HOME » NEWS » Lifestyle » FIRST PERIODS HELP YOUR DAUGHTER TO BE READY SESR

First Periods: ಮಗಳಿಗೆ ಹೇಳಬೇಕಾದ ಅವಶ್ಯ ಮಾತುಗಳಿವು...

ಇದರ ಬಗ್ಗೆ ಎಷ್ಟೇ ಜ್ಞಾನವಿದ್ದರೂ ಆ ಸಂದರ್ಭದಲ್ಲಿ ಆಗುವ ಮಾನಸಿಕ, ದೈಹಿಕ ತಲ್ಲಣಗಳನ್ನು  ಹೇಗೆ ನಿಭಾಯಿಸಬೇಕು ಎಂದು ಸೂಕ್ಷ್ಮವಾಗಿ ತಿಳಿಸುವುದು ಅವಶ್ಯ.

Seema.R | news18-kannada
Updated:December 14, 2020, 5:16 PM IST
First Periods: ಮಗಳಿಗೆ ಹೇಳಬೇಕಾದ ಅವಶ್ಯ ಮಾತುಗಳಿವು...
ಇದರ ಬಗ್ಗೆ ಎಷ್ಟೇ ಜ್ಞಾನವಿದ್ದರೂ ಆ ಸಂದರ್ಭದಲ್ಲಿ ಆಗುವ ಮಾನಸಿಕ, ದೈಹಿಕ ತಲ್ಲಣಗಳನ್ನು  ಹೇಗೆ ನಿಭಾಯಿಸಬೇಕು ಎಂದು ಸೂಕ್ಷ್ಮವಾಗಿ ತಿಳಿಸುವುದು ಅವಶ್ಯ.
  • Share this:
ರಕ್ತಸ್ರಾವದ ಮೊದಲ ಅನುಭವ ಸಾಕಷ್ಟು ಹಿಂಸಿಸುವುದು ಸುಳ್ಳಲ್ಲ. ಅದರಲ್ಲಿಯೂ ಮೊದಲ ರಸ್ತಸ್ರಾವ ಅಸಹ್ಯ, ಮುಜುಗರದ ಜೊತೆ ಕೆಟ್ಟ ಅನುಭವ ಮೂಡಿಸುತ್ತದೆ.  ದೇಹದಲ್ಲಿ ಆಗುತ್ತಿರುವ ಈ ಬದಲಾವಣೆ ನಿಜಕ್ಕೂ ಯಾತನಮತ. ತನಗೆ ಈ ವಸ್ತು ಬೇಡ ಎಂದಾಕ್ಷಣ ಅದನ್ನು ತೆಗೆದುಹಾಕುವಂತೆ ಅಮ್ಮನ ಬಳಿ ನನಗೆ ಈ ಋತುಸ್ರಾವ ಬೇಡ ಎಂದು ಕೊರಗುವ ಮಕ್ಕಳು ಇದ್ದಾರೆ. ಇದರ ಬಗ್ಗೆ ಎಷ್ಟೇ ಜ್ಞಾನವಿದ್ದರೂ ಆ ಸಂದರ್ಭದಲ್ಲಿ ಆಗುವ ಮಾನಸಿಕ, ದೈಹಿಕ ತಲ್ಲಣಗಳನ್ನು  ಹೇಗೆ ನಿಭಾಯಿಸಬೇಕು ಎಂದು ಸೂಕ್ಷ್ಮವಾಗಿ ತಿಳಿಸುವುದು ಅವಶ್ಯ. ಇದು ಕೇವಲ ನಿನ್ನ ಸಮಸ್ಯೆ ಮಾತ್ರವಲ್ಲ ಎಲ್ಲಾ ಹುಡುಗಿಯರ, ಮಹಿಳೆಯರ ಸಮಸ್ಯೆ ಎಂದು ಅರ್ಥೈಸಿಕೊಡುವುದು ಅವಶ್ಯ. ಮಗಳಿಗೆ ಈ ಸಂದರ್ಭದಲ್ಲಿ ಸಿಗುವ ಮಾನಸಿಕ ಧೈರ್ಯ ಅವಳನ್ನು ಈ ಋತುಸ್ರಾವ ಸಮಸ್ಯೆಯಿಂದ ಮುಕ್ತರನ್ನಾಗಿ ಮಾಡಲು ಸಹಾಯವಾಗುತ್ತದೆ. ಹಾಗಾಗಿ ತಾಯಿ ಮಾಡಬೇಕಾದ ಮೊದಲ ಕೆಲಸ ಅವಳೊಟ್ಟಿಗೆ ಕುಳಿತು ಮಾತನಾಡುವುದು. ಇದು ಎಲ್ಲ ಮಹಿಳೆಯರಿಗೂ ಸರ್ವೇ ಸಾಮಾನ್ಯ ಎಂದು ಹೇಳುವ ಬದಲು ಅದನ್ನು ಅರ್ಥೈಸುವ ಪರಿ ಬಹುಮುಖ್ಯ.

ಬಹುತೇಕರಲ್ಲಿದೆ ಅರಿವು

ಈಗಿನ ಬಹುತೇಕ ಮಕ್ಕಳಲ್ಲಿ ಋತುಸ್ರಾವದ ಕುರಿತು ಮೊದಲೇ ಅರಿವಿರುತ್ತದೆ. ಶಾಲೆ ಸೇರಿದಂತೆ ಪೋಷಕರು ಕೂಡ ಈ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುತ್ತಿದ್ದಾರೆ. ಈ ಹಿನ್ನಲೆ ದೇಹದಲ್ಲಿ ಆಗುವ ಬದಲಾವಣೆಗಳು ಮಕ್ಕಳಿಗೆ ತಕ್ಷಣಕ್ಕೆ ತಿಳಿಯುತ್ತದೆ.

ಋತುಚಕ್ರದ ಬಗ್ಗೆ ವಿವರಣೆ ನೀಡಿ

ಋತುಸ್ರಾವವಾದಾಗ ಉಂಟಾಗುವ ಮಾನಸಿಕ ಕ್ಷೋಬೆ ಬಗ್ಗೆ ತಿಳಿಸಿ. ಈ ಸಂದರ್ಭದಲ್ಲಿ ಬರುವ ಸಿಟ್ಟು, ಕೋಪ, ಅಸಹನೆ ಬಗ್ಗೆ ತಿಳಿ ಹೇಳಿ. ಅಲ್ಲದೇ ಹೇಗೆ ಇವುಗಳಿಂದ ಪಾರಾಗ ಬಹುದು ಎಂಬುದನ್ನು ತಿಳಿಸಿ. ಮೊದಲ ಋತುಸ್ರಾವದ ಬಳಿಕ ಈ ಪ್ರಕ್ರಿಯೆ ಇನ್ನು ಮುಂದೆ ಸಹಜ. ಹೇಗೆ ಈ ಚಕ್ರ ಕಾರ್ಯನಿರ್ವಹಿಸಲಿದೆ. ಎಷ್ಟು ಕಾಲ ಇರುತ್ತದೆ. ತನ್ನನ್ನು ಹೇಗೆ ನೋಡಿಕೊಳ್ಳಬೇಕು ಯಾವ ರೀತಿ ಮುನ್ನೆಚ್ಚರಿಕೆ ವಹಿಸ ಬೇಕು ಎಂಬುದನ್ನು ತಿಳಿಸಿ.

ಮುಂದಿನ ಋತುಚಕ್ರದ ಲಕ್ಷಣ ತಿಳಿಸಿ

ಪ್ರತಿ ತಿಂಗಳು ಋತುಚಕ್ರ ಸಂಭವಿಸುವ ಸಂದರ್ಭದಲ್ಲಿ ಕೆಲವು ಆರಂಭಿಕ ಲಕ್ಷಣಗಳು ಗೋಚರಿಸುತ್ತವೆ. ಕಾಲಿನ ಸೆಳೆತ, ಸೋಂಟ ನೋವು, ಹೊಟ್ಟೆ ನೋವಿನಂತಹ ಲಕ್ಷಣಗಳು ಕಂಡು ಬಂದಾಕ್ಷಣ ರಕ್ತಸ್ರಾವ ಉಂಟಾಗಲಿದೆ. ಈ ಹಿನ್ನಲೆ ಈ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್, ಮುಟ್ಟಿನ ಬಟ್ಟಲು​ ಸಿಗುವಂತೆ ಎಚ್ಚರವಹಿಸುವಂತೆ ತಿಳಿಸಿ.ಇದನ್ನು ಓದಿ: ಮೊದಲ ಪಿರಿಯಡ್ಸ್​ : ಮಗಳು ದೊಡ್ಡವಳಾಗುತ್ತಿದ್ದಾಳೆ ಎಂಬ ಸೂಚನೆಗಳಿವು

ಋತುಚಕ್ರ ತಪ್ಪಿದಾಗ ಎಚ್ಚರವಹಿಸಿ

28 ದಿನಗಳಿಗೆ ಒಮ್ಮೆ ಆಗುವ ಈ ಋತು ಚಕ್ರ ಆರು ತಿಂಗಳಾದರೂ ಆಗದಿದ್ದರೆ ತಕ್ಷಣ ಹೇಳುವಂತೆ ಎಚ್ಚರಿಸಿ. ಅಲ್ಲದೇ ಕೆಲವೊಮ್ಮೆ ರಕ್ತದ ಬಣ್ಣದಲ್ಲಿ ಆಗುವ ವ್ಯತ್ಯಾಸ. ಕೆಂಪು, ಕಂದು ಅಥವಾ ಕಪ್ಪು ಈ ಕುರಿತು ಮಾಹಿತಿ ತಿಳಿಸಲು ಹೇಳಿ. ಇದರಿಂದ ಆಗುವ ಆಚಾತುರ್ಯಗಳನ್ನು ತಪ್ಪಿಸಬಹುದು. ಸಹಜವಾಗಿ ಆಗುವ ಋತುಚಕ್ರದಲ್ಲಿ ಬದಲಾವಣೆ ಕಂಡು ಬಂದರೆ, ಅದು ಹೊಸ ಸಮಸ್ಯೆಗೆ ಕಾರಣವಾಗುತ್ತದೆ.

ನೋವಿಗೆ ಪರಿಹಾರ ತಿಳಿಸಿ

ಪಿರಿಯಡ್ಸ್​​​ ನೋವು ಎಂಬುದು ಬಹುತೇಕರಲ್ಲಿ ಸರ್ವೇ ಸಾಮಾನ್ಯ. ಆದರೆ ಇದನ್ನು ಹೇಗೆ ನಿವಾರಣೆ ಮಾಡಬಹುದು ಎಂಬುದನ್ನು ತಿಳಿಸಿ. ಪ್ರತಿ ನಾಲ್ಕರಿಂದ ಆರುಗಂಟೆಗೆ ಪ್ಯಾಡ್​ ಬದಲಾಯಿಸುವಂತೆ ತಿಳಿಸಿ. ಮುಟ್ಟಿನ ಬಟ್ಟಲು ಬಳಸಲು ಮುಂದಾದರೆ, ಯಾವ ರೀತಿ ಉಪಯೋಗಿಸಬೇಕು ಎಂದು ತಿಳಿಸಿ
Published by: Seema R
First published: December 14, 2020, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories