• Home
  • »
  • News
  • »
  • lifestyle
  • »
  • Sweet Parota: ಹಬ್ಬದ ದಿನವೂ ಕೆಲಸಕ್ಕೆ ಹೋಗಿದ್ದೀರಾ ? ಸಂಜೆ ಮಾಡ್ಕೊಳ್ಳಿ ಸ್ವೀಟ್ ಪರೋಟಾ

Sweet Parota: ಹಬ್ಬದ ದಿನವೂ ಕೆಲಸಕ್ಕೆ ಹೋಗಿದ್ದೀರಾ ? ಸಂಜೆ ಮಾಡ್ಕೊಳ್ಳಿ ಸ್ವೀಟ್ ಪರೋಟಾ

ಸ್ವೀಟ್ ಪರೋಟಾ

ಸ್ವೀಟ್ ಪರೋಟಾ

Festival Recipe: ಬೆಳಗ್ಗೆ ಪೂಜೆ ಮಾಡಿ ಕಚೇರಿಗೆ ಹೋದವರಿಗೆ ಹಬ್ಬದಡುಗೆ ಏನು ಮಾಡಬಹುದು ಎಂಬ ಗೊಂದಲದಲ್ಲಿ ಇರುತ್ತಾರೆ.

  • Share this:

ಪ್ರತಿ ಹಬ್ಬಕ್ಕೂ ಒಂದೊಂದು ಸಿಹಿ ಅಡುಗೆ (Sweet Recipe) ಮಾಡೋದು ಕಾಮನ್. ಆದ್ರೆ ಹಬ್ಬಗಳು (Festival) ಕೆಲವೊಮ್ಮೆ ನಾಲ್ಕರಿಂದ ಐದು ದಿನ ಇರುತ್ತವೆ. ಆದ್ರೆ ಹೋಳಿಗೆ (Holige), ಪಾಯಸ (Payasam) ಮಾಡೋದು ಸಾಮಾನ್ಯ. ನವರಾತ್ರಿ (Navratri), ದೀಪಾವಳಿ (Deepavali) ಹಬ್ಬದ ಸಂಭ್ರಮದಲ್ಲಿ ಬಗೆ ಬಗೆಯೂ ತಿನಿಸುಗಳನ್ನು ಮಾಡಬೇಕಾಗುತ್ತದೆ. ಇಂದು ಸಹ ದಸರಾ ಹಬ್ಬ. ವಿಜಯದಶಮಿ (Vijayadashami) ಹಬ್ಬಕ್ಕೆ ಸಾಮಾನ್ಯವಾಗಿ ಪಾಯಸ, ಹೋಳಿಗೆ, ಮೈಸೂರು ಪಾಕ್, ಹಲ್ವಾ ಮಾಡುತ್ತಾರೆ. ಆದರೆ ಬೆಂಗಳೂರಿನಂತರ ಸಿಟಿಯಲ್ಲಿ ಇರೋರು ಹಬ್ಬದ ದಿನವೂ ಕೆಲಸಕ್ಕೆ ಹೋಗಬೇಕಾಗುತ್ತದೆ. ಬೆಳಗ್ಗೆ ಪೂಜೆ ಮಾಡಿ ಕಚೇರಿಗೆ ಹೋದವರಿಗೆ ಹಬ್ಬದಡುಗೆ ಏನು ಮಾಡಬಹುದು ಎಂಬ ಗೊಂದಲದಲ್ಲಿ ಇರುತ್ತಾರೆ. ಇಂದು ನಾವು ನಿಮಗೆ ಕಡಿಮೆ ಸಮಯದಲ್ಲಿ ಮಾಡಬಹುದಾದ ಸಿಹಿ ಪರೋಟಾ ರೆಸಿಪಿ ಬಗ್ಗೆ ಹೇಳುತ್ತಿದ್ದೇವೆ. ಇದನ್ನು ತುಂಬಾ ಸರಳವಾಗಿ ಮಾಡಬಹುದು.


ರುಚಿಯಾದ ಸಿಹಿ ಅಡುಗೆ ಕೆಲವೇ ಸಮಯದಲ್ಲಿ ಸಿದ್ಧವಾಗುತ್ತದೆ. ಇದರಿಂದ ನಿಮ್ಮ ಸಮಯ ಸಹ ಉಳಿತಾಯ ಆಗಲಿದೆ. ಸಿಹಿ ಪರೋಟಾ ಮಾಡೋದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಸಿಹಿ ಪರೋಟಾ ಅಥವಾ ಸಿಹಿ ಚಪಾತಿ ಹೇಗೆ ಮಾಡಬೇಕು? ಬೇಕಾಗುವ ಸಾಮಗ್ರಿಗಳು ಏನು ಎಂಬುದರ ಮಾಹಿತಿ ಇಲ್ಲಿದೆ.


ಸಿಹಿ ಪರೋಟಾ ಮಾಡಲು ಬೇಕಾಗುವ ಸಾಮಾಗ್ರಿಗಳು


ಮೈದಾ ಹಿಟ್ಟು: ಒಂದು ಕಪ್


ಒಣ ಕೊಬ್ಬರಿ ತುರಿ: ಒಂದು ಕಪ್


ಗಸಗಸೆ: 1 ಟೀ ಸ್ಪೂನ್


ಏಲಕ್ಕಿ ಪೌಡರ್: ಅರ್ಧ ಟೀ ಸ್ಪೂನ್


ಸಕ್ಕರೆ: ಒಂದು ಕಪ್


ಉಪ್ಪು: ಚಿಟಿಕೆ


ಎಣ್ಣೆ


ತುಪ್ಪ


ಸಿಹಿ ಪರೋಟಾ ಮಾಡುವ ವಿಧಾನ


*ಮೊದಲಿಗೆ ಒಂದು ಕಪ್ ಮೈದಾ ಹಿಟ್ಟಿಗೆ ಚಿಟಿಕೆ ಉಪ್ಪು, ಒಂದು ಟೀ ಸ್ಪೂನ್ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ನಾರ್ಮಲ್ ಪರೋಟಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.


*ನಂತರ ಹಿಟ್ಟಿನ ಪಾತ್ರೆಗೆ ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಎತ್ತಿಟ್ಟುಕೊಳ್ಳಿ.


*ಈಗ ಒಣಕೊಬ್ಬರಿಯನ್ನು ತುರಿದುಕೊಳ್ಳಿ. ಇದಕ್ಕೆ ಸಕ್ಕರೆ, ಏಲಕ್ಕಿ ಪೌಡರ್ ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.


ಇದನ್ನೂ ಓದಿ:  Upma Recipe: ಬಾಯಲ್ಲಿ ಇಟ್ರೆ ಕರಗುತ್ತೆ ತುಪ್ಪದ ಉಪ್ಪಿಟ್ಟು; ರೆಸಿಪಿ ತುಂಬಾನೇ ಸಿಂಪಲ್, ನೀವು ಟ್ರೈ ಮಾಡಿ


*ತದನಂತರ ಗಸಗಸೆಯನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಇದರಿಂದ ಪರೋಟಾ ಪರಿಮಳ ಹೆಚ್ಚಾಗುತ್ತದೆ. ಈ ಗಸಗಸೆಯನ್ನು ಕೊಬ್ಬರಿ ತುರಿ ಮಿಶ್ರಣದಲ್ಲಿ ಮಿಕ್ಸ್ ಮಾಡಬೇಕು.


*ತದನಂತರ ಕಲಸಿಟ್ಟುಕೊಂಡಿರುವ ಹಿಟ್ಟನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಪರೋಟಾ ಮಾದರಿಯಲ್ಲಿ ಲಟ್ಟಿಸಿಕೊಂಡು ಎರಡೂ ಬದಿಯಲ್ಲಿ ಕಡಿಮೆ ಎಣ್ಣೆ ಬಳಸಿ ಚೆನ್ನಾಗಿ ಬೇಯಿಸಿಕೊಳ್ಳಿ.


*ಪರೋಟಾ ಸಿದ್ಧವಾದ ನಂತರ ಅದನ್ನು ಆಳವಾದ ಪಾತ್ರೆಯಲ್ಲಿ ಹಾಕಿ. ಈಗ ಪರೋಟಾ ಮೇಲೆ ಕೊಬ್ಬರಿ ತುರಿ, ಏಲಕ್ಕಿ ಮತ್ತು ಸಕ್ಕರೆಯ ಮಿಶ್ರಣವನ್ನು ತೆಳುವಾಗಿ ಹರಡಿ. ಕೊನೆಗೆ ಪರೋಟಾ ಮೇಲೆ ಅರ್ಧ ಟೀ ಸ್ಪೂನ್ ತುಪ್ಪ ಹಾಕಿ.


*ಹೀಗೆ ಸಿದ್ಧವಾದ ಪರೋಟಾವನ್ನು ಒಂದರ ಮೇಲೊಂದರಂತೆ ಇರಿಸಬೇಕು. ಎಲ್ಲಾ ಪರೋಟಾ ಮಾಡಿದ ನಂತರ ಪಾತ್ರೆಯನ್ನು ಪ್ಲೇಟ್​ನಿಂದ ಮುಚ್ಚಿ ಅರ್ಧ ಗಂಟೆ ಎತ್ತಿಡಿ.


*ಅರ್ಧ ಗಂಟೆಯ ನಂತರ ಪರೋಟಾ ಮೇಲೆ ಹಾಕಲಾಗಿದ್ದ ಸಕ್ಕರೆ ಕರಗಿ ಪಾಕವಾಗಿರುತ್ತದೆ. ಆ ಇಡೀ ಪರೋರಾ ಸಕ್ಕರೆ ಪಾಕದಲ್ಲಿ ಮುಳುಗಿರುತ್ತದೆ.


ಇದನ್ನೂ ಓದಿ: Poha And Health: ಅವಲಕ್ಕಿಯನ್ನು ಬೆಳಗ್ಗೆ-ಸಾಯಂಕಾಲದ ತಿಂಡಿಯಾಗಿ ಸೇವಿಸುವುದು ಎಷ್ಟು ಆರೋಗ್ಯಕರ?


(ಗಮನಿಸಿ: ಇಲ್ಲಿ ನೀವು ಸಕ್ಕರೆ ಬದಲಾಗಿ ಬೆಲ್ಲ ಬಳಸಬಹುದು. ಒಣ ಕೊಬ್ಬರಿ ಮಿಶ್ರಣದಲ್ಲಿ ಡ್ರೈಫ್ರೂಟ್ಸ್​ ಸಣ್ಣದಾಗಿ ಕತ್ತರಿಸಿಕೊಂಡು ಸೇರಿಸಿಕೊಳ್ಳಬಹುದು)

Published by:Mahmadrafik K
First published: