Filter Coffeeಯಿಂದ ಮಾಡಿದ ಸೂಪರ್ desserts ಟೇಸ್ಟ್ ಮಾಡಿದ್ದೀರಾ? ಬೆಂಗಳೂರಿನ ಈ ಸ್ಥಳಗಳಲ್ಲಿ ಸಿಗುತ್ತೆ, ಟ್ರೈ ಮಾಡಿ

Near Me Cafes: ಫಿಲ್ಟರ್ ಕಾಫಿ ಜೊತೆ  ಇಡ್ಲಿ ಮತ್ತು ದೋಸೆಯಂತಹತಿಂಡಿಗಳನ್ನು ತಿನ್ನುವುದು ಸಾಮಾನ್ಯ, ಆದರೆ ನಗರದ ಹೆಚ್ಚಿನ ಸ್ಥಳಗಳು ಊಟದ ಕೊನೆಯಲ್ಲಿ ನಿಮಗೆ ಒಂದು ಕಪ್ ಕಾಫಿಯನ್ನು ನೀಡುತ್ತವೆ. ಬೆಂಗಳೂರಿನ ಕೆಲವು ಸ್ಥಳಗಳು ಫಿಲ್ಟರ್ ಕಾಫಿ ಸಿಹಿತಿಂಡಿಗಳೊಂದಿಗೆ ಒಂದು ಹೆಜ್ಜೆ ಮುಂದಿಟ್ಟಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಸಿ ಬಿಸಿ ಫಿಲ್ಟರ್ ಕಾಫಿ (Filter Coffee) ಎಂದರೆ ರಾತ್ರಿ, ಬೆಳಗು ನೋಡದೆ ಕುಡಿಯಲು ಸಿದ್ಧರಿರುತ್ತಾರೆ. ಎಲ್ಲದರೂ ಒಳ್ಳೆ ಕಾಫಿ ಸಿಗುತ್ತದೆ ಎಂದರೆ ಸಾಕು, ಎಷ್ಟು ದೂರವಾದ್ರೂ ಸರಿ ಅಲ್ಲಿಗೆ ಹೋಗಿ ಕಾಫಿ ಎಂಜಾಯ್​ ಮಾಡುತ್ತಾರೆ. ಈ ಫಿಲ್ಟರ್​ ಕಾಫಿ ದಕ್ಷಿಣ ಭಾರತದಲ್ಲಿ (South India)  ಅಥವಾ ಬೆಂಗಳೂರಿನಲ್ಲಿ (Bengaluru)  ಹೆಚ್ಚು ಪ್ರಸಿದ್ಧ, ಹಾಗಾಗಿ ಹಲವಾರು ರೆಸ್ಟೋರೆಂಟ್​ (Restaurants) ಹಾಗೂ ಕೆಫೆಗಳು (Cafe)  ಈ ಫಿಲ್ಟರ್​ ಕಾಫಿಯನ್ನು ಬಳಸಿಕೊಂಡು ಅಥವಾ ಅದರ ರುಚಿಯಲ್ಲಿ ವಿಭಿನ್ನವಾದ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ.

ಹೆಚ್ಚಿನ ದಕ್ಷಿಣ ಭಾರತೀಯರಿಗೆ ಬೆಳಿಗ್ಗೆ ಫಿಲ್ಟರ್ ಕಾಫಿ ಬೇಕೇ ಬೇಕು. ಇದರ ಮೂಲವನ್ನು ಹುಡುಕಿದರೆ, 17 ನೇ ಶತಮಾನದ ಆರಂಭದಲ್ಲಿ ಬಾಬಾ ಬುಡನ್ ಎಂಬ ಸೂಫಿ ಸಂತರು ಯೆಮನ್‌ನಿಂದ ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರು ಜಿಲ್ಲೆಯ ಚಂದ್ರಗಿರಿ ಬೆಟ್ಟಗಳಲ್ಲಿ ನೆಟ್ಟರು. ಹೀಗೆ ಕಾಫಿ ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ.

ಫಿಲ್ಟರ್ ಕಾಫಿ ಜೊತೆ  ಇಡ್ಲಿ ಮತ್ತು ದೋಸೆಯಂತಹತಿಂಡಿಗಳನ್ನು ತಿನ್ನುವುದು ಸಾಮಾನ್ಯ, ಆದರೆ ನಗರದ ಹೆಚ್ಚಿನ ಸ್ಥಳಗಳು ಊಟದ ಕೊನೆಯಲ್ಲಿ ನಿಮಗೆ ಒಂದು ಕಪ್ ಕಾಫಿಯನ್ನು ನೀಡುತ್ತವೆ. ಬೆಂಗಳೂರಿನ ಕೆಲವು ಸ್ಥಳಗಳು ಫಿಲ್ಟರ್ ಕಾಫಿ ಸಿಹಿತಿಂಡಿಗಳೊಂದಿಗೆ ಒಂದು ಹೆಜ್ಜೆ ಮುಂದಿಟ್ಟಿವೆ, ಇದು ಊಟವನ್ನು ಪೂರ್ತಿಗೊಳಿಸಲು ಪರಿಪೂರ್ಣ ಮಾರ್ಗವಾಗಿದೆ ಎನ್ನಲಾಗುತ್ತದೆ. ಹಾಗಾದ್ರೆ ಫಿಲ್ಟರ್​ ಕಾಫಿ ಜೊತೆ ಪ್ರಯೋಗ ಮಾಡುತ್ತಿರುವ ಬೆಂಗಳೂರಿನ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಿಮ್ಮನೆ ಗಾರ್ಡನ್​ಗೆ ಬೇಕಾಗೋ ಬೆಸ್ಟ್ ಗಿಡಗಳು ಬೆಂಗಳೂರಿನ ಈ ನರ್ಸರಿಗಳಲ್ಲಿ ಸಿಗುತ್ತವೆ ನೋಡಿ

ಬಾಬ್ಸ್​ ಬಾರ್​

ಕಾಫಿಯ ಜೊತೆ ವಿಭಿನ್ನ ಪ್ರಯತ್ನ ಮಾಡುತ್ತಿರುವ ಸ್ಥಳಗಳಲ್ಲಿ ಬಾಬ್ಸ್​ ಬಾರ್​ ಕೂಡ ಒಂದು. ಮಂಗಳೂರಿನ ಪೋರ್ಕ್ ಚಿಲ್ಲಿ ಬಫತ್, ಮಡಿಕೇರಿ ಹಸಿ ಬಾಳೆ ಕಟ್ಲೆಟ್, ಮತ್ತು ಮೊಟ್ಟೆಯ ಪರಾಠದೊಂದಿಗೆ ಮಟನ್ ಕೀಮಾದಂತಹ ಬೆಂಗಳೂರಿನ ಬೀದಿ ಆಹಾರವನ್ನು ಒಳಗೊಂಡಿರುವ ತನ್ನ ಮೆನುವಿನ ಮೂಲಕ ಈ ಸ್ಥಳವು ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದೆ. ಆದರೆ ಅವರ ಫಿಲ್ಟರ್ ಕಾಫಿ ಚೀಸ್ ಅನ್ನು ಇಲ್ಲಿ ಪ್ರಯತ್ನ ಮಾಡಲೇಬೇಕು. ಇದು ಚಿಕ್ಕಮಗಳೂರು ಕಾಫಿಯಿಂದ ತುಂಬಿದ ಗುಲಾಬಿ ಕುಕೀ ಕ್ರಶ್‌ನಲ್ಲಿ ಕಾಫಿ ಟೋಫಿಯನ್ನು ಒಳಗೊಂಡಿರುತ್ತದೆ.

ವಿಳಾಸ: HAL 2ನೇ ಹಂತ, ದೂಪನಹಳ್ಳಿ, ಇಂದಿರಾನಗರ, ಬೆಂಗಳೂರು, ಕರ್ನಾಟಕ

ಚಾಯ್​ ಪಾಯಿಂಟ್

ರುಚಿಕರವಾದ ಚಹಾ, ಕಾಫಿ ಜೊತೆಗೆ  ರುಚಿಕರ ತಿಂಡಿಗಳೊಂದಿಗೆ ಸಂಜೆಯ ತಿಂಡಿಗಳಿಗೆ ಈ  ಚಾಯ್ ಪಾಯಿಂಟ್ ಬೆಸ್ಟ್ ಸ್ಥಳ ಎನ್ನಲಾಗುತ್ತದೆ. ರುಚಿಕರವಾದ ಸಮೋಸಾಗಳು, ಪೋಹಾ ಮತ್ತು ಬನ್ ಮಸ್ಕಾ ಜೊತೆಗೆ, ಚಾಯ್ ಪಾಯಿಂಟ್ ಓಟ್ಸ್, ಉತ್ತಮ-ಗುಣಮಟ್ಟದ ಫಿಲ್ಟರ್ ಕಾಫಿಯೊಂದಿಗೆ ಫಿಲ್ಟರ್ ಕಾಫಿ ಕುಕೀಗಳನ್ನು ಸಹ ನೀಡುತ್ತದೆ. ವಿಶೇಷವಾಗಿ ನೀವು ಆರೋಗ್ಯಕರವಾಗಿ ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ ಇದು ನಿಮಗೆ ಹೇಳಿ ಮಾಡಿಸಿದ ಸ್ಥಳ.

ವಿಳಾಸ: ಬಾಗ್ಮನೆ ಕಾನ್ಸ್ಟೆಲೇಷನ್ ಬಿಸಿನೆಸ್ ಪಾರ್ಕ್ ಔಟರ್ ರಿಂಗ್ ರೋಡ್, ಮಾರತಹಳ್ಳಿ, ಬೆಂಗಳೂರು, ಕರ್ನಾಟಕ

ಹೆಲ್​ ಆ್ಯಂಡ್​ ಹೆವೆನ್​

ರಸಗುಲ್ಲಾದಂತಹ ರುಚಿಕರ ಆಹಾರಗಳನ್ನು ಒದಗಿಸುವ ಕ್ಲೌಡ್ ಕಿಚನ್ ಕೋರಮಂಗಲ ನಿವಾಸಿಗಳು ಯಾವಾಗಲೂ ಆಯ್ಕೆ ಮಾಡುವ ಒಂದು ಸ್ಥಳವಾಗಿದೆ. ಇಲ್ಲಿನ ತಿರಮಿಸು ಎಂಬ ಸ್ಪೆಷಲ್​ ಫಿಲ್ಟರ್ ಕಾಫಿ ಪದಾರ್ಥ ನಿಮ್ಮನ್ನ ಸೆಳೆಯುತ್ತದೆ.ಮಸ್ಕಾರ್ಪೋನ್ ಚೀಸ್, ಬಿಸ್ಕತ್ತು ಮತ್ತು ಕೋಕೋದೊಂದಿಗೆ ಲೇಯರ್ ಮಾಡಲಾದ ಫಿಲ್ಟರ್ ಕಾಫಿ ಮತ್ತು ಡಾರ್ಕ್ ಚಾಕೊಲೇಟ್ ಶೇವಿಂಗ್‌ಗಳ ವಿಶೇಷ ಪದಾರ್ಥಗಳನ್ನು ನೀವಿಲ್ಲ ಎಂಜಾಯ್ ಮಾಡಬಹುದು.

ವಿಳಾಸ: ಹೊರ ವರ್ತುಲ ರಸ್ತೆ, ದೊಡ್ಡನೆಕುಂದಿ, ಮಾರತಹಳ್ಳಿ, ಬೆಂಗಳೂರು, ಕರ್ನಾಟಕ

ದಿ ಬೇಕರ್ ಡಜನ್

ಬ್ರೆಡ್‌ಗಳು, ಕುಕೀಗಳು, ಕೇಕ್‌ಗಳು ಮತ್ತು ಕಪ್‌ಕೇಕ್‌ಗಳಿಗೆ ಈ ದಿ ಬೇಕರ್ ಡಜನ್ ಉತ್ತಮ ಆಯ್ಕೆ ಎನ್ನಲಾಗಿದೆ. ಅವರ ಕ್ರೋಸೆಂಟ್‌ಗಳು, ಗೋಡಂಬಿ ಕುಕೀಸ್ ಮತ್ತು ಪೇಯ್ನ್​-ಔ-ಚಾಕೊಲೇಟ್ ಅನ್ನು ಮಿಸ್​ ಮಾಡದೇ ಟ್ರೈ ಮಾಡಿ. ಆರೊಮ್ಯಾಟಿಕ್ ಫಿಲ್ಟರ್ ಕೇಕ್ ನಿಮಗೆ ಇಷ್ಟವಾಗದೇ ಇರದು.

ವಿಳಾಸ: ದೊಮ್ಲೂರ್ ಲೇಔಟ್, 2ನೇ ಮುಖ್ಯ ರಸ್ತೆ, 7ನೇ ಕ್ರಾಸ್ ರಸ್ತೆ, ಬೆಂಗಳೂರು, ಕರ್ನಾಟಕ

ಟೀ ಆರ್ಟ್

ಇದನ್ನೂ ಓದಿ: ತೂಕ ಇಳಿಸೋಕೆ ಈ ಸಮಯದಲ್ಲಿ ವ್ಯಾಯಾಮ ಮಾಡ್ಬೇಕಂತೆ

ಚಾಕೊಲೇಟ್ ಚೆರ್ರಿ ಲಾಗ್, ರಾಸ್ಪ್ಬೆರಿ ಫ್ರೆಂಚ್ ವೆನಿಲ್ಲಾ ಟ್ಯಾಬ್ಲೆಟ್, ಕ್ರೀಮ್ ಚೀಸ್ ಅನಾನಸ್ ಸ್ವಿಸ್ ರೋಲ್ ಮತ್ತು ಕೋಕೋ ಪ್ರಲೈನ್ ಕ್ರೀಮ್‌ನೊಂದಿಗೆ ಆರೆಂಜ್​ ಕೇಕ್‌ನಂತಹ ವಿಭಿನ್ನ ಆಯ್ಕೆಗಳನ್ನು ಹೊಂದಿರುವ ಈ ಸ್ಥಳದಲ್ಲಿ ಕ್ಲಾಸಿಕ್ ಡೆಸರ್ಟ್‌ಗಳಿಗೆ ಫೇಮಸ್​. ಸ್ಪಂಜಿನ ಕೋಕೋ ಬಿಸ್ಕಟ್‌ನಲ್ಲಿ ಫಿಲ್ಟರ್ ಕಾಫಿ ತುಂಬಿಸಿರುವ ಟಿರಮಿಸು ಟೇಸ್ಟ್ ಎಂದಿಗೂ ಮರೆಯುವುದಿಲ್ಲ.

ವಿಳಾಸ: BHBCS ಲೇಔಟ್, ಹಂತ 2, J. P. ನಗರ, ಬೆಂಗಳೂರು, ಕರ್ನಾಟಕ
Published by:Sandhya M
First published: