• Home
  • »
  • News
  • »
  • lifestyle
  • »
  • Mouth Ulcers: ಬಾಯಿಯಲ್ಲಿ ಹುಣ್ಣು ಆಗಿದೆಯಾ? ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಮದ್ದುಗಳು ಇಲ್ಲಿವೆ

Mouth Ulcers: ಬಾಯಿಯಲ್ಲಿ ಹುಣ್ಣು ಆಗಿದೆಯಾ? ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಮದ್ದುಗಳು ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಔಷಧಿಗಳು ಇದನ್ನು ತ್ವರಿತವಾಗಿ ಶಮನಗೊಳಿಸಲು ಸಹಾಯ ಮಾಡುತ್ತವೆ ಮತ್ತು ನೀವು ಅದನ್ನು ವೈದ್ಯಕೀಯವಾಗಿ ಚಿಕಿತ್ಸೆ ನೀಡಲು ಬಯಸದಿದ್ದರೆ, ಕೆಲವು ನಿರ್ದಿಷ್ಟ ಮನೆಮದ್ದುಗಳು ಸಹ ಪರಿಣಾಮಕಾರಿಯಾಗಿರುತ್ತವೆ.

  • Share this:

ನಮಗಾಗುವ ಕೈ ಕಾಲು ನೋವು(Pain), ತಲೆ ನೋವು, ಬೆನ್ನು ನೋವು ಹೀಗೆ ಅನೇಕ ನೋವುಗಳೆಲ್ಲವೂ ಒಂದು ರೀತಿಯಾದರೆ, ಈ ಬಾಯಿಯ ಒಳಗಡೆ ಆಗುವ ಹುಣ್ಣುಗಳ (Mouth Ulcers) ನೋವು ಇದೆಯಲ್ಲಾ ಭಾರೀ ಹಿಂಸೆ ಎಂದು ಹೇಳಬಹುದು. ಏಕೆಂದರೆ ನಾವು ಸೇವಿಸುವ ಆಹಾರ (Food) ಅಥವಾ ಯಾವುದೇ ಪಾನೀಯ(Drinks)ಗಳು ಆ ಹುಣ್ಣುಗಳಿಗೆ ಸ್ವಲ್ಪ ತಾಕಿದರೆ ಸಾಕು, ಆ ಹುಣ್ಣುಗಳಲ್ಲಿ ಉರಿ ಉಂಟಾಗುತ್ತದೆ. ಬಾಯಿಯಲ್ಲಿ ಹುಣ್ಣುಗಳಾದಾಗ ಈ ರೀತಿಯಾದ ಅಹಿತಕರ ನೋವು ಮತ್ತು ಸುಡುವ ಸಂವೇದನೆ (Painful and Inconvenient) ಯೊಂದಿಗೆ ನೀವು ಅನೇಕ ಬಾರಿ ಒದ್ದಾಡಿರುತ್ತೀರಾ ಅಲ್ಲವೇ..? ಈ ಬಾಯಿಯಲ್ಲಿ ಆಗುವ ಹುಣ್ಣುಗಳನ್ನು ಕ್ಯಾಂಕರ್ ಹುಣ್ಣುಗಳು (Canker Sores) ಎಂದೂ ಕರೆಯಲ್ಪಡುತ್ತವೆ, ಅವು ಸಣ್ಣ, ನೋವಿನ ಗಡ್ಡೆಗಳಾಗಿವೆ. ಅವು ಸಾಮಾನ್ಯವಾಗಿ ತಾನಾಗಿಯೇ ಗುಣವಾಗುತ್ತವೆ.


ಆದರೆ ಆಗಲೂ ಸಹ, ನೀವು ಆಹಾರ ಸೇವಿಸುತ್ತಿರುವಾಗ ನಿಮಗೆ ತೊಂದರೆಯಾಗುತ್ತಿದ್ದರೆ ಮತ್ತು ಈ ನೋವು ನಿಮಗೆ ಅನಾನುಕೂಲವನ್ನುಂಟು ಮಾಡಿದರೆ ನೀವು ವೈದ್ಯರ ಬಳಿ ಹೋಗಿ ಆ ಹುಣ್ಣುಗಳನ್ನು ವಾಸಿ ಮಾಡುವ ಮುಲಾಮನ್ನು ಬರೆಸಿಕೊಂಡು ಬರುತ್ತೀರಿ. ಈ ಹುಣ್ಣುಗಳು ಹಾರ್ಮೋನುಗಳ ಬದಲಾವಣೆಗಳು, ಆಮ್ಲೀಯತೆ, ಮಲಬದ್ಧತೆ ಮತ್ತು ವಿಟಮಿನ್ ಬಿ ಅಥವಾ ಸಿ, ಕಬ್ಬಿಣ ಮತ್ತು ಇತರ ಪೋಷಕಾಂಶಗಳ ಕೊರತೆಗಳು ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗಬಹುದು.


ಕೆಲವು ಔಷಧಿಗಳು ಇದನ್ನು ತ್ವರಿತವಾಗಿ ಶಮನಗೊಳಿಸಲು ಸಹಾಯ ಮಾಡುತ್ತವೆ ಮತ್ತು ನೀವು ಅದನ್ನು ವೈದ್ಯಕೀಯವಾಗಿ ಚಿಕಿತ್ಸೆ ನೀಡಲು ಬಯಸದಿದ್ದರೆ, ಕೆಲವು ನಿರ್ದಿಷ್ಟ ಮನೆಮದ್ದುಗಳು ಸಹ ಪರಿಣಾಮಕಾರಿಯಾಗಿರುತ್ತವೆ.


ಇದನ್ನೂ ಓದಿ:  Foxtail Millet: ನಿಮ್ಮ ಹೃದಯ ರಕ್ಷಣೆಗೆ ಈ ಸಿರಿಧಾನ್ಯ; ನವಣೆಯ ಮೂರು ಸರಳ ಪಾಕ ವಿಧಾನಗಳು ಇಲ್ಲಿವೆ

ಮನೆಮದ್ದುಗಳೇ ಉತ್ತಮ ಪರಿಹಾರ


ಬೈದ್ಯನಾಥ್‌ನ ಕ್ಲಿನಿಕಲ್ ಆಪರೇಶನ್ಸ್ ಮತ್ತು ಕೋಆರ್ಡಿನೇಷನ್ ಮ್ಯಾನೇಜರ್ ಆದ ಡಾ. ಅಶುತೋಷ್ ಗೌತಮ್ ಅವರ ಪ್ರಕಾರ, "ಮಲಬದ್ಧತೆ ಅಥವಾ ಇತರ ಹೊಟ್ಟೆಯ ಸಮಸ್ಯೆಗಳು ಬಾಯಿ ಹುಣ್ಣುಗಳಿಗೆ ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ಅಂತಹ ಕಾಯಿಲೆಗಳ ಚಿಕಿತ್ಸೆ, ಅಥವಾ ಮೂಲ ಕಾರಣ, ಬಾಯಿ ಹುಣ್ಣುಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಬಾಯಿ ಹುಣ್ಣಿಗೆ ಮನೆಮದ್ದುಗಳಿಗಿಂತ ಉತ್ತಮ ಚಿಕಿತ್ಸೆ ಇನ್ನೊಂದಿಲ್ಲ ಎಂದು ಹೇಳುತ್ತಾರೆ.


ಬಾಯಿ ಹುಣ್ಣುಗಳಿಗೆ ಇಲ್ಲಿವೆ ನೋಡಿ ಸರಳವಾದ ಮನೆಮದ್ದುಗಳು


1.ಕಿತ್ತಳೆ ರಸ

ಈ ಹುಣ್ಣುಗಳು ವಿಟಮಿನ್ ಸಿ ಕೊರತೆಯಿಂದಾಗಿಯೂ ಸಹ ಉಂಟಾಗಬಹುದು. ಕಿತ್ತಳೆಯ ಮುಖ್ಯ ಗುರಿ ದೇಹಕ್ಕೆ ವಿಟಮಿನ್ ಸಿ ಅನ್ನು ಪೂರೈಸುವುದು. ಸಾಕಷ್ಟು ವಿಟಮಿನ್ ಸಿ ಪಡೆಯಲು ನೀವು ದಿನಕ್ಕೆ ಎರಡು ಬಾರಿ ಆದರೂ ಎರಡು ಲೋಟ ತಾಜಾ ಕಿತ್ತಳೆ ರಸವನ್ನು ಕುಡಿಯಬಹುದು.


2.ಮುಲೇಥಿ


ಮುಲೇಥಿಯು ಹೊಟ್ಟೆಯ ಸಮಸ್ಯೆಗಳಿಂದ ಉಂಟಾಗುವ ಬಾಯಿ ಹುಣ್ಣುಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ನೀವು ಅದನ್ನು ನೀರು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬಹುದು. ಇದು ನಿಮ್ಮ ಹೊಟ್ಟೆಯ ಶುದ್ಧೀಕರಣಕ್ಕೆ ಮತ್ತು ಹುಣ್ಣುಗಳಿಗೆ ಕಾರಣವಾಗಬಹುದಾದ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.


3.ಅಲೋವೆರಾ ಜ್ಯೂಸ್


ನಿಮ್ಮ ಬಾಯಿಯಲ್ಲಿ ಆಗುವ ಹುಣ್ಣುಗಳಿಗೆ ಪರಿಹಾರವನ್ನು ಪಡೆಯಲು, ದಿನವಿಡೀ ಕೆಲವು ಬಾರಿ ಸ್ವಲ್ಪ ಅಲೋವೆರಾ ರಸವನ್ನು ಸ್ವಿಶ್ ಮಾಡಿ ಮತ್ತು ಕುಡಿಯಿರಿ. ಅಲೋವೆರಾ ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಸಹ ಹೊಂದಿದೆ ಮತ್ತು ಅಲೋವೆರಾ ರಸವು ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಸಹ ಹೇಳಲಾಗುತ್ತದೆ.


4.ತುಳಸಿ ಎಲೆಗಳು


ತುಳಸಿ ಎಲೆಗಳು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿವೆ ಮತ್ತು ಶತಮಾನಗಳಿಂದ ಇವುಗಳನ್ನು ಬಳಸಲಾಗುತ್ತಿದೆ. ಕೆಲವು ತಾಜಾ ಎಲೆಗಳನ್ನು ಅಗಿಯಿರಿ ಮತ್ತು ನಂತರ ಅವುಗಳನ್ನು ನುಂಗಲು ಸಹಾಯ ಮಾಡಲು ಸ್ವಲ್ಪ ನೀರನ್ನು ಕುಡಿಯಿರಿ. ಅವು ಸ್ವಲ್ಪ ಹುಳಿ, ಆದರೆ ಅವು ನಿಮ್ಮ ಬಾಯಿಯಲ್ಲಿ ಆಗಿರುವ ಹುಣ್ಣುಗಳನ್ನು ಶಮನ ಗೊಳಿಸುತ್ತವೆ.


ಇದನ್ನೂ ಓದಿ:  Health Tips: ಆರೋಗ್ಯಕ್ಕೆ ಒಳ್ಳೇದು ಅಂತ ಹೆಚ್ಚು ಪ್ರೋಟೀನ್ ಫುಡ್ ತಿನ್ತೀರಾ? ಅತಿಯಾದ್ರೆ ಈ ಸಮಸ್ಯೆಗಳಿಗೆ ಕಾರಣವಾಗುತ್ತೆ ಎಚ್ಚರ

5.ಮೊಸರು


ಬಾಯಿಯಲ್ಲಿ ಆಗುವ ಹುಣ್ಣುಗಳು ಸುಡುವ ಸಂವೇದನೆಯನ್ನು ನೀಡುವುದರಿಂದ, ಎಲ್ಲಾ ರೀತಿಯ ಮಸಾಲೆ ಮತ್ತು ಬಿಸಿ ಆಹಾರದಿಂದ ದೂರವಿರುವುದು ಉತ್ತಮ. ಹುಣ್ಣುಗಳಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನೀಡಲು ನೀವು ಒಂದು ಬಟ್ಟಲು ತಣ್ಣನೆಯ ಮೊಸರನ್ನು ಸೇವಿಸುವುದು ಒಳ್ಳೆಯದು.

Published by:Mahmadrafik K
First published: