Carbon Footprint: ರೆಸ್ಟೊರೆಂಟ್​ ಮೆನುಲಿ ಫುಡ್​ ಮಾತ್ರ ಅಲ್ಲ ಅದರ ಕಾರ್ಬನ್​ ಮಟ್ಟ ಕೂಡ ಇರುತ್ತಂತೆ

ಕಾರ್ಬನ್‌ ಫುಟ್‌ಪ್ರಿಂಟ್‌

ಕಾರ್ಬನ್‌ ಫುಟ್‌ಪ್ರಿಂಟ್‌

ನೈಋತ್ಯ ಇಂಗ್ಲೆಂಡ್‌ನಲ್ಲಿರುವ ʼಕ್ಯಾಂಟೀನ್‌ʼ ರೆಸ್ಟೊರೆಂಟ್‌ (Canteen Restaurant) ಅಲ್ಲಿನ ಮೆನುವು ಡಿಶ್‍ಗಳ ಬೆಲೆ ಮಾತ್ರ ತಿಳಿಸುವುದಿಲ್ಲ. ಆ ಮೆನುವಿನಲ್ಲಿ ಇರುವ ಆಹಾರ ತಿನಿಸುಗಳು ಅವುಗಳು ಹೊರ ಸೂಸುವ ಕಾರ್ಬನ್‌ ಅನ್ನು (Carbon) ಕೂಡ ತಿಳಿಸುತ್ತವೆ. ಇದು  ರೆಸ್ಟೊರೆಂಟ್‌ನ ವಿಶೇಷ.

ಮುಂದೆ ಓದಿ ...
  • Share this:

ನೈಋತ್ಯ ಇಂಗ್ಲೆಂಡ್‌ನಲ್ಲಿರುವ ʼಕ್ಯಾಂಟೀನ್‌ʼ ರೆಸ್ಟೊರೆಂಟ್‌ (Canteen Restaurant) ಅಲ್ಲಿನ ಮೆನುವು ಡಿಶ್‍ಗಳ ಬೆಲೆ ಮಾತ್ರ ತಿಳಿಸುವುದಿಲ್ಲ. ಆ ಮೆನುವಿನಲ್ಲಿ ಇರುವ ಆಹಾರ ತಿನಿಸುಗಳು ಅವುಗಳು ಹೊರ ಸೂಸುವ ಕಾರ್ಬನ್‌ ಅನ್ನು (Carbon) ಕೂಡ ತಿಳಿಸುತ್ತವೆ. ಇದು  ರೆಸ್ಟೊರೆಂಟ್‌ನ ವಿಶೇಷ. ಕಾರ್ಬನ್‌ ಹೊರ ಸೂಸುವಿಕೆಗೆ ಆಂಗ್ಲ ಭಾಷೆಯಲ್ಲಿ ʼಕಾರ್ಬನ್‌ ಫುಟ್‌ಪ್ರಿಂಟ್‌ʼ (Carbon Footprint) ಎಂದು ಹೇಳುತ್ತಾರೆ. ಈ ರೆಸ್ಟೊರೆಂಟ್‌ನಲ್ಲಿ ಯಾವ ಆಹಾರ ತಿನಿಸು ಎಷ್ಟು ಕಾರ್ಬನ್‌ ಅನ್ನು ಹೊರ ಸೂಸುತ್ತದೆ? ಈ ಆಹಾರ (Food) ತಿನಿಸು ನಮಗೆ ನೀಡುವಷ್ಟು ಉತ್ತಮ ಫಲಿತಾಂಶ, ನಮ್ಮ ಪರಿಸರಕ್ಕೂ ನೀಡುತ್ತದೆಯೇ? ಪರಿಸರದಲ್ಲಿ ಉಂಟಾಗುತ್ತಿರುವ ಹೆಚ್ಚಿನ ಕಾರ್ಬನ್‌ ಅನ್ನು ತಡೆಗಟ್ಟಲು ಈ ಕ್ರಮ ಉತ್ತಮವೇ? ಈ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿಂದು ಉತ್ತರ ತಿಳಿದುಕೊಳ್ಳೋಣ. ಬನ್ನಿ.


ಅವುಗಳಲ್ಲಿ ಕೆಲವು ಉದಾಹರಣೆ ನೋಡುವುದಾದರೆ, ಮೊಸರು ಸಾಸ್‌ನೊಂದಿಗೆ ಕ್ಯಾರೆಟ್ ಮತ್ತು ಬೀಟ್ರೂಟ್ ಪಕೋಡಾ ಆಹಾರ ತಿನಿಸು ಕೇವಲ 16 ಗ್ರಾಂ ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆಗೆ ಕಾರಣವಾಗಿದೆ. ಟಬ್ಬೌಲೆ ಮತ್ತು ಜಾತಾರ್ ಟೋಸ್ಟ್‌ನೊಂದಿಗೆ ಮಿಸೊ ಮತ್ತು ಹರಿಸ್ಸಾ ಸಾಸ್‌ನೊಂದಿಗೆ ಬದನೆಕಾಯಿಗಳು 675 ಗ್ರಾಂ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರ ಸೂಸುತ್ತವೆ.


ಬರ್ಗರ್‌ ಗಳು ಎಷ್ಟು ಕಾರ್ಬನ್ ಹೊರಸೂಸುತ್ತದೆ
“ಗ್ರಾಹಕರು ಒಂದು ವೇಳೆ ಹೆಚ್ಚು ಕಾರ್ಬನ್‌ ಹೊರ ಸೂಸುವ ಆಹಾರ ತಿನಿಸನ್ನು ಆರ್ಡರ್‌ ಮಾಡಿದರೆ, ಅದನ್ನು ಈ ರೆಸ್ಟೊರೆಂಟ್‌ ಅವರಿಗೆ ಸರ್ವ್‌ ಮಾಡುವುದಿಲ್ಲ. ಬ್ರಿಸ್ಟಲ್‌ನಲ್ಲಿರುವ ಸಸ್ಯಾಹಾರಿ ರೆಸ್ಟೊರೆಂಟ್‌ನಲ್ಲಿರುವ ಮೆನುವು ಯುಕೆ-ಉತ್ಪಾದಿತ ಹ್ಯಾಂಬರ್ಗರ್‌ನಿಂದ ಕಾರ್ಬನ್‌ ಹೊರಸೂಸುವಿಕೆ ಅನ್ನು ಒಂದಕ್ಕೊಂದು ಹೋಲಿಕೆ ಮಾಡಿ ಆಹಾರ ತಿನಿಸುಗಳನ್ನು ತಯಾರಿಸುತ್ತಾರೆ” ಎಂದು ಈ ರೆಸ್ಟೊರೆಂಟ್‌ ತಿಳಿಸಿದೆ.


"ಒಂದು ಸಸ್ಯಾಹಾರಿ ಬರ್ಗರ್‌ ಮೂರು ಕಿಲೋಗಳು ಕಾರ್ಬನ್‌ ಹೊರಸೂಸುವಿಕೆಯನ್ನು ಒಳಗೊಂಡಿದೆ. ಇದನ್ನು ನಂಬಲು ಸಾಧ್ಯವಿಲ್ಲ. ವಾಹ್!" ಎಂದು ಈ ರೆಸ್ಟೊರೆಂಟ್‌ನ ಖಾಯಂ ಗ್ರಾಹಕರಾದ 37 ವರ್ಷದ ಎನಿಯೋಮಾ ಅನೋಮೆಲೆಚಿ ಹೇಳುತ್ತಾರೆ.


ಇದನ್ನೂ ಓದಿ: Crime News: ಸೌದಿಯಿಂದ ಆಸ್ಟ್ರೇಲಿಯಾಗೆ ಓಡಿಹೋದ ಸಹೋದರಿಯರು, ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢ ಸ್ಥಿತಿಯಲ್ಲಿ ಶವ ಪತ್ತೆ!


ಆದರೆ ಬೀಫ್ ಬರ್ಗರ್‌ನ ಕಾರ್ಬನ್‌ ಹೊರಸೂಸುವಿಕೆ ಅದರ ಸಸ್ಯಾಹಾರಿ ಪರ್ಯಾಯಕ್ಕಿಂತ 10 ಪಟ್ಟು ಹೆಚ್ಚು ಎಂದು ಮೆನುವಿನಲ್ಲಿ ಗಮನಿಸಬಹುದು. ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಕಡಿಮೆ ಮಾಡಲು ಮತ್ತು 2050 ರ ವೇಳೆಗೆ ನಿವ್ವಳ-ಶೂನ್ಯ ಕಾರ್ಬನ್‌ ಹೊರಸೂಸುವಿಕೆಯನ್ನು ಸಾಧಿಸಲು ದೇಶಗಳು ಹರಸಾಹಸ ಮಾಡುತ್ತಿರುವಾಗ ಎಲ್ಲ ರೆಸ್ಟೊರೆಂಟ್‌ಗಳು ಗ್ರಾಹಕರು ಎಷ್ಟು ಕಾರ್ಬನ್‌ ಹೊರಸೂಸುವಿಕೆ ಯನ್ನು ಬಳಕೆ ಮಾಡುತ್ತಾರೆ ಎಂಬುದರ ಕುರಿತು ಪರಿಶೀಲಿಸಬೇಕಾಗಿದೆ ಎಂದರೂ ತಪ್ಪಾಗಲಾರದು.


ಕಾರ್ಬನ್‌ ಫುಟ್‌ಪ್ರಿಂಟ್‌ ಅನ್ನು ಮುದ್ರಿಸಲು ಒಪ್ಪಿಕೊಂಡ ಮೊದಲ ರೆಸ್ಟೋರೆಂಟ್
ಜುಲೈನಲ್ಲಿ UK ಸಸ್ಯಾಹಾರಿ ಪ್ರಚಾರ ಚಾರಿಟಿ Viva ನೇತೃತ್ವದ ಅಭಿಯಾನದ ಅಡಿಯಲ್ಲಿ ಮೆನುವಿನಲ್ಲಿ ತನ್ನ ಕಾರ್ಬನ್‌ ಹೊರಸೂಸುವಿಕೆ ಪ್ರಮಾಣವನ್ನು ಮುದ್ರಿಸಲು ಒಪ್ಪಿಕೊಂಡ ಮೊದಲ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆಗೆ ಈ ʼಕ್ಯಾಂಟಿನ್‌ʼ ರೆಸ್ಟೊರೆಂಟ್‌ ಪಾತ್ರವಾಗಿದೆ. ರೆಸ್ಟೋರೆಂಟ್‌ನ ಮ್ಯಾನೇಜರ್, ಲಿಯಾಮ್ ಸ್ಟಾಕ್, ಇದನ್ನು "ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ನೋಡಲು, ನಮ್ಮನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ಈ ಕ್ರಮ ಅಗತ್ಯ" ಎಂದು ಕರೆದಿದ್ದಾರೆ.


ಇದರ ಉದ್ದೇಶವೇನು 
ಯುಕೆ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, “ಒಬ್ಬ ಬ್ರಿಟಿಷ್ ವ್ಯಕ್ತಿ ಸರಾಸರಿ ವಾರ್ಷಿಕ 10 ಟನ್‌ಗಳಿಗಿಂತ ಹೆಚ್ಚು ಕಾರ್ಬನ್‌ ಹೊರ ಸೂಸುವಿಕೆ ಹೊಂದಿದ್ದಾನೆ. ಬ್ರಿಟನ್ ತನ್ನ ಅಂತರಾಷ್ಟ್ರೀಯ ಹವಾಮಾನ ಬದಲಾವಣೆಯ ಬದ್ಧತೆಗಳನ್ನು ಪೂರೈಸುವ ಸಲುವಾಗಿ 1990ರ ಅಂಕಿ-ಅಂಶಗಳಿಗೆ ಹೋಲಿಸಿದರೆ 2035 ರ ವೇಳೆಗೆ 78% ರಷ್ಟು ಹಾನಿಕಾರಕ ಕಾರ್ಬನ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.


ಇದನ್ನೂ ಓದಿ: 2023ರಿಂದ ವಿಶ್ವಾದ್ಯಂತ Johnson & Johnson ಬೇಬಿ ಪೌಡರ್ ಮಾರಾಟ ಸ್ಥಗಿತ, ಕಾರಣವೇನು?


ನಿಮ್ಮ ಕಾರ್ಬನ್ ‌ಫುಟ್‍ಪ್ರಿಂಟ್‌ ಕಡಿಮೆ ಮಾಡಲು ನೀವು ಹೆಚ್ಚಿಗೆ ಏನನ್ನು ಮಾಡಬಹುದು? ಅದು ನಿಮ್ಮ ಮನೆಯಿಂದಲೇ ಶುರುವಾಗಲಿ ಎಂದು ನಾವು ಹೇಳುತ್ತೇವೆ. ಸುಮಾರು ಮೂರರಲ್ಲಿ ಒಂದರಷ್ಟು ಇಂಗಾಲದ ಹೊರಸೂಸುವಿಕೆಯು ಮನೆಗಳಿಂದ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

top videos
    First published: