Parenting: ನಿಮ್ಮ ಮಗುವಿಗೆ ಬಾಟಲ್‌ನಲ್ಲಿ ಹಾಲು ಕುಡಿಸುವ ಮುನ್ನ ಈ ಸುದ್ದಿ ಓದಿ..!

Bottle Feeding : ಶಿಶು ಹಾಲಿನ ಫೀಡಿಂಗ್ ಬಾಟಲ್‌ಗಳು ಮತ್ತು ಶಿಶು ಆಹಾರಗಳು (ಉತ್ಪಾದನೆ, ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಕಾಯ್ದೆ, 1992 ಅನ್ನು ಐಎಂಎಸ್ ಕಾಯ್ದೆ, 2003ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಇದು ಬಾಟಲಿಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸುತ್ತದೆ. ಐಎಪಿಯ ವೈದ್ಯಕೀಯ ಲೇಖನಗಳು ಸಹ ಶಿಶುಗಳಿಗೆ ಹಾಲುಣಿಸುವ ಈ ಅನುಚಿತ ವಿಧಾನವನ್ನು ಶಿಶುಗಳ ಮರಣ ಮತ್ತು ಅನಾರೋಗ್ಯಕ್ಕೆ ಜೋಡಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯಿಯ ಹಾಲು(Breast Milk) ಮಗುವಿಗೆ ಅಮೃತ ಎಂದು ಹೇಳುವುದನ್ನು ನಾವೆಲ್ಲರು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಈ ಅಮೃತವನ್ನು ಕೆಲವು ತಾಯಂದಿರು ಗೊತ್ತಿರಲಾರದೇ ಈ ಆಧುನಿಕ ಬದುಕಿನ ಒತ್ತಡಕ್ಕೆ ಸಿಲುಕಿ ಬಾಟಲ್‌ನಲ್ಲಿ(Bottle) ಹಾಕಿ ಹಾಲು ಕುಡಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಅನೇಕ ಮಹಿಳೆಯರು ತಾವು ಕೆಲಸಕ್ಕೆ ಹೋಗಬೇಕಾಗಿರುವುದರಿಂದ ತಮ್ಮ ಮಕ್ಕಳಿಗೆ ಬಾಟಲ್‌ನಲ್ಲಿ ಹಾಲು ತುಂಬಿಸಿ ಕುಡಿಸುವುದನ್ನು ಬಹು ಬೇಗನೆ ಅಭ್ಯಾಸ ಮಾಡಿಸುತ್ತಾರೆ. ಈ ಅಭ್ಯಾಸ ತಾಯಂದಿರಿಗೆ ಅನುಕೂಲವಾಗಬಹುದೇನೋ, ಆದರೆ ಆ ಹಸುಗೂಸಿನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬಿರುತ್ತದೆ ಎನ್ನುವುದರ ಬಗ್ಗೆ ಸ್ವಲ್ಪ ಅರಿವು ನಮ್ಮೆಲ್ಲರಲ್ಲಿಯೂ ಬೇಕಾಗಿರುವುದು ತುಂಬಾ ಮುಖ್ಯವಾಗಿದೆ.

ಮಗುವಿನ ಬೆಳವಣಿಗೆಗೆ ಪೂರಕವಾದ ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅನೇಕ ಅಭಿಯಾನಗಳನ್ನು ನಾವೆಲ್ಲರೂ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ ಆರೋಗ್ಯ ತಜ್ಞರು ಆತಂಕದಲ್ಲಿರುವುದು ಎದೆ ಹಾಲುಣಿಸುವ ವಿಧಾನದಿಂದ ಎಂದರೆ ಇಲ್ಲಿ ತಪ್ಪಾಗುವುದಿಲ್ಲ.

ಹಾಲನ್ನು ಮಕ್ಕಳಿಗೆ ಕುಡಿಯಲು ಈ ಪ್ಲಾಸ್ಟಿಕ್ ಬಾಟಲ್‌ಗಳನ್ನು ಉಪಯೋಗಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ತಜ್ಞರು ಹೇಳುತ್ತಾರೆ. ಈಗ ವಿದ್ಯಾವಂತ ಜನರು ಬಾಟಲ್‌ನಲ್ಲಿ ಹಾಲು ಹಾಕಿ ತಮ್ಮ ಮಕ್ಕಳಿಗೆ ಕುಡಿಯಲು ಕೊಡದೆ ಈ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಪೂರ್ಣವಾಗಿ ತೊರೆದರೆ ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾಲನ್ನು ಚಮಚದಿಂದ ಅಥವಾ ಚಿಕ್ಕ ಲೋಟದಲ್ಲಿ ಹಾಕಿ ಕುಡಿಸುವುದು ಒಳ್ಳೆಯದು

ಇದನ್ನೂ ಓದಿ: ಚರ್ಮದ ಸಮಸ್ಯೆಗಳಿಗೆ ಪರಿಹಾರ ಬೇಕಾ? ಹಾಗಾದ್ರೆ ದಾಳಿಂಬೆ ಹಣ್ಣು ತಿನ್ನಿ

ಪ್ಲಾಸ್ಟಿಕ್ ಬಾಟಲ್‌ನಲ್ಲಿ ಹಾಲು ತುಂಬಿಸಿ ಮಕ್ಕಳಿಗೆ ಕುಡಿಯಲು ಕೊಡುವುದಕ್ಕಿಂತಲೂ ನಮ್ಮ ಅಜ್ಜಿ ಮತ್ತು ತಾಯಿಯ ಸಮಯದಲ್ಲಿ ಹೇಗೆ ಮಕ್ಕಳಿಗೆ ಹಾಲನ್ನು ಚಮಚದಿಂದ ಅಥವಾ ಸಣ್ಣ ಲೋಟದಲ್ಲಿ ಹಾಕಿ ಕುಡಿಸುತ್ತಿದ್ದರು ಈಗ ಅದೇ ಪದ್ದತಿಯನ್ನು ಅನುಸರಿಸುವುದು ಒಳ್ಳೆಯದು ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆಧುನಿಕ ತಾಯಂದಿರಿಗೆ ಈ ಹಾಲುಣಿಸುವ ಬಾಟಲಿಗಳು ತಮ್ಮ ಅಳುವ ಮಗುವನ್ನು ಸಮಾಧಾನಪಡಿಸಲು ತುಂಬಾ ಸುಲಭವಾದ ಮಾರ್ಗವಾದರೂ, ಈ ಸಣ್ಣ ಪ್ಲಾಸ್ಟಿಕ್ ಕಂಟೇನರ್‌ಗಳು ಮಕ್ಕಳ ಪಾಲಿಗೆ ಶತ್ರು ಅಂತಲೇ ನೋಡಲಾಗುತ್ತದೆ.

ಶಿಶು ಹಾಲಿನ ಫೀಡಿಂಗ್ ಬಾಟಲ್‌ಗಳು ಮತ್ತು ಶಿಶು ಆಹಾರಗಳು (ಉತ್ಪಾದನೆ, ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಕಾಯ್ದೆ, 1992 ಅನ್ನು ಐಎಂಎಸ್ ಕಾಯ್ದೆ, 2003ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಇದು ಬಾಟಲಿಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸುತ್ತದೆ. ಐಎಪಿಯ ವೈದ್ಯಕೀಯ ಲೇಖನಗಳು ಸಹ ಶಿಶುಗಳಿಗೆ ಹಾಲುಣಿಸುವ ಈ ಅನುಚಿತ ವಿಧಾನವನ್ನು ಶಿಶುಗಳ ಮರಣ ಮತ್ತು ಅನಾರೋಗ್ಯಕ್ಕೆ ಜೋಡಿಸಿವೆ.

ಇದು ಮಕ್ಕಳಲ್ಲಿ ಅತಿಸಾರಕ್ಕೆ ಕಾರಣವಾಗುತ್ತದೆ

ಶಿಶುಗಳಲ್ಲಿ ಅತಿಸಾರಕ್ಕೆ ಬಾಟಲ್‌ನಲ್ಲಿ ಹಾಕಿ ಹಾಲು ಕೂಡಿಸುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಕೆ.ಎ.ಪಿ. ವಿಶ್ವನಾಥಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞರ ವಿಭಾಗದ ಮುಖ್ಯಸ್ಥ ಡಿ. ಸ್ವಾಮಿನಾಥನ್ ಹೇಳುತ್ತಾರೆ. ಸೂಕ್ಷ್ಮಜೀವಿಗಳು ಬಾಟಲಿಯಲ್ಲಿಯೇ ಅಂಟಿಕೊಳ್ಳಬಹುದು ಮತ್ತು ಬಾಟಲಿಯ ಮರು ಬಳಕೆಯೊಂದಿಗೆ ಶಿಶುವಿಗೆ ಅದು ಹರಡಬಹುದು.

ಈ ಬಾಟಲಿಗಳನ್ನು ನಿಯಮಿತವಾಗಿ ಬಿಸಿ ನೀರಿನಲ್ಲಿ ಹಾಕಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ, ಎಷ್ಟು ಜನರು ಇದನ್ನು ಸ್ವಚ್ಚಗೊಳಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.

ಇದನ್ನೂ ಓದಿ: ಆಲೂಗೆಡ್ಡೆ ಜ್ಯೂಸ್ ಸೇವನೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

ಫ್ಲಾಸ್ಕ್ ಅಥವಾ ಸಿಪ್ಪರ್‌ನಂತಹ ಕಿರಿದಾದ ಕುತ್ತಿಗೆಯನ್ನು ಹೊಂದಿರುವ ಯಾವುದೇ ಮುಚ್ಚಿದ ಕಂಟೇನರ್ ಸೂಕ್ತ ಶೇಖರಣಾ ಸಾಧನವಲ್ಲ. ಕೆಲವು ಪೋಷಕರು ಪ್ರಯಾಣದ ಸಮಯದಲ್ಲಿ ಬಾಟಲಿ ಬಯಸಬಹುದಾದರೂ, ಬಾಟಲಿಯನ್ನು ಬಸ್ ಅಥವಾ ರೈಲು ಪ್ರಯಾಣದ ಸಮಯದಲ್ಲಿ ಸ್ವಚ್ಛಗೊಳಿಸಲು ಆಗದೆ ಇರುವುದರಿಂದ ವೈದ್ಯರು ಇದನ್ನು ಪ್ರೇರೇಪಿಸುವುದಿಲ್ಲ.
First published: