ನಾವು ಸೇವಿಸುವ ಉತ್ತಮ ಆಹಾರ (Good Food) ಪದಾರ್ಥ ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ (Body Health). ಮತ್ತು ದೇಹಕ್ಕೆ ಬೇಕಾದ ಶಕ್ತಿ ಒದಗಿಸುತ್ತದೆ. ಅದಾಗ್ಯೂ ಕೆಲವೊಮ್ಮೆ ದೇಹದಲ್ಲಿ ಶಕ್ತಿ ಕೊರತೆ (Energy Problem) ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ದೇಹದಲ್ಲಿ ಶಕ್ತಿ ಏರಿಳಿತವಾಗುವುದು ತುಂಬಾ ಕಾಮನ್. ಸಾಮಾನ್ಯವಾಗಿ ಜನರು (People) ತಮ್ಮ ದಿನವನ್ನು ಉತ್ತಮ ಮತ್ತು ದಿನವಿಡೀ ಶಕ್ತಿಯುತವಾಗಿ ಇರಲು ಸಹಾಯ ಮಾಡುವ ಆಹಾರ ಪದಾರ್ಥ ಸೇವನೆ ಮಾಡ್ತಾರೆ. ಆದರೆ ದಿನವಿಡೀ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ಮತ್ತು ಕ್ರಿಯಾತ್ಮಕವಾಗಿದ್ದ ಹಿನ್ನೆಲೆ ಸಂಜೆಯ ವೇಳೆಗೆ ದೇಹದಲ್ಲಿ ಶಕ್ತಿ ಕುಸಿಯುತ್ತದೆ. ಆದಾಗ್ಯೂ ಇದು ದೇಹದ ನೈಸರ್ಗಿಕ ಸ್ವಭಾವ ಆಗಿದೆ.
ದಣಿವು ಶಕ್ತಿಯ ಕೊರತೆಗೆ ಕಾರಣವೇನು?
ಕೆಲವೊಮ್ಮೆ ನಾವು ಬೆಳಿಗ್ಗೆ ಎದ್ದಾಗ ಅಥವಾ ಕುಳಿತುಕೊಳ್ಳುವಾಗ, ನಿಂತು ಕೆಲಸ ಮಾಡುವಾಗ, ದಣಿವು ಮತ್ತು ಶಕ್ತಿಯ ಕೊರತೆ ಅನುಭವಿಸುತ್ತೇವೆ. ದೇಹವು ವೀಕ್ ಆದಂತೆ, ಪದೇ ಪದೇ ಸುಸ್ತು ಆಗುತ್ತದೆ. ಆದ್ರೆ ಇದು ಯಾಕೆ ಹೀಗಾಗುತ್ತೆ ಅಂತಾ ನೀವು ಯೋಚನೆ ಮಾಡಿರಬಹುದು. ದೇಹದಲ್ಲಿನ ಪೋಷಕಾಂಶಗಳ ಕೊರತೆ ಮತ್ತು ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಹೋದಾಗ ಹೀಗೆ ದಣಿವು ಮತ್ತ ಸುಸ್ತು, ಶಕ್ತಿಯ ಕೊರತೆ ಕಾಣಿಸಿಕೊಳ್ಳುತ್ತದೆ.
ಇದರ ಜೊತೆಗೆ ನೀವು ತಿನ್ನುವ ಕೆಲವು ಆಹಾರ ಪದಾರ್ಥಗಳೂ ಸಹ ಶಕ್ತಿಯ ಕೊರತೆ ಮತ್ತು ಸುಸ್ತು, ದಣಿವು ಉಂಟಾಗಲು ಕಾರಣವಾಗುತ್ತದೆ. ಇದು ಆಶ್ಚರ್ಯ ಅನ್ನಿಸಿದ್ರೂ ನಿಜ. ಅದು ನಿಮ್ಮ ಶಕ್ತಿಯ ಕೊರತೆಗೆ ಕಾರಣ ಆಗಿದೆ. ಹಾಗಾದರೆ ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಶಕ್ತಿಯ ಕೊರತೆ, ದಣಿವು ಉಂಟು ಮಾಡುವ ಆಹಾರ ಪದಾರ್ಥಗಳು
ಮದ್ಯ
ಆಲ್ಕೊಹಾಲ್ ಸೇವನೆಯು ಮಾರನೇ ದಿನ ಬೆಳಗ್ಗೆ ಶಕ್ತಿಯ ಕೊರತೆ ಉಂಟು ಮಾಡುತ್ತದೆ. ಆಲ್ಕೋಹಾಲ್ ಸೇವನೆ ನಿದ್ರೆಯ ಗುಣಮಟ್ಟವನ್ನು ಕೆಟ್ಟದಾಗಿ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ. ಆಲ್ಕೋಹಾಲ್ ಸೇವನೆ ನಿದ್ರೆ ಪೂರ್ಣವಾಗಲ್ಲ. ಹಾಗಾಗಿ ಇದು ಮರುದಿನ ಶಕ್ತಿಯ ಕೊರತೆ ಉಂಟು ಮಾಡುತ್ತದೆ.
ಹೆಚ್ಚು ಕೆಫೀನ್ ಸೇವನೆ ಮಾಡುವುದು
ಜನರು ಸ್ಟ್ರೆಸ್ ಆದಾಗ ಕಾಫಿ ಸೇವನೆ ಮಾಡುತ್ತಾರೆ. ಕಾಫಿ ತ್ವರಿತವಾಗಿ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ. ಆದರೆ ಅದರ ಪರಿಣಾಮ ಕಡಿಮೆಯಾಗುತ್ತಾ ಹೋದಂತೆ ಶಕ್ತಿಯು ವೇಗವಾಗಿ ಕುಸಿಯುತ್ತದೆ. ತಲೆನೋವು, ನಿದ್ರೆಯ ಕೊರತೆ ಸಮಸ್ಯೆ ಉಂಟು ಮಾಡುತ್ತದೆ.
ಕೆಫೀನ್ ಹೊಂದಿರುವ ಪಾನೀಯಗಳ ಅತಿಯಾದ ಸೇವನೆ ದೇಹದಿಂದ ಕಬ್ಬಿಣ ಮತ್ತು ವಿಟಮಿನ್ ಡಿ ಕೊರತೆಗೆ ಕಾರಣವಾಗುತ್ತದೆ. ಇದು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
ಪಾಸ್ತಾ, ಬಿಳಿ ಬ್ರೆಡ್ ಮತ್ತು ಅಕ್ಕಿ ಸೇವನೆ
ಸಂಸ್ಕರಿಸಿದ ಧಾನ್ಯಗಳು ಬಿಳಿ ಪಾಸ್ತಾ, ಬಿಳಿ ಬ್ರೆಡ್ ಮತ್ತು ಅನ್ನದಲ್ಲಿ ಇದೆ. ಇದು ಶಕ್ತಿಯನ್ನು ಹೆಚ್ಚಿಸುವ ಬದಲು ಕುಸಿಯುವಂತೆ ಮಾಡುತ್ತದೆ. ಧಾನ್ಯಗಳ ಮೇಲೆ ಫೈಬರ್ ಪದರವಿದೆ. ಸಂಸ್ಕರಣೆ ಮಾಡುವಾಗ ಈ ಪದರ ಹೊರಟು ಹೋಗುತ್ತದೆ. ಎಲ್ಲಾ ಆಹಾರಗಳು ಬೇಗನೆ ಜೀರ್ಣವಾಗುತ್ತವೆ. ಇದು ಶಕ್ತಿಯ ಮಟ್ಟ ಕುಸಿಯುವಂತೆ ಮಾಡುತ್ತದೆ.
ಕಡಿಮೆ ಕ್ಯಾಲೋರಿ ಆಹಾರ
ದೇಹದಲ್ಲಿ ಸೀಮಿತ ಪ್ರಮಾಣದ ಕ್ಯಾಲೊರಿ ಕಾಪಾಡಿಕೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಶಕ್ತಿಯ ಕೊರತೆಗೆ ಕಾರಣವಾಗುತ್ತದೆ. ತುಂಬಾ ಕಡಿಮೆ ಕ್ಯಾಲೊರಿ ಸೇವನೆ ಹಸಿವು ಹೆಚ್ಚಿಸುತ್ತದೆ. ಅತಿಯಾಗಿ ಆಹಾರ ಸೇವಿಸಿದರೆ ಆಲಸ್ಯ, ದಣಿವು ಉಂಟಾಗುತ್ತದೆ.
ಇದನ್ನೂ ಓದಿ: 30 ವರ್ಷದ ನಂತರ ಇದೇ ಕಾರಣಕ್ಕೆ ಬೀಟ್ರೂಟ್ ತಿನ್ನಲೇಬೇಕಂತೆ
ಕೆಂಪು ಮಾಂಸ ಸೇವನೆ
ಕೆಂಪು ಮಾಂಸ ಸೇವನೆ ಆಯಾಸ ಮತ್ತು ಶಕ್ತಿಯ ಕೊರತೆಗೆ ಕಾರಣವಾಗುತ್ತದೆ. ಕೆಂಪು ಮಾಂಸದಲ್ಲಿ ಕಬ್ಬಿಣವು ಹೇರಳವಾಗಿದೆ. ಮತ್ತೊಂದೆಡೆ ಇದು ಜೀರ್ಣಕ್ರಿಯೆಗೆ ಸಮಸ್ಯೆ ಉಂಟು ಮಾಡುತ್ತದೆ. ಮಲಬದ್ಧತೆ, ಹೊಟ್ಟೆ ನೋವು ಮತ್ತು ವಿವಿಧ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಶಕ್ತಿಯ ಕೊರತೆ ಉಂಟು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ