Non-Veg Recipe: ಭಾನುವಾರ ಸಂಜೆಗೆ ಟೇಸ್ಟಿ ಫಿಶ್ ಕಟ್ಲೆಟ್! ಇಲ್ಲಿದೆ ರೆಸಿಪಿ

ನೀವು ಎಂದಾದರೂ ಫಿಶ್ ಕಟ್ಲೆಟ್ ಬಗ್ಗೆ ಕೇಳಿದ್ದೀರಾ? ರುಚಿ ವಿಚಾರದಲ್ಲಿ ಫಿಶ್ ಕಟ್ಲೆಟ್ ಬಗ್ಗೆ ಎರಡು ಮಾತಿಲ್ಲವಂತೆ. ಫಿಶ್ ಕೇವಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲ ಜೊತೆಗೆ ಇದು ಹಲವು ಪೌಷ್ಠಿಕಾಂಶಗಳನ್ನು ಕೂಡ ನೀಡುತ್ತದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೀನು (Fish) ಪ್ರಿಯರಿಗೆ ಇಲ್ಲೊಂದು ಖುಷಿಯ ವಿಚಾರವಿದೆ. ಹೌದು ನೀವು ವೆಜ್ ಕಟ್ಲೆಟ್ ತಿಂದಿರುತ್ತೀರಾ? ಚಿಕನ್ ಕಟ್ಟಿಕೊಡ ತಿಂದಿರುತ್ತೀರಾ? ಆದರೆ ನೀವು ಎಂದಾದರೂ ಫಿಶ್ ಕಟ್ಲೇಟ್ (Fish Cutlet) ಬಗ್ಗೆ ಕೇಳಿದ್ದೀರಾ? ರುಚಿ ವಿಚಾರದಲ್ಲಿ ಫಿಶ್ ಕಟ್ಲೆಟ್ ಬಗ್ಗೆ ಎರಡು ಮಾತಿಲ್ಲವಂತೆ. ಫಿಶ್ ಕೇವಲ ಬಾಯಿಗೆ ರುಚಿ (Taste) ನೀಡುವುದು ಮಾತ್ರವಲ್ಲ ಜೊತೆಗೆ ಇದು ಹಲವು ಪೌಷ್ಠಿಕಾಂಶಗಳನ್ನು ಕೂಡ ನೀಡುತ್ತದೆ. ಇತರ ನಾನ್ ವೆಜ್ ಗಳಿಗೆ ಹೋಲಿಸಿದರೆ ಮೀನಿನಲ್ಲಿ ಕೊಬ್ಬಿನ ಅಂಶಗಳು ಕಡಿಮೆ ಇದ್ದು ಇದು ಮಿನರಲ್ಸ್ (Minerals) ಹಾಗೂ ಅಮಿನೋ ಆಮ್ಲ ಗಳಿಂದ ಹೇರಳವಾಗಿ ತುಂಬಿಕೊಂಡಿದೆ. ಈ ಕಟ್ಲೇಟ್ ಗೆ ಸಾಧಾರಣ ಗಾತ್ರದ ಮೀನಿಗಿಂತ ಸ್ವಲ್ಪ ದೊಡ್ಡ ಗಾತ್ರದ ಮೀನನ್ನು ಬಳಸಲಾಗುವುದು.

    ಬೇಕಾಗುವ ಸಾಮಗ್ರಿಗಳು

    ಸಾಮಾನ್ಯವಾಗಿ ಮೀನಿನ ಕಟ್ಲೇಟ್ ತಯಾರಿಸಲು ದೊಡ್ಡ ಗಾತ್ರದ ಮೀನನ್ನು ಬಳಸಬೇಕು.

    1 ಒಂದು ದೊಡ್ಡ ಗಾತ್ರದ ಮೀನು ಸುಮಾರು ಒಂದು ಕೆಜಿ
    2) ಶುಂಠಿ ಚಿಕ್ಕದಾಗಿ ಹೆಚ್ಚಿದ್ದು 2 ಚಮಚ
    ಬೆಳ್ಳುಳ್ಳಿ ಚಿಕ್ಕದಾಗಿ ಹೆಚ್ಚಿದ್ದು 1 ಚಮಚ
    3) ಹಸಿಮೆಣಸಿನಕಾಯಿ ಸುಮಾರು 2 ರಿಂದ 3
    4) ಈರುಳ್ಳಿ 2
    5) ಗರಂ ಮಸಾಲಾ ಪುಡಿ ಅರ್ಧ ಚಮಚ
    6) ಅರಸಿನ ಪುಡಿ ¼ ಚಮಚ
    7) ಬ್ರೆಡ್ ಚೂರು ಸುಮಾರು ಒಂದು ಕಪ್
    8) ಕರಿಮೆಣಸಿನ ಪುಡಿ ಅರ್ಧ ಚಮಚ
    9) ರುಚಿಗೆ ತಕ್ಕಷ್ಟು ಉಪ್ಪು
    10) 5 ರಿಂದ 6 ಕರಿಬೇವಿನ ಎಸಳು

    ಇದನ್ನೂ ಓದಿ: Non-Veg Recipe: ಬಕ್ರೀದ್ ಹಬ್ಬಕ್ಕೆ ಸ್ಪೆಷಲ್ ಮಟನ್ ಖೀಮಾ ರೆಸಿಪಿ

    ಅದೇ ರೀತಿ ಮಸಾಲೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

    1) ಲವಂಗ 2 ರಿಂದ 3
    2) ಏಲಕ್ಕಿ ಎಸಳು
    3) ಆಲೂಗಡ್ಡೆ 2
    4) ಮೊಟ್ಟೆ 3 ರಿಂದ 4

    ಇದನ್ನೂ ಓದಿ: Monsoon Snacks: ಮಳೆಗಾಲದ ಹಾಟ್ ಫೆವರಿಟ್‍ಗಳ ತಿನಿಸುಗಳ ಪಟ್ಟಿಯಲ್ಲಿ ಏನೇನಿದೆ ನೋಡಿ

    ಮೊದಲಿಗೆ ತಂದು ಇಟ್ಟಂತಹ ದೊಡ್ಡ ಮೀನನ್ನು ಶುದ್ಧ ಮಾಡಿ ಅದರ ಮುಳ್ಳುಗಳನ್ನು ಸಂಪೂರ್ಣವಾಗಿ ತೆಗೆಯಬೇಕು. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ನಂತರ ಮಸಾಲ ಸಾಮಾಗ್ರಿಗಳನ್ನು ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿದು ಅದನ್ನು ತಣ್ಣಗಾಗಲು ಇಡಬೇಕು.

    ಹಾಗೆ ಮುಂದೆ ಮೀನಿನಲ್ಲಿ ಇರುವಂತಹ ನೀರಿನಂಶವನ್ನು ತೆಗೆಯಲು ಮೀನನ್ನು ನೀರು ಸೂರಿ ಹೋಗುವ ಪಾತ್ರೆಯಲ್ಲಿ ಹಾಕಿ ಬಿಡಿ.

    ಮುಂದೆ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣದಾಗಿ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಮತ್ತು ಚಿಕ್ಕದಾಗಿ ಹೆಚ್ಚಿದ ಅಂತಹ ಹಸಿಮೆಣಸಿನಕಾಯಿ ಕರಿಬೇವಿನ ಎಲೆ ಹಾಕಿ ಸಣ್ಣ ಉರಿಯಲ್ಲಿ 4 ನಿಮಿಷಗಳ ಕಾಲ ಹುರಿಯಿರಿ.

    ಈಗ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಹುರಿಯಿರಿ ಅದಕ್ಕೆ ಅರಿಶಿನ ಕರಿಮೆಣಸಿನ ಪುಡಿ ಮಸಾಲೆ ಪುಡಿ ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮುಂದೆ ನೀರನ್ನು ಸೋಸಿ ಇಟ್ಟಂತಹ ಮೀನನ್ನು ಅದಕ್ಕೆ ಹಾಕಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೀನಿನಲ್ಲಿರುವ ನೀರಿನಂಶ ಸಂಪೂರ್ಣ ಆವಿಯಾಗುವ ತನಕ ಅದನ್ನು ಹುರಿಯಿರಿ. ಗ್ಯಾಸ್ ಆಫ್ ಮಾಡಿ ಪೂರ್ತಿ ತಣ್ಣಗಾಗಲು ಬಿಡಿ.

    ನಂತರ ಬೇಯಿಸಿದ ಆಲೂಗೆಡ್ಡೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಈಗ ಫ್ರೈಮಾಡಿ ಇಟ್ಟಂತಹ ಮೀನನ್ನು ಅದಕ್ಕೆ ಹಾಕಿ ಕಲಸಿ. ನಂತರ ಅದನ್ನು ಮೊಟ್ಟೆ ಆಕಾರದಲ್ಲಿ ಉಂಡೆ ಮಾಡಿ ತಯಾರಿಸಿಟ್ಟುಕೊಳ್ಳಿ.

    ಒಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿ ಅದಕ್ಕೆ ಚಿಟಕಿಯಷ್ಟು ಉಪ್ಪು ಹಾಕಿ ಚೆನ್ನಾಗಿ ಕದಡಿ ಇಡಿ. ಬಾಣಲೆಯಲ್ಲಿ ಅರ್ದದಷ್ಟು ಎಣ್ಣೆ ಹಾಕಿ ಕಾಯಿಸಿ. ಈಗ ಮೀನಿನ ಉಂಡೆಯನ್ನು ತಟ್ಟಿ ಅಥವಾ ಮೊಟ್ಟೆಯಾಕಾರದಲ್ಲಿಯೇ ಮೊಟ್ಟೆಗೆ ಅದ್ದಿ , ಬ್ರೆಡ್ ಚೂರ್ ನಲ್ಲಿ ಹೊರಳಾಡಿಸಿ, ಕಾದ ಎಣ್ಣೆಗೆ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಕರಿದರೆ ರುಚಿ-ರುಚಿಯಾದ ಮೀನಿನ ಕಟ್ಲೇಟ್ ರೆಡಿ.
    Published by:Swathi Nayak
    First published: