• Home
  • »
  • News
  • »
  • lifestyle
  • »
  • Morning Health Care: ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಪಾನೀಯ ಸೇವಿಸಿ, ಮಧುಮೇಹ ಕಂಟ್ರೋಲ್ ಆಗುತ್ತೆ

Morning Health Care: ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಪಾನೀಯ ಸೇವಿಸಿ, ಮಧುಮೇಹ ಕಂಟ್ರೋಲ್ ಆಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Fenugreek For Diabetes: ಮೆಂತ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ, ಆಯುರ್ವೇದದಲ್ಲಿ, ಮೆಂತ್ಯವನ್ನು ಮಧುಮೇಹ ರೋಗಿಗಳಿಗೆ ಅಮೃತವೆಂದು ಪರಿಗಣಿಸಲಾಗುತ್ತದೆ. 

  • Share this:

ಡಯಾಬಿಟಿಸ್ (Diabetes) ಎಂಬುದು ದೇಶದಲ್ಲಿ (Country) ಮಾತ್ರವಲ್ಲದೆ ಇಡೀ ವಿಶ್ವವನ್ನೇ (World) ಕಾಡುತ್ತಿರುವ ಕಾಯಿಲೆಯಾಗಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶ ಭಾರತ.  ಭಾರತದಲ್ಲಿ ಮಧುಮೇಹವು ಗಂಭೀರ ಸಮಸ್ಯೆಯಾಗಿದ್ದು, ಪ್ರತಿ ಐದನೇ ಭಾರತೀಯ ನಾಗರಿಕನು ಡಯಾಬಿಟಿಸ್​ನಿಂದ  ಬಳಲುತ್ತಿದ್ದಾನೆ. ಮಧುಮೇಹದಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟವು ನಿಧಾನವಾಗಿ ಏರುತ್ತದೆ. ಮಧುಮೇಹವು ನಮ್ಮ ಜೀವನಶೈಲಿ (Lifestyle) ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು,  ಅತಿಯಾದ ಒತ್ತಡವೂ ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. 


ಈ ಮಧುಮೇಹ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಾವು ಪ್ರಯತ್ನಗಳನ್ನು ಮಾಡಬಹುದು. ಮಧುಮೇಹ ಎಂದರೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗಲು ಆರಂಭಿಸಿದೆ ಎಂದು ಅರ್ಥ.  ಇನ್ನು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ಪದೇ ಪದೇ ಮೂತ್ರ ವಿಸರ್ಜನೆ, ಬಾಯಾರಿಕೆ, ತೂಕ ಹೆಚ್ಚಾಗುವುದು, ಗಾಯವಾದರೆ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಮಧುಮೇಹವು ಕೆಲವು ವರ್ಷಗಳ ನಂತರ ಹೃದಯ, ಕಣ್ಣು ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ಕೊಬ್ಬು, ಆಮ್ಲ ಸಂಗ್ರಹ ಮತ್ತು ಪೋಷಕಾಂಶಗಳ ಕೊರತೆಯನ್ನು ಹೆಚ್ಚಿಸುತ್ತದೆ.


ಮಧುಮೇಹಕ್ಕೆ ಮೆಂತ್ಯ ಬೀಜ ಔಷಧ


95 ರಷ್ಟು ಭಾರತೀಯರಲ್ಲಿ ಟೈಪ್-2 ಮಧುಮೇಹ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮೆಂತ್ಯ ಬೀಜಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಬೆಚ್ಚಗಿರಲು ಅತಿಯಾಗಿ ಬಿಸಿನೀರು ಕುಡಿಬೇಡಿ, ಅಪಾಯ ಅಂತಾರೆ ತಜ್ಞರು


ಮೆಂತ್ಯವು ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಮೆಂತ್ಯವು ಕರಗುವ ಫೈಬರ್ ಅನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.


ಮೆಂತ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ, ಆಯುರ್ವೇದದಲ್ಲಿ, ಮೆಂತ್ಯವನ್ನು ಮಧುಮೇಹ ರೋಗಿಗಳಿಗೆ ಅಮೃತವೆಂದು ಪರಿಗಣಿಸಲಾಗುತ್ತದೆ. ಮೆಂತ್ಯವು ಸೋಡಿಯಂ, ಸತು, ರಂಜಕ, ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಜೊತೆಗೆ ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಮತ್ತು ಕೆ ಜೊತೆಗೆ ಫೈಬರ್ ಮತ್ತು ಪ್ರೋಟೀನ್ ಪಿಷ್ಟ, ಫಾಸ್ಪರಿಕ್ ಆಮ್ಲ, ನ್ಯೂಟ್ರಾನ್‌ಗಳನ್ನು ಒಳಗೊಂಡಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣಕ್ಕೆ ತರುತ್ತದೆ. ಹಾಗಾದ್ರೆ ಮಧುಮೇಹವನ್ನು ಕಂಟ್ರೋಲ್ ಮಾಡಲು ಮೆಂತ್ಯವನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ.




ಬಳಕೆಯ ವಿಧಾನ 


ಸುಂದರವಾದ ಕೂದಲು ಮತ್ತು ಆರೋಗ್ಯಕರ ಚರ್ಮಕ್ಕಾಗಿ ಮೆಂತ್ಯ ಬೀಜಗಳನ್ನು ಬಳಸಬಹುದು ಎಂದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಮಧುಮೇಹ ಸಮಸ್ಯೆ ಇರುವ ರೋಗಿಗಳು ಸಹ ಇದನ್ನು ಬಳಕೆ ಮಾಡಬಹುದು. ಈ ಮೆಂತ್ಯೆ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ. ಮೆಂತ್ಯವನ್ನು ತಿನ್ನುವುದು ಅಧಿಕ ರಕ್ತದೊತ್ತಡ ಮತ್ತು ತೂಕ ಇಳಿಕೆಗೆ ಸಹ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಮೆಂತ್ಯವು ಮಧುಮೇಹ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂಬುದಕ್ಕೆ ಇವುಗಳೇ ಸಾಕ್ಷಿ. ಈ ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದು ಒಳ್ಳೆಯದು.


ಇದನ್ನೂ ಓದಿ: ಪ್ಲಮ್​ ಕೇಕ್​ ಇಲ್ಲದೇ ಕ್ರಿಸ್​ಮಸ್​ ಇಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇದರ ಹಿಂದಿನ ಇಂಟರೆಸ್ಟಿಂಗ್ ಕಹಾನಿ


ರಾತ್ರಿ ಮಲಗುವ ಮುನ್ನ ನೀವು ಮೆಂತ್ಯವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಮರುದಿನ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಇದಲ್ಲದೆ, ಹುರಿದ ಮೆಂತ್ಯ ಬೀಜಗಳನ್ನು ಸಹ ತಿನ್ನಬಹುದು. ಮೆಂತ್ಯ ರುಚಿಯಲ್ಲಿ ಕಹಿ ಇದ್ದರೂ ಸಹ ಇದು ಬಹಳ ಪ್ರಯೋಜನಕಾರಿ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು