• Home
  • »
  • News
  • »
  • lifestyle
  • »
  • Fenugreek Leaves: ಚಳಿಗಾಲದಲ್ಲಿ ಮೆಂತ್ಯಸೊಪ್ಪು ತಿಂದರೆ ಆರೋಗ್ಯಕ್ಕೆ ಬಹಳ ಪ್ರಯೋಜನವಂತೆ

Fenugreek Leaves: ಚಳಿಗಾಲದಲ್ಲಿ ಮೆಂತ್ಯಸೊಪ್ಪು ತಿಂದರೆ ಆರೋಗ್ಯಕ್ಕೆ ಬಹಳ ಪ್ರಯೋಜನವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಸಿಯಾಗಿ ಮೆಂತ್ಯ ಸೊಪ್ಪು ತಿನ್ನುವುದು ಹಲವು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಮೆಂತ್ಯ ಸೊಪ್ಪು ಪರಿಪೂರ್ಣ ಪೋಷಕಾಂಶ ಹೊಂದಿದೆ. ಮೆಂತ್ಯ ಬೀಜಗಳು ನಮಗೆ ವರ್ಷವಿಡೀ ಸಿಗುತ್ತವೆ. ಆದರೆ ಮೆಂತ್ಯ ಸೊಪ್ಪು ಮಾತ್ರ ಚಳಿಗಾಲದಲ್ಲಿ ಸಿಗುತ್ತದೆ.

  • Share this:

    ಚಳಿಗಾಲದಲ್ಲಿ (Winter) ಹಲವು ತರಕಾರಿಗಳು (Vegetables) ಸಿಗುತ್ತವೆ. ಅವುಗಳು ಆರೋಗ್ಯಕ್ಕೆ (Health) ಹಲವು ರೀತಿಯ ಪೋಷಣೆ ಮತ್ತು ಆರೋಗ್ಯ ಲಾಭ (Benefit) ನೀಡುತ್ತವೆ. ಹೀಗೆ ಚಳಿಗಾಲದಲ್ಲಿ ಸಿಗುವ ಹಸಿರು ಸೊಪ್ಪುಗಳಲ್ಲಿ ಸಿಗುವ ಸೊಪ್ಪು ಅಂದ್ರೆ ಮೆಂತ್ಯ ಸೊಪ್ಪು (Fenugreek Leaves). ಕೆಲವರಿಗೆ ರೊಟ್ಟಿ ಚಪಾತಿ ಜೊತೆ ಹಸಿ ಮೆಂತ್ಯ ಸೊಪ್ಪು ತಿನ್ನುವುದು ಅಂದ್ರೆ ತುಂಬಾ ಇಷ್ಟ. ಹೀಗೆ ಹಸಿಯಾಗಿ ಮೆಂತ್ಯ ಸೊಪ್ಪು ತಿನ್ನುವುದು ಹಲವು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಮೆಂತ್ಯ ಸೊಪ್ಪು ಒಂದು ಕಾಲೋಚಿತ ತರಕಾರಿ ಆಗಿದೆ. ಮೆಂತ್ಯ ಬೀಜಗಳು ನಮಗೆ ವರ್ಷವಿಡೀ ಸಿಗುತ್ತವೆ. ಆದರೆ ಮೆಂತ್ಯ ಸೊಪ್ಪು ಮಾತ್ರ ಚಳಿಗಾಲದಲ್ಲಿ ಸಿಗುತ್ತದೆ.


    ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಲಾಭಕಾರಿ


    ಅನೇಕ ಜನರು ತೂಕ ನಷ್ಟಕ್ಕೆ ಮೆಂತ್ಯ ಬೀಜದ ನೀರು ಸೇವನೆ ಮಾಡುತ್ತಾರೆ. ಮೆಂತ್ಯ ಸೊಪ್ಪು ಸ್ವಲ್ಪ ಸಂಕೋಚಕ ರುಚಿ ಹೊಂದಿರುತ್ತದೆ. ಹಾಗಾಗಿ ಕೆಲವರಿಗೆ ಹಸಿಯಾಗಿ ತಿನ್ನಲು ಇಷ್ಟ ಆಗಲ್ಲ. ಆದರೆ ಮೆಂತ್ಯ ಸೊಪ್ಪನ್ನು ಹಸಿಯಾಗಿ ಸೇವಿಸುವುದು ಹೆಚ್ಚಿನ ಆರೋಗ್ಯ ಪ್ರಯೋಜನ ನೀಡುತ್ತದೆ.  ಆದ್ದರಿಂದ ಹೆಚ್ಚಿನ ಜನರು ಅದನ್ನು ಕಚ್ಚಾ ತಿನ್ನುವುದನ್ನು ತಪ್ಪಿಸುತ್ತಾರೆ.


    ಇನ್ನು ಬಹುತೇಕವಾಗಿ ಜನರು ಮೆಂತ್ಯ ಸೊಪ್ಪನ್ನು ಪರಾಠ, ದೋಸಾ, ರೊಟ್ಟಿ, ರೈಸ್ ಹೀಗೆ ವಿವಿಧ ಪಾಕ ವಿಧಾನಗಳ ಮೂಲಕ ಸೇವನೆ ಮಾಡುತ್ತಾರೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಮೆಂತ್ಯ ಸೊಪ್ಪು ಸಾಕಷ್ಟು ಹಿತ ನೀಡುತ್ತದೆ. ಇದು ದೇಹದ ಎಲ್ಲಾ ವಿಷಕಾರಿ ವಸ್ತುಗಳು ದೇಹದಿಂದ ಸ್ವಯಂಚಾಲಿತವಾಗಿ ಹೊರ ಹಾಕಲು ಸಹಾಯ ಮಾಡುತ್ತದೆ. ಮೆಂತ್ಯ ಸೊಪ್ಪು ಕರುಳನ್ನು ಸ್ವಚ್ಛಗೊಳಿಸುತ್ತದೆ.




    ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಅವರು ಹೇಳುವ ಪ್ರಕಾರ, ಮೆಂತ್ಯ ಸೊಪ್ಪು ಹೆಚ್ಚು ಆರೋಗ್ಯ ವರ್ಧಕವಾಗಿವೆ. ಮೆಂತ್ಯದ ಎಲೆಗಳನ್ನು ಅನೇಕ ವಿಧಗಳಲ್ಲಿ ಬಳಸಬಹುದು. ದಾಲ್, ಪರಾಠ ಅಥವಾ ಪಲ್ಯ ಮಾಡಿ ಸೇವಿಸಬಹುದು. ಮೆಂತ್ಯ ಸೊಪ್ಪು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ.


    ಮೆಂತ್ಯ ಸೊಪ್ಪು ಸೇವನೆ ಹೃದಯದ ಆರೋಗ್ಯ ಕಾಪಾಡುತ್ತದೆ


    ಮೆಂತ್ಯ ಸೊಪ್ಪು ಗ್ಯಾಲಕ್ಟೋಮನ್ನನ್ ಹೊಂದಿದೆ. ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಮೆಂತ್ಯ ಸೊಪ್ಪು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಹೊಂದಿದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುತ್ತದೆ.


    ಮಧುಮೇಹ ನಿಯಂತ್ರಣಕ್ಕೆ ಮೆಂತ್ಯ ಸೊಪ್ಪು ಪ್ರಯೋಜನಕಾರಿ


    ಮೆಂತ್ಯ ಸೊಪ್ಪು ನೈಸರ್ಗಿಕ ಕರಗುವ ಫೈಬರ್ ಗ್ಯಾಲಕ್ಟೋಮನ್ನನ್ ಹೊಂದಿದೆ. ಇದು ರಕ್ತದ ಸಕ್ಕರೆ ಹೆಚ್ಚುವುದನ್ನು ತಡೆಯುತ್ತದೆ. ಇದು ಇನ್ಸುಲಿನ್ ಉತ್ಪಾದನೆ ಪ್ರೇರೇಪಿಸುವ ಜವಾಬ್ದಾರಿಯುತ ಅಮೈನೋ ಆಮ್ಲಗಳನ್ನು ಸಹ ಒಳಗೊಂಡಿದೆ.


    ಬಲಿಷ್ಠ ಮೂಳೆಗಳಿಗೆ ಮೆಂತ್ಯ ಸೊಪ್ಪು ಸೇವಿಸಿ


    ಮೂಳೆಗಳ ಆರೋಗ್ಯಕ್ಕೆ ಮೆಂತ್ಯ ಸೊಪ್ಪು ತುಂಬಾ ಪ್ರಯೋಜನಕಾರಿ ಆಗಿದೆ. ಮೆಂತ್ಯ ಎಲೆಗಳು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿವೆ. ಇದು ಮೂಳೆಯಲ್ಲಿ ಆಸ್ಟಿಯೋ-ಟ್ರೋಫಿಕ್ ಚಟುವಟಿಕೆ ಉತ್ತೇಜಿಸುವ ಮೂಲಕ ಮೂಳೆಗಳನ್ನು ಬಲಪಡಿಸುತ್ತದೆ. ಜೊತೆಗೆ ಮೆಂತ್ಯವು ದೇಹದ ಕ್ಯಾಲ್ಸಿಯಂ ಕೊರತೆ ಸಹ ಪೂರೈಸುತ್ತದೆ.


    ಇದನ್ನೂ ಓದಿ: ದೇಹವು ಆರೋಗ್ಯವಾಗಿರಲು ಮತ್ತು ಯಕೃತ್ತಿನ ಆರೋಗ್ಯಕ್ಕೆ ಈ ಆಹಾರ ಸೇವಿಸಿ!


    ಉತ್ಕರ್ಷಣ ನಿರೋಧಕ ಚಟುವಟಿಕೆ ಹೆಚ್ಚಿಸುತ್ತದೆ ಮೆಂತ್ಯ ಸೊಪ್ಪು


    ಮೆಂತ್ಯ ಸೊಪ್ಪು ಫೀನಾಲಿಕ್ ಮತ್ತು ಫ್ಲೇವನಾಯ್ಡ್ ಸಂಯುಕ್ತ ಹೊಂದಿದ್ದುದೆ. ಇದು ಉತ್ಕರ್ಷಣ ನಿರೋಧಕ ಸಾಮರ್ಥ್ಯ ಸುಧಾರಿಸುತ್ತದೆ. ರೋಗಗಳನ್ನು ದೂರವಿಡುತ್ತದೆ.

    Published by:renukadariyannavar
    First published: