Health Tips: ಋತುಚಕ್ರದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ, ಪಿರಿಯಡ್ಸ್​ಗೂ ಮುನ್ನ ಈ ಆಹಾರಗಳನ್ನ ತಿನ್ನೋದು ಉತ್ತಮ

ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಋತುಚಕ್ರದ ಸಮಯದಲ್ಲಿ ಆರಾಮಾಗಿರಲು ಸಹಾಯ ಮಾಡುತ್ತದೆ. ತಲೆನೋವು ಮತ್ತು ಸ್ತನ ಮೃದುತ್ವಕ್ಕೆ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಋತುಚಕ್ರದ (Menstrual Cycle) ಸಂದರ್ಭದಲ್ಲಿ ಹಾರ್ಮೋನ್‌ಗಳ (Hormonal Changes) ಬದಲಾವಣೆಯಿಂದಾಗಿ ಹಲವು ಸಮಸ್ಯೆಗಳು ಕಂಡುಬರುವುದು ಸಹಜ. ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಹೊಟ್ಟೆ(Abdominal Pain) ನೋವು, ವಾಕರಿಕೆ, ಸುಸ್ತು,(Tiredness) ಹೊಟ್ಟೆ ಉಬ್ಬರ, ಕಿರಿಕಿರಿ ಉಂಟಾಗುತ್ತದೆ. ಈ ಮುಟ್ಟಿನ ಅವಧಿಯಲ್ಲಿ ಮಹಿಳೆಯರು(Women) ತಮ್ಮ ದೇಹ ಸ್ಥಿತಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಜೊತೆಗೆ ಋತುಚಕ್ರದ ಮೊದಲು ಸಹ ಕೆಲವು ಕಾಳಜಿ, ಕ್ರಮಗಳನ್ನು ತೆಗೆದುಕೊಳ್ಳಬೇಕು.

PMS ಅಥವಾ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಹಲವಾರು ಮಹಿಳೆಯರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಋತುಚಕ್ರದ 2 ವಾರಗಳ ಮೊದಲು ಈ ಲಕ್ಷಣಗಳು ಪ್ರಾರಂಭವಾಗಬಹುದು. ಈ ಸಮಯದಲ್ಲಿ ಹಾರ್ಮೋನುಗಳ ಅಸಮತೋಲನ, ಬಯಕೆಗಳು, ಕಿರಿಕಿರಿ, ತಲೆನೋವು, ಆಯಾಸ ಮತ್ತು ಮೂಡ್ ಬದಲಾವಣೆ ಆಗುತ್ತದೆ. ಋತುಚಕ್ರದ ಈ ಸಂದರ್ಭದಲ್ಲಿ ಈ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಮೇಲಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಅಡ್ಡ ಪರಿಣಾಮಗಳಿಲ್ಲದಂತಹ ಕೆಲವು ಕ್ರಮಗಳನ್ನು ಅನುಸರಿಸಬೇಕು. PMS ನಿಯಂತ್ರಿಸಲು ಮುಟ್ಟಿನ ಅವಧಿಗೆ ಮೊದಲು ಕೆಲವು ಆಹಾರಗಳನ್ನು ಪೌಷ್ಟಿಕತಜ್ಞ ಮಿನಾಚಿ ಪೆಟ್ಟುಕೋಲಾ ತಿಳಿಸಿದ್ದಾರೆ.

ಋತುಚಕ್ರದ ಮುನ್ನ ಈ ಆಹಾರಗಳನ್ನು ಸೇವಿಸಿ

1) ಸ್ಪೀನಚ್

ಬೀನ್ಸ್, ಪಾಲಕ್ ಅಥವಾ ಒಣದ್ರಾಕ್ಷಿಗಳಂತಹ ಕಬ್ಬಿಣ ಭರಿತ ಆಹಾರವು ಮಹಿಳೆಯರಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸೊಪ್ಪಿನಂತಹ ಆಹಾರಗಳನ್ನು ಕಬ್ಬಿಣಾಂಶದ ಕೊರತೆ ಇರುವವರು ಹೆಚ್ಚು ಸೇವನೆ ಮಾಡಬಹುದು. ಬಸಳೆ, ಬ್ರೊಕೋಲಿ, ಮೆಂತ್ಯೆ ಸೊಪ್ಪು ಮತ್ತು ಶತಾವರಿ ತುಂಬಾ ಪರಿಣಾಮಕಾರಿ. ಗ್ರೀನ್ ಸಲಾಡ್, ಸ್ಮೂಥಿ ಅಥವಾ ಹಾಗೆ ಸ್ವಲ್ಪ ಪ್ರೈ ಮಾಡಿಕೊಂಡು ತಿನ್ನುವುದರಿಂದ ಲಾಭ ಹೆಚ್ಚು.

ಇದನ್ನೂ ಓದಿ: Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್​ ಹೇಳುತ್ತೆ ಸಂಶೋಧನೆ?

2) ಬೀಜಗಳು ಮತ್ತು ಧಾನ್ಯ

ಒಂದು ಹಿಡಿ ಬಾದಾಮಿ, ಪಿಸ್ತಾ ಅಥವಾ ಸೂರ್ಯಕಾಂತಿ ಬೀಜಗಳು PMS ರೋಗಲಕ್ಷಣಗಳನ್ನು ನಿವಾರಿಸಲು ಸಹಾಯಕವಾಗಬಹುದು. ಅವುಗಳು ವಿಟಮಿನ್ ಬಿ, ವಿಶೇಷವಾಗಿ B6 ಮತ್ತು ರೈಬೋಫ್ಲಾವಿನ್‌ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಸಾಮಾನ್ಯ PMS ರೋಗಲಕ್ಷಣಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ವಿಟಮಿನ್ ಬಿ, ವಿಟಮಿನ್ ಇ ಮತ್ತು ಮೆಗ್ನೀಶಿಯಂ ಸಮೃದ್ಧವಾಗಿರುವಂತಹ ಇಡೀ ಧಾನ್ಯಗಳು ಋತುಚಕ್ರದ ವೇಳೆ ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುವುದು. ಪಿಎಂಎಸ್, ಖಿನ್ನತೆ ಮತ್ತು ನಿಶ್ಯಕ್ತಿ ಹೋಗಲಾಡಿಸಲು ಇದು ಪರಿಣಾಮಕಾರಿ. ಸಕ್ಕರೆ ಇರುವಂತಹ ಆಹಾರ ತಿನ್ನುವ ಬದಲು ನೀವು ಒಂದು ಹಿಡಿಯಷ್ಟು ಬೀಜಗಳನ್ನು ತಿನ್ನಿ. ಇದರಲ್ಲಿ ಪ್ರೋಟೀನ್, ಕೊಬ್ಬಿನಾಮ್ಲ, ಖನಿಜಾಂಶ, ವಿಟಮಿನ್ ಮತ್ತು ನಾರಿನಾಂಶವು ಸಮೃದ್ಧವಾಗಿದೆ.

3) ಡಾರ್ಕ್ ಚಾಕೊಲೇಟ್

ಸತು ಮತ್ತು ಫೋಲೇಟ್ ಭರಿತ ಆಹಾರವು PMS ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಹೆಚ್ಚಿನ ಪೊಟ್ಯಾಷಿಯಮ್ ಹೊಂದಿರುವ ಡಾರ್ಕ್ ಚಾಕೊಲೇಟ್ ನೋವು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿ ಇರುವಂತಹ ಡಾರ್ಕ್ ಚಾಕೊಲೇಟ್ ಮನಸ್ಥಿತಿ ಸುಧಾರಣೆ ಮಾಡುವುದು. ಡಾರ್ಕ್ ಚಾಕೊಲೇಟ್ ಋತುಚಕ್ರದ ವೇಳೆ ಕಾಡುವಂತಹ ಮನಸ್ಥಿತಿ ಬದಲಾವಣೆ ತಡೆಯುವುದು.

ಇದನ್ನೂ ಓದಿ: Vitamin D ಸಪ್ಲಿಮೆಂಟ್ಸ್‌ ತೆಗೆದುಕೊಳ್ತಿದ್ರೆ ಹುಷಾರಾಗಿರಿ... ಯಾಕೆ ಅಂತಾ ಈ ಸ್ಟೋರಿ ಓದಿ..!

4) ಅಗತ್ಯ ಕೊಬ್ಬಿನಾಮ್ಲಗಳು

ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಋತುಚಕ್ರದ ಸಮಯದಲ್ಲಿ ಆರಾಮಾಗಿರಲು ಸಹಾಯ ಮಾಡುತ್ತದೆ. ತಲೆನೋವು ಮತ್ತು ಸ್ತನ ಮೃದುತ್ವಕ್ಕೆ ಸಹಾಯ ಮಾಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿರುವಂತಹ ಸಾಲ್ಮನ್ ಮೀನು, ಮೊಟ್ಟೆಯಂತ ಆಹಾರಗಳು ಸ್ನಾಯುಗಳಿಗೆ ಆರಾಮ ನೀಡುವುದು ಮತ್ತು ಸೆಳೆತವನ್ನು ಕಡಿಮೆ ಮಾಡುವುದು.

5) ಫೈಬರ್ ಸಮೃದ್ಧ ಆಹಾರ

ಇಡೀ ತಿಂಗಳು ಆರೋಗ್ಯಕರವಾಗಿ ತಿನ್ನುವುದು ಮತ್ತು ನಿಮ್ಮ ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಫೈಬರ್-ಭರಿತ ಆಹಾರಗಳನ್ನು ಸೇರಿಸುವುದರಿಂದ PMS ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Published by:vanithasanjevani vanithasanjevani
First published: