Makeup Tips: ಮನೆಯಲ್ಲೇ ಸಿಂಪಲ್ ಮೇಕಪ್ ಮಾಡ್ಕೊಳ್ಳೋದು ಹೇಗೆ? ಬ್ಯೂಟಿಶಿಯನ್ ಹೇಳಿಕೊಡ್ತಾರೆ ನೋಡಿ

Festival Simple Makeup Tips: ಈ ಟಿಪ್ಸ್ ಫಾಲೋ ಮಾಡುವ ಮೂಲಕ ನೀವೇ ಮನೆಯಲ್ಲಿ ಮೇಕಪ್ ಮಾಡಿಕೊಳ್ಳಬಹುದು, ಇದು ನಿಮಗೆ ಸೂಪರ್ ಲುಕ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಹಬ್ಬದ ಮೇಕಪ್ ಮಾಡೋದು ಹೇಗೆ ಇಲ್ಲಿದೆ ನೋಡಿ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬಗಳ (Festival) ಸಾಲು ಆರಂಭವಾಗಿ ಬಹಳ ದಿನಗಳಾಗಿವೆ. ಈಗಷ್ಟೇ ಗೌರಿ ಗಣೇಶ ಹಬ್ಬ (Gowri Ganesha festival) ಮುಗಿದಿದೆ. ಇನ್ನೇನು 4 ದಿನಗಳಲ್ಲಿ ನವರಾತ್ರಿ (Navratri) ಸಂಭ್ರಮ ಆರಂಭವಾಗುತ್ತಿದೆ, ಪ್ರತಿದಿನ ಒಂದೆಲ್ಲಾ ಒಂದು ಕಾರ್ಯಕ್ರಮಗಳಿರುತ್ತದೆ. ಅದರಲ್ಲೂ 9 ದಿನವೂ ಹಬ್ಬ ಮಾಡುವವರಾಗಿದ್ದರೆ, ದಿನವೂ ರೆಡಿಯಾಗಬೇಕಾಗುತ್ತದೆ. ನಿಮಗೆ ಸಿಂಪಲ್ ಹಬ್ಬದ ಲುಕ್ (Make Up Looks) ಬೇಕು ಎಂದರೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಮನೆಯಲ್ಲಿಯೇ ಸುಲಭವಾಗಿ ಹಬ್ಬ ಹಾಗೂ ಪಾರ್ಟಿಗೆ (Party Look) ಹೋಗುವ ಲುಕ್ ಪಡೆಯೋದು ಹೇಗೆ ಅನ್ನೋದನ್ನು ಬನಶಂಕರಿಯ ದಿಶಾ ಬ್ಯೂಟಿ ಸ್ಪಾಟ್​ನ ದೀಪಾ ನಾಗೇಶ್​ (Deepa Nagesh) ಅವರು ನಮಗೆ ಹೇಳಿಕೊಟ್ಟಿದ್ದಾರೆ. ಅವರು ಹೇಳುವ ಈ ಟಿಪ್ಸ್ ಫಾಲೋ ಮಾಡುವ ಮೂಲಕ ನೀವೇ ಮನೆಯಲ್ಲಿ ಮೇಕಪ್ ಮಾಡಿಕೊಳ್ಳಬಹುದು, ಇದು ನಿಮಗೆ ಸೂಪರ್ ಲುಕ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಹಬ್ಬದ ಮೇಕಪ್ ಮಾಡೋದು ಹೇಗೆ ಇಲ್ಲಿದೆ ನೋಡಿ.  

ಮೇಕಪ್ ಮಾಡುವ ಮುನ್ನ ತಯಾರಿ ಮುಖ್ಯ

ನಿಮ್ಮ ಮುಖದ ಮೇಲೆ ಕಲೆಗಳಿದ್ದರೂ ಸಹ ಅದನ್ನು ಮಾರೆ ಮಾಚಿ ಸುಂದರವಾದ ಮೇಕಪ್ ಅನ್ನು ಕಡಿಮೆ ಉತ್ಪನ್ನಗಳನ್ನು ಬಳಸಿ ನೀವು ಮಾಡಬಹುದು. ಈ ಮೇಕಪ್ ಮಾಡಿಕೊಳ್ಳಲು ನಿಮಗೆ ಹೆಚ್ಚಿನ ವಸ್ತುಗಳು ಸಹ ಬೇಡ.  ನಿಮ್ಮ ಮುಖದ ಮೇಲೆ ಕಲೆ ಇರಲಿ ಇಲ್ಲದಿರಲಿ ಡಾರ್ಕ್ ಸರ್ಕಲ್ ಸಾಮಾನ್ಯವಾಗಿ ಇರುತ್ತದೆ. ಹಾಗಾಗಿ ನೀವು ಮೇಕಪ್​ ಮಾಡುವ ಮೊದಲು ಪ್ರಿಪರೇಷನ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮೇಕಪ್ ಚೆನ್ನಾಗಿ ಕೂರುವುದಿಲ್ಲ. ಹಾಗೆಯೇ ಡಾರ್ಕ್ ಸರ್ಕಲ್ ಕವರ್ ಆಗುವುದಿಲ್ಲ.

ಹಾಗಾಗಿ ಮೊದಲು ಕ್ಲೆನ್ಸಿಂಗ್ ಮಾಡಿಕೊಳ್ಳಬೇಕು, ನಂತರ ಟೋನಿಂಗ್ ಮಾಡಿ ಅದರ ನಂತರ ಮಾಯ್ಚರೈಸರ್ ಹಚ್ಚಿಕೊಳ್ಳಬೇಕು.  ಇವುಗಳನ್ನು ಹಚ್ಚಿದ ನಂತರ ನಿಮ್ಮ ತ್ವಚೆಯ ಟೋನ್​ಗೆ ಸೂಟ್​ ಆಗುವ ಕನ್ಸೀಲರ್ ಬಳಕೆ ಮಾಡಿ, ಇರುವ ಮಾರ್ಕ್ಸ್​ಗಳನ್ನು ಕವರ್ ಮಾಡಬೇಕು. ಮತ್ತೊಂದು ಮುಖ್ಯ ವಿಚಾರ ಎಂದರೆ ಲೈಟರ್ ಟೋನ್ ಬಳಕೆ ಮಾಡಬೇಡಿ. ನಿಮ್ಮ ಸ್ಕಿನ್ ಟೋನ್​ಗಿಂತ ಸ್ವಲ್ಪ ಡಾರ್ಕ್ ಶೇಟ್​ ಫೌಂಡೇಷನ್ ಬಳಸಿದರೆ ಡಾರ್ಕ್ ಸರ್ಕಲ್ ಕವರ್ ಆಗುತ್ತೆ. ಹಾಗೆಯೇ ಇದು ಮೊಡವೆಗಳನ್ನು ಸಹ ಕವರ್ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಸಮಂತಾ ತೊಟ್ಟಿರೋ ಈ ಎಲ್ಲಾ ಡ್ರೆಸ್ ಗಳನ್ನ ನೀವೂ ಖರೀದಿಸಬಹುದು, Onlineನಲ್ಲೇ ಸಿಗುತ್ತೆ ನೋಡಿ!

ನಂತರ ಫುಲ್ ಕವರೇಜ್​ ಫೌಂಡೇಷನ್ ಬಳಸಬಹುದು. ಇದಕ್ಕೆ ನೀವು ಮಾಯ್ಚರೈಸರ್ ಮಿಕ್ಸ್​ ಮಾಡಿ ಬಳಸಿದ್ರೆ, ಲೈಟ್​ ಮೇಕಪ್ ಆಗುತ್ತದೆ. ಇದನ್ನು ಸರಿಯಾಗಿ ಹಚ್ಚಿ, ಬ್ಯೂಟಿ ಬ್ಲೆಂಡರ್​ ಒದ್ದೆ ಮಾಡಿಕೊಂಡು ಹಚ್ಚಿ. ಹಾಗೆಯೇ ಫೌಂಡೇಷನ್​ ಅನ್ನು 2 ರಿಂದ 3 ಕೋಟ್​ ಅಪ್ಲೈ ಮಾಡಿದರೆ ಸರಿಯಾಗಿ ಮೇಕಪ್ ಕೂರುತ್ತದೆ.  ಈ ಪೌಂಡೇಷನ್ ಸೆಟ್​ ಮಾಡಲು ನೀವು ಕಾಂಪ್ಯಕ್ಟ್ ಪೌಡರ್ ಬಳಕೆ ಮಾಡಬಹುದು. ಲೂಸ್​ ಪೌಡರ್ ಅಥವಾ ಕೇಕ್ ಯಾವುದಾದರೂ ಬಳಸಬಹುದು.


ನಿಮ್ಮ ಸ್ಕಿನ್ ಟೋನ್​ಗೆ ತಕ್ಕ ಶೇಡ್​ ಆಯ್ಕೆ ಮಾಡಿ 

ನಿಮ್ಮ ತ್ವಚೆಯ ಸೂಕ್ತವಾಗುವ ಟೋನ್ ಆಯ್ಕೆ ಮಾಡಿ ಅಷ್ಟೇ.  ಹೈಲೈಟ್​ ಮಾಡಲು ಲೈಟರ್ ಶೇಡ್​ ಇರುವ ಕನ್ಸಿಲರ್​ಗಳನ್ನು ಮಾತ್ರ ಬಳಸಿ. ಇದಕ್ಕೆ ಡಾರ್ಕ್ ಶೇಡ್​ ಬಳಕೆ ಮಾಡಬಾರದು. ಇದನ್ನು ನಿಮ್ಮ ಕಣ್ಣಿನ ಕೆಳ ಭಾಗದಲ್ಲಿ ಹಚ್ಚಬೇಕು. ನಂತರ ಚೆನ್ನಾಗಿ ಬ್ಲೆಂಡ್​ ಮಾಡಿ. ಈ ಮೇಕಪ್ ಮಾಡಿದ ನಂತರ ನೀವು ಐ ಬ್ರೋ ಸಹ ಶೇಪ್ ಮಾಡುವುದು ಮುಖ್ಯವಾಗುತ್ತದೆ.  ನಿಮಗೆ ಯಾವ ಐ ಪ್ಯಾಲೆಟ್​ ಸೂಕ್ತವಾಗುತ್ತದೆ ಎಂದು ಬಳಸಿ, ಬ್ರೌನ್, ಬ್ಲ್ಯಾಕ್ ಹೀಗೆ.ಅಲ್ಲದೇ, ಹೆಚ್ಚಾಗಿ ಬ್ರೌನ್​ ಬೆಸ್ಟ್​ ಎಂಬುದು ದೀಪಾ ಅವರ ಅಭಿಪ್ರಾಯ.

ಇದನ್ನೂ ಓದಿ: ಅರೋಮಾಥೆರಪಿಗೆ ಈ ಎಣ್ಣೆಗಳನ್ನು ಮಾತ್ರ ಯೂಸ್​ ಮಾಡ್ಬೇಕಂತೆ

ಇನ್ನು ಹಾಗೆಯೇ ಐ ಮೇಕಪ್ ಸಹ ಮುಖ್ಯ, ಇದಕ್ಕೆ ನಿಮಗೆ ಮೇಕಾದ ಶೇಡ್​ ಬಳಸಿ ಸಾಕು. ಹಬ್ಬದ ಸಮಯದಲ್ಲಿ ಟೈಮ್ ಕಡಿಮೆ ಇರುವುದರಿಂದ ಸಿಂಪಲ್ ಆಗಿ ಐ ಮೇಕಪ್ ಮಾಡಿಕೊಳ್ಳಿ. ಇನ್ನು ಕಾಜಲ್ ಹಾಗೂ ಲಿಪ್ ಸ್ಟಿಕ್ ಬಳಕೆ ಮಾಡದೇ ಮೇಕಪ್ ಪೂರ್ಣವಾಗುವುದಿಲ್ಲ.
Published by:Sandhya M
First published: