Festival Special: ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್ ಗೋಧಿ ಮತ್ತು ಬಾದಾಮಿ ಉಂಡೆ ಟ್ರೈ ಮಾಡಿ

Food Recipe: ಈ ದಿನ ವ್ರತ ಆಚರಣೆಯ ಜೊತೆಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.  ಹೋಳಿಗೆ, ಪಾಯಸ, ಕೋಸಂಬರಿ ಹೀಗೆ. ಈ ಬಾರಿ ಸ್ವಲ್ಪ ವಿಭಿನ್ನವಾಗಿ ಗೋಧಿ ಮತ್ತು ಬಾದಾಮಿ ಉಂಡೆ ಮಾಡಿದ್ರೆ ಹೇಗಿರತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರಾವಣ ಮಾಸ ಭಾರತೀಯರ ಪಾಲಿಗೆ ಹಬ್ಬಗಳ ಸಮಯ. ಬಹಳ ವಿಶೇಷವಾದ ತಿಂಗಳು. ಈ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈಗಾಗಲೇ ಭೀಮನ ಅಮವಾಸ್ಯೆ ಮುಗಿಸಿ, ನಾಗರಪಂಚಮಿ  ಹಬ್ಬದ ಆಚರಣೆ ಕೂಡ ಮುಗಿದಿದೆ. ಇಂದು ಜನರು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜನರಿಗೆ ವರಮಹಾಲಕ್ಷ್ಮಿ ಬಹಳ ಮುಖ್ಯವಾದದ್ದು. ಈ ದಿನ ವ್ರತ ಆಚರಣೆಯ ಜೊತೆಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.  ಹೋಳಿಗೆ, ಪಾಯಸ, ಕೋಸಂಬರಿ ಹೀಗೆ. ಈ ಬಾರಿ ಸ್ವಲ್ಪ ವಿಭಿನ್ನವಾಗಿ ಗೋಧಿ ಮತ್ತು ಬಾದಾಮಿ ಉಂಡೆ ಮಾಡಿದ್ರೆ ಹೇಗಿರತ್ತೆ?.  ಅಲ್ಲದೆ, ಈ ಸ್ವೀಟ್ ತಯಾರಿಸಲು ಹೆಚ್ಚಿಗೆ ಸಾಮಾನೂ ಬೇಡ, ಸಮಯವೂ ಬೇಡ. ಮನೆಯಲ್ಲೇ ಸಿಗುವ ಸಾಮಾನುಗಳಿಂದ ಅತಿ ಬೇಗನೆ ಈ ಸ್ವೀಟನ್ನು ತಯಾರಿಸಬಹುದು. ಹಾಗಾದ್ರೆ ಹರಿಯಾಣ ಸ್ಪೆಷಲ್ ಗೋಧಿ ಉಂಡೆ ಮಾಡೋದು ಹೇಗೆ ಇಲ್ಲಿದೆ ನೋಡಿ.

ಗೋಧಿ- ಬಾದಾಮಿ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಗೋಧಿಹಿಟ್ಟು ಕಾಲು ಕೆ.ಜಿ

ತುಪ್ಪ ಕಾಲು ಕೆ.ಜಿ

ಸಕ್ಕರೆ ಪುಡಿ ಕಾಲು ಕೆ.ಜಿ

ಹಾಲು ಕಾಲು ಕಪ್ ಹಾಲು

ಏಲಕ್ಕಿ ಪುಡಿ 1 ಟೀ ಚಮಚ

ಬಾದಾಮಿ ಪುಡಿ : 1 ಟೀ ಚಮಚ

ಬಾದಾಮಿ – 10 ರಿಂದ 15  ( ಸಣ್ಣದಾಗಿ ಕತ್ತರಿಸಿ)

ಗೋಡಂಬಿ - 10 ರಿಂದ 15  ( ಸಣ್ಣದಾಗಿ ಕತ್ತರಿಸಿ)

ಪಿಸ್ತ- 4 ರಿಂದ 5(ಸಣ್ಣದಾಗಿ ಕತ್ತರಿಸಿ)

ಇದನ್ನೂ ಓದಿ: ಇಂದು ವರಮಹಾಲಕ್ಷ್ಮಿ ಹಬ್ಬ, ಪೂಜಾ ವಿಧಾನಗಳೇನು? ವ್ರತ ಆಚರಿಸುವ ಬಗೆ ಹೇಗೆ?

ಗೋಧಿ ಬಾದಾಮಿ ಉಂಡೆ ಮಾಡುವ ವಿಧಾನ

ಬಾಣಲೆಯಲ್ಲಿ ತುಪ್ಪ ಹಾಕಿ ಅದನ್ನು ಕರಗಿಸಿ ಕಾಯಿಸಿಕೊಳ್ಳಿ, ನಂತರ ಕಾದ ತುಪ್ಪಕ್ಕೆ ಗೋಧಿ ಹಿಟ್ಟನ್ನು ಸೇರಿಸಿ ಹುರಿಯಿರಿ. ಹುರಿಯಿವಾಗ ಗೋಧಿ ಹಿಟ್ಟು ಉಂಡೆ ಉಂಡೆಯಾಗದಂತೆ ಎಚ್ಚರಿಕೆ ವಹಿಸಿ. ಗೋಧಿ ಹಿಟ್ಟನ್ನ ಕೆಂಪಗಾಗವ ತನಕ ಹುರಿದುಕೊಳ್ಳಬೇಕು.  ಗೋಧಿ ಹಿಟ್ಟು ತುಪ್ಪದೊಂದಿಗೆ ಚೆನ್ನಾಗಿ ಬೆರೆತ ಮೇಲೆ ಗ್ಯಾಸ್ ಆಫ್ ಮಾಡಿ  ಅದು ತಣ್ಣಗಾಗುವ ತನಕ ಹಾಗೆಯೇ ಬಿಡಿ. ಹುರಿದ ಗೋಧಿ ಹಿಟ್ಟು  ತಣ್ಣಗಾದ ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಬೆರೆಸಿ ಸರಿಯಾಗಿ ಮಿಶ್ರಣ ಮಾಡಿ. ಪದಾರ್ಥಗಳು ಸರಿಯಾಗಿ ಮಿಶ್ರಣವಾದ ನಂತರ ಅದಕ್ಕೆ  ಬಾದಾಮಿ ಪುಡಿ ಸೇರಿಸಿ ಮತ್ತೊಮ್ಮೆ  ಮಿಕ್ಸ ಮಾಡಿ.  ಪ್ರತಿ ಪದಾರ್ಥವೂ ಸರಿಯಾಗಿ ಮಿಶ್ರಣವಾದ ನಂತರ ಅದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಬಾದಾಮಿ ಗೋಡಂಬಿ, ಪಿಸ್ತ ತುಂಡುಗಳನ್ನು ಹಾಕಿ, ಅದಕ್ಕೆ ಸ್ವಲ್ಪ ಸ್ವಲ್ಪ ಹಾಲನ್ನು ಹಾಕಿಕೊಳ್ಳುತ್ತಾ, ಈ ಮಿಶ್ರಣವನ್ನು ಉಂಡೆ ಮಾಡಿಕೊಳ್ಳಬೇಕು. ಉಂಡೆ ಮಾಡುವಾಗ ಅದು ಒಡೆಯದಂತೆ ನಾಜೂಕಾಗಿ ಮಾಡಬೇಕು. ಸರಿಯಾಗಿ ಉಂಡೆ ಮಾಡಿ ಅದರ ಮೇಲೆ 4 ಬಾದಾಮಿಯ ತುಂಡುಗಳನ್ನು ಇಟ್ಟರೆ, ರುಚಿಯಾದ ಗೋಧಿ ಮತ್ತು ಬಾದಾಮಿ ಉಂಡೆ ಹಬ್ಬಕ್ಕೆ ರೆಡಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: