HOME » NEWS » Lifestyle » FIVE BENEFITS OF DRINKING WATER IN THE MORNING STG HG

ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

Water: ಮುಂಜಾನೆ ವೇಳೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಅನುಕೂಲತೆಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

news18-kannada
Updated:June 16, 2021, 3:49 PM IST
ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!
Photo: Google
  • Share this:

ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಅತ್ಯಗತ್ಯ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಾಣೆ ಮಾಡಲು, ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ಕೀಲುಗಳ ಸಮರ್ಪಕವಾಗಿರಲು ಇದು ಆವಶ್ಯಕ. ಹಾಗಾಗಿ ಮುಂಜಾನೆ ವೇಳೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಅನುಕೂಲತೆಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.


1. ತೂಕ ಇಳಿಸಲು



ಮುಂಜಾನೆ ಎದ್ದು ನೀರು ಕುಡಿಯುವುದರಿಂದ ತೂಕ ಇಳಿಸಬಹುದು ಎಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ಉದಾಹರಣೆಗೆ, ಹೆಚ್ಚು ನೀರು ಕುಡಿಯುವ ಯುವಜನರು ಸುಧಾರಿತ ದೇಹ ಸಮಯೋಜನೆಯನ್ನು ಹೊಂದಿದ್ದಾರೆ ಎಂದು 2019ರಲ್ಲಿ ನಡೆಸಲ್ಪಟ್ಟ ಅಧ್ಯಯನವೊಂದರಿಂದ ತಿಳಿದು ಬಂದಿದೆ.


ಉಪಾಹಾರ ಸೇರಿದಂತೆ ಮುಖ್ಯ ಊಟಕ್ಕೆ ಮೊದಲು 2010ರಲ್ಲಿ ನಡೆಸಿದ ಹಳೆಯ ಅಧ್ಯಯನವೊಂದರ ಪ್ರಕಾರ, ಮಧ್ಯ ವಯಸ್ಕ ಮತ್ತು ಹಿರಿಯ ವಯಸ್ಕರು, 12 ವಾರಗಳ ವರೆಗೆ, ಪ್ರತೀ ಊಟಕ್ಕೆ ಮೊದಲು 500 ಮಿಲಿ ಲೀಟರ್ ನೀರನ್ನು ಸೇವಿಸಿದ್ದರಿಂದ, ಹೆಚ್ಚು ತೂಕವನ್ನು ಕಳೆದುಕೊಂಡರು.


ಅವರು ಮೊದಲೇ ನೀರು ಕುಡಿದದ್ದರಿಂದ, ಕಡಿಮೆ ಊಟ ಮಾಡಿದ ಕಾರಣಕ್ಕೆ ತೂಕ ಕಡಿಮೆ ಆಯಿತು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.


ಥರ್ಮೋಜೆನೆಸಿಸ್


ಥರ್ಮೊಜೆನೆಸಿಸ್ ಎಂದರೆ ಶಾಖದ ಉತ್ಪತ್ತಿ. ಒಬ್ಬ ವ್ಯಕ್ತಿ ತಣ್ಣೀರನ್ನು ಕುಡಿದಾಗ, ಆ ನೀರು ದೇಹವನ್ನು ಪ್ರವೇಶಿಸುವಾಗ ಬೆಚ್ಚಗಾಗುವಂತೆ ಮಾಡಲು ಶಾಖ ಉತ್ಪತ್ತಿ ಆಗುತ್ತದೆ, ಅದರಿಂದ ಕ್ಯಾಲೋರಿಗಳು ಕರಗುತ್ತವೆ. 2013ರಲ್ಲಿ ನಡೆದ ಅಧ್ಯಯನವೊಂದರಲ್ಲಿ, 25 ರಿಂದ 29.9 ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವ 50 ಹುಡುಗಿಯರು, ಪೋಷಕಾಂಶಯುಕ್ತ ಆಹಾರದ ಜೊತೆ ನೀರು ಸೇವಿಸಿದರು. ಎಂಟು ವಾರಗಳವರಗೆ ಅವರು, ಮೂರು ಹೊತ್ತಿನ ಊಟದಲ್ಲಿ 500 ಮಿಲೀ ನೀರನ್ನು ಕುಡಿಯುವುದನ್ನು ಹೆಚ್ಚಿಸಿದಾಗ, ಅವರ ತೂಕ ಹೆಚ್ಚಿತು. ಅವರೆಲ್ಲರೂ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ಮೊದಲು ನೀರು ಸೇವಿಸಿದ್ದರು. ಅದೇನೇ ಇದ್ದರೂ ಕೇವಲ ನೀರು ಕುಡಿದದ್ದಕ್ಕೆ ಮತ್ತು ಮುಂಜಾನೆಯೇ ನೀರು ಕುಡಿದದ್ದಕ್ಕೆ ತೂಕ ಇಳಿಕೆಯಾಯಿತು ಎಂಬುದನ್ನು ಅಧ್ಯಯನಗಳು ಒತ್ತಿ ಹೇಳುವುದಿಲ್ಲ.

2. ಮಾನಸಿಕ ಸ್ವಾಸ್ಥ್ಯ


ನೀರು ಅರಿವಿನ ಮತ್ತು ಮಾನಸಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. 2016ರ ಅಧ್ಯಯನವೊಂದರ ಪ್ರಕಾರ, ಸಣ್ಣ ನಿರ್ಜಲೀಕರಣವೂ ಕೂಡ ಅರಿವಿನ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ.


ಬೆಳಗ್ಗೆ ಮಾತ್ರ ನೀರು ಕುಡಿಯುವ ಬದಲು , ಇಡೀ ದಿನ ಆಗಾಗ ನೀರು ಕುಡಿಯುತ್ತಿರುವುದು ಉತ್ತಮ ಮಾನಸಿಕ ಕ್ಷಮತೆಗೆ ಪೂರಕ ಎಂಬುದು 2019ರಲ್ಲಿ ನಡೆದ ಅಧ್ಯಯನವೊಂದರಿಂದ ತಿಳಿದು ಬಂದಿದೆ.


ಕಾಲೇಜು ವಿದ್ಯಾರ್ಥಿಗಳ ಮೇಲೆ 2019ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, ನಿರ್ಜಲೀಕರಣವು ಅಲ್ಪಾವಧಿಯ ಸ್ಮರಣೆ ಮತ್ತು ಗಮನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿದೆ. ಅವರುಗಳು ಮತ್ತೆ ನೀರು ಕುಡಿದ ಬಳಿಕ, ಅಲ್ಪಾವಧಿಯ ಸ್ಮರಣೆ ಮತ್ತು ಗಮನ ಸುಧಾರಿಸಿರುವುದು ಕಂಡುಬಂದಿದೆ.


ಹಾಗಾಗಿ ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಯಸುವ ವ್ಯಕ್ತಿಗೆ, ಮುಖ್ಯವಾಗಿ ಬೆಳಗಿನ ಹೊತ್ತು ನೀರು ಕುಡಿಯುವುದರಿಂದ ಉಪಯೋಗವಾಗಬಹುದು.


3. ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ


ನೀರು ಕುಡಿಯುವುದು ಮನುಷ್ಯನ ಮನಸ್ಥಿತಿಯ ಮೇಲೆ ಕೂಡ ಪರಿಣಾಮ ಬೀರಬಹುದು. ಕಡಿಮೆ ನೀರು ಕುಡಿಯುವ ಮಂದಿ, ನೀರು ಕುಡಿಯುವ ಪ್ರಮಾಣವನ್ನು ಹೆಚ್ಚಿಸಿದಾಗ ಅವರ ಮನಸ್ಥಿತಿ ಮೊದಲಿಗಿಂತ ಚೆನ್ನಾಗಾಗಿರುವುದು ಕಂಡು ಬಂದಿದೆ.


ನಿರ್ಜಲೀಕರಣದಿಂದ ಮನಸ್ಥಿತಿ ಹಾಳಾಗುವುದು ಮತ್ತು ನಿರ್ಜಲೀಕರಣ ಸರಿಯಾದ ಮೇಲೆ ಮನಸ್ಥಿತಿ ಸುಧಾರಣೆ ಆಗಿರುವುದು ಕೂಡ 2019ರ ಇನ್ನೊಂದು ಅಧ್ಯಯನದಿಂದ ತಿಳಿದು ಬಂದಿದೆ.


ಹಾಗಾಗಿ ದಿನವಿಡೀ ಲವಲವಿಕೆಯ ಮನಸ್ಥಿತಿ ಇರಬೇಕಾದರೆ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸುವುದು ಅಗತ್ಯ.


4. ಚರ್ಮದ ಆರೋಗ್ಯ


ಹೆಚ್ಚಾಗಿ ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುತ್ತದೆ ಎಂಬುವುದು ಹೆಚ್ಚಿನವರ ನಂಬಿಕೆ.


ಚರ್ಮವು 30% ನೀರನ್ನು ಹೊಂದಿರುತ್ತದೆ, ಅದು ಅದರ ಆರೋಗ್ಯಕ್ಕೆ ಅಗತ್ಯ. ಹೆಚ್ಚು ನೀರಿನ ಸೇವನೆ ಚರ್ಮದ ರಚನೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೆಚ್ಚು ನೀರನ್ನು ಕುಡಿಯುವುದರಿಂದ ಚರ್ಮದ ಹೊರಪದರದಲ್ಲಿ ಜಲಸಂಚಯವನ್ನು ಹೆಚ್ಚಿಸಬಹುದು ಎಂಬುದು 2018ರ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಆದರೆ ಇದು ವಯಸ್ಸಾದವರಿಗೆ ಪ್ರಯೋಜನಕಾರಿ ಹೌದೋ ಅಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ ಎಂದು ಅಧ್ಯಯನ ಹೇಳುತ್ತದೆ.


ಆದರೆ, ಚರ್ಮದಲ್ಲಿನ ಸೂಕ್ತ ಜಲಸಂಚಯ, ಸುಕ್ಕು, ಸೂರ್ಯನ ಕಿರಣಗಳು, ವಂಶವಾಹಿಗಳು ಮತ್ತು ವಾತಾವರಣದಿಂದ ಉಂಟಾಗಿರುವ ಪರಿಣಾಮವನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀರು ಕುಡಿಯುವುದರಿಂದ ದಿನವಿಡೀ ಲವಲವಿಕೆಯಿಂದ ಇರಬಹುದು. ಆದರೆ ಅದರಿಂದ ಚರ್ಮದ ಸೌಂದರ್ಯದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುವುದಿಲ್ಲ.


5. ದೇಹದ ಇತರ ಕಾರ್ಯ ಚಟುವಟಿಕೆಗಳಿಗೆ


• ನೀರು ಕುಡಿಯುವುದರಿಂದ ಕಿಡ್ನಿಗಳಿಗೆ ಕಲ್ಮಶವನ್ನು ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ.
• 2010ರ ಅಧ್ಯಯನವೊಂದರ ಪ್ರಕಾರ, ಹೆಚ್ಚು ನೀರು ಸೇವಿಸುವುದರಿಂದ ಯುರೋಲಿಥಿಯಾಸಿಸನ್ನು ತಡೆಯಬಹುದು. ಅದು ಮೂತ್ರನಾಳದಲ್ಲಿ ಕಲ್ಲುಗಳು ಇದ್ದಾಗ ಸಂಭವಿಸುತ್ತದೆ.
• ಹೃದಯ ರಕ್ತನಾಳದ ವ್ಯವಸ್ಥೆ ಸರಿಯಾಗಿ ನಡೆಯಬೇಕಾದರೆ ಹೆಚ್ಚು ನೀರು ಆವಶ್ಯಕ ಎಂಬುವುದು 2019ರ ಸಂಶೋಧನೆಯಿಂದ ತಿಳಿದು ಬಂದಿದೆ.
• ನೀರು, ಕೀಲುಗಳ ಸುತ್ತ ಇರುವ ನಯಗೊಳಿಸುವ ದ್ರವದ ಒಂದು ಅಂಶ.ಅದು ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.


ಅಪಾಯಗಳು

• ಅತಿಯಾಗಿ ನೀರು ಕುಡಿಯುವುದರಿಂದ, ಮೆದುಳಿನ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಗೊಂದಲ, ವಾಕರಿಕೆ ಮತ್ತು ವಾಂತಿ ಉಂಟಾಗಬಹುದು.
• ಕೇವಲ ಮುಂಜಾನೆ ಮಾತ್ರ ನೀರನ್ನು ಕುಡಿದರೆ, ದೇಹಕ್ಕೆ ದಿನವಿಡೀ ಅಗತ್ಯವಿರುವಷ್ಟು ನೀರು ಸಿಗದಿರಬಹುದು. ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
• ನೀರು ಕುಡಿಯಬೇಕೆಂದು, ಕೆಲವರು ಹೆಚ್ಚಾಗಿ ತಂಪು ಪಾನೀಯ ಸೇವಿಸುತ್ತಾರೆ. ಅವುಗಳಲ್ಲಿ ಕ್ಯಾಲೋರಿಗಳು ಹೆಚ್ಚಿರುತ್ತದೆ.ಹಾಗಾಗಿ ವ್ಯಕ್ತಿಯ ತೂಕ ಹೆಚ್ಚಬಹುದು.
First published: June 16, 2021, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories