• Home
  • »
  • News
  • »
  • lifestyle
  • »
  • Skin Health: ಫೈಬರ್​ ಆಹಾರಗಳಲ್ಲಿದೆ ನಿಮ್ಮ ತ್ವಚೆಯ ಸೌಂದರ್ಯದ ರಹಸ್ಯ

Skin Health: ಫೈಬರ್​ ಆಹಾರಗಳಲ್ಲಿದೆ ನಿಮ್ಮ ತ್ವಚೆಯ ಸೌಂದರ್ಯದ ರಹಸ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೈಬರ್ ಕಾರ್ಬೋಹೈಡ್ರೇಟ್ ಆಧಾರಿತ ಪೋಷಕಾಂಶ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಆಹಾರ ಜೀರ್ಣಿಸಿಕೊಳ್ಳಲು ಮತ್ತು ಕರುಳಿನ ಚಲನೆಗೆ ಸಹಕಾರಿ ಆಗಿದೆ. ಫೈಬರ್ ನಲ್ಲಿ ಎರಡು ವಿಧಗಳಿವೆ. ಕರಗಬಲ್ಲ ಮತ್ತು ಕರಗದ ಫೈಬರ್.

  • Share this:

    ಒಟ್ಟಾರೆ ಆರೋಗ್ಯ (Overall Health) ಕಾಪಾಡಿಕೊಳ್ಳಲು ಫೈಬರ್ (Fiber) ತುಂಬಾ ಮುಖ್ಯ. ಇದು ತೂಕ ಕಡಿಮೆ (Weight Loss) ಮಾಡಲು, ಮಲಬದ್ಧತೆ ಸಮಸ್ಯೆ ನಿವಾರಿಸಲು, ಚಯಾಪಚಯ ಹೆಚ್ಚಿಸಲು ಮತ್ತು ಆರೋಗ್ಯ ವರ್ಧನೆಗೆ ಸಹಕಾರಿ ಆಗಿದೆ. ಜೊತೆಗೆ ಫೈಬರ್ ಶುದ್ಧ ಮತ್ತು ಸ್ಪಷ್ಟ ಚರ್ಮ ನೀಡಲು ಸಹಕಾರಿ ಆಗಿದೆ. ಆಹಾರದಲ್ಲಿ (Food) ಫೈಬರ್ ಅನ್ನು ಸೇರಿಸಿದರೆ ಅನೇಕ ಪ್ರಯೋಜನಗಳಿವೆ. ಅವುಗಳಲ್ಲಿ ಒಂದು ಚರ್ಮದ ಆರೋಗ್ಯ ಕಾಪಾಡುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕಗಿಡುತ್ತದೆ. ಜೊತೆಗೆ ಚರ್ಮಕ್ಕೆ ಪ್ರಯೋಜನ ನೀಡುತ್ತದೆ. ಹಾಗಾದರೆ ಫೈಬರ್ ಮತ್ತು ಚರ್ಮದ ಆರೋಗ್ಯದ ನಡುವಿನ ಸಂಬಂಧವೇನು ಎಂದು ಇಲ್ಲಿ ನೋಡೋಣ.


    ಫೈಬರ್ ಎಂದರೇನು ಮತ್ತು ಅದು ದೇಹದ ಆರೋಗ್ಯದ ವಿಚಾರದಲ್ಲಿ ಯಾವ ಪಾತ್ರ ವಹಿಸುತ್ತದೆ ಎಂದು ನೋಡೋಣ.


    ಫೈಬರ್ ಎಂದರೇನು?


    ಫೈಬರ್ ಕಾರ್ಬೋಹೈಡ್ರೇಟ್ ಆಧಾರಿತ ಪೋಷಕಾಂಶ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಆಹಾರ ಜೀರ್ಣಿಸಿಕೊಳ್ಳಲು ಮತ್ತು ಕರುಳಿನ ಚಲನೆಗೆ ಸಹಕಾರಿ ಆಗಿದೆ. ಫೈಬರ್ ನಲ್ಲಿ ಎರಡು ವಿಧಗಳಿವೆ. ಕರಗಬಲ್ಲ ಮತ್ತು ಕರಗದ ಫೈಬರ್. ಜೊತೆಗೆ ಇದು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ.


    ಫೈಬರ್ ಮತ್ತು ಚರ್ಮದ ಆರೋಗ್ಯದ ನಡುವಿನ ಸಂಬಂಧವೇನು?


    ಪಬ್ಮೆಡ್ ಸೆಂಟ್ರಲ್ ಪ್ರಕಟಿಸಿದ ಆನ್‌ಲೈನ್ ಜರ್ನಲ್ ಪ್ರಕಾರ, ಜೀರ್ಣಾಂಗ ವ್ಯವಸ್ಥೆ ಮತ್ತು ಕರುಳಿನ ಚರ್ಮದ ಅಕ್ಷ ಎಂದು ಕರೆಯಲ್ಪಡುವ ಚರ್ಮದ ನಡುವೆ ಸಂಪರ್ಕವಿದೆ. ಹಾಗಾಗಿ ಚರ್ಮದ ಸಮಸ್ಯೆ ಯಾರಿಗೆ ಇರುತ್ತದೆಯೋ, ಅವರು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಹೊಂದಿರುತ್ತಾರೆ.




    ಕರುಳಿನ ಚರ್ಮದ ಅಕ್ಷ ಅಂದ್ರೆ ಯಾವುದು? ಇದು ನಮ್ಮ ಚರ್ಮದ ನೋಟಕ್ಕೂ ಕಾರಣವಾಗಿದೆ. ಹಾಗಾಗಿ ನೀವು ಸಿಹಿ ಪದಾರ್ಥ, ಕರಿದ ಅಥವಾ ಕೆಂಪು ಮಾಂಸ ಸೇವಿಸಿದ ತಕ್ಷಣ, ಚರ್ಮದ ಮೇಲೆ ಬಿರುಕು, ತುರಿಕೆ ಉಂಟಾಗುತ್ತದೆ.


    ಫೈಬರ್ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?


    ಫೈಬರ್ ದೇಹದ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಅದನ್ನು ಸ್ಲಿಮ್ ಆಗಿ ಇಡುತ್ತದೆ. ಚರ್ಮದ ಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆ ಮಾಡುತ್ತದೆ. ಹೀಗೆ ಫೈಬರ್ ಚರ್ಮವನ್ನು ಒಳಗೆ ಮತ್ತು ಹೊರಗಿನಿಂದ ಆರೋಗ್ಯವಾಗಿಡುತ್ತದೆ.


    ಯಂಗ್ ಮತ್ತು ಹೊಳೆಯುವ ಚರ್ಮಕ್ಕಾಗಿ ಆಹಾರದಲ್ಲಿ ಫೈಬರ್ ಭರಿತ ಪದಾರ್ಥಗಳನ್ನು ಸೇರಿಸಿ. ಹೆಚ್ಚಿನ ಫೈಬರ್ ಮತ್ತು ದ್ರವ ಆಹಾರವು ಚರ್ಮವನ್ನು ತೇವಾಂಶದಿಂದ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಸಂಸ್ಕರಿಸಿದ ಆಹಾರಗಳ ಬದಲಿಗೆ ಧಾನ್ಯ ಮತ್ತು ನೈಸರ್ಗಿಕ ನಾರು ಪದಾರ್ಥಗಳನ್ನು ಸೇವಿಸಿ.


    ಆಹಾರದಲ್ಲಿ ಫೈಬರ್ ಸೇರಿಸುವ ವಿಧಾನಗಳು


    ಒಂದು ಮಾಹಿತಿಯ ಪ್ರಕಾರ, ಪ್ರತಿದಿನ ಆಹಾರದಲ್ಲಿ 25 ಗ್ರಾಂ ಫೈಬರ್ ಇರಬೇಕು. ಇದಕ್ಕಾಗಿ ಬೀನ್ಸ್, ಧಾನ್ಯ, ಹಣ್ಣು ಮತ್ತು ಹಸಿರು ತರಕಾರಿ ಹಾಗೂ ಫೈಬರ್ ಭರಿತ ಆಹಾರ ಸೇವಿಸಿ.


    ತಿನ್ನುವ ಮೊದಲು ಹಸಿ ತರಕಾರಿ ಸೇವನೆ, ಫೈಬರ್ ಸೇವನೆ ಹೆಚ್ಚಿಸಿ. ಪಿಷ್ಟ ರಹಿತ ತರಕಾರಿಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುತ್ತವೆ. ಸಂಸ್ಕರಿಸಿದ ಧಾನ್ಯಗಳ ಸೇವನೆ ಕಡಿಮೆ ಮಾಡಿ.


    ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ


    ಧಾನ್ಯಗಳು ಸೂಕ್ಷ್ಮಾಣು ಮತ್ತು ಹೊಟ್ಟು ಹೊಂದಿವೆ. ಇದು ಸಂಸ್ಕರಿಸಿದ ಆಹಾರಗಳಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ನೀವು ರಾಗಿ, ಕ್ವಿನೋವಾ, ಅಮರಂಥ್ ಅನ್ನು ಸೇವನೆ ಮಾಡಿ. ಫೈಬರ್ ಪೂರಕ ಸಹ ಸೇವನೆ ಮಾಡಬಹುದು. ಆದರೆ ಅದಕ್ಕೂ ಮೊದಲು ವೈದ್ಯರ ಸಲಹೆ ಪಡೆಯಿರಿ.

    Published by:renukadariyannavar
    First published: