• Home
  • »
  • News
  • »
  • lifestyle
  • »
  • Diet Plan: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ

Diet Plan: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ಅಧ್ಯಯನಗಳು ಮಧ್ಯಂತರ ಉಪವಾಸವು ಸ್ತ್ರೀ ಹಾರ್ಮೋನುಗಳು ಮತ್ತು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿವೆ. ಹೀಗೆ ಅಡ್ಡ ಪರಿಣಾಮವನ್ನು ಉಲ್ಲೇಖಿಸಿರುವ ಅಧ್ಯಯನದ ಬಗ್ಗೆ ತಿಳಿಯುವ ಮೊದಲು ಮಧ್ಯಂತರ ಉಪವಾಸ ಹೇಗೆ ಮತ್ತು ಯಾವೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ನೋಡೋಣ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಮಧ್ಯಂತರ ಉಪವಾಸ (Intermittent Fasting) ಬಹಳ ಜನಪ್ರಿಯತೆ (Famous) ಪಡೆದುಕೊಂಡಿದೆ. ಈ ಮೂಲಕ ಹಲವು ಸೆಲೆಬ್ರಿಟಿಗಳು ತಮ್ಮ ತೂಕ ಇಳಿಸಿಕೊಂಡು ಫಿಟ್ನೆಸ್ (Fitness) ಕಾಪಾಡಿಕೊಂಡಿದ್ದಾರೆ. ಈಗ ಜನಸಾಮಾನ್ಯರೂ ಸಹ ಮಧ್ಯಂತರ ಉಪವಾಸಕ್ಕೆ ಮಾರು ಹೋಗಿದ್ದು, ಈ ಡಯಟ್ ಪ್ಲಾನ್ ನ್ನು (Diet Plan) ಫಾಲೋ ಮಾಡ್ತಿದ್ದಾರೆ. ಮಧ್ಯಂತರ ಉಪವಾಸವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನ ನೀಡುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ತಜ್ಞರು ಮಧ್ಯಂತರ ಉಪವಾಸದ ಕೆಲವು ಅಡ್ಡ ಪರಿಣಾಮಗಳನ್ನು ಸಹ ಹೇಳಿದ್ದಾರೆ. ಇವುಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.


    ಇತ್ತೀಚಿನ ಅಧ್ಯಯನಗಳು ಮಧ್ಯಂತರ ಉಪವಾಸವು ಸ್ತ್ರೀ ಹಾರ್ಮೋನುಗಳು ಮತ್ತು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿವೆ. ಹೀಗೆ ಅಡ್ಡ ಪರಿಣಾಮವನ್ನು ಉಲ್ಲೇಖಿಸಿರುವ ಅಧ್ಯಯನದ ಬಗ್ಗೆ ತಿಳಿಯುವ ಮೊದಲು ಮಧ್ಯಂತರ ಉಪವಾಸ ಹೇಗೆ ಮತ್ತು ಯಾವೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ನೋಡೋಣ.


    ಮಧ್ಯಂತರ ಉಪವಾಸ ಎಂದರೇನು?


    ಮಧ್ಯಂತರ ಉಪವಾಸ ಅಂದ್ರೆ ಉಪವಾಸ ಮತ್ತು ಆಹಾರ ಸೇವನೆಯ ನಡುವೆ ಒಂದು ನಿರ್ದಿಷ್ಟ ಮಧ್ಯಂತರ ಇರಿಸುವ ರೀತಿಯಲ್ಲಿ ಆಹಾರ ಸೇವನೆಯ ಪ್ಲಾನ್ ನ್ನು ಮಧ್ಯಂತರ ಉಪವಾಸ ಅಂತಾ ಕರೀತಾರೆ. ಇದರಲ್ಲಿ ಒಬ್ಬ ವ್ಯಕ್ತಿಯು ದೀರ್ಘ ಕಾಲದವರೆಗೆ ಆಹಾರ ಸೇವಿಸದೇ ಇರಬೇಕಾಗುತ್ತದೆ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ   


    ನೀವು ನಿರ್ದಿಷ್ಟ ಸಮಯದಲ್ಲಿ ಮಾತ್ರ ಆಹಾರ ಸೇವನೆ ಮಾಡಬೇಕಾಗುತ್ತದೆ. ಪ್ರತಿದಿನ ದೀರ್ಘಾವಧಿಯ ಉಪವಾಸ ಮಾಡುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


    ಮಧ್ಯಂತರ ಉಪವಾಸದ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?


    ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಮಧ್ಯಂತರ ಉಪವಾಸವು ಹಾರ್ಮೋನುಗಳ ಚಕ್ರ ಮತ್ತು ಫಲವತ್ತತೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಕಂಡು ಬಂದಿದೆ. ಫಲಿತಾಂಶದ ದೃಷ್ಟಿಯಿಂದ ಮನುಷ್ಯರ ಮೇಲೂ ಅಧ್ಯಯನ ನಡೆಸಲಾಗಿದೆ.


    ಸಂಶೋಧಕರು 50 ಮಹಿಳೆಯರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದರು. ಆ ಮಹಿಳೆಯರಿಗೆ ಎಂಟು ವಾರಗಳ ಮಧ್ಯಂತರ ಉಪವಾಸದ ಪ್ರಕಾರ ಆಹಾರ ನೀಡಲಾಯಿತು. ಇವರಲ್ಲಿ ಋತುಬಂಧಕ್ಕೊಳಗಾದ ನಂತರದ ಮತ್ತು ಋತುಬಂಧಕ್ಕೊಳಗಾದ ಮಹಿಳೆಯರು ಸೇರಿದ್ದರು.




    ಭಾಗವಹಿಸಿದ ಮಹಿಳೆಯರ ರಕ್ತದ ಮಾದರಿಗಳನ್ನು ನಿರ್ದಿಷ್ಟ ಸಮಯಗಳಲ್ಲಿ ಲೈಂಗಿಕ ಹಾರ್ಮೋನ್ ಮಟ್ಟ ಅಳೆಯಲು ಪರೀಕ್ಷಿಸಲಾಯಿತು. ಎಂಟು ವಾರಗಳ ನಂತರ ಎರಡೂ ಗುಂಪುಗಳು ಬಹುತೇಕ ಒಂದೇ ಪ್ರಮಾಣದ ತೂಕ ಇಳಿಸಿಕೊಂಡಿದ್ದು ಕಂಡು ಬಂತು.


    ಆದರೆ ಅವರು ಲೈಂಗಿಕ ಹಾರ್ಮೋನ್ ಮಟ್ಟದಲ್ಲಿ ಸ್ವಲ್ಪ ಕಡಿತ ಹೊಂದಿದ್ದರು. ಅಧ್ಯಯನದಲ್ಲಿ ಮಹಿಳೆಯರ ಎರಡೂ ಗುಂಪುಗಳು ಮಧ್ಯಂತರ ಉಪವಾಸವು ಯೋಜನೆಯನ್ನು ಫಾಲೋ ಮಾಡಿದಾಗ ಎಂಟು ವಾರಗಳಲ್ಲಿ DHEA ಮಟ್ಟದಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಗಮನಾರ್ಹವಾದ ಕಡಿತ ಹೊಂದಿದ್ದರು.


    ಲೈಂಗಿಕ ಹಾರ್ಮೋನು ತಯಾರಿಸುವಲ್ಲಿ ತೊಂದರೆ


    ಅಧ್ಯಯನದ ಸಮಯದಲ್ಲಿ ಗಮನಾರ್ಹವಾಗಿ ಬದಲಾಗುತ್ತಿರುವ ಏಕೈಕ ಹಾರ್ಮೋನ್ ಡಿಹೈಡ್ರೊಪಿಯಾಂಡ್ರೊಸ್ಟೆರಾನ್ ಆಗಿದೆ. ಇದು ದೇಹದಲ್ಲಿ ಲೈಂಗಿಕ ಹಾರ್ಮೋನುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನುಗಳು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ. ತೂಕ ನಷ್ಟದಿಂದ ಡಿಹೈಡ್ರೊಪಿಯಾಂಡ್ರೊಸ್ಟೆರಾನ್ ಮಟ್ಟಗಳು ಪರಿಣಾಮ ಬೀರುತ್ತವೆ.


    ಡಿಹೈಡ್ರೊಪಿಯಾಂಡ್ರೊಸ್ಟೆರಾನ್ ಕುಸಿತದ ಹೊರತಾಗಿಯೂ ಭಾಗವಹಿಸಿದ್ದ ಮಹಿಳೆಯರ ಡಿಹೈಡ್ರೊಪಿಯಾಂಡ್ರೊಸ್ಟೆರಾನ್ ಮಟ್ಟ ಸಾಮಾನ್ಯ ವ್ಯಾಪ್ತಿಯಲ್ಲಿಯೇ ಉಳಿದಿತ್ತು. ಹೀಗಾಗಿ ಪ್ರಯೋಗಗಳಲ್ಲಿ ಯಾವುದೇ ಆತಂಕಕಾರಿ ಅಡ್ಡ ಪರಿಣಾಮ ಉಂಟಾಗಿಲ್ಲ. ಹೆಚ್ಚಿನ ಮಟ್ಟದ ಡಿಹೈಡ್ರೊಪಿಯಾಂಡ್ರೊಸ್ಟೆರಾನ್ ಸಹ ಸ್ತನ ಕ್ಯಾನ್ಸರ್ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ.


    ಹೆಚ್ಚಿನ ಮಟ್ಟದ ಡಿಹೈಡ್ರೊಪಿಯಾಂಡ್ರೊಸ್ಟೆರಾನ್, ಇದು ಅನಿಯಮಿತ ಮುಟ್ಟಿನ ಅವಧಿ, ಅತಿಯಾದ ಮೊಡವೆ ಮತ್ತು ಕೂದಲಿನ ಬೆಳವಣಿಗೆಯಲ್ಲಿ ಬದಲಾವಣೆ ಉಂಟು ಮಾಡುತ್ತದೆ.


    ಮಧ್ಯಂತರ ಉಪವಾಸವು ಸಂತಾನೋತ್ಪತ್ತಿ ಆರೋಗ್ಯಕ್ಕೆ ಒಳ್ಳೆಯದಲ್ಲ


    ಮಹಿಳೆಯರು ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ಹಾರ್ಮೋನ್ ಮಟ್ಟಗಳ ಮೇಲೆ ಮಧ್ಯಂತರ ಉಪವಾಸದ ಪರಿಣಾಮ ತೋರಿಸಿದೆ. ತೂಕ ನಷ್ಟಕ್ಕೆ ಮಧ್ಯಂತರ ಉಪವಾಸವು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಧ್ಯಯನವೊಂದು ಹೇಳಿದೆ.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!   


    ಅಧ್ಯಯನ ಫಲಿತಾಂಶಗಳು ಮಧ್ಯಂತರ ಉಪವಾಸ ಸ್ಥೂಲಕಾಯ ಹೊಂದಿರುವ ಪ್ರೀ ಮೆನೋಪಾಸ್ ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನ್-ಬೈಂಡಿಂಗ್ ಗ್ಲೋಬ್ಯುಲಿನ್  ಮಟ್ಟ ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ. ಇದು ಆಂಡ್ರೊಜೆನ್ ಮಾರ್ಕರ್ ಕಡಿಮೆ ಮಾಡುತ್ತದೆ.

    Published by:renukadariyannavar
    First published: