• Home
  • »
  • News
  • »
  • lifestyle
  • »
  • Fig Recipe: ಮನೆಯಲ್ಲೇ ಅಂಜೂರದಿಂದ ಈ 2 ಟೇಸ್ಟಿ ರೆಸಿಪಿ ಮಾಡಿ- ಆರೋಗ್ಯಕ್ಕೂ ಒಳ್ಳೆಯದು

Fig Recipe: ಮನೆಯಲ್ಲೇ ಅಂಜೂರದಿಂದ ಈ 2 ಟೇಸ್ಟಿ ರೆಸಿಪಿ ಮಾಡಿ- ಆರೋಗ್ಯಕ್ಕೂ ಒಳ್ಳೆಯದು

ಅಂಜೂರದಿಂದ ಮಾಡಿರುವ ರೆಸಿಪಿಗಳು

ಅಂಜೂರದಿಂದ ಮಾಡಿರುವ ರೆಸಿಪಿಗಳು

ಒಣಗಿದ ಅಂಜೂರವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವ ಅಭ್ಯಾಸ ರೂಢಿಯಲ್ಲಿದೆ. ಒಣಗಿದ ಅಂಜೂರದ ಹಣ್ಣುಗಳು ವಿಟಮಿನ್ ಬಿ 6 ನ ಸಮೃದ್ಧ ಮೂಲವಾಗಿದ್ದು, ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

  • Trending Desk
  • 3-MIN READ
  • Last Updated :
  • Share this:

ಅಂಜೂರ(Fig) ಮರದ ಗಾತ್ರ ಚಿಕ್ಕದಾದರೂ ಅದರಲ್ಲಿ ಬಿಡುವ ಫಲ ಮಾತ್ರ ಆರೋಗ್ಯಕ್ಕೆ(Health) ಹೆಚ್ಚಿನ ಪ್ರಯೋಜನ(Benefits) ನೀಡುತ್ತದೆ. ಅಂಜೂರ ಹಣ್ಣು ಆರೋಗ್ಯದ ವಿಚಾರದಲ್ಲಿ ಹಲವು ಚಮತ್ಕಾರಗಳನ್ನು ಮಾಡುತ್ತದೆ. ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣಿನಲ್ಲಿ ಕಬ್ಬಿಣ, ತಾಮ್ರ ಮತ್ತು ಎ,ಬಿ,ಸಿ,ಡಿ ವಿಟಮಿನ್‍ಗಳು ಹೇರಳವಾಗಿವೆ.


ಒಣಗಿದ ಅಂಜೂರಕ್ಕೆ ಡಿಮ್ಯಾಂಡ್


ಟರ್ಕಿ ಮತ್ತು ಈಜಿಪ್ಟ್ ದೇಶದಲ್ಲಿ ಹೆಚ್ಚಾಗಿ ಅಂಜೂರವನ್ನು ಬೆಳೆಯುತ್ತಾರೆ, ಇವು ಅಂಜೂರದ ಅಗ್ರ ಉತ್ಪಾದಕರು. ಅಂಜೂರವನ್ನು ಹಣ್ಣಾದಾಗ ತಿನ್ನುವುದಕ್ಕಿಂತ ಹೆಚ್ಚಾಗಿ ಅದನ್ನು ಒಣಗಿದಾಗ ಅಂದರೆ ನಾವು ನೀವು ಎಲ್ಲಾ ಹೇಳುವ ಡ್ರೈಪ್ರೂಟ್‌ಗಳಲ್ಲಿ ಒಂದಾದ ಪಿಗ್.‌ ಪ್ರಪಂಚದಾದ್ಯಂತ ಕೇವಲ 3% ಹಣ್ಣುಗಳನ್ನು ತಾಜಾವಾಗಿ ತಿಂದರೆ ಇನ್ನುಳಿದಂತೆ 85% ಒಣಗಿದ ಅಂಜೂರವನ್ನು ಬಳಸಲಾಗುತ್ತದೆ.


ಮೃದುವಾದ ಬೀಜದ ಹಣ್ಣುಗಳು ನೈಸರ್ಗಿಕವಾಗಿ ಸಿಹಿ ಮತ್ತು ಸುವಾಸನೆಯನ್ನು ಹೊಂದಿರುತ್ತವೆ. ಮೊರೊಕನ್ ಪದ್ಧತಿಯಲ್ಲಿ ನವವಿವಾಹಿತರಿಗೆ ಫಲಪ್ರದ ಜೀವನವನ್ನು ಹಾರೈಸಲು ಅಂಜೂರದ ಹಣ್ಣುಗಳು ಮತ್ತು ಒಣದ್ರಾಕ್ಷಿಗಳನ್ನು ನೀಡಲಾಗುತ್ತದೆ. ಪೋಷಕಾಂಶಗಳಿಂದ ತುಂಬಿದ ಒಣಗಿದ ಅಂಜೂರದ ಹಣ್ಣುಗಳನ್ನು ರೋಮ್‌ನಲ್ಲಿ ಸೈನ್ಯಕ್ಕೆ ಬ್ರೆಡ್‌ಗೆ ಪರ್ಯಾಯವಾಗಿ ನೀಡಲಾಗುತ್ತದೆ. ‌


ಪೋಷಕಾಂಶದ ಆಗರ ಅಂಜೂರ


ಇತರ ಎಲ್ಲಾ ಒಣ-ಹಣ್ಣುಗಳಂತೆ, ಅಂಜೂರದ ಹಣ್ಣುಗಳು ಸಹ ಅಗತ್ಯವಾದ ಆಹಾರ ಅಂಶಗಳಿಂದ ತುಂಬಿವೆ. ಅವುಗಳಲ್ಲಿ ಫೈಬರ್ ಮತ್ತು ವಿಟಮಿನ್ ಎ ಯಥೇಚ್ಛವಾಗಿದೆ. ಅವು ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು, ಮೂಳೆ ಮತ್ತು ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜೀರ್ಣಕ್ರಿಯೆಗೆ ಸಹಕಾರಿ ಆಗಿವೆ.


ಹಲವು ಪಾಕಪದ್ಧತಿಯಲ್ಲೂ ಅಂಜೂರ ಬಳಕೆ


ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಇವುಗಳನ್ನು ಹಾಗೆಯೇ ತಿನ್ನಬಹುದು ಇಲ್ಲ ಬೇರೆ ಬೇರೆ ಅಡುಗೆಯಲ್ಲೂ ಸಹ ಬಳಸಬಹುದು. ಅಂಜೂರದ ಹಣ್ಣುಗಳನ್ನು ಅಡ್ಡಲಾಗಿ ಕತ್ತರಿಸಿ ಫಿಜ್ಜಾ ಮಾಡುವಾಗ ಅದರ ಮೇಲೆ ಇಡಬಹುದು, ಇಲ್ಲಾ ಸಲಾಡ್‌ನಲ್ಲಿ ಸೇರಿಸಬಹುದು, ಜ್ಯೂಸ್‌ ಮಾಡಿ ಇಲ್ಲಾ ಮಿಲ್ಕ್‌ ಶೇಕ್‌ ಮಾಡಬಹುದು.
ಹಾಗೆಯೇ ಫಿಗ್ಸ್ ಬ್ರೂ ಮಾಡಬಹುದು. ಇದು ಅಂಜೂರದ ಆರೋಗ್ಯಕರ ಮತ್ತು ಸಿಹಿ ದ್ರವ ಸಾರವಾಗಿದೆ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.


ಇದನ್ನೂ ಓದಿ: Cholesterol Problem: ಕೆಟ್ಟ ಕೊಲೆಸ್ಟ್ರಾಲ್ ಹೇಗೆ ಹೃದಯಾಘಾತಕ್ಕೆ ಕಾರಣವಾಗುತ್ತದೆ?


ನೆನಸಿಟ್ಟು ಸೇವನೆ


ಒಣಗಿದ ಅಂಜೂರವನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವ ಅಭ್ಯಾಸ ರೂಢಿಯಲ್ಲಿದೆ. ಒಣಗಿದ ಅಂಜೂರದ ಹಣ್ಣುಗಳು ವಿಟಮಿನ್ ಬಿ 6 ನ ಸಮೃದ್ಧ ಮೂಲವಾಗಿದ್ದು, ಇದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಮಾಗಿದ ಅಂಜೂರದ ಹಣ್ಣುಗಳನ್ನು ಹಮ್ಮಸ್, ಲ್ಯಾಬ್ನೆಹ್ ಮತ್ತು ಮ್ಯೂಟಾಬಲ್, ಹಾಲೌಮಿ ಚೀಸ್ ಮತ್ತು ದ್ರಾಕ್ಷಿಗಳು ಮತ್ತು ಸ್ಟ್ರಾಬೆರಿಗಳಂತಹ ಇತರ ತಾಜಾ ಹಣ್ಣುಗಳೊಂದಿಗೆ ಟರ್ಕಿಶ್ ಅಥವಾ ಮೆಡಿಟರೇನಿಯನ್ ಮೆಜ್ಜೆ ಪ್ಲೇಟರ್‌ನಲ್ಲಿ ಬಳಸಲಾಗುತ್ತದೆ. ಹಾಗಿದ್ದಾರೆ ನಾವಿಲ್ಲಿ ಅಂಜೂರ ಬಳಸಿ ಮಾಡುವ ಎರಡು ಪಾಕವಿಧಾನಗಳನ್ನು ಕಲಿಯೋಣ.


ಅಂಜೂರದ ಪ್ಲಾಟ್‌ಬ್ರೆಡ್ಸ್


ಬೇಕಾಗುವ ಪದಾರ್ಥಗಳು
ಅರ್ಧ ಕಪ್ ಸಂಪೂರ್ಣ ಗೋಧಿ ಹಿಟ್ಟು
ಅರ್ಧ ಕಪ್ ಹಿಟ್ಟು
ಅರ್ಧ ಟೀಸ್ಪೂನ್ ಯೀಸ್ಟ್
1 ಟೀಸ್ಪೂನ್ ಸಕ್ಕರೆ
ಅರ್ಧ ಚಮಚ ಉಪ್ಪು
2 ಟೀಸ್ಪೂನ್ ಆಲಿವ್ ಎಣ್ಣೆ
3 ಮಾಗಿದ ಅಂಜೂರದ ಹಣ್ಣುಗಳು (ಕತ್ತರಿಸಿದ)
50 ಗ್ರಾಂ ಫೆಟಾ ಚೀಸ್
ರಾಕೆಟ್ ಎಲೆಗಳು
ಒಂದು ಚಿಟಿಕೆ ಕೆಂಪು ಮೆಣಸಿನಕಾಯಿ ಹೊಟ್ಟು
1-2 ಟೀಸ್ಪೂನ್ ವರ್ಜಿನ್ ಆಲಿವ್ ಎಣ್ಣೆ


ಇದನ್ನೂ ಓದಿ: Brain Health: ಮೆದುಳಿನ ಆರೋಗ್ಯ ವೃದ್ಧಿಗೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!


ಮಾಡುವ ವಿಧಾನ


ಒಂದು ಬಟ್ಟಲಿನಲ್ಲಿ ಹಿಟ್ಟು, ಯೀಸ್ಟ್, ಸಕ್ಕರೆ, ಉಪ್ಪು ಮತ್ತು ಆಲಿವ್ ಎಣ್ಣೆಯನ್ನು ಸೇರಿಸಿ ನಯವಾಗಿ ಹಿಟ್ಟು ತಯಾರಿಸಿ. ನಂತರ ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ ಹಿಟ್ಟನ್ನು 15-20 ನಿಮಿಷಗಳ ಕಾಲ ಮುಚ್ಚಿಡಿ.


ನಂತರ ಹಿಟ್ಟನ್ನು ಮೂರು ಭಾಗಗಳಾಗಿ ವಿಂಗಡಿಸಿ ಸ್ವಲ್ಪ ಹಿಟ್ಟನ್ನು ಬಳಸಿ ಪರಾಠಕ್ಕಿಂತ ಸ್ವಲ್ಪ ದಪ್ಪವಾಗಿ ಉಜ್ಜಿಕೊಳ್ಳಿ. ನಂತರ ಇವುಗಳನ್ನು ಬೇಕಿಂಗ್ ಟ್ರೇನಲ್ಲಿ ಇರಿಸಿ ಆಲಿವ್ ಎಣ್ಣೆಯಿಂದ ಬ್ರಷ್ ಮಾಡಿ. ಕತ್ತರಿಸಿದ ಅಂಜೂರದ ಹಣ್ಣುಗಳು ಮತ್ತು ಪುಡಿಮಾಡಿದ ಮೆಣಸಿನಕಾಯಿಗಳನ್ನು ಅದರ ಮೇಲೆ ಹರಡಿ 190-200 ಡಿಗ್ರಿ ಸೆಲ್ಸಿಯಸ್‌ನಲ್ಲಿ 10-12 ನಿಮಿಷಗಳ ಕಾಲ ಬೇಯಿಸಿ.


ನಂತರ ಒಲೆಯಿಂದ ತೆಗೆದು ತಾಜಾ ರಾಕೆಟ್ ಎಲೆಗಳನ್ನು ಹಾಕಿ, ಚಿಲ್ಲಿ ಫ್ಲೇಕ್ಸ್ ಮತ್ತು ಕೆಲವು ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆಯನ್ನು ಸಿಂಪಡಿಸಿದರೆ ಅಂಜೂರದ ಪ್ಲಾಟ್‌ ಬ್ರೆಡ್‌ ರೆಡಿ.


ಫಿಗ್ ಗ್ರಾನೋಲಾ


ಬೇಕಾಗುವ ಪದಾರ್ಥಗಳು


2 ಟೀಸ್ಪೂನ್ ತೆಂಗಿನ ಎಣ್ಣೆ
1 ಕಪ್ ಓಟ್ಸ್
ಅರ್ಧ ಕಪ್ ನಟ್ಸ್ (ಗೋಡಂಬಿ, ವಾಲ್‌ ನಟ್ಸ್, ಬಾದಾಮಿ, ಸೂರ್ಯಕಾಂತಿ, ಕುಂಬಳಕಾಯಿ ಬೀಜ, ಎಳ್ಳು )
ಒಂದು ಚಿಟಿಕೆ ಉಪ್ಪು
ಕತ್ತರಿಸಿದ ಒಣಗಿದ ಅಂಜೂರದ ಹಣ್ಣುಗಳು
1 ಟೀಸ್ಪೂನ್ ಚಿಯಾ ಬೀಜಗಳು
ಮೊಸರು, ಜೇನುತುಪ್ಪ ಅಥವಾ ಮೇಪಲ್ ಸಿರಪ್ಮಾಡುವ ವಿಧಾನ


ಭಾರವಾದ ಪ್ಯಾನ್‌ನಲ್ಲಿ, ಎಣ್ಣೆಯನ್ನು ಬಿಸಿ ಮಾಡಿ ಮತ್ತು ಓಟ್ಸ್, ಬೀಜಗಳನ್ನು ಎಂಟು-ಒಂಬತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಓಟ್ಸ್ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಇದಕ್ಕೆ ಉಪ್ಪು ಬೆರೆಸಿ ಒಣಗಿದ ಅಂಜೂರದ ಹಣ್ಣುಗಳು ಮತ್ತು ಚಿಯಾ ಬೀಜಗಳೊಟ್ಟಿಗೆ ಸೇರಿಸಿ ತಣ್ಣಗಾದ ನಂತರ, ಗಾಳಿಯಾಡದ ಡಬ್ಬದಲ್ಲಿ ಇರಿಸಿ.

Published by:Latha CG
First published: