ಯೋಗ ಗುರು ಬಾಬಾ ರಾಮ್​ದೇವ್​ಗೆ ಮೇಡಮ್ ಟುಸ್ಸಾಡ್ಸ್ ಗೌರವ

news18
Updated:June 26, 2018, 5:59 PM IST
ಯೋಗ ಗುರು ಬಾಬಾ ರಾಮ್​ದೇವ್​ಗೆ ಮೇಡಮ್ ಟುಸ್ಸಾಡ್ಸ್ ಗೌರವ
news18
Updated: June 26, 2018, 5:59 PM IST
ನ್ಯೂಸ್ 18 ಕನ್ನಡ

ನವದೆಹಲಿ: ಖ್ಯಾತ ಯೋಗ ಗುರು ಬಾಬಾ ರಾಮ್​ದೇವ್ ಅವರ ಮೇಣದ ಪ್ರತಿಮೆ ದೆಹಲಿಯ ಮೇಡಮ್ ಟುಸ್ಸಾಡ್ಸ್​ನಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಇದೇ ಮೊದಲ ಬಾರಿ ವಿಶ್ವ ಪ್ರಸಿದ್ಧ​ ಮ್ಯೂಸಿಯಂ ಒಂದರಲ್ಲಿ ಯೋಗ ಗುರು ಒಬ್ಬರಿಗೆ ಈ ಗೌರವ ಸಿಗುತ್ತಿದ್ದು, ಈ ಹಿಂದೆ ಭಾರತದ ಸಿನಿತಾರೆಯರ ಮತ್ತು ಕ್ರಿಕೆಟ್ ಪಟುಗಳ ಮೇಣದ ಪ್ರತಿಮೆ ಮೇಡಮ್ ಟುಸ್ಸಾಡ್ಸ್​ನಲ್ಲಿ ನಿರ್ಮಿಸಲಾಗಿತ್ತು.

ಇದಕ್ಕಾಗಿ ಇತ್ತೀಚೆಗೆ ಯೋಗ ಗುರು ಲಂಡನ್​ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ನೀಡಿ, ಮ್ಯೂಸಿಯಂಪರಿಣಿತರ ಮುಂದೆ ಮೇಣದ ಪ್ರತಿಮೆ ತಯಾರಿಸಲು ವಿವಿಧ ಪೋಸ್ ಕೊಟ್ಟು ಬಂದಿದ್ದಾರೆ. ನುರಿತ ತಂಡ ತಂಡ ರಾಮ್​ದೇವ್​ ಹಾವಭಾವ, ಚರ್ಮದ ಬಣ್ಣ ಮತ್ತು ದೇಹದಾಕಾರವನ್ನು ಮಾಪನ ಮಾಡಿದ್ದು, 200 ಬಗೆಯ ವಿವಿಧ ರೀತಿಯ ಅಳತೆ ಪಡೆದಿದ್ದಾರೆ.   ವೃಕ್ಷಾಸನ ಭಂಗಿಯಲ್ಲಿ ಮೇಣದ ಪ್ರತಿಮೆಯಲ್ಲಿ ಬಾಬಾ ರಾಮದೇವ್ ಕಂಗೊಳಿಸಲಿದ್ದಾರೆ ಎಂದು ಮ್ಯೂಸಿಯಂ ಮೂಲಗಳು ತಿಳಿಸಿವೆ.

ಈ ಗೌರವದಿಂದಾಗಿ ಜಗತ್ತಿನಾದ್ಯಂತ ಯೋಗದ ಮಹತ್ವ ಸಾರುವ ಜೊತೆಗೆ ಯೋಗದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಸ್ಪೂರ್ತಿಯಾಗಲಿದೆ ಎಂದು ಬಾಬಾ ರಾಮ್​ದೇವ್​ ತಿಳಿಸಿದ್ದಾರೆ.

Loading...


ಕೆಲವು ತಿಂಗಳ ಹಿಂದೆಯೇ ಮೇಣದ ಪ್ರತಿಮೆ ನಿರ್ಮಿಸಲು ಮೇಡಮ್ ಟುಸ್ಸಾಡ್ಸ್​ ಅಧಿಕಾರಿಗಳು ಯೋಗಗುರು  ಮುಂದೆ ಪ್ರಸ್ತಾಪ ಇಟ್ಟಿದ್ದರಂತೆ. ಇದೀಗ ಅವರ ಮನವೊಲಿಸಿ ಪ್ರತಿಮೆ ನಿರ್ಮಾಣ ಪ್ರಾರಂಭಿಸಲಾಗಿದೆ ಎಂದು ಪತಂಜಲಿಯ ವಕ್ತಾರ ಎಸ್.ಕೆ ಟಿಜಾರವಾಲ ತಿಳಿಸಿದ್ದಾರೆ.

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಈಗಾಗಲೇ ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ ಬಚ್ಚನ್, ಕತ್ರೀನಾ ಕೈಫ್, ನರೇಂದ್ರ ಮೋದಿ ಸೇರಿದಂತೆ ಹಲವು ಖ್ಯಾತನಾಮರ ಮೇಣದ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.

ದೆಹಲಿಯಲ್ಲೂ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನ ಶಾಖೆಯನ್ನು ಕಳೆದ ವರ್ಷ ಪ್ರಾರಂಭಿಸಿದ್ದು, ಇಲ್ಲಿ ಇತ್ತೀಚೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿತ್ತು.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...