ಈ ಐದು ಕಾರಣಗಳಿಂದ ತಲೆನೋವು ಬರುತ್ತೆ..!

Latha CG | news18
Updated:February 9, 2019, 6:55 PM IST
ಈ ಐದು ಕಾರಣಗಳಿಂದ ತಲೆನೋವು ಬರುತ್ತೆ..!
ಸಾಂದರ್ಭಿಕ ಚಿತ್ರ
  • News18
  • Last Updated: February 9, 2019, 6:55 PM IST
  • Share this:
ಕಾಲ ಬದಲಾದಂತೆ ಮನುಷ್ಯನ ಜೀವನಶೈಲಿಯೂ ಬದಲಾಗುತ್ತಿದೆ. ಜೀವನಶೈಲಿ ಬದಲಾದಂತೆ ಮನುಷ್ಯನಿಗೆ ಒತ್ತಡಗಳು ಸಹ ಹೆಚ್ಚಿವೆ. ಪ್ರತಿಯೊಬ್ಬರಿಗೂ ಅವರದೇ ಆದ ಒತ್ತಡಗಳಿರುತ್ತವೆ. ಈ ಒತ್ತಡ ಹೆಚ್ಚಾದಂತೆ ತಲೆನೋವು ಬರುವುದು ಸಾಮಾನ್ಯ. ವಿಪರೀತ ಟೆನ್ಷನ್​, ಕೆಲಸದ ಒತ್ತಡ, ಹಲವಾರು ಯೋಚನೆಗಳು ಈ ತಲೆನೋವಿಗೆ ಕಾರಣವಾಗುತ್ತವೆ.

ಒಮ್ಮೆ ಈ ತಲೆನೋವು ಬಂದರೆ ಹೋಗುವುದು ತುಂಬಾ ಕಷ್ಟ. ವಾರಗಟ್ಟಲೇ ನರಕ ಅನುಭವಿಸಬೇಕು. ತಲೆನೋವಿಗೆ ಪರಿಹಾರ ಹಡುಕುತ್ತೇವೆಯೇ ಹೊರತು ಅದಕ್ಕೆ ಕಾರಣ ಹುಡುಕುವುದಿಲ್ಲ. ಕಾರಣ ಗೊತ್ತಾದರೆ ಬರುವ ಮುನ್ನವೇ ತಡೆಯಬಹುದು ಅಲ್ಲವೇ..? ಅಷ್ಟಕ್ಕೂ ಈ ವಿಪರೀತ ತಲೆಶೂಲೆ ಬರುವುದಾದರೂ ಏಕೆ.? ಇಲ್ಲಿವೆ ಕಾರಣಗಳು.

ನಮ್ಮ ದೇಹದಲ್ಲಿ ಕೆಲವು ಜೀವಸತ್ವಗಳು, ವಿಟಮಿನ್ಸ್​ ಮತ್ತು ಪೌಷ್ಠಿಕಾಂಶಗಳ ಕೊರತೆಯಾದಾಗ ತಲೆನೋವು ಬರುತ್ತದೆ. ಹಾಗಾದರೆ ಆ ವಿಟಮಿನ್ಸ್​ ಮತ್ತು ಪ್ರೋಟೀನ್ಸ್​ ಯಾವುವು ಅಂತಾ ಗೊತ್ತಾ.?

ಇದನ್ನೂ ಓದಿ: ದಿನಕ್ಕೆ ಎಷ್ಟು ಹೊತ್ತು ಮಲಗ್ತೀರಾ?; ನಿದ್ರೆ ಕಡಿಮೆಯಾದರೆ ಏನಾಗುತ್ತೆ ಗೊತ್ತಾ... ಇಲ್ಲಿದೆ ಶಾಕಿಂಗ್​ ನ್ಯೂಸ್​!

ವಿಟಮಿನ್​ ಡಿ ಕೊರತೆ:

ಸೂರ್ಯನ ಕಿರಣಗಳಿಂದ ನಾವು ವಿಟಮಿನ್​ ಡಿ ಪಡೆಯುತ್ತೇವೆ. ಆದರೆ ಮನುಷ್ಯನ ದೇಹದಲ್ಲಿ ವಿಟಮಿನ್​ ಡಿ ಕೊರತೆಯಾದಾಗ ತಲೆನೋವು ಬರುತ್ತದೆ.  ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, 19 ರಿಂದ 70 ವರ್ಷದೊಳಗಿನ ವ್ಯಕ್ತಿಗಳು 600 ಐಯು(ಇಂಟರ್​ನ್ಯಾಷನಲ್​ ಯೂನಿಟ್ಸ್​) ವಿಟಮಿನ್​ ಡಿ ಪಡೆಯಬೇಕು. 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 800 ಐಯು ವಿಟಮಿನ್​ನ ಅವಶ್ಯಕತೆ ಇದೆ. ಸೂರ್ಯನ ಕಿರಣಗಳಿಂದ ಮಾತ್ರವಲ್ಲದೇ, ಕರಾವಳಿ ಆಹಾರ(ಮೀನು), ಹಾಲಿನ ಉತ್ಪನ್ನಗಳು, ಕಿತ್ತಳೆ ಹಣ್ಣು ಮೊದಲಾದ ಆಹಾರ ಪದಾರ್ಥಗಳಿಂದ ವಿಟಮಿನ್​ ಡಿ ಅನ್ನು ಪಡೆದುಕೊಳ್ಳಬಹುದಾಗಿದೆ.

ಮೆಗ್ನೀಷಿಯಂ ಕೊರತೆ:ತಲೆನೋವು ಬರಲು ಮೆಗ್ನೀಷಿಯಂ ಕೊರತೆಯೂ ಒಂದು ಕಾರಣವಾಗಿದೆ. ನರಗಳ ಮತ್ತು ಸ್ನಾಯುಗಳ ನಿಯಂತ್ರಣಕ್ಕೆ ಮೆಗ್ನೀಷಿಯಂ ಸಹಕಾರಿಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ. ಧಾನ್ಯಗಳು, ಹಸಿರು ಎಲೆಗಳು, ಬೀಜಗಳು, ಹಾಲು, ಮೊಸರು ಇನ್ನಿತರ ಪೌಷ್ಠಿಕಾಂಶಗಳಿಂದ ಮನುಷ್ಯನ ದೇಹಕ್ಕೆ ಮೆಗ್ನೀಷಿಯಂ ಸಿಗುತ್ತದೆ.

ನೀರಿನ ಕೊರತೆ:

ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ತಲೆನೋವು ಬರಬಹುದು. ದೇಹದಲ್ಲಿ ನೀರಿನ ಕೊರತೆಯಾದಾಗ ತಲೆನೋವು ಬರುತ್ತದೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್​ ನೀರು ಕುಡಿಯಬೇಕು.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಆನ್ಲೈನ್ ಶಾಪಿಂಗ್ ಆ್ಯಪ್​ಗಳಲ್ಲಿ ಭಾರೀ ಆಫರ್!

ವಿಟಮಿನ್​ ಬಿ2 ಕೊರತೆ:

ವಿಟಮಿನ್​ ಬಿ2 ಕೊರತೆಯಿಂದ ತಲೆನೋವು ಬರುತ್ತದೆ. ಈ ವಿಟಮಿನ್​ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಹಸಿರು ತರಕಾರಿ, ಸೊಪ್ಪು, ಹಾಲಿನ ಉತ್ಪನ್ನಗಳ ಸೇವನೆಯಿಂದ ವಿಟಮಿನ್​ ಬಿ2 ದೊರೆಯುತ್ತದೆ. ಈ ವಿಟಮಿನ್​ ನಮ್ಮ ಸ್ನಾಯುಗಳು ಮತ್ತು ನರಗಳು ಆರೋಗ್ಯವಾಗಿರುವಂತೆ ಸಹಕರಿಸುತ್ತದೆ.

ಸೋಡಿಯಂ ಕೊರತೆ:

ದೇಹದಲ್ಲಿ ಸೋಡಿಯಂ ಕೊರತೆ ಉಂಟಾದರೂ ಸಹ ತಲೆನೋವು ಬರುತ್ತದೆ. ನೀವು ಸಿಹಿ ಪದಾರ್ಥಗಳನ್ನು ಮಾತ್ರ ಸೇವಿಸಿದರೆ ಸೋಡಿಯಂ ಕೊರತೆ ಕಾಣಿಸುತ್ತದೆ. ಉಪ್ಪಿನ ಕೊರತೆಯಿಂದಾಗಿ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗುತ್ತದೆ. ಆಹಾರದಲ್ಲಿ ಉಪ್ಪಿನ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸೋಡಿಯಂ ಕೊರತೆಯನ್ನು ನಿವಾರಿಸಬಹುದು.

First published: February 9, 2019, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading