HOME » NEWS » Lifestyle » FIVE FITNESS LESSONS YOU NEED TO LEARN FROM BOLLYWOOD ACTOR ALIA BHATT STG HG

Alia Bhat ಹೇಳುವ 5 ಫಿಟ್ನೆಸ್ ಸೂತ್ರಗಳು ನಿಮ್ಮ ಬದುಕು ಬದಲಿಸುತ್ತವೆ!

Alia Bhat: ಆಲಿಯಾ ಮಾಡುವ ಸ್ಕ್ವಾಟ್ಸ್, ಸ್ಕಿಪ್ಸ್ ವರ್ಕ್ಔಟ್‌ಗಳು ನೆಟ್ಟಿಗರ ಫಿಟ್ನೆಸ್ ಕನಸ್ಸಿಗೆ ಸ್ಫೂರ್ತಿ ತುಂಬುತ್ತಲೇ ಇರುತ್ತವೆ. ಇನ್ನೂ ಆಲಿಯಾರ ಪ್ರತಿ ಸೆಲ್ಫಿಗಳು ಸಹ ಅವರ ಅಭಿಮಾನಿಗಳಿಗೆ ಮಾದರಿಯಾಗಿವೆ.

news18-kannada
Updated:June 8, 2021, 2:41 PM IST
Alia Bhat ಹೇಳುವ 5 ಫಿಟ್ನೆಸ್ ಸೂತ್ರಗಳು ನಿಮ್ಮ ಬದುಕು ಬದಲಿಸುತ್ತವೆ!
ಆಲಿಯಾ ಭಟ್
  • Share this:
ಅಂದವಾದ ಮೈಮಾಟ.. ಸಪೂರ ಅಂಗಸೌಷ್ಠವ.. ನೋಡಿದೊಡನೆ ವಾವ್! ಎನಿಸುವ ಆಕರ್ಷಣೆಯ ಆಗರ ಬಾಲಿವುಡ್ ನಟಿ ಆಲಿಯಾ ಭಟ್. ತೂಕ ಇಳಿಸುವ ಕನಸ್ಸು ಹೊತ್ತ ಯುವ ಸಮುದಾಯಕ್ಕೆ ಆಲಿಯಾ ಅದ್ಭುತವಾದ ಸ್ಫೂರ್ತಿ ಚಿಲುಮೆ. ಬಾಲ್ಯದಿಂದಲೂ ಮುದ್ದು ಮುದ್ದಾಗಿ ಮೈಕೈ ತುಂಬಿಕೊಂಡಿದ್ದ ಆಲಿಯಾ ಭಟ್ ಸಿನಿಮಾ ಕ್ಷೇತ್ರಕ್ಕೆ ಬರುತ್ತಿದ್ದಂತೆ ಬಳುಕುವ ಬಳ್ಳಿಯಾದರು. ಆ ಮೂಲಕ ಯೂಥ್ ಐಕಾನ್ ಆಗಿ ಗುರುತಿಸಿಕೊಂಡವರು. ಅಂದಿನಿಂದ ಇಂದಿನವರೆಗೂ ಅದೇ ಫಿಟ್ನೆಸ್ ಕಾಪಾಡಿಕೊಂಡಿರುವ ಆಲಿಯಾ ಈ 5 ಸೂತ್ರಗಳನ್ನು ತಪ್ಪದೇ ಪಾಲಿಸುತ್ತಾರಂತೆ.

ಆಲಿಯಾ ಮಾಡುವ ಸ್ಕ್ವಾಟ್ಸ್, ಸ್ಕಿಪ್ಸ್ ವರ್ಕ್ಔಟ್‌ಗಳು ನೆಟ್ಟಿಗರ ಫಿಟ್ನೆಸ್ ಕನಸ್ಸಿಗೆ ಸ್ಫೂರ್ತಿ ತುಂಬುತ್ತಲೇ ಇರುತ್ತವೆ. ಇನ್ನೂ ಆಲಿಯಾರ ಪ್ರತಿ ಸೆಲ್ಫಿಗಳು ಸಹ ಅವರ ಅಭಿಮಾನಿಗಳಿಗೆ ಮಾದರಿಯಾಗಿವೆ. ಇದಕ್ಕೆಲ್ಲ ಬೆವರು ಹರಿಸಿ ಜಿಮ್​​ನಲ್ಲಿ ತಾಲೀಮು ನಡೆಸುವುದೇ ಕಾರಣವೆಂದು ಆಲಿಯಾ ಹೇಳುತ್ತಾರೆ. 'ತಾಲೀಮಿನ ಸಮಯದಲ್ಲಿ ದೇಹ ಮತ್ತು ಮನಸ್ಸಿನ ಸಂಯೋಜನೆ ಧ್ಯಾನದ ಅನುಭವ ನೀಡುತ್ತದೆ' ಎನ್ನುತ್ತಾರೆ ಆಲಿಯಾ. ಅಲ್ಲದೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ರೀತಿ ಸೌಂದರ್ಯವನ್ನು ಪಡೆಯಲು ಏನು ಮಾಡಬೇಕು ಎನ್ನುವುದನ್ನು ಸಹ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್ ಹೇಳಿಕೊಡ್ತಾರೆ ಫಿಟ್ನೆಸ್‌ನ ಪಂಚ ಸೂತ್ರಗಳು

1. ಜಿಮ್ ಸಾಧ್ಯವಾಗದಿದ್ದರೆ, ಆನ್ಲೈನ್ ತರಬೇತಿ ಪಡೆದುಕೊಳ್ಳಿ.

ಸದ್ಯ ಲಾಕ್‌ಡೌನ್‌ನಿಂದಾಗಿ ಜಿಮ್‌ಗಳು ಮುಚ್ಚಿರಬಹುದು. ಆದ್ರೆ ಅದು ಆಲಿಯಾ ಭಟ್ ಅವರ ಎಂಡಾರ್ಫಿನ್ ಮಟ್ಟವನ್ನು ಕಡಿಮೆ ಮಾಡಲಿಲ್ಲ. ಏಕೆಂದರೆ ಆಲಿಯಾ ವರ್ಚುವಲ್ ವರ್ಕ್ಔಟ್ ಮೊರೆ ಹೋಗಿದ್ದಾರೆ. ಈ ಕಟ್ಟು ನಿಟ್ಟಿನ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿವರ್ಧನೆಗೆ ಆನ್ಲೈನ್ ಮೂಲಕ ತಮ್ಮ ಟ್ರೈನರ್ ಬಳಿ ಫಿಟ್ನೆಸ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

'ಆಲಿಯಾ ತೀವ್ರವಾದ ವರ್ಕ್ಔಟ್ ಮಾಡುತ್ತಾರೆ. ಆ ಮೂಲಕ ಶಕ್ತಿ ವರ್ಧನೆಗೆ ಹೆಚ್ಚು ಒತ್ತು ನೀಡುತ್ತಾರೆ' ಎಂದು ಅವರ ಟ್ರೈನರ್ ಸೊಹ್ರಾಬ್ ಖುಶ್ರುಶಾಹಿ ತಿಳಿಸುತ್ತಾರೆ. ಇನ್ನು 'ನಾವು ಭೇಟಿಯಾಗಲು ಸಾಧ್ಯವಾಗದ ದಿನಗಳಲ್ಲಿ, ನಾನು ಅವರಿಗೆ ಕಾರ್ಡಿಯೋ ರೋಟೀನ್ ಕಳುಹಿಸುತ್ತೇನೆ, ಅದನ್ನು ಆಲಿಯಾ ಶ್ರದ್ಧೆಯಿಂದ ಅನುಸರಿಸುತ್ತಾರೆ. ಓಟ ಮತ್ತು ಕಾಲಿನ ಮೇಲೆ ವರ್ಕ್ಔಟ್ ಮಾಡುವುದನ್ನು ಆಲಿಯಾ ಹೆಚ್ಚು ಇಷ್ಟಪಡುತ್ತಾರೆ' ಎನ್ನುವ ಅಂಶವನ್ನು ಅವರು ಹೇಳಿದ್ದಾರೆ.

2. ವರ್ಕ್ಔಟ್‌ಗಾಗಿ ಜೊತೆಗಾರರನ್ನು ಹುಡುಕಿಕೊಳ್ಳಿನಿಮ್ಮ ಬೆಸ್ಟಿ ಜೊತೆಗೆ ವರ್ಕ್ಔಟ್ ಮಾಡುವುದು ನಿಜಕ್ಕೂ ಉಲ್ಲಾಸದಾಯಕವಾಗಿರುತ್ತದೆ. ಅವರು ಪಿಲೆಟ್ಸ್‌ನಲ್ಲಿ ಸ್ಟ್ರೆಂಥ್ ಟ್ರೈನಿಂಗ್ ವರ್ಕ್ಔಟ್ ಮಾಡ್ತಿದ್ದರೆ ಅದು ಇನ್ನೊಬ್ಬರಿಗೆ ಮೋಟಿವೇಟ್ ಮಾಡುವುದು. ಇನ್ನೂ ಸ್ನೇಹಿತರ ಜೊತೆಗೂಡಿ ಫಿಟ್ನೆಸ್ ವರ್ಕ್ಔಟ್ಗೆ ಮುಂದಾಗುವುದು ಹೆಚ್ಚಿನ ಸಾಧನೆಗೆ ನೆರವಾಗುವುದು. ಪರಸ್ಪರ ಒಬ್ಬರಿಗೊಬ್ಬರು ಉತ್ಸಾಹ ತುಂಬುತ್ತಾ ಹೆಚ್ಚು ಶ್ರಮ ಹಾಕಲು ಅನುಕೂಲಕಾರಿ.

3. ಹೊಸದನ್ನು ಪ್ರಯತ್ನಿಸಿ

ಆಲಿಯಾ ಭಟ್ ಪಿಲೆಟ್ಸ್ ಅನ್ನು ಬಹಳವಾಗಿ ಇಷ್ಟಪಡುತ್ತಾರೆ. ಎಚ್ಐಐಟಿ ತಾಲೀಮು ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಮರೆಯುವುದಿಲ್ಲ. ಖುಶ್ರುಶಾಹಿ ವರ್ಕ್ಔಟ್‌ನಲ್ಲಿ ಬದಲಾವಣೆಗಳನ್ನು ಮಾಡುವುದು ಬಹಳ ಇಷ್ಟದ ಕೆಲಸವೆನ್ನುತ್ತಾರೆ. ಈ ಕಾರಣದಿಂದ ಆಲಿಯಾಗೆ ವರ್ಕ್ಔಟ್ ಮೇಲೆ ಬೋರ್ ಆಗುವುದಿಲ್ಲ. ಅಲ್ಲದೇ 'ಪ್ರತಿಬಾರಿ ರೋಟೀನ್ ವರ್ಕ್ಔಟ್ ಮಾಡುವುದು ನೀರಸವೆನಿಸುತ್ತದೆ. ಆದ್ದರಿಂದ ಬೇರೆ ಬೇರೆ ವರ್ಕ್ಔಟ್‌ಗಳ ತರಬೇತಿ ನೀಡುವುದು ನನಗೆ ಖುಷಿಯನ್ನು ನೀಡುತ್ತದೆ' ಎನ್ನುತ್ತಾರೆ.

ಆದ್ದರಿಂದ ಆಲಿಯಾ ಅವರ ವರ್ಕ್ಔಟ್ ಯಾವಾಗಲೂ ಬದಲಾವಣೆಗೆ ಒಳಪಡುತ್ತಿರುತ್ತದೆ. ಕಾರ್ಡಿಯೋ ಮತ್ತು ಸ್ಟ್ರೆಂಥ್ ಟ್ರೈನಿಂಗ್ ನಡುವೆ ಬದಲಾವಣೆಗಳನ್ನು ಮಾಡುವಾಗ ವಿವಿಧ ಮಸಲ್ ನಡುವೆ ಕೆಲಸ ಮಾಡಬೇಕಾಗುತ್ತದೆ. ಇದು ಸಂಪೂರ್ಣ ಫಿಟ್ನೆಸ್ ಮತ್ತು ಮೆಟಬಾಲಿಸಮ್ ಅನ್ನು ವೃದ್ಧಿ ಮಾಡುತ್ತದೆ.

4. ನೀವು ದಣಿದಿದ್ದರೂ ನಿಯಮಿತವಾಗಿ ತಾಲೀಮು ಮಾಡಿ

ಆಲಿಯಾ ಗಾಯಗೊಂಡಿರಲಿ ಅಥವಾ ಕಟ್ಟುನಿಟ್ಟಿನ ಶೆಡ್ಯೂಲ್ ಇರಲಿ ಭಟ್ ಎಂದಿಗೂ ಒಂದು ದಿನವೂ ರಜೆ ತೆಗೆದುಕೊಳ್ಳುವುದಿಲ್ಲ. ದೇಹದ ಗಡಿಯಾರದ ಬದಲಾವಣೆಯೂ ಶೂಟಿಂಗ್ನ ಬೇಡಿಕೆಗೆ ಸ್ಪಂದಿಸಬೇಕು, ಈ ನಿಟ್ಟಿನಲ್ಲಿ ವರ್ಕ್ಔಟ್ ಅಗತ್ಯ. ' ರಾತ್ರಿ ಶೂಟಿಂಗ್‌ಗಳು ನಿಜಕ್ಕೂ ತ್ರಾಸದಾಯಕವಾಗಿರುವುದು. ಇದು ನೈಸರ್ಗಿಕ ದೈಹಿಕ ಗಡಿಯಾರಕ್ಕೆ ವಿರುದ್ಧವಾಗಿರುವ ಕಾರಣ ಹೆಚ್ಚು ಶ್ರಮ ಬೇಡುತ್ತವೆ. ಆದರೆ ಪಿಲೆಟ್ಸ್ ಮಾಡುವ ಮೂಲಕ ನನ್ನ ಎನರ್ಜಿ ದ್ವಿಗುಣವಾಗುತ್ತದೆ' ಎಂದು ಅಲಿಯಾ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

5 ಸ್ಥಿರತೆ ಕಾಯ್ದುಕೊಳ್ಳುವುದು ಗುರಿ ಮುಟ್ಟಲು ಇರುವ ಏಕೈಕ ದಾರಿ

ಹೊಸ ವರ್ಕ್ಔಟ್ ಪ್ರಯತ್ನಿಸುವಾಗ ಕಷ್ಟವೆನಿಸುತ್ತದೆ. ಆದರೆ ಅಭ್ಯಾಸದಿಂದ ಅದು ನಿಮಗೆ ಇಷ್ಟವಾಗುತ್ತದೆ. ಆಲಿಯಾಗೆ ಪಿಲೆಟ್ಸ್ ಎನರ್ಜಿ ತುಂಬುತ್ತದೆ. ಅದು ಮುಖ್ಯವಾದ ವರ್ಕ್ಔಟ್‌ಗೆ ನೆರವಾಗುತ್ತದೆ. 'ಮೊದಲಿನಿಂದಲೂ ಜಿಮ್ ಮಾಡುತ್ತಿದ್ದರೂ ಅದು ಹೊರೆ ಎನಿಸುತ್ತಿತ್ತು. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುವುದು ನನಗೇ ಸವಾಲಿನ ಕೆಲಸವಾಗಿತ್ತು. ಆದರೆ ಈಗ ಆ ರೀತಿ ಇಲ್ಲ' ಎನ್ನುತ್ತಾರೆ ಆಲಿಯಾ.

'ಎರಡು ಕಾಲುಗಳ ಮೇಲೆ ಸಮಚಿತ್ತವಾಗಿ ನಿಲ್ಲಲು ಕಷ್ಟಪಡುತ್ತಿದ್ದ ಆಲಿಯಾ ಈಗ ಬೋಸ್ ಬಾಲ್ನಲ್ಲಿ ಸ್ಕ್ವಾಟ್ಸ್ ಮಾಡುವಷ್ಟು ಸಮರ್ಥರಾಗಿದ್ದಾರೆ' ಎನ್ನುತ್ತಾರೆ ಕೋಚ್.
First published: June 8, 2021, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories