Fatty Liver: ಯಕೃತ್ತಿನ ಕ್ಯಾನ್ಸರ್ ಗೆ ಇದೇ ಮುಖ್ಯ ಕಾರಣ, ಬಚಾವಾಗಲು ವೈದ್ಯರು ನೀಡಿದ ಸಲಹೆ ಇಲ್ಲಿದೆ

ಫೆಬ್ರವರಿ 4 ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಲಿವರ್ ಅಂದರೆ ಯಕೃತ್ತಿನ ಕ್ಯಾನ್ಸರ್ ನಿಂದ ಆಗುತ್ತವೆ. ಯಕೃತ್ತಿನ ಅನಾರೋಗ್ಯಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಮೊದಲ ಕಾರಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನುಷ್ಯನ ದೇಹದಲ್ಲಿ(body) ಹಲವು ಅಂಗಗಳು ತನ್ನದೇ ಆದ ಕಾರ್ಯ ಚಟುವಟಿಕೆಗಳ (activities) ಮೂಲಕ ಆರೋಗ್ಯ(health) ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಲ್ಲಿ  ಯಕೃತ್ತು ದೇಹದ ಮುಖ್ಯ ಹಾಗೂ ದೊಡ್ಡ ಭಾಗವಾಗಿದೆ. ರಕ್ತದಲ್ಲಿ ಸೇರುವ ವಿಷಕಾರಿ(poison) ವಸ್ತುಗಳನ್ನು ತೆಗೆದು ಹಾಕುವುದು ಮತ್ತು ಪೋಷಕಾಂಶಗಳನ್ನು(nutrition) ಸಂಗ್ರಹಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ಪೌಷ್ಠಿಕಾಂಶದ ಸಮತೋಲನ ಕಾಪಾಡುವುದು, ಗ್ಲುಕೋಸ್ ನ್ನು ಶಕ್ತಿಯಾಗಿ (power) ಪರಿವರ್ತನೆ ಮಾಡುತ್ತದೆ. ಹಾಗಿದ್ದರೆ ಯಕೃತ್ತು(liver) ಆರೋಗ್ಯವಾಗಿರಲು ಮತ್ತು ಸರಿಯಾಗಿ ಕೆಲಸ ಮಾಡಲು ಏನನ್ನು ಸೇವಿಸಬೇಕು..? ಯಕೃತ್ತಿನ ಕ್ಯಾನ್ಸರ್ (cancer) ಆಗದಂತೆ ತಡೆಯಲು ಏನು ಮಾಡಬೇಕು..? ಎಂಬುದನ್ನು ಇಲ್ಲಿ ನೋಡೋಣ…

    ಅಂದಹಾಗೆ ಫೆಬ್ರವರಿ 4 ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಲಿವರ್ ಅಂದರೆ ಯಕೃತ್ತಿನ ಕ್ಯಾನ್ಸರ್ ನಿಂದ ಆಗುತ್ತವೆ. ಯಕೃತ್ತಿನ ಅನಾರೋಗ್ಯಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಮೊದಲ ಕಾರಣವಾಗಿದೆ. ಎಣ್ಣೆ ಹಾಗೂ ಕರಿದ ಪದಾರ್ಥಗಳ ಹೆಚ್ಚಿನ ಸೇವನೆ ಮತ್ತು ನಾವು ತಿನ್ನುವ ಅನಾರೋಗ್ಯಕರ ಆಹಾರಗಳು ಫ್ಯಾಟ್ ಲಿವರ್ ಗೆ ಕಾರಣವಾಗುತ್ತವೆ. ಇದರಿಂದಾಗಿ ಯಕೃತ್ತಿನ ಕ್ಯಾನ್ಸರ್ ಆಗುವ ಸಂಭವ ಹೆಚ್ಚುತ್ತ ಹೋಗುತ್ತದೆ.

    ಸಾವಿನ ಸಂಖ್ಯೆ ಹೆಚ್ಚಳ: 

    ಫೆಬ್ರವರಿ 4ನ್ನು ವಿಶ್ವ ಕ್ಯಾನ್ಸರ್  ದಿನವನ್ನಾಗಿ ಆಚರಿಸುವ ಮೂಲಕ ಜನರನ್ನು ಯಕೃತ್ತಿನ ಈ ಗಂಭೀರ ಸಮಸ್ಯೆಯ ಬಗ್ಗೆ ಗಮನಹರಿಸುವುದು ಮತ್ತು ನಮ್ಮ ಕೆಟ್ಟ ಜೀವನಶೈಲಿಯನ್ನು ಸುಧಾರಿಸುವಂತೆ ಮಾಡುವ ಕೆಲಸ ಮಾಡಲಾಗುತ್ತಿದೆ. ಜಗತ್ತಿನಲ್ಲಿ ಯಕೃತ್ತಿನ ಕ್ಯಾನ್ಸರ್ ನಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಅಷ್ಟೇ ಅಲ್ಲ ನಾವು ತಿನ್ನುವ ಹಾಗೂ ಸೇವಿಸುವ ಪದಾರ್ಥಗಳು ಆರೋಗ್ಯಕರವಾಗಿರದೇ ಹೋದಲ್ಲಿ ಯಕೃತ್ತಿನ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತ ಹೋಗುತ್ತದೆ. ಕರಿದ ಪದಾರ್ಥಗಳ ಸೇವನೆ ಇದಕ್ಕೆ ಮೂಲ ಕಾರಣವಾಗುತ್ತದೆ. ಯಾಕೆಂದರೆ ಕರಿದ ಪದಾರ್ಥಗಳಲ್ಲಿ ಯಾವುದೇ ಪೋಷಕಾಂಶ ಸತ್ವ ಇರುವುದಿಲ್ಲ.

    ಇದನ್ನೂ ಓದಿ: ಮಧುಮೇಹಿಗಳು ಬೆಲ್ಲ ತಿನ್ನೋದು ಬೆಸ್ಟಾ? ಅಥವಾ ಸಕ್ಕರೆ ತಿಂದರೆ ಒಳ್ಳೆಯದಾ?

    ಯಕೃತ್ತಿನ ಕ್ಯಾನ್ಸರ್ ಹೇಗೆ ಆಗುತ್ತದೆ..?

    ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಮುಖ್ಯ ಕನ್ಸಲ್ಟೆಂಟ್ ಡಾಕ್ಟರ್ ರಾಜೀವ್ ಲೋಚನ್, ಹಿಂದುಸ್ತಾನ್ ಟೈಮ್ಸ್ ಜತೆ ಮಾತನಾಡಿ, ಲಿವರ್ ಕ್ಯಾನ್ಸರ್ ಹೇಗೆ ಆಗುತ್ತದೆ ಎಂದು ಹೇಳಿದ್ದಾರೆ. ‘ಯಕೃತ್ತಿನ ಕ್ಯಾನ್ಸರ್ ಹೆಪಟೋಸೆಲ್ಯುಲರ್ ಕಾರ್ಸಿನೋಮಾ (ಎಚ್ ಸಿಸಿ) ಮತ್ತು ಇಂಟಾಹೆಪೆಟಿಕ್ ಕೋಲೋಂಜಿಯೋಕಾರ್ಸಿನೊಮಾ ( ಪಿತ್ತಕೋಶ ಕ್ಯಾನ್ಸರ್) ಆಗಿದೆ. ಇದರಿಂದಾಗಿ ಹೆಪೆಟಿಕ್ ಎಡೆನೊಮಾ ಮತ್ತು ಫೋಕಲ್ ನೋಡ್ಯೂಲರ್ ಹಾಯಿಪರ್ ಪ್ಲಾಸಿಯಾ ದಂತಹ ಲಿವರ್ ಟ್ಯೂಮರ್ (ಯಕೃತ್ತಿನಲ್ಲಿ ಗಡ್ಡೆ) ಆಗುತ್ತದೆ. ಇದಕ್ಕೆ ಪ್ರಮುಖ ಕಾರಣ ಹೆಪಟಾಯಿಟಸ್ ಬಿ ಮತ್ತು ಸಿ. ವೈರಲ್ ಸಾಂಕ್ರಾಮಿಕ, ಸಿರೋಸಿಸ್ , ಅರ್ಸೆನಿಕ್ ದೋಷದಿಂದ ಕೂಡಿದ ನೀರು, ಬೊಜ್ಜು, ಡಯಾಬಿಟಿಸ್ ಮತ್ತು ಹೆಚ್ಚು ಆಲ್ಕೋಹಾಲ್ ಸೇವನೆ ಯಕೃತ್ತಿನ ಕ್ಯಾನ್ಸರ್ ಹಾಗೂ ಯಕೃತ್ತಿನ ಟ್ಯೂಮರ್ ಗೆ ಕಾರಣ.

    ಫ್ಯಾಟಿ ಲಿವರ್ ಗೆ ಕಾರಣ: 

    ಮೇಲಿನ ಎಲ್ಲಾ ಕೆಟ್ಟ ಚಟಗಳು ಮತ್ತು ಪಾನೀಯ, ಆಹಾರ ಸೇವನೆ ಫ್ಯಾಟಿ ಲಿವರ್ ಗೆ ಕಾರಣವಾಗುತ್ತದೆ. ಇದು ಮುಂದೆ ಕ್ಯಾನ್ಸರ್ ಗೆ ಎಡೆ ಮಾಡಿಕೊಡುತ್ತದೆ. ಯಕೃತ್ತಿನ ಕ್ಯಾನ್ಸರ್ ಹೆಚ್ಚಾಗಿ ಅಧಿಕ ತೂಕವಿರುವವರು ಮತ್ತು ಡಯಾಬಿಟಿಸ್ ಕಾಯಿಲೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ.

    ಕೆಟ್ಟ ಆಹಾರ ಪದ್ಧತಿ, ಹೆಚ್ಚು ಸಕ್ಕರೆ ಇರುವ ಪದಾರ್ಥಗಳ ಸೇವನೆ, ತೂಕ ಹೆಚ್ಚಿಸುವಂತಹ ಬೇಕರಿ, ಕರಿದ ಪದಾರ್ಥಗಳು ಫ್ಯಾಟಿ ಲಿವರ್ ಗೆ ಕಾರಣ. ಯಾರ ದೇಹದಲ್ಲಿ ಮೆಟಬಾಲಿಸಮ್ ಅನಾರೋಗ್ಯಕರವಾಗಿರುತ್ತದೆಯೋ ಅವರು ಯಕೃತ್ತಿನ ಟ್ಯೂಮರ್ ಗೆ ಗುರಿಯಾಗುತ್ತಾರೆ.

    ಕರಿದ ಪದಾರ್ಥಗಳ ಸೇವನೆಯಿಂದ ಲಿವರ್ ಕ್ಯಾನ್ಸರ್ ಅಪಾಯ:

    ಕರಿದ ಪದಾರ್ಥಗಳ ಸೇವನೆ ಮತ್ತು ಬೇಕರಿ ಪದಾರ್ಥಗಳ ಸೇವನೆ ಜನರ ನಿತ್ಯದ ಸೇವನೆಯಾಗಿದೆ. ಇದು ಜನರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿದೆ. ಕರಿದ ಪದಾರ್ಥಗಳು ನಾಲಿಗೆಗೆ ಕೊಡುವ ರುಚಿ, ದೇಹದ ಯಕೃತ್ತಿಗೆ ಅನಾರೋಗ್ಯಕ್ಕೆ ಕಾರಣವಾಗಿವೆ. ಫಾಸ್ಟ್ ಫುಡ್ ಸೇವನೆ ದೇಹದಲ್ಲಿನ ಕೊಬ್ಬನ್ನು ಹೆಚ್ಚಿಸುತ್ತವೆ.

    ಇದರಿಂದ ಸಿರೋಸಿಸ್ ಹಾಗೂ ಯಕೃತ್ತಿನ ಕ್ಯಾನ್ಸರ್  ಆಗುವ ಅಪಾಯವಿದೆ. ತಜ್ಞರ ಪ್ರಕಾರ, ಕರಿದ ಪದಾರ್ಥ , ಫಾಸ್ಟ್ ಫುಡ್ ಎಂದರೆ ನೀವು ತಿನ್ನುತ್ತಿರುವ ಆಹಾರವನ್ನು ಸರಿಯಾಗಿ ಬೇಯಿಸಿಲ್ಲ ಮತ್ತು ಇದರಲ್ಲಿ ಹೈಡ್ರೋಕಾರ್ಬನ್ ಇದೆ ಎಂದರ್ಥ. ಈ ಆಹಾರ ಪದಾರ್ಥಗಳಲ್ಲಿ ಬಳಸುವ ಕೆಮಿಕಲ್ ಕ್ಯಾನ್ಸರ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಬೆಳಗಿನ ತಿಂಡಿಗೆ ಸ್ಪೆಷಲ್​ ಈರುಳ್ಳಿ ಪರೋಟ ರೆಸಿಪಿ

    ಯಾವುದು ಯಕೃತ್ತಿಗೆ ಅಪಾಯ ತಂದೊಡ್ಡುತ್ತದೆ..?

    ಇನ್ನು ನಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು ಇವೆ. ಹೆಚ್ಚು ಕರಿದ ಪದಾರ್ಥ, ಫಾಸ್ಟ್ ಫುಡ್ ತಿನ್ನುವುದರಿಂದ ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ. ಹೆಚ್ಚು ಕೊಬ್ಬಿನ ಆಹಾರ ಪದಾರ್ಥ, ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರ ಪದಾರ್ಥ, ಸೋಡಾ ಡ್ರಿಂಕ್ಸ್ ಸೇವನೆ, ವ್ಯಾಯಾಮ, ಯೋಗ ಮಾಡದಿರುವುದು ಯಕೃತ್ತಿನ ಸಮಸ್ಯೆ ಮತ್ತು ಕ್ಯಾನ್ಸರ್ ನ ಅಪಾಯ ತಂದೊಡ್ಡುತ್ತವೆ ಎಂದು ವೈದ್ಯರು ಹೇಳಿದ್ದಾರೆ. ದೇಹದ ಆರೋಗ್ಯಕ್ಕೆ ಪ್ರೊಟಿನ್ ಕಾರ್ಬೋಹೈಡ್ರೇಟ್ ಫ್ಯಾಟ್ ಇರುವ ಆಹಾರ ಸೇವನೆ ಮಾಡಬೇಕು.

    ಇನ್ನು ಯಕೃತ್ತಿನ ಆರೋಗ್ಯಕ್ಕಾಗಿ ಗ್ರೀನ್ ಟೀ, ಬೀಟ್ ರೂಟ್ ಸೇವನೆ, ನಿಂಬೆ ಜ್ಯೂಸ್, ನಿಯಮಿತವಾಗಿ ಒಂದು ಪೀಸ್ ಬೆಳ್ಳುಳ್ಳಿ ಸೇವನೆ, ಅರಿಶಿಣ ಪುಡಿ ಬಳಕೆ ಮಾಡಿದ ಆಹಾರ ಪದಾರ್ಥಗಳ ಸೇವನೆ ಯಕೃತ್ತನ್ನು ಆರೋಗ್ಯವಾಗಿರಿಸುತ್ತದೆ.
    Published by:renukadariyannavar
    First published: