• Home
  • »
  • News
  • »
  • lifestyle
  • »
  • Festival Hairstyle: ಹಬ್ಬಕ್ಕೆ ಕೇವಲ 5 ನಿಮಿಷದಲ್ಲಿ ಟ್ರೆಂಡಿ ಹೇರ್​ ಸ್ಟೈಲ್ ಮನೆಯಲ್ಲೇ ಮಾಡ್ಕೊಳಿ

Festival Hairstyle: ಹಬ್ಬಕ್ಕೆ ಕೇವಲ 5 ನಿಮಿಷದಲ್ಲಿ ಟ್ರೆಂಡಿ ಹೇರ್​ ಸ್ಟೈಲ್ ಮನೆಯಲ್ಲೇ ಮಾಡ್ಕೊಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Festival Simple Hair Style: ಈಗಾಗಲೇ ಬ್ಯೂಟಿಷಿಯನ್ ದೀಪಾ ನಾಗೇಶ್​ ನಿಮಗೆ ಮನೆಯಲ್ಲಿಯೇ ಹಬ್ಬಕ್ಕೆ ಸಿಂಪಲ್ ಮೇಕಪ್ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನ ಹೇಳಿಕೊಟ್ಟಿದ್ದಾರೆ. ಆದರೆ ಹಬ್ಬವಿರುವ ಕಾರಣ ಹೆಚ್ಚು ಹೊತ್ತು ಕುಳಿತು ಹೇರ್​ಸ್ಟೈಲ್ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಕೇವಲ 5 ನಿಮಿಷದಲ್ಲಿ ಸೂಪರ್ ಟ್ರೆಂಡಿ ಹೇರ್​ ಸ್ಟೈಲ್ ಮಾಡಿಕೊಳ್ಳೋದು ಹೇಗೆ ಇಲ್ಲಿದೆ.

ಮುಂದೆ ಓದಿ ...
  • Share this:

ನಿಮ್ಮ ಕೇಶ ವಿನ್ಯಾಸವು (Hair Style) ನಿಮ್ಮ ವ್ಯಕ್ತಿತ್ವವನ್ನು (Personality) ಹೆಚ್ಚಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಿಮ್ಮ ಮುಖ (Face) ಮತ್ತು ಕೂದಲಿನ (Hair) ವಿನ್ಯಾಸದ ಪ್ರಕಾರ, ಯಾವ ಕೇಶ ವಿನ್ಯಾಸವು ನಿಮಗೆ ಸರಿ ಹೊಂದುತ್ತದೆ ಎಂಬುದನ್ನ ನೋಡ ನಾವು ಹೇರ್​ ಸ್ಟೈಲ್ ಮಾಡಿಕೊಳ್ಳುತ್ತೇವೆ. ಇನ್ನೇನು 2 ದಿನಗಳಲ್ಲಿ ನವರಾತ್ರಿ (Navratri) ಸಂಭ್ರಮ ಆರಂಭವಾಗುತ್ತಿದೆ, ಪ್ರತಿದಿನ ಒಂದೆಲ್ಲಾ ಒಂದು ಕಾರ್ಯಕ್ರಮಗಳಿರುತ್ತದೆ (Function). ಅದರಲ್ಲೂ 9 ದಿನವೂ ಹಬ್ಬ ಮಾಡುವವರಾಗಿದ್ದರೆ, ದಿನವೂ ರೆಡಿಯಾಗಬೇಕಾಗುತ್ತದೆ. ಚೆಂದ ಸೀರೆ (Saree) ಅಥವಾ ಬಟ್ಟೆ ಹಾಕಿ, ಮೇಕಪ್ ಮಾಡಿಕೊಂಡ ಮೇಲೆ , ಹೇರ್​ ಸ್ಟೈಲ್ (hair Style) ಕೂಡ ಚೆನ್ನಾಗಿರಬೇಕು ಅಲ್ವಾ? ನಮಗೆ ಸೂಕ್ತವಾಗುವ ಹೇರ್ ಸ್ಟೈಲ್ ಮಾಡಿಕೊಂಡಿಲ್ಲ ಎಂದರೆ ನಾವು ಎಷ್ಟು ರೆಡಿಯಾದರೂ ಯೂಸ್​ ಇಲ್ಲ.


ಈಗಾಗಲೇ ಬ್ಯೂಟಿಷಿಯನ್ ದೀಪಾ ನಾಗೇಶ್​ ನಿಮಗೆ ಮನೆಯಲ್ಲಿಯೇ ಹಬ್ಬಕ್ಕೆ ಸಿಂಪಲ್ ಮೇಕಪ್ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನ ಹೇಳಿಕೊಟ್ಟಿದ್ದಾರೆ. ಆದರೆ ಹಬ್ಬವಿರುವ ಕಾರಣ ಹೆಚ್ಚು ಹೊತ್ತು ಕುಳಿತು ಹೇರ್​ಸ್ಟೈಲ್ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಕೇವಲ 5 ನಿಮಿಷದಲ್ಲಿ ಸೂಪರ್ ಟ್ರೆಂಡಿ ಹೇರ್​ ಸ್ಟೈಲ್ ಮಾಡಿಕೊಳ್ಳೋದು ಹೇಗೆ ಎಂಬುದನ್ನ ಅವರೇ ಹೇಳಿಕೊಟ್ಟಿದ್ದು, ಹಬ್ಬಕ್ಕೆ ನೀವೂ ಟ್ರೈ ಮಾಡಿ ನೋಡಿ.


ಇದನ್ನೂ ಓದಿ: ರುಚಿಕರವಾದ ಸುಶಿ ಹುಡುಕುತ್ತಿದ್ರೆ ಬೆಂಗಳೂರಿನ ಈ ರೆಸ್ಟೊರೆಂಟ್​ಗಳಿಗೆ ಹೋಗಿ


5 ನಿಮಿಷದಲ್ಲಿ ಮಸ್ತ್ ಹೇರ್​ ಸ್ಟೈಲ್ ಮಾಡಿ


ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಿಂಪಲ್ ಆಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿ ಮೊದಲು 2 ರಿಂದ ಮೂರು 3 ಹೇರ್ ಪಿನ್ ತೆಗೆದುಕೊಂಡು, ಬಫ್​​ ಅನ್ನು ಕೂದಲಿಗೆ ಹಾಕಿ. ನಂತರ ಲೆಫ್ಟ್​ ಹಾಗೂ ರೈಡ್​ ಸೈಡ್​ನಲ್ಲಿ ಬಾಚಿಕೊಂಡು ಅದನ್ನು ನೀಟಾಗಿ ಕೂರಿಸಿ ಹೇರ್​ ಪಿನ್ ಹಾಕಿ.


ನಿಮಗೆ  ಫ್ರೆಂಟ್​ ಹೇರ್ ಬೇಕು ಎಂದರೆ ಬಿಡಬಹುದು. ಎಲ್ಲ, ಹಾಗೆಯೇ ಹಾಕಬಹುದು. ಇದು ನಿಮಗೆ ಫ್ರೊಫೇಷನಲ್ ಲುಕ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೊಂದು ಬಹಳ ಸಿಂಪಲ್ ಹೇರ್​ ಸ್ಟೈಲ್ ಆಗಿದ್ದು, ಸಮಯ ಕೂಡ ಹೆಚ್ಚು ಬೇಕಿಲ್ಲ. ಮುಖ್ಯವಾಗಿ ಈ ಹೇರ್​ ಸ್ಟೈಲ್​ ನಿಮಗೆ ಗೌನ್ ಧರಿಸಿದಾಗ ಸೂಟ್​ ಆಗುತ್ತೆ, ಆದರೆ ಸೀರೆಯ ಮೇಲೆ ಸೂಪರ್ ಲುಕ್ ನೀಡುತ್ತದೆ.


ಜಿಗ್ ಜ್ಯಾಗ್​ ಹೇರ್​ ಸ್ಟೈಲ್ ಹಬ್ಬಕ್ಕೆ ಸೂಟ್​ ಆಗುತ್ತೆ


ಮತ್ತೊಂದು ಸುಲಭವಾದ ಮತ್ತು ಟ್ರೆಂಡಿ ಹೇರ್​ ಸ್ಟೈಲ್ ಎಂದರೆ ಜಿಗ್ ಜ್ಯಾಗ್​ ಹೇರ್​ ಸ್ಟೈಲ್​. ಇದು ನೋಡಿದ್ರೆ ಸ್ವಲ್ಪ ಕಷ್ಟ ಎನಿಸಬಹುದು, ಆದರೆ ಇದನ್ನು ಮಾಡಿಕೊಳ್ಳುವುದು ಬಹಳ ಸುಲಭ, ಕೇವಲ 3 ನಿಮಿಷದಲ್ಲಿ ಇದನ್ನು ಮಾಡಬಹುದು. ಆದರೆ ನಿಮಗೆ ಹೇರ್​ ಸ್ಟೈಲ್ ಮಾಡಿಕೊಂಡು ಅಭ್ಯಾಸವಿಲ್ಲದಿದ್ದರೆ, ಸ್ವಲ್ಪ ಕಷ್ಟವಾಗಬಹುದು.  ಮೊದಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಸಿಕ್ಕು ಇಲ್ಲದಂತೆ ನೋಡಿಕೊಳ್ಳಿ.



ನಂತರ ಮುಂದಿನ ಸ್ವಲ್ಪ ಕೂದಲನ್ನು ತೆಗೆದುಕೊಂಡು ಹಿಂದೆ ಹಾಕಿ ಹೇರ್ ಪಿನ್ ಹಾಕಿ. ನಂತರ ಹಿಂದಿನ ಸ್ವಲ್ಪ ಕೂದಲನ್ನು ಮುಂದೆ ಹಾಕಿ. ಹೀಗೆ ಒಂದು ಮುಂದೆ, ಇನ್ನೊಂದು ಹಿಂದೆ ಜಿಗ್ ಜ್ಯಾಗ್ ರೀತಿ ಹಾಕಿ. ನಂತರ ಮುಂದೆ ಉಳಿದಿರುವ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.


ಇದನ್ನೂ ಓದಿ: ಹಬ್ಬಕ್ಕೆ ಭರ್ಜರಿ ಆಫರ್, ಸಾವಿರ ರೂಪಾಯಿ ಒಳಗೆ ಖರೀದಿಸಿ ಬ್ಯೂಟಿಫುಲ್ ಡ್ರೆಸ್​


ನಂತರ ಅದನ್ನು ಒಂದು ಸೈಡ್​ಗೆ ಹಾಕಿ ನೀಟಾಗಿ ಪಿನ್ ಮಾಡಿ ಸಾಕು.  ಈ ಲುಕ್ ನಿಮ್ಮ ಸೀರೆ, ಚೂಡಿದಾರ ಹೀಗೆ ಎಲ್ಲಾ ಬಟ್ಟೆಗೂ ಸೂಪರ್ ಆಗಿ ಸೂಟ್​ ಆಗುತ್ತದೆ. ನಿಮ್ಮ ಕೂದಲು ಕರ್ಲಿ ಇದ್ದಲ್ಲಿ ಸ್ವಲ್ಪ ಹೇರ್ ಸ್ಟ್ರೈಟನಿಂಗ್ ಮಾಡಿಕೊಳ್ಳುವುದು ಉತ್ತಮ.

Published by:Sandhya M
First published: