದರೆ ತುಂಬಾನೇ ಸುಲಭವಾಗಿ ತೊಳೆದು ಪಕ್ಕಕ್ಕೆ ಇರಿಸಿಕೊಳ್ಳಬಹುದು.
ಆದರೆ ತುಂಬಾನೇ ಜಿಡ್ಡು ಪಾತ್ರೆಗಳಿಗೆ ಅಂಟಿಕೊಂಡಿತ್ತು ಎಂದರೆ ಅದನ್ನು ಸ್ವಚ್ಛ ಮಾಡುವುದು ಒಂದು ದೊಡ್ಡ ಸವಾಲಿನ ಕೆಲಸ ಅಂತಾನೆ ಹೇಳಬಹುದು.
ರಾಸಾಯನಿಕ ಕ್ಲೀನರ್ ಬಳಕೆ ಬೇಡ
ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ಈ ಕಲೆಗಳನ್ನು ತೊಡೆದು ಹಾಕಲು ಅಂಗಡಿಯಿಂದ ಖರೀದಿಸಿದ ರಾಸಾಯನಿಕ ಕ್ಲೀನರ್ ಗಳನ್ನು ಆಶ್ರಯಿಸಿದರೆ, ಈ ಕ್ಲೀನರ್ ಗಳು ಕೆಲವು ರೀತಿಯಲ್ಲಿ ಹಾನಿಕಾರಕವಾಗಿರುತ್ತವೆ.
ಹಾಗಾದರೆ, ನಾವು ಏನು ಮಾಡಬೇಕು? ಎಂದು ನೀವು ಕೇಳಬಹುದು. ಇನ್ನು ಮುಂದೆ ಮಾರುಕಟ್ಟೆಯಿಂದ ಫ್ಯಾನ್ಸಿ ಕ್ಲೀನರ್ ಗಳನ್ನು ಖರೀದಿಸುವ ಅಗತ್ಯವಿಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದರ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಿ ಕೊಡುತ್ತೇವೆ.
ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು 5 ಸಲಹೆಗಳು ಇಲ್ಲಿವೆ:
1.ಉಪ್ಪನ್ನು ಬಳಸಿ: ನಿಮ್ಮ ಜಿಡ್ಡಿನ ಪಾತ್ರೆಗಳನ್ನು ಬೆಚ್ಚಗಿನ ನೀರಿನಲ್ಲಿ ಉತ್ತಮ ಪ್ರಮಾಣದ ಉಪ್ಪನ್ನು ಸೇರಿಸಿ ಮತ್ತು ಅದನ್ನು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರಿಸಿ.
ಹೀಗೆ ಇಟ್ಟ ನಂತರ ಅದನ್ನು ಹೊರ ತೆಗೆದು ಎಲ್ಲಾ ಜಿಡ್ಡನ್ನು ಸ್ಕ್ರಬ್ಬರ್ ನಿಂದ ಸ್ವಚ್ಛ ಮಾಡಿ. ಕಲೆಗಳನ್ನು ತೊಡೆದು ಹಾಕಲು ನೀವು ಉಪ್ಪು ಮತ್ತು ಉಜ್ಜುವ ಆಲ್ಕೋಹಾಲ್ ಮಿಶ್ರಣವನ್ನು ಸಹ ಬಳಸಬಹುದು.
2.ಅಕ್ಕಿಯ ನೀರನ್ನು ಬಳಸಿ: ತುಂಬಾನೇ ಜಿಡ್ಡಿನ ಎಣ್ಣೆಯ ಕಲೆಗಳನ್ನು ತೆಗೆದು ಹಾಕಲು ಅಕ್ಕಿಯ ನೀರು ಅತ್ಯಂತ ಪರಿಣಾಮಕಾರಿಯಾಗಿದೆ. ನಿಮ್ಮ ಜಿಡ್ಡಿನ ಪಾತ್ರೆಗಳನ್ನು ಒಂದು ದೊಡ್ಡ ಬಟ್ಟಲು ಅಕ್ಕಿಯ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ.
ನಂತರ ಆ ಜಿಡ್ಡನ್ನು ಒರೆಸಲು ಸ್ಕ್ರಬ್ಬರ್ ಅನ್ನು ಬಳಸಿ. ನಂತರ ಪಾತ್ರೆಗಳನ್ನು ಬಿಸಿ ನೀರಿನಿಂದ ತೊಳೆಯಿರಿ ಮತ್ತು ಅವುಗಳನ್ನು ಒಣಗಿಸಿಡಿ.
3.ವೆಜಿಟೇಬಲ್ ಆಯಿಲ್ ಬಳಸಿ: ಪಾತ್ರೆಗೆ ಅಂಟಿರುವ ಎಣ್ಣೆಯ ಕಲೆಗಳನ್ನು ತೊಡೆದು ಹಾಕಲು ನಿಮ್ಮ ನಿಯಮಿತ ಅಡುಗೆ ಎಣ್ಣೆಯನ್ನು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?
ತರಕಾರಿ ಎಣ್ಣೆಯನ್ನು ನಿಂಬೆ ರಸ, ಉಪ್ಪು ಮತ್ತು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿಡ್ಡು ಹಿಡಿದ ಪಾತ್ರೆಗಳ ಮೇಲೆ ಹರಡಿ. ಸ್ವಲ್ಪ ಸಮಯದ ನಂತರ, ಅದನ್ನು ಸ್ಕ್ರಬ್ ಮಾಡಿ ಮತ್ತು ಬಿಸಿ ನೀರಿನಿಂದ ತೊಳೆಯಿರಿ.
4.ನಿಂಬೆ ರಸವನ್ನು ಬಳಸಿ: ನಿಂಬೆಹಣ್ಣು ಒಂದು ನೈಸರ್ಗಿಕ ಬ್ಲೀಚ್ ಆಗಿದ್ದು, ಇದು ಜಿಡ್ಡು ಹಿಡಿದ ಪಾತ್ರೆಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಡುಗೆ ಸೋಡಾದೊಂದಿಗೆ ಬೆರೆಸಿದಾಗ, ನಿಂಬೆ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕುವುದು ಮಾತ್ರವಲ್ಲದೆ ಪಾತ್ರೆಗಳನ್ನು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: Kitchen Vastu Tips: ನಿಮ್ಮ ಅಡುಗೆ ಮನೆಯ ವಾಸ್ತು ಹೀಗಿರಬೇಕಂತೆ
5. ತೆಂಗಿನ ಸಿಪ್ಪೆ ಮತ್ತು ವಿನೆಗರ್: ವಿನೆಗರ್, ಅಡುಗೆ ಸೋಡಾ ಮತ್ತು ವಾಷಿಂಗ್ ಸೋಪ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ದ್ರಾವಣದಲ್ಲಿ ತೆಂಗಿನ ಸಿಪ್ಪೆಯನ್ನು ನೆನೆಸಿಡಿ.
ನಂತರ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ ಮತ್ತು ನೆನೆಸಿದ ತೆಂಗಿನ ನಾರಿನಿಂದ ಚೆನ್ನಾಗಿ ಉಜ್ಜಿ. ಇದು ಹಠಮಾರಿ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ