Fathers Day 2021: ಬದುಕು ರೂಪಿಸಿದ ಅಪ್ಪನಿಗೆ ನನ್ನದೊಂದು ಕೃತಜ್ಞತೆ
Father’s Day: ನಾನು ಹೇಗಿದ್ದರು ಪರವಾಗಿಲ್ಲ, ನನ್ನ ಕುಟುಂಬ ಚೆನ್ನಾಗಿರಬೇಕು, ನನ್ನ ಮಗ ಡಾಕ್ಟರ್ ಆಗಬೇಕು, ಇಂಜಿನೀಯರ್ ಪದವಿ ಪಡೆದಿರಬೇಕು, ಕಂಪೆನಿಯ ಮುಖ್ಯಸ್ಥನಾಗಿ ಉದ್ಯೋಗಿಗಳನ್ನು ಇಟ್ಟುಕೊಂಡಿರಬೇಕು ಎಂದು ಮಗನ ಬಗ್ಗೆ ಕನಸು ಕಂಡಿದ್ದ ಅಪ್ಪನಿಗೆ ಕೊನೆಗೊಂದು ದಿನ ಆ ಕನಸು ನನಸಾದಾಗ ಆ ಖುಷಿಯನ್ನು ಹೇಳಿಕೊಳ್ಳುವ ಸನ್ನಿವೇಷ ಅಂತಿದ್ದದಲ್ಲ.
ವಿಶ್ವ ತಂದೆಯಂದಿರ ದಿನವಿಂದು. ಮಗುವಾಗಿದ್ದ ಎತ್ತಿಕೊಂಡು ಮುದ್ದಾಡಿಸಿ, ಅಕ್ಷರ ಅಭ್ಯಾಸಕ್ಕೆ ಶಾಲೆಗೆ ಕಳುಹಿಸಿ, ಓದಿಸಿ, ಬೆಳೆಸಿ, ಪ್ರೋತ್ಸಾಹಿಸಿ, ಬದುಕಿಕೊಂದು ದಾರಿ ರೂಪಿಸಿ ಕೊಟ್ಟ ತಂದೆಗೆ ನಮನ ಸಲ್ಲಿಸುವ ದಿನವಿಂದು. ಹಾಗಾಗಿ ಸೂಪರ್ ಮ್ಯಾನ್ ಅಪ್ಪನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೆ ಸಾಲದು.
ನಾನು ಹೇಗಿದ್ದರು ಪರವಾಗಿಲ್ಲ, ನನ್ನ ಕುಟುಂಬ ಚೆನ್ನಾಗಿರಬೇಕು, ನನ್ನ ಮಗ ಡಾಕ್ಟರ್ ಆಗಬೇಕು, ಇಂಜಿನೀಯರ್ ಪದವಿ ಪಡೆದಿರಬೇಕು, ಕಂಪೆನಿಯ ಮುಖ್ಯಸ್ಥನಾಗಿ ಉದ್ಯೋಗಿಗಳನ್ನು ಇಟ್ಟುಕೊಂಡಿರಬೇಕು ಎಂದು ಮಗನ ಬಗ್ಗೆ ಕನಸು ಕಂಡಿದ್ದ ಅಪ್ಪನಿಗೆ ಕೊನೆಗೊಂದು ದಿನ ಆ ಕನಸು ನನಸಾದಾಗ ಆ ಖುಷಿಯನ್ನು ಹೇಳಿಕೊಳ್ಳುವ ಸನ್ನಿವೇಷ ಅಂತಿದ್ದದಲ್ಲ.
ಅಪ್ಪನ ಆ ಕನಸಿನ ಹಿಂದೆ ಸಾಕಷ್ಟು ಶ್ರಮವಿದೆ. ಬೆಳಗ್ಗಿನಿಂದ ಸಂಜೆಯವರೆಗೆ ದುಡಿದು, ಚಿಕ್ಕ ಟಿವಿನ್ ಬಾಕ್ಸ್ನಲ್ಲಿ ಅಮ್ಮ ಕಟ್ಟಿ ಕೊಟ್ಟ ಸ್ವಲ್ಪ ಊಟವನ್ನು ಮಾಡಿ, ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಓಡಿ ಬರುವ ಅಪ್ಪನ ಶ್ರಮ ಜೀವನ ಸಾಕಷ್ಟು ಮಕ್ಕಳಿಗೆ ತಿಳಿದಿಲ್ಲ. ತಿಂಗಳ ಸಂಬಳವನ್ನು ಒಟ್ಟು ಗೂಡಿಸಿ ಮಗನ ಸ್ಕೂಲ್ ಫೀಸ್, ಬಟ್ಟೆ, ಬ್ರಾಂಡೆಡ್ ಶೂ ಹೀಗೆ ಕೇಳಿದ್ದನೆಲ್ಲ ಕೊಡುವ ಅಪ್ಪನ ಮನಸ್ಸೇ ಅಂತದ್ದು, ಅದಕ್ಕೆ ಅಪ್ಪನನ್ನು ಆಕಾಶಕ್ಕೆ ಹೋಲಿಸಲಾಗಿದೆ. ಅವರ ಮನಸ್ಸು ಕೂಡ ಆಕಾಶದಷ್ಟೇ ವಿಶಾಲವಾಗಿದೆ.
ಅಂದಹಾಗೇ, ಈ ಅಪ್ಪಂದಿರ ದಿನ ಪ್ರಾರಂಭವಾದ್ದದು ಹೇಗೆ ಗೊತ್ತಾ? ವಿದೇಶದಲ್ಲಿ ಮೊದಲು ಫಾದರ್ಸ್ ಡೇ ಆಚರಿಸುವ ಮೂಲಕ ಬೆಳಕಿಗೆ ಬಂತು. ತಾಯಿಯನ್ನು ಕಳೆದುಕೊಂಡ 15 ವರ್ಷದ ಮಗಳೊಬ್ಬಳು ತಂದೆಯ ಆಶ್ರಯದಲ್ಲಿ ಬೆಳೆದಳು. ಆಕೆಯನ್ನು ಮತ್ತು ಆಕೆಯ ತಮ್ಮನನ್ನು ತಂದೆ ಕಷ್ಟಪಟ್ಟ ಸಾಕಿದರು. ತಾಯಂದಿರ ದಿನಾಚರಣೆಯ ಬಗ್ಗೆ ಅರಿತ ಆಕೆ ಅಪ್ಪಂದಿರ ದಿನಾಚರಣೆಯನ್ನು ಮಾಡಬೇಕೆಂದು ಮೊದಲು ಪ್ರಾರಂಭಿಸಿದಳು. ಆಕೆ ಮತ್ಯಾರು ಅಲ್ಲ ಸೊನೊರಾ ಲೂಯಿಸ್ ಡಾಡ್!
ಅಂದಿನಿಂದ ವಿಶ್ವದಾದ್ಯಂತ ಜೂನ್ ತಿಂಗಳಿನ ಮೂರನೇ ವಾರ ಫಾದರ್ಸ್ ಡೇ ಆಚರಿಸಲಾಗುತ್ತದೆ. ಆದರೆ ಈ ವರ್ಷ ಜೂನ್ 20ರಂದು ಆಚರಿಸಲಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಸೆಪ್ಟೆಂಬರ್ ತಿಂಗಳಿನ ಮೊದಲ ಭಾನುವಾರ ಫಾದರ್ಸ್ ಡೇ ಆಚರಿಸಲಾಗುತ್ತದೆ. ಬ್ರೆಜಿಲ್ನಲ್ಲಿ ಅಗಸ್ಟ್ ಎರಡನೇ ಭಾನುವಾರ ಆಚರಿಸುತ್ತಾರೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ