• Home
  • »
  • News
  • »
  • lifestyle
  • »
  • Fenugreek And Health: ಮೆಂತ್ಯ ಬೀಜಗಳ ಸೇವನೆ ಮಾಡುವುದು ಯಾವ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತವೆ?

Fenugreek And Health: ಮೆಂತ್ಯ ಬೀಜಗಳ ಸೇವನೆ ಮಾಡುವುದು ಯಾವ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೆಂತ್ಯ ಬೀಜಗಳು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆ ನಿಧಾನ ಮಾಡುತ್ತದೆ. ಇದು ಸಕ್ಕರೆ ನಿಯಂತ್ರಣದಲ್ಲಿ ಇಡುತ್ತದೆ. ಮೆಂತ್ಯ ಬೀಜಗಳಲ್ಲಿರುವ ಅಮೈನೋ ಆಮ್ಲಗಳು ನಮ್ಮ ರಕ್ತದೊಳಗೆ ರಕ್ತದೊಂದಿಗೆ ಹರಿಯುವ ಸಕ್ಕರೆ ಒಡೆಯಲು ಸಹ ಕೆಲಸ ಮಾಡುತ್ತವೆ. ಇದು ರಕ್ತದ ಸಕ್ಕರೆಯ ಪ್ರಮಾಣವು ಕಡಿಮೆ ಆಗುತ್ತದೆ.

ಮುಂದೆ ಓದಿ ...
  • Share this:

    ಮೆಂತ್ಯ (Fenugreek) ಬೀಜ (Seed) ಸೇವನೆಯು ಅನೇಕ ಗಂಭೀರ ಕಾಯಿಲೆಗಳಿಂದ (Serious Disease) ರಕ್ಷಣೆ ನೀಡುತ್ತದೆ.  ಆದರೆ ಅದನ್ನು ಸೇವಿಸುವುದು ಹೇಗೆ ಎಂಬುದನ್ನು ನೀವು ಚೆನ್ನಾಗಿ ತಿಳಿದಿರಬೇಕು. ಮೆಂತ್ಯ ಚರ್ಮದ (Skin) ಕಾಯಿಲೆಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಜೊತೆಗೆ ಕೂದಲನ್ನು (Hair) ಬಲಪಡಿಸುತ್ತದೆ. ಅಷ್ಟೇ ಅಲ್ಲದೇ ಸಕ್ಕರೆ ಮತ್ತು ಹೃದ್ರೋಗ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳು ಕರಗುವ ಫೈಬರ್ನಲ್ಲಿ ಸಮೃದ್ಧ ಆಗಿವೆ. ನೀವು ಮೆಂತ್ಯ ಬೀಜಗಳನ್ನು ಸೇವನೆ ಮಾಡಿದಾಗ ಈ ಕರಗುವ ಫೈಬರ್ ದೇಹವನ್ನು ತಲುಪಿದ ನಂತರ ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.


    ನೀವು ರೊಟ್ಟಿ, ಅಕ್ಕಿ, ಗಂಜಿ, ಓಟ್ಸ್, ಉದ್ದಿನ ಬೇಳೆ, ಕಾರ್ಬೋಹೈಡ್ರೇಟ್‌ ಕಾಳುಗಳ ಸೇವನೆ ಮಾಡಿದಾಗ ದೇಹವನ್ನು ಸೇರುತ್ತದೆ. ಇಲ್ಲಿ ನಾವು ಮೆಂತ್ಯ ಪ್ರಯೋಜನಗಳು ಮತ್ತು ಅದನ್ನು ತಿನ್ನುವ ಸರಿಯಾದ ವಿಧಾನ ಹೇಳಲಾಗಿದೆ.


    ಮೆಂತ್ಯ ಬೀಜಗಳು ಯಾವ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತವೆ?


    ಸಕ್ಕರೆ ಕಾಯಿಲೆ ಅಂದರೆ ಮಧುಮೇಹ


    ಚಯಾಪಚಯ ಸುಧಾರಿಸುತ್ತದೆ


    ಕೂದಲು ಉದುರುವಿಕೆ ತಡೆಯುತ್ತದೆ


    ಚರ್ಮದ ಸೋಂಕಿನಿಂದ ರಕ್ಷಿಸಿ


    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ


    ಮೊಡವೆ ಉಂಟಾಗುವುದನ್ನು ತಡೆಯುತ್ತದೆ


    ಹೊಟ್ಟೆಯ ಸೋಂಕು ತಡೆಯುತ್ತದೆ


    ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ


    ಮೆಂತ್ಯದ ಪ್ರಯೋಜನಗಳು ಯಾವವು?


    ಈ ಕಾರ್ಬೋಹೈಡ್ರೇಟ್ ತ್ವರಿತ ಜೀರ್ಣಕ್ರಿಯೆಯೊಂದಿಗೆ ರಕ್ತದಲ್ಲಿ ಕರಗಿದರೆ, ನಂತರ ದೇಹದಲ್ಲಿ ಗ್ಲೂಕೋಸ್ ಪ್ರಮಾಣವು ಹೆಚ್ಚಾಗಲು ಪ್ರಾರಂಭ ಮಾಡುತ್ತದೆ. ಇದು ಸಕ್ಕರೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮೆಂತ್ಯ ಬೀಜಗಳು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆ ನಿಧಾನ ಮಾಡುತ್ತದೆ. ಇದು ಸಕ್ಕರೆ ನಿಯಂತ್ರಣದಲ್ಲಿ ಇಡುತ್ತದೆ.


    ಮೆಂತ್ಯ ಬೀಜಗಳಲ್ಲಿರುವ ಅಮೈನೋ ಆಮ್ಲಗಳು ನಮ್ಮ ರಕ್ತದೊಳಗೆ ರಕ್ತದೊಂದಿಗೆ ಹರಿಯುವ ಸಕ್ಕರೆ ಒಡೆಯಲು ಸಹ ಕೆಲಸ ಮಾಡುತ್ತವೆ. ಇದು ರಕ್ತದ ಸಕ್ಕರೆಯ ಪ್ರಮಾಣವು ಕಡಿಮೆ ಆಗುತ್ತದೆ. ಮತ್ತು ಇನ್ಸುಲಿನ್ ಪ್ರಮಾಣವು ಸರಿಯಾಗಿರುತ್ತದೆ.


    ಮೆಂತ್ಯ ಬೀಜಗಳನ್ನು ಸೇವಿಸುವುದು ಹೇಗೆ?


    ರಾತ್ರಿ ಒಂದು ಚಮಚ ಮೆಂತ್ಯ ಕಾಳು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದನ್ನು ಸೋಸಿ, ಜಗಿದು ಸೇವಿಸಿ. ಅಗತ್ಯವಿದ್ದರೆ, ನೀವು ಒಂದು ಅಥವಾ ಎರಡು ಸಿಪ್ಸ್ ನೀರನ್ನು ಕುಡಿಯಬಹುದು. ನಂತರ 30 ನಿಮಿಷಗಳವರೆಗೆ ಬೇರೆ ಏನನ್ನೂ ಸೇವನೆ ಮಾಡಿ.


    ನೀವು ಮಧುಮೇಹ ಟೈಪ್-1 ಅಥವಾ ಮಧುಮೇಹ ಟೈಪ್-2 ಕಾಯಿಲೆಯನ್ನು ಹೊಂದಿದ್ದರೂ, ಮೆಂತ್ಯ ಬೀಜಗಳು ಎರಡೂ ಪರಿಸ್ಥಿತಿಗಳಲ್ಲಿ ಬಹಳ ಪ್ರಯೋಜನಕಾರಿ ಆಗಿದೆ. ಮತ್ತು ನಿಮ್ಮ ಸಕ್ಕರೆ ನಿಯಂತ್ರಣದಲ್ಲಿರಿಸುತ್ತದೆ. ಮತ್ತು ಚಯಾಪಚಯ ಸುಧಾರಿಸುತ್ತದೆ.


    ಮೆಂತ್ಯದಲ್ಲಿರುವ ಔಷಧೀಯ ಗುಣಗಳು


    ಮೆಂತ್ಯದಲ್ಲಿರುವ ಔಷಧೀಯ ಗುಣಗಳು ಕೂದಲು ಉದುರುವುದು ತಡೆಯಲು ಪ್ರಯೋಜನಕಾರಿ. ಮೆಂತ್ಯದಲ್ಲಿರುವ ಔಷಧೀಯ ಗುಣಗಳು ಕಿವಿಗೆ ಪ್ರಯೋಜನಕಾರಿಯಾಗಿದೆ. ಮೆಂತ್ಯದ ಸೇವನೆಯು ಹೃದ್ರೋಗದಲ್ಲಿ ಪ್ರಯೋಜನಕಾರಿ. ಹೊಟ್ಟೆಯ ಕಾಯಿಲೆಗಳಲ್ಲಿ ಮೆಂತ್ಯ ಸೇವನೆಯು ಪ್ರಯೋಜನಕಾರಿ. ಮೆಂತ್ಯ ಸೇವನೆಯಿಂದ ಮಲಬದ್ಧತೆ ನಿವಾರಣೆ ಆಗುತ್ತದೆ.


    ಮೆಂತ್ಯದಲ್ಲಿರುವ ಔಷಧೀಯ ಗುಣಗಳು ವಾಂತಿ ನಿಲ್ಲಿಸುತ್ತದೆ. ಮೆಂತ್ಯದ ಔಷಧೀಯ ಗುಣಗಳು ರಕ್ತದ ಸಕ್ಕರೆ ನಿಯಂತ್ರಿಸುವಲ್ಲಿ ಪ್ರಯೋಜನಕಾರಿ. ಭೇದಿಯಲ್ಲಿ ಮೆಂತ್ಯ ಸೇವನೆಯು ಪ್ರಯೋಜನಕಾರಿ. ಋತುಚಕ್ರದ ಅಸ್ವಸ್ಥತೆ ಮೆಂತ್ಯವು ಅನೇಕ ಪ್ರಯೋಜನ ಹೊಂದಿದೆ. ಹೆರಿಗೆ ನಂತರ, ಮಹಿಳೆಯರು ಮೆಂತ್ಯ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ.


    ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು


    ಭೇದಿ ಉಂಟಾದಾಗ ಮೆಂತ್ಯ ಸೇವನೆ ಪ್ರಯೋಜನಕಾರಿ. ಋತುಚಕ್ರದ ಅಸ್ವಸ್ಥತೆ ಮೆಂತ್ಯ ಅನೇಕ ಪ್ರಯೋಜನ ಹೊಂದಿದೆ. ಹೆರಿಗೆ ನಂತರ, ಮಹಿಳೆಯರು ಮೆಂತ್ಯ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ. ಮೆಂತ್ಯವು ಗೊನೊರಿಯಾ ಚಿಕಿತ್ಸೆಗಾಗಿ ಆಯುರ್ವೇದ ಔಷಧ ಆಗಿದೆ.

    Published by:renukadariyannavar
    First published: