• Home
  • »
  • News
  • »
  • lifestyle
  • »
  • Fawad Khan: ಸಿನಿಮಾಕ್ಕಾಗಿ ಈ ನಟ ಮಾಡಿಸಿಕೊಂಡಿದ್ದಾದ್ರೂ ಏನು? ಇನ್ಯಾವತ್ತೂ ಈ ತಪ್ಪು ಮಾಡೋಲ್ಲ ಅಂತಿದ್ದಾರೆ ಈ ನಟ

Fawad Khan: ಸಿನಿಮಾಕ್ಕಾಗಿ ಈ ನಟ ಮಾಡಿಸಿಕೊಂಡಿದ್ದಾದ್ರೂ ಏನು? ಇನ್ಯಾವತ್ತೂ ಈ ತಪ್ಪು ಮಾಡೋಲ್ಲ ಅಂತಿದ್ದಾರೆ ಈ ನಟ

Fawad Khan

Fawad Khan

Fawad Khan: ಹೊಸ ಸಿನಿಮಾಗಳ ಆಫರ್ ಬಂದ್ರೆ ಸಾಕು ಸಿನಿಮಾದ ಪಾತ್ರದವರು ನಟನೆಗಾಗಿ ಹಲವಾರು ದೇಗದಲ್ಲಿ ಬದಲಾವಣೆಗಳನ್ನು ಮಾಡಿಸಿಕೊಳ್ತಾರೆ. ಮುಂದೆ ಇದರಿಂದ ಎದುರಿಸುವ ಪರಿಣಾಮಗಳು ಹಲವಾರು. ಇಂತಹದ್ದೇ ಘಟನೇ ಪಾಕಿಸ್ತಾನದ ನಟನಿಗೆ ಆಗಿದೆ.

  • Share this:

ಇತ್ತೀಚೆಗೆ ಪಾಕಿಸ್ತಾನದ ನಟ ಫವಾದ್ ಖಾನ್  (Fawad Khan) ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ವೈದ್ಯರು ಫವಾದ್‌ ಖಾನ್‌ ಅವರು ಮೂತ್ರಪಿಂಡ (Urinary Tract) ರೋಗದಿಂದ ಬಳಲುತ್ತಿದ್ದಾರೆ. ಅವರ ಮೂತ್ರಪಿಂಡಗಳು ಸಂಪೂರ್ಣವಾಗಿ ಅನಾರೋಗ್ಯಕ್ಕೆ ಒಳಪಟ್ಟಿವೆ ಎಂದು ಹೇಳಿದರು. ಇದಾದ ನಂತರ ಫವಾದ್‌ ಖಾನ್‌ ಅವರು "ದಿ ಲೆಜೆಂಡ್ ಆಫ್ ಮೌಲಾ ಜಟ್‌ ಸಿನಿಮಾ ತಯಾರಿಗೆ ನಾನು ತಕ ಏರಿಸಿಕೊಳ್ಳಬೇಕಿತ್ತು. ಇದಕ್ಕಾಗಿಯೇ ನಾನು ತೀವ್ರ ದೈಹಿಕ ರೂಪಾಂತರವನ್ನು ( Physical   Transformation)  ಮಾಡಿಕೊಂಡೆ. ಇದರಿಂದ ನನ್ನ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ" ಎಂದು ಬಹಿರಂಗಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಕುಸ್ತಿ ಪಟು ಆಗಿ ಕಾಣಿಸಿಕೊಂಡಿದ್ದಾರೆ. ಅವರು ಮಧುಮೇಹಿಗಳಾಗಿದ್ದರೂ, ಸಹ ಈ ಸಿನಿಮಾಕ್ಕೆ ಅವರು “ 73-75 ಕೆ.ಜಿ ಗಳಿಂದ 100 ಕೆ.ಜಿ ಯಷ್ಟು ತೂಕವನ್ನು ಹೆಚ್ಚಿಸಿಕೊಂಡು ಅನಾರೋಗ್ಯಕ್ಕೆ ಗುರಿಯಾಗಿದ್ದೇನೆ” ಎಂದು ಸ್ವತಃ ಆ ನಟನೇ ಮಾಧ್ಯಮಗಳಿಗೆ (Media)  ತಿಳಿಸಿದ್ದಾರೆ.


ನಟ ಫವಾದ್‌ ಖಾನ್‌ ಹೇಳಿರುವುದೇನು?


"ಇದು ನಾನು ಮಾಡಿದ ಜೀವನದ ದೊಡ್ಡ ತಪ್ಪು. ನಾನು ಯಾವತ್ತು ಮತ್ತೆ ಈ ತಪ್ಪನ್ನು ಮಾಡೋದಿಲ್ಲ. ಎಂದಿಗೂ ಕೂಡ ಮಾಡೋದಿಲ್ಲ. ಈ ಘಟನೆ ಕುರಿತಂತೆ ನಾನು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿಕೊಂಡಿದ್ದೇನೆ. ಈ ನನ್ನ ಒಂದು ಆಯ್ಕೆ ನನ್ನ ಒಟ್ಟಾರೆ ಜೀವನದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಈ ದೈಹಿಕ ಬದಲಾವಣೆ ನನ್ನ ದೈನಂದಿನ ಜೀವನದ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ.


ಇದನ್ನೂ ಓದಿ: ಬಾಲ್ಯದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ರು ಬಿಗ್​ಬಾಸ್​ನ ಈ ಸ್ಪರ್ಧಿ


"ಈ ರೀತಿಯ ನಿರ್ಧಾರಗಳನ್ನು ನೀವೆಂದೂ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯದ ಸ್ಥಿತಿಯೇ ಬದಲಾಗಬಹುದು. ಸಿನಿಮಾ ಚಿತ್ರೀಕರಣ ಮೂಗಿದ ಹತ್ತು ದಿನಗಳ ನಂತರ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಅಲ್ಲಿ ಬಂದ ವರದಿ ನನ್ನ ಮೂತ್ರಪಿಂಡಗಳು ಸಂಪೂರ್ಣವಾಗಿ ಅನಾರೋಗ್ಯಕ್ಕೆ ಒಳಗಾಗಿವೆ ಎಂದು ವೈದ್ಯರು ಹೇಳಿದಾಗ ನಾನು ತೀವ್ರ ಆಘಾತಕ್ಕೆ ಒಳಗಾದೆ ”ಎಂದು ಅವರು ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟಿಂಗ್ ಪ್ಲಾಟ್‌ಫಾರ್ಮ್ ಸಮ್ಥಿಂಗ್ ಹಾಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.


“ಪ್ರಸಿದ್ಧ ಅಮೇರಿಕನ್ ನಟ ಕ್ರಿಶ್ಚಿಯನ್ ಬೇಲ್ ಅವರು ತಮ್ಮ ಬ್ಯಾಟ್‌ಮಾನ್‌ ಸಿನಿಮಾಕ್ಕಾಗಿ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದರು. ಅದರ ನಂತರ ಬಾಲಿವುಡ್‌ ನಟರಾಗಿರುವ ಅಮೀರ್‌ ಖಾನ್‌ ಕೂಡ ಗಜಿನಿ ಮತ್ತು ದಂಗಲ್‌ ಸಿನಿಮಾಗಳಿಗೆ ದೈಹಿಕ ರೂಪಾಂತರದ ಪ್ರಕ್ರಿಯೆಗೆ ಒಳಗಾಗಿದ್ದರು. ಅವರ ದೈಹಿಕ ರೂಪಾಂತರವು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದ ಅವರು ಚೇತರಿಸಿಕೊಳ್ಳಲು ಮೂರು ತಿಂಗಳುಗಳನ್ನು ತೆಗೆದುಕೊಂಡರು” ಎಂದು ಫವಾದ್‌ ಖಾನ್‌ ಅವರೇ ಹೇಳಿದರು.


"ನಾನು ದಿ ಲೆಜೆಂಡ್ ಆಫ್ ಮೌಲಾ ಜಟ್‌ ಸಿನಿಮಾಕ್ಕೆ ಭಾರೀ ದೈಹಿಕ ರೂಪಾಂತರಕ್ಕೆ ಒಳಗಾಗಲು ನಿರ್ಧಾರ ಮಾಡಿದ್ದೆ. ಇದು ವಿಪರೀತ ಹುಚ್ಚು ಎಂದೇ ಹೇಳಬಹುದು. ನನಗೆ ಈ ರೂಪಾಂತರವನ್ನು ಪಡೆಯಲು ಕೇವಲ 1-1.5 ತಿಂಗಳುಗಳು ಮಾತ್ರ ಬಾಕಿ ಇದ್ದವು. ನಾನು ಹುಚ್ಚು ಕೆಲಸಕ್ಕೆ ಕೈ ಹಾಕಿದ್ದೆ. ನಾನೇನು ಕ್ರಿಶ್ಚಿಯನ್ ಬೇಲ್ ಅಲ್ಲ, ಅಮೀರ್‌ ಖಾನ್‌ ಕೂಡ ಅಲ್ಲ, ಆದರೆ ಅವರಿಗೆ ಸಾಧ್ಯವಾಗುವ ಕೆಲಸ ನನ್ನಿಂದ ಏಕೆ ಆಗುವುದಿಲ್ಲ ಎಂದು ನಾನು ಈ ನಿರ್ಧಾರವನ್ನು ತೆಗೆದುಕೊಂಡೆ. ಆದರೆ ಈ ನನ್ನ ಒಂದು ಆಯ್ಕೆ ನನ್ನ ಜೀವನವನ್ನೆ ನರಕಕ್ಕೆ ತಳ್ಳಿ ಬಿಟ್ಟಿದೆ. ಆದರೆ ಬೇರೆ ಯಾರು ಕೂಡ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಡಿ” ಎಂದು ಅವರು ಸಂದರ್ಶನದಲ್ಲಿ ಹೇಳಿದರು.


ತಜ್ಞರು ಏನು ಹೇಳುತ್ತಾರೆ?


ಈ ಕುರಿತು “ ಕಡಿಮೆ ಸಮಯದಲ್ಲಿ ವಿಪರೀತ ಆಹಾರ ಸೇವನೆ ಎಂದಿಗೂ ಸೂಕ್ತವಾದ ಆಹಾರ ಕ್ರಮವಲ್ಲ. ಇದನ್ನು ಯಾವುದೇ ಸಂದರ್ಭಗಳಲ್ಲೂ ಶಿಫಾರಸು ಮಾಡಬಾರದು” ಎಂದು ನವದೆಹಲಿಯ ವಸಂತ್ ಕುಂಜ್‌ನ ಆಂತರಿಕ ಔಷಧ, ಲಾ ಫೆಮ್ಮೆ/ಫೋರ್ಟಿಸ್ ಆಗಿರುವ ಡಾ. ಶಾರ್ವರಿ ದಭಾಡೆ ದುವಾ ಅವರು ಹೇಳಿದರು.


“ಯಕೃತ್ತಿನಲ್ಲಿ ಗ್ಲೂಕೋಸ್ ಚಯಾಪಚಯ, ಮೂತ್ರಪಿಂಡಗಳ ಮೂಲಕ ಪ್ರೋಟೀನ್ ವಿಸರ್ಜನೆ ಮತ್ತು ಸ್ನಾಯುಗಳಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆಯು ದೇಹವನ್ನು ಆರೋಗ್ಯಕರವಾಗಿರುವುದಕ್ಕಿಂತ ದುರ್ಬಲಗೊಳಿಸುತ್ತದೆ. ಕೀಟೋ, ಮತ್ತು ಗ್ಲುಟನ್-ಮುಕ್ತದಂತಹ ವಿಪರೀತ ಆಹಾರಗಳು ಕಡಿಮೆ ರಕ್ತದ ಗ್ಲೂಕೋಸ್ ಮಟ್ಟಗಳಿಗೆ ಕಾರಣವಾಗಬಹುದು.


ಇದನ್ನೂ ಓದಿ: ಕಾಲೊನಿಯವರು ಕೈ ಬಿಟ್ರೂ, ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಕೈ ಬಿಡಲ್ಲ! ಜನರ ಸಹಾಯಕ್ಕೆ ಬಂದೇ ಬಿಟ್ರು


ಸ್ನಾಯುಗಳನ್ನು ಹೆಚ್ಚಿಸುವ ಪ್ರಲೋಭನೆಗಳು ಮತ್ತು ಆಹಾರದಲ್ಲಿ ಹೆಚ್ಚಿನ ಪ್ರೋಟೀನ್‌ಗಳ (ಶೇಕ್ಸ್ ಮತ್ತು ಸಪ್ಲಿಮೆಂಟ್ಸ್) ಸೇವನೆಯು ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಸಾಮಾನ್ಯಕ್ಕಿಂತ ಕಡಿಮೆ ಮಾಡುತ್ತದೆ.


ಈ ಕಾರಣದಿಂದಲೇ ಬಹಳಷ್ಟು ಬಾಡಿ ಬಿಲ್ಡಿಂಗ್ ತರಬೇತುದಾರರು ಮತ್ತು ವ್ಯಕ್ತಿಗಳು ತೀವ್ರವಾದ ಮೂತ್ರಪಿಂಡದ ರೋಗಗಳಿಗೆ ಒಳಗಾಗಿ ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ. ಇದು ಜೀವಕ್ಕೆ ಅಪಾಯಕಾರಿ ಸ್ಥಿತಿ” ಎಂದು ಡಾ. ದುವಾ ಮಾಧ್ಯಮಕ್ಕೆ ತಿಳಿಸಿದರು.

First published: