ಸ್ಮಾರ್ಟ್​ಫೋನ್ ಬಳಕೆಯಿಂದ ಜೀವಕ್ಕೆ ಅಪಾಯ; ಸಂಶೋಧನೆಯಿಂದ ಬಯಲಾಗಿದ್ದೇನು?

ಈ ಸಂಶೋಧನೆಯಲ್ಲಿ 19 ವರ್ಷದ ಮತ್ತು 20 ವರ್ಷ ವಯಸ್ಸಿನ 700 ಮಹಿಳೆಯರನ್ನು 360 ಪರುಷರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು.

news18
Updated:August 1, 2019, 9:22 PM IST
ಸ್ಮಾರ್ಟ್​ಫೋನ್ ಬಳಕೆಯಿಂದ ಜೀವಕ್ಕೆ ಅಪಾಯ; ಸಂಶೋಧನೆಯಿಂದ ಬಯಲಾಗಿದ್ದೇನು?
.
  • News18
  • Last Updated: August 1, 2019, 9:22 PM IST
  • Share this:
ಸ್ಮಾರ್ಟ್​ ಜಗತ್ತನಲ್ಲಿ ಸ್ಮಾರ್ಟ್​ಫೋನ್​ ಬಳಸದೇ ಇರುವವರ ಸಂಖ್ಯೆ ತೀರಾ ಕಡಿಮೆ. ಯುವಕರಂತೂ ಸ್ಮಾರ್ಟ್​ಫೋನ್​ಗೆ ಅವಲಂಬಿತರಾಗಿದ್ದಾರೆ. ದಿನದಲ್ಲಿ ಹೆಚ್ಚು ಹೊತ್ತು ಸ್ಮಾರ್ಟ್​ಪೋನ್​ ಬಳಕೆ ಮಾಡದಿದ್ದರೆ ಜಗತ್ತೇ ತಲೆಕೆಳಗಾದಂತೆ ಕೂರುತ್ತಾರೆ. ಅತಿಯಾದ ಸ್ಮಾರ್ಟ್​ಪೋನ್​ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾದರೂ ಇದಾವುದನ್ನೂ ಕ್ಯಾರೆ ಅನ್ನದೆ ಬಳಸುವುವವರ ಸಂಖ್ಯೆ ಮಾತ್ರ ಕ್ಷಿಣಿಸುತ್ತಿಲ್ಲ.

ದೈನಂದಿನ ವ್ಯವಹಾರಕ್ಕೆ ಸ್ಮಾರ್ಟ್​ಫೋನ್​ ಅಗತ್ಯ. ಆದರೆ ಅತಿಯಾದರೆ ಅಮೃತವು ವಿಷವೆಂಬತೆ, ಹೆಚ್ಚು ಹೊತ್ತು ಬಳಕೆ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುವುದು ಗ್ಯಾರೆಂಟಿ. ಇತ್ತೀಚಿನ ಸಂಶೋಧನಾ ವರದಿಯೊಂದರ ಪ್ರಕಾರ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್​ಫೋನ್​ ಬಳಸಿದರೆ ಬೊಜ್ಜಿನ ಅಪಾಯ ಎದುರಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ‘ನನ್ನೂರೆ ಚಂದ’; ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಚಿನ್ ಬಸ್ರೂರ್​​ರಿಂದ ವಿಶೇಷ ಹಾಡು

ಅತಿಯಾಗಿ ಸ್ಮಾರ್ಟ್​ಫೋನ್​ ಬಳಕೆ ಮಾಡುವವರಲ್ಲಿ ಶೇ.43 ರಷ್ಟು ಜನರು ಬೊಜ್ಜು ಮತ್ತು ಹೃದ್ರೋಗ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಸಂಶೋಧನೆಯ ಮೂಲಕ ತಿಳಿಸಿದ್ದಾರೆ. ಸೈಮನ್​​​ ಬೊಲಿವಾರ್​ ವಿಶ್ವವಿದ್ಯಾಲಯ ಆರೋಗ್ಯ ಮತ್ತು ವಿಜ್ನಾನ ವಿಭಾಗದ  1060 ವಿದ್ಯಾರ್ಥಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಇಂತಹದೊಂದು ಅಚ್ಚರಿಯ ಸಂಗತಿ ಸಂಶೋಧಕರ ಕೈಗೆ ಸಿಕ್ಕಿದೆ.

ಈ ಸಂಶೋಧನೆಯಲ್ಲಿ 19 ವರ್ಷದ ಮತ್ತು 20 ವರ್ಷ ವಯಸ್ಸಿನ 700 ಮಹಿಳೆಯರನ್ನು 360 ಪರುಷರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಶೇ. 36.1ರಷ್ಟು ಅಧಿಕ ತೂಕ ಮತ್ತು 42.6ರಷ್ಟು ಬೊಜ್ಜು ಹೊಂದಿರುವ ಪುರುಷರು ಹಾಗೂ ಶೇ.63.9ರಷ್ಟು ಅಧಿಕ ತೂಕ ಮತ್ತು 57.4ರಷ್ಟು ಬೊಜ್ಜು ಹೊಂದಿರುವ ಮಹಿಳೆಯರಿದ್ದಾರೆ ಎಂದು ತಿಳಿಸಿದೆ.

ದಿನದಲ್ಲಿ  ಐದಕ್ಕಿಂತ ಹೆಚ್ಚು ಸಮಯ ಸ್ಮಾರ್ಟ್​ಪೋನ್​ ಬಳಸಿದರೆ ಸ್ಥೂಲಕಾಯದ ಸಮಸ್ಯೆ ಎದರುರಾಗಬಹುದೆಂದು ತಿಳಿಸಿದ್ದಾರೆ. ಜೊತೆಗೆ ತಲೆನೋವು, ಕಣ್ಣಿನ ಸಮಸ್ಯೆ, ಹೃದಯದ ಸಮಸ್ಯೆ ಕಾಣಿಸಿಕೊಳ್ಳಬಹುದು.

First published: August 1, 2019, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading