ಕೊರೋನಾ (Corona) ಕಡಿಮೆ ಆಯಿತು ಎನ್ನುವಾಗಲೇ ಹೊಸರೂಪ ಎತ್ತಿ ಬಂದಿರುವ ಕೊರೊನಾ ಓಮಿಕ್ರಾನ್ (Omicron)ಸೋಂಕು ದಿನದಿಂದ ದಿನಕ್ಕೆ ತನ್ನ ಅಬ್ಬರ ಜಾಸ್ತಿ ಮಾಡುತ್ತಿದೆ.. ತಿಂಗಳ(Month) ಆರಂಭದಲ್ಲಿ ಬೆರಳೆಣಿಕೆಯಷ್ಟು ಇದ್ದ ಪ್ರಕರಣಗಳು ಮಾಸದ ಮಧ್ಯಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ(Numbers) ಪ್ರತಿನಿತ್ಯ ಪತ್ತೆಯಾಗುತ್ತಿವೆ.. ಮೊದಲೆರಡು ಅಲೆಗಳಿಗೆ ಹೋಲಿಕೆ ಮಾಡಿದರೆ ಮೂರನೇ ಅಲೆ ತೀವ್ರ ಭಯಂಕರ ಸ್ವರೂಪದಲ್ಲಿ ಇರುವಂತೆ ಕಾಣುತ್ತಿದೆ.. ಸದ್ಯ ರಾಜ್ಯದಲ್ಲಿ(State) ಒಂದೇ ದಿನ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದ ಜನರನ್ನು ಭಯಭೀತರನ್ನಾಗಿ ಮಾಡುವಂತೆ ಮಾಡಿದೆ.. ಹೀಗಾಗಿ ಜನರು ಸೋಂಕಿನಿಂದ ರಕ್ಷಣೆ ಪಡೆಯಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ.
ಮಾಸ್ಕ್(Mask) , ಸ್ಯಾನಿಟೈಸರ್, ಸಾಮಾಜಿಕ ಅಂತರ(Social Distance) ಕಾಪಾಡಿಕೊಂಡರು ಕೊರೊನಾದಿಂದ ರಕ್ಷಣೆ ಪಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಂಬುದು ಬಹುಮುಖ್ಯ.. ಹೀಗಾಗಿ ಹಲವಾರು ಕ್ರಮಗಳನ್ನು ಅನುಸರಿಸುವುದರ ಜೊತೆಗೆ ಸ್ವಚ್ಛತೆ ಹಾಗೂ ಪೌಷ್ಟಿಕ ಆಹಾರದ ಅಭ್ಯಾಸಗಳು ನಮ್ಮನ್ನ ರೋಗದಿಂದ ರಕ್ಷಣೆ ಮಾಡಲಿವೆ..ಹೀಗಾಗಿ ಪ್ರತಿನಿತ್ಯ ನೀವು ತಪ್ಪದೇ ಈ ಕ್ರಮಗಳನ್ನು ಅನುಸರಿಸಿ..
1)ಸಮತೋಲಿತ ಆಹಾರ: ಸಮತೋಲಿತ ಆಹಾರ ಎಂದರೆ, ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒದಗಿಸುವುದು. ಇದು ಪ್ರೊಟೀನ್, ಕಾರ್ಬೊಹೈಡ್ರೇಟ್ ಹಾಗೂ ಕೊಬ್ಬಿನಂಥ ದೊಡ್ಡ ಪ್ರಮಾಣದ ಪೋಷಕಾಂಶಗಳಿಂದ ಹಿಡಿದು, ಸೂಕ್ಷ್ಮ ಪೋಷಕಾಂಶಗಳಾದ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಳ್ಳುತ್ತದೆ. ದೇಹದ ವಿವಿಧ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಪ್ರತಿಯೊಂದು ಪೋಷಕಾಂಶಗಳು ಕೂಡಾ ಪಾತ್ರ ವಹಿಸುತ್ತವೆ.ಹಣ್ಣು ಮತ್ತು ತರಕಾರಿ, ಆಹಾರಧಾನ್ಯ ಹಾಗೂ ಬೇಳೆಕಾಳು, ಮಾಂಸ ಮತ್ತು ಹಾಲಿನ ಉತ್ಪನ್ನಗಳು ಹಾಗೂ ಕೊಬ್ಬು ಮತ್ತು ಎಣ್ಣೆ, ಹಸಿರು , ನಾರಿನಾಂಶವಿರುವ ಸೊಪ್ಪುಗಳನ್ನು ಸೇವನೆ ಮಾಡುವುದರಿಂದ ಕೊರೊನಾ ಕಾಲದಲ್ಲಿ ಆರೋಗ್ಯದಿಂದ ಇರಬಹುದು.
ಇದನ್ನೂ ಓದಿ: ಓಮಿಕ್ರಾನ್ ಪತ್ತೆ ಹಚ್ಚುವ ಟೆಸ್ಟಿಂಗ್ ಏಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ? ಇಲ್ಲಿದೆ ಕಾರಣ
2) ವೈದ್ಯರ ಸಲಹೆ ಪಡೆಯಿರಿ: ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗಬೇಕು ಎಂದರೆ ವೈದ್ಯರ ಸಲಹೆ ಅವಶ್ಯಕವಾಗಿದೆ. ದೇಹಕ್ಕೆ ಬೇಕಾದ ಪೈಬರ್, ಜಿಂಗ್ ಪ್ರೊಟೀನ್, ವಿಟಮಿನ್ ಎ, ಬಿ ಬ6, ಸಿ, ಡಿ ಎಲ್ಲವೂ ಒಂದೇ ಆಹಾರದಲ್ಲಿ ದೊರೆಯಲು ಸಾಧ್ಯವಿಲ್ಲ ಆದ್ದರಿಂದ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಆಗ ಸೂಕ್ತ ಪರಿಹಾರ ದೊರೆಯಲಿದೆ. ಸರಿಯಾದ ಪ್ರಮಾಣದ ನ್ಯೂಟ್ರಿಯನ್ಸ್ಗಳು ಪೂರೈಕೆಯಾಗದಿದ್ದರೆ ಬ್ಯಾಕ್ಟೀರಿಯಾ, ವೈರಸ್ಗಳು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ
3) ಧೂಮಪಾನದಿಂದ ದೂರವಿರಿ: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಹಲವು ಬಾರಿ ಹೇಳಲಾಗುತ್ತದೆ.. ಧೂಮಪಾನ ಹೆಚ್ಚು ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ.. ಬಿಪಿ ಕೂಡ ಕಾಣಿಸಿಕೊಳ್ಳಬಹುದು ಹೀಗಾಗಿ ಕೊರೋನಾ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರೆ ಮೊದಲು ಧೂಮಪಾನದಿಂದ ದೂರವಿರಬೇಕು. ಧೂಮಪಾನ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಧೂಮಪಾನ ಸೇವನೆಯಿಂದ ದೂರವಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳಬೇಕು.
3)ಮದ್ಯಪಾನ ಕಡಿಮೆ ಮಾಡಿ: ಕೆಲವರಿಗೆ ಪ್ರತಿನಿತ್ಯ ಮದ್ಯ ಸೇವನೆ ಮಾಡಬೇಕೆಂಬ ಹಂಬಲ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ನೀವು ಮದ್ಯಪಾನದಿಂದ ದೂರವಿರುವುದು ಸೂಕ್ತ.. ಮಧ್ಯಪಾನ ನಿಮ್ಮನ್ನು ಕ್ಯಾನ್ಸರ್ ರೋಗಕ್ಕೆ ತಳ್ಳಬಹುದು. ಕರುಳಿನ ದೇಹದ ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹೀಗಾಗಿ ಮದ್ಯಪಾನ ತ್ಯಜಿಸುವುದು ಸೂಕ್ತ.
4) ಪ್ರತಿನಿತ್ಯ ತಪ್ಪದೆ ವ್ಯಾಯಾಮ ಮಾಡಿ: ವ್ಯಾಯಾಮ ಎಂಬುದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ಸಹಕಾರಿಯಾಗಿದೆ.. ಆದರೆ ಅತಿಯಾಗಿ ವ್ಯಾಯಾಮ ಮಾಡುವುದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು... ಕೊರೋನಾದಂತಹ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪ್ರಾಣಾಯಾಮದಂತಹ ಯೋಗಾಸನಗಳು ಪರಿಹಾರ ನೀಡುತ್ತದೆ.
5)ಸರಿಯಾದ ನಿದ್ದೆ: ಪ್ರತಿದಿನ 7-8 ಗಂಟೆಯವರೆಗೆ ನಿದ್ದೆ ಮಾಡಿ. ನಿದ್ದೆ ನಿಮ್ಮ ದೇಹದಲ್ಲಿನ ಸುಸ್ತನ್ನು ಕಡಿಮೆ ಮಾಡಿ ಆರೋಗ್ಯಯುತವಾಗಿಡುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಾಮ್ ಹೋಮ್ನಂತಹ ವ್ಯವಸ್ಥೆಗಳು ನಿದ್ದೆಗೆಟ್ಟು ಕೆಲಸ ಮಾಡುವಂತೆ ಮಾಡಿದೆ. ಆದ್ದರಿಂದ ಅದೆಲ್ಲದರ ಹೊರತಾಗಿಯೂ ದೇಹಕ್ಕೆ ಸರಿಯಾಗಿ ನಿದ್ದೆ ಒದಗಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡ್ಸಿದ್ರಾ? ವರದಿ ನೋಡೋದು ಈಗ ಬಹಳ ಸುಲಭ, ಹೀಗೆ ಮಾಡಿ ಸಾಕು
6) ಸ್ವಚ್ಛವಾಗಿರಿ: ರೋಗದ ತೀವ್ರತೆ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹುಮುಖ್ಯ. ಹೀಗಾಗಿ ಪ್ರತಿನಿತ್ಯ ಸ್ನಾನ ಮಾಡಿ.. ಮಾಸ್ಕ ಹಾಗೂ ಸ್ಯಾನಿಟೈಸರ್ ಬಳಸಿ.. ಊಟ ಮಾಡುವ ಮೊದಲು ಹೊರಗಡೆಯಿಂದ ಮನೆಯ ಒಳಗೆ ಬಂದಾಗ, ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆಯುತ್ತಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ನೆನಪಿಡಿ ಮಾಸ್ಕ್ ಧರಿಸಿದಾಗ ಆಗಾಗ ಮುಖವನ್ನು ಮುಟ್ಟಿಕೊಳ್ಳಬೇಡಿ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ