ಚಲನಚಿತ್ರಕ್ಕೂ (Movie) ನಿಜ ಜೀವನಕ್ಕೂ (Life) ತುಂಬಾ ವ್ಯತ್ಯಾಸವಿದೆ (Difference). ಎರಡೂ ಬೇರೆ ಬೇರೆ. ಚಲನಚಿತ್ರ ನೋಡಿ ಬಂದು, ನನ್ನ ಸಂಗಾತಿ (Partner), ಹೆಂಡತಿ (Wife) ಹೀಗೆ ಇರಬೇಕು. ಹೀಗೆ ಓಡಾಡಬೇಕು, ಬಟ್ಟೆ ತೊಡಬೇಕು, ರೊಮ್ಯಾಂಟಿಕ್ (Romantic) ಆಗಿರಬೇಕು ಎಂಬ ವಿಚಾರಗಳು ತಲೆಯಲ್ಲಿ ಗಿರಕಿ ಹೊಡೆಯುತ್ತವೆ. ಆದರೆ ಚಲನಚಿತ್ರ ನಿಜ ಜೀವನದಲ್ಲಿ ಆಗಲು ಸಾಧ್ಯವಿಲ್ಲ. ಚಲನಚಿತ್ರದಲ್ಲಿ ಎಷ್ಟೇ ಆತ್ಮೀಯತೆ, ಅನ್ಯೋನ್ಯತೆ ಬಗ್ಗೆ ತೋರಿಸಿದರೂ ಸಹ ನಿಜ ಜೀವನದಲ್ಲಿ ಹಾಗೆಲ್ಲಾ ಆಗಲು ಸಾಧ್ಯವಾಗದೆ ಇರಬಹುದು. ಯಾರೊಂದಿಗಾದರೂ ಅನ್ಯೋನ್ಯವಾಗಿರುವುದು ಎಂದರೆ ದೈಹಿಕ ಸಂಬಂಧ ಬೆಳೆಸುವುದು ಮಾತ್ರ ಆಗಿರುವುದಿಲ್ಲ. ಆದರೆ ದೈಹಿಕ ಸಂಪರ್ಕದ ವಿಚಾರದಲ್ಲಿ ನಿಜ ಜೀವನದಲ್ಲಿ ಇರುವ ಸಂಬಂಧವೇ ಶಾಶ್ವತ.
ಚಲನಚಿತ್ರಗಳಲ್ಲಿ ನಡೆಯುವುದು, ಕಥೆಯಷ್ಟೇ. ಹಾಗಾಗಿ ನಿಜ ಜೀವನದಲ್ಲಿ ವ್ಯಕ್ತಿ ದೈಹಿಕ ಸಂಬಂಧ ಬೆಳೆಸಿದಾಗ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಗಾತಿಯ ಜೊತೆಗೆ ಸಂಪರ್ಕ ಹೊಂದುತ್ತಾನೆ. ಯಾವುದೇ ವ್ಯಕ್ತಿಗೆ ನಿಕಟವಾಗಿರುವುದು ಅಥವಾ ದೈಹಿಕ ಸಂಪರ್ಕಕ್ಕೆ ಬರುವುದು ಒಂದು ದೊಡ್ಡ ಹೆಜ್ಜೆ.
ಅಂತಹ ಸ್ಥಿತಿಯಲ್ಲಿ ನೀವು ಯಾರೊಂದಿಗೆ ಆತ್ಮೀಯತೆ ಹೊಂದಿದ್ದೀರಿ? ಯಾರೊಂದಿಗೆ ದೈಹಿಕ ಸಂಬಂಧ ಹೊಂದಲು ಬಯಸುತ್ತೀರೋ, ಅವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಿರಿ. ಆನಂತರವಷ್ಟೇ ನಿಮ್ಮ ದೈಹಿಕ ಸಂಪರ್ಕ ಮಾಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಿ. ಹಾಗಾದರೆ ಸಂಗಾತಿಯ ಬಳಿ ದೈಹಿಕ ಸಂಪರ್ಕಕ್ಕೂ ಮೊದಲು ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
ಇದನ್ನೂ ಓದಿ: Ramadan ಹಬ್ಬದ ನಂತರ ನೀವು ನಿಮ್ಮ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು ಹೇಗೆ..?
ದೈಹಿಕ ಸಂಬಂಧಕ್ಕೆ ಇದು ಸರಿಯಾದ ಸಮಯ ಹೌದಾ?
ನೀವು ಯಾರೊಂದಿಗೆ ಆತ್ಮೀಯವಾಗಿದ್ದೀರಿ? ಅಥವಾ ದೈಹಿಕ ಸಂಬಂಧ ಮಾಡಲು ಬಯಸುತ್ತೀರೋ, ಆ ವ್ಯಕ್ತಿ ಜೊತೆ ಭಾವನಾತ್ಮಕವಾಗಿ ಹತ್ತಿರವಾಗುತ್ತ ಹೋಗುತ್ತೀರಿ. ನೀವು ಯಾರೊಂದಿಗೂ ಹತ್ತಿರವಾಗಲು ಬಯಸದಿದ್ದರೆ, ಹೆಚ್ಚು ಅನ್ಯೋನ್ಯ ಆಗಿರುವುದನ್ನು ಆದಷ್ಟು ತಪ್ಪಿಸಿ. ಯಾರೊಂದಿಗಾದರೂ ಆತ್ಮೀಯರಾಗುವ ಮೊದಲು, ಎದುರಿಗಿರುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಿ. ಇದು ತುಂಬಾ ಮುಖ್ಯ.
ಅನೇಕ ಬಾರಿ ಸಂಗಾತಿ ತನ್ನ ಎದುರಿಗಿರುವ ವ್ಯಕ್ತಿಯ ಬಯಕೆಯನ್ನು ತಿಳಿಯದೆ ಆತ್ಮೀಯತೆ ಹೊಂದುತ್ತಾರೆ. ಅದು ಭವಿಷ್ಯದಲ್ಲಿ ಕೆಲ ಸಮಸ್ಯೆ ತಂದೊಡ್ಡುತ್ತದೆ. ಅನೇಕ ಬಾರಿ ಲೈಂಗಿಕ ಸಂಬಂಧ ಮಾಡಿದ ನಂತರ ಸಂಗಾತಿಗೆ ತುಂಬಾ ಹತ್ತಿರವಾಗುವುದು ನಿಮಗೆ ಸಮಸ್ಯೆ ಉಂಟು ಮಾಡಬಹುದು. ಹಾಗಾಗಿ ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಕೇಳಿ, ಉತ್ತರ ಬಂದ ನಂತರ ನಿರ್ಧರಿಸಿ.
ಈ ವ್ಯಕ್ತಿ ನನ್ನ ಸರಿಯಾದ ಆಯ್ಕೆ ಆಗಿದ್ದಾರಾ?
ಯಾರೊಂದಿಗಾದರೂ ಆತ್ಮೀಯರಾಗುವ ಹಾಗೂ ದೈಹಿಕ ಸಂಬಂಧ ಮಾಡುವ ಮೊದಲು, ಆ ವ್ಯಕ್ತಿ ನಿಮಗೆ ಸೂಕ್ತವೇ ಎಂಬುದನ್ನು ನಿಮಗೆ ನೀವೇ ಕೇಳಿಳಿಕೊಳ್ಳಿ. ಅನೇಕ ಬಾರಿ ಮಹಿಳೆಯರು, ಪುರುಷರ ದೈಹಿಕ ನೋಟಕ್ಕೆ ಮನಸೋತು ದೈಹಿಕ ಸಂಪರ್ಕ ಬೆಳೆಸಲು ಬಯಸುತ್ತಾರೆ. ಆದರೆ ಆಕರ್ಷಕವಾಗಿರುವ ವ್ಯಕ್ತಿ ಎಂತಹ ಸ್ವಭಾವದವನು ಎಂದು ಮೊದಲು ತಿಳಿಯಿರಿ. ಇಲ್ಲದಿದ್ದರೆ ನಿಮಗೆ ತೊಂದರೆ ಉಂಟಾಗಬಹುದು.
ಮುಂದೆ ಆ ವ್ಯಕ್ತಿ ದೈಹಿಕ ಸಂಬಂಧದ ನಂತರ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಇತರರ ಬಗ್ಗೆ ಸೂಕ್ಷ್ಮವಾಗಿರುವುದಿಲ್ಲ. ತುಂಬಾ ಕೋಪಗೊಳ್ಳಬಹುದು ಅಥವಾ ಮದ್ಯದ ಚಟ ಹೊಂದಿರಬಹುದು. ಅನ್ಯೋನ್ಯತೆ, ದೈಹಿಕ ಸಂಪರ್ಕ ನಿಮಗೆ ಸ್ವಲ್ಪ ಸಮಯದ ಖುಷಿ ನೀಡಬಹುದು. ಆದರೆ ಅಂತಹ ವ್ಯಕ್ತಿಯೊಂದಿಗೆ ನಿಕಟವಾಗಿರುವುದು ಮುಂದೆ ಜೀವನದಲ್ಲಿ ನೀವು ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ.
ಹಾಗಾಗಿ ಆ ವ್ಯಕ್ತಿಗೆ ಆತ್ಮೀಯರಾಗುವ ಮೊದಲು ಮತ್ತು ದೈಹಿಕ ಸಂಪರ್ಕ ಮಾಡುವ ಮೊದಲು ಆ ವ್ಯಕ್ತಿ ನಿಮಗೆ ಸೂಕ್ತವೇ ಅಥವಾ ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಿ.
ಲೈಂಗಿಕತೆ ನನ್ನ ಮುಖ್ಯ ಮೌಲ್ಯಗಳಿಗೆ ಹೊಂದಿಕೆ ಆಗುತ್ತದೆಯೇ?
ಯಾರೊಂದಿಗಾದರೂ ದೈಹಿಕ ಸಂಪರ್ಕ ಮಾಡುವ ಮೊದಲು ಅದು ನಿಮ್ಮ ನೈತಿಕತೆ ಮತ್ತು ಮೌಲ್ಯಗಳಿಗೆ ಹೊಂದಿಕೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅಲ್ಲದೆ, ನಿಮ್ಮ ಸಂಗಾತಿ ಬೇರೆಯವರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾರಾ? ಇಲ್ಲವೇ ಎಂಬುದನ್ನು ಕಂಡುಕೊಳ್ಳಿ.
ಒಂದು ವೇಳೆ ಆ ವ್ಯಕ್ತಿ ಬೇರೆಯವರ ಜೊತೆ ದೈಹಿಕ ಸಂಪರ್ಕ ಹೊಂದಿದ್ದರೆ ಆತನ ಜೊತೆ ಮುಂದುವರೆಯುವುದು ಬೇಡ. ಯಾರೊಂದಿಗಾದರೂ ಆತ್ಮೀಯತೆ ಹೊಂದುತ್ತೀರಿ ಎಂದರೆ ನಿಮ್ಮ ಮೌಲ್ಯಗಳನ್ನು ನೀವು ನಿರ್ಲಕ್ಷಿಸುತ್ತೀರಿ ಎಂದಲ್ಲ. ನಿಮ್ಮ ಮೌಲ್ಯಗಳಲ್ಲಿ ನೀವು ರಾಜಿ ಮಾಡಿಕೊಳ್ಳದಿರುವುದು ಮುಖ್ಯ.
ನಿಮ್ಮ ಸಂಗಾತಿಗೆ ನಮ್ಮಿಬ್ಬರ ಸಂಬಂಧ ಏನು ಎಂಬ ಪ್ರಶ್ನೆ ಕೇಳಿ
ನಾವು ಒಬ್ಬರಿಗೊಬ್ಬರು ಯಾವ ಸಂಬಂಧ ಹೊಂದಿದ್ದೇವೆ ಎಂಬ ಪ್ರಶ್ನೆಯನ್ನು ನೀವು ಯಾರ ಜೊತೆಯೋ ದೈಹಿಕ ಸಂಪರ್ಕ ಹೊಂದುವ ಮೊದಲು ಆಲೋಚನೆ ಮಾಡಿ. ನಿಮ್ಮಿಬ್ಬರಿಗೂ ಒಂದೇ ರೀತಿಯ ಆಲೋಚನೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ.
ಇದಕ್ಕಾಗಿ ನಿಮ್ಮ ಸಂಗಾತಿಯು ಏಕಾಂಗಿಯಾಗಿದ್ದಾರಾ? ಅಥವಾ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾರಾ? ಎಂದು ನೀವು ನೇರವಾಗಿ ಕೇಳಿ. ಕೊನೆಯ STD ಮತ್ತು HIV ಪರೀಕ್ಷೆ ಯಾವಾಗ ಮಾಡಿಸಿದ್ದಾರೆ, ಎಲ್ಲವೂ ಸರಿಯಾಗಿದೆಯಾ? ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆ ನಂತರ ಸಂಬಂಧದಲ್ಲಿ ಮುಂದುವರಿಯುವ ಬಗ್ಗೆ ಯೋಚನೆ ಮಾಡಿ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸೂಪರ್ ಫುಡ್ ಗಳ ಉಪಾಹಾರ ಸೇವಿಸಿ, ಪ್ರಯೋಜನ ಪಡೆಯಿರಿ
ಜನನ ನಿಯಂತ್ರಣಕ್ಕಾಗಿ ಏನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
ಅನ್ಯೋನ್ಯತೆ ಹೊಂದಿದಾಗ ಮತ್ತು ದೈಹಿಕ ಸಂಪರ್ಕಕ್ಕೆ ಬಂದಾಗ ಅನಗತ್ಯ ಗರ್ಭಧಾರಣೆ ಅಥವಾ ನಂತರ ಯಾವುದೇ ಕಾಯಿಲೆಯ ಅಪಾಯ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು ಯಾವ ರಕ್ಷಣೆ ಬಳಸುತ್ತೀರಿ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ