ಭಾರತದಲ್ಲಿ 18 ವರ್ಷಕ್ಕೂ ಮೊದಲು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವವರ ಸಂಖ್ಯೆ ಎಷ್ಟು ಗೊತ್ತಾ?

ಭಾರತದಲ್ಲಿ ಹದಿ ಹರೆಯದವರು ಸೆಕ್ಸ್​ ಮಾಡುವವರ ಸಂಖ್ಯೆಗಿಂತ ಕಿಸ್​ ಮಾಡುವುದು, ಗುಪ್ತಾಂಗಗಳನ್ನು ಮುಟ್ಟುವಂಥ ಚಟುವಟಿಕೆ ಮಾಡುವವರ ಸಂಖ್ಯೆ ಹೆಚ್ಚಿದೆಯಂತೆ. ಶೇ.50 ಯುವತಿಯರು 18 ವರ್ಷಕ್ಕೂ ಮೊದಲೇ ಸೆಕ್ಸ್​ಗೆ ಆಕರ್ಷಿತರಾಗಿರುತ್ತಾರೆ ಎನ್ನಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • RedWomb
 • Last Updated :
 • Share this:
  ಈ ಮೊದಲಿನ ವರ್ಷಗಳಲ್ಲಿ ‘ಸೆಕ್ಸ್​’ ಮತ್ತು ಕನ್ಯತ್ವ ಇವುಗಳ ಬಗ್ಗೆ ಮಾತನಾಡಲು ಅಂಜುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಎಲ್ಲರೂ ಸೆಕ್ಸ್​ ಬಗ್ಗೆ ಓಪನ್​ ಆಗಿ ಮಾತನಾಡುತ್ತಾರೆ, ಚರ್ಚೆ ನಡೆಸುತ್ತಾರೆ.

  ಬಿಹಾರದಲ್ಲಿ ನಡೆ ಸರ್ವೇ ಪ್ರಕಾರ ಶೇ. 14.1 ಹೆಣ್ಣು ಮಕ್ಕಳು ಹಾಗೂ ಶೇ.6.3 ಯುವತಿಯರು ಮದುವೆಗೂ ಮೊದಲು ಸೆಕ್ಸ್​ ಮಾಡಿದ್ದರಾಂತೆ. ಅಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಯುವತಿಯರಿಗೆ 18 ವರ್ಷ ಹಾಗೂ ಯುವಕರಿಗೆ 21 ವರ್ಷ ಮದುವೆ ವಯಸ್ಸು. ಹಾಗಾದರೆ, 18 ವರ್ಷಕ್ಕೂ ಮೊದಲು ಯಾರೂ ಸೆಕ್ಸ್​ ಮಾಡುವುದೇ ಇಲ್ಲ ಎಂಬುದು ನಿಮ್ಮ ಭಾವನೆಯೇ? ಇದು ತಪ್ಪು ಎನ್ನುತ್ತಾರೆ ವಿಜ್ಞಾನಿಗಳು.

  ಭಾರತದಲ್ಲಿ ಹದಿ ಹರೆಯದವರು ಸೆಕ್ಸ್​​ಗಿಂತ ಹೆಚ್ಚಾಗಿ ಕಿಸ್​ ಮಾಡುವುದು, ಗುಪ್ತಾಂಗಗಳನ್ನು ಮುಟ್ಟುವಂಥ ಚಟುವಟಿಕೆಯಲ್ಲಿ ತೊಡಗುತ್ತಾರಂತೆ. ಶೇ.50 ಯುವತಿಯರು 18 ವರ್ಷಕ್ಕೂ ಮೊದಲೇ ಸೆಕ್ಸ್​ಗೆ ಆಕರ್ಷಿತರಾಗಿರುತ್ತಾರೆ ಎನ್ನಲಾಗಿದೆ.

  ಇನ್ನು, ಭಾರತೀಯರಲ್ಲಿ ಕೆಲ ಮೂಢನಂಬಿಕೆಗಳು ಹಾಗೆಯೇ ಉಳಿದುಕೊಂಡಿವೆ. ಹಸ್ತ ಮೈಥುನ ಮಾಡುವುದರಿಂದ ಮಕ್ಕಳಾಗುವುದಿಲ್ಲ, ಸ್ತನ ಇದ್ದರೆ ಅದರಲ್ಲಿ ಹಾಲಿರುತ್ತದೆ ಎಂಬಿತ್ಯಾದಿ ಮೂಢ ನಂಬಿಕೆಗಳು ಉಳಿದುಕೊಂಡಿವೆ.

  ಹಸ್ತ ಮೈಥುನ ಮಾಡೋದು ಸರಿಯೇ?:

  ಹಸ್ತ ಮೈಥು ನ ಮಾಡುವುದು ತಪ್ಪು ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ, ಇದು ತಪ್ಪಲ್ಲ. ಇದರಿಂದ ಯಾವುದೆ ಅಡ್ಡ ಪರಿಣಾಮವಿಲ್ಲ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ. ಯುವಕರು ಮಾತ್ರವಲ್ಲದೆ, ಯುವತಿಯರು ಕೂಡ ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ.

  ಲಿಪ್​ ಕಿಸ್ ​ಮಾಡೋದು ಭಾರತೀಯ ಶೈಲಿಯೂ ಹೌದು:

  ಲಿಪ್​ ಕಿಸ್​ ಮಾಡುವುದು ಪಾಶ್ಚಿಮಾತ್ಯ ಶೈಲಿ ಎನ್ನುವುದು ಅನೇಕರ ಭಾವನೆ. ಆದರೆ, ಈ ಪದ್ಧತಿ ಮೊದಲಿನಿಂದಲೂ ಭಾರತದಲ್ಲಿ ಚಾಲ್ತಿಯಲ್ಲಿತ್ತು ಎನ್ನಲಾಗಿದೆ. ಕಾಮಸೂತ್ರದ 3ನೇ ಅಧ್ಯಾಯದ ಎರಡನೇ ಭಾಗದಲ್ಲಿ ಈ ಬಗ್ಗೆ ಬರೆಯಲಾಗಿದೆ.

  ಓರಲ್​ ಸೆಕ್ಸ್​:

  ಸೆಕ್ಸ್​ ಬಗ್ಗೆ ತಿಳಿದವರಿಗೆ ಓರಲ್​ ಸೆಕ್ಸ್​ ಬಗ್ಗೆ ಮಾಹಿತಿ ಇರುತ್ತದೆ. ಬಾಯಿ, ನಾಲಿಗೆ ಹಾಗೂ ತುಟಿಗಳನ್ನು ಬಳಕೆ ಮಾಡಿಕೊಂಡು ಓರಲ್​ ಸೆಕ್ಸ್​ ಮಾಡಲಾಗುತ್ತದೆ. ಗುಪ್ತಾಂಗಗಳನ್ನು ಖುಷಿಪಡಿಸಲು ಬಾಯಿಯ ಬಳಕೆ ಮಾಡಲಾಗುತ್ತದೆ. ಆದರೆ, ಈ ವಿಧಾನವನ್ನು ಅನೇಕರು ವಿರೋಧಿಸುತ್ತಾರೆ.
  Published by:Rajesh Duggumane
  First published: